ಪೋಸ್ಟ್‌ಗಳು

2008 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

’ನಾನು’ ಅಂದರೆ ದೇವು

ನೋಡಿ ಸ್ವಾಮಿ ನಾನೊಬ್ಬ ಸಣ್ಣ ಮನುಷ್ಯ. ಕರ್ಣಾಟವೆಂಬ ದೇಶದ ಆಚೆಗೆ ಏನಿದೆ? ಎಂದು ಕಂಡವನಲ್ಲ. ಅಷ್ಟೇ ಏಕೆ ಕರ್ನಾಟಕದ ಒಳಗಡೆ ಕೂಡ ಹೆಚ್ಚು ಓಡಾಡಿದವನಲ್ಲ. ಏಳೆಂಟು ವರ್ಷದಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತ ಬಂದಿದ್ದೇನೆ. ಅದೂ ಹೊಟ್ಟೆಯ ಪಾಡಿಗಾಗಿ. 'ಕೋಶ ಓದು, ದೇಶ ನೋಡು' ಎಂಬ ಗಾದೆ ಕೇಳಿದ್ದೇನೆ. ಅದನ್ನು ಜಾರಿಗೆ ತರುವಷ್ಟು ದೊಡ್ಡ ಮನಸ್ಸು, ಮನುಷ್ಯ ನಾನಾಗಿಲ್ಲ. ಆಗಲು ಆಸೆ ಇತ್ತು, ಇದೆ. ಆದರೆ, ಎಲ್ಲ ಕನಸು- ಆಸೆಗಳು ಈಡೇರುವುದಿಲ್ಲ ಅಲ್ಲವೇ? ಎಷ್ಟೋ ಬಾರಿ ಅವು ನಮ್ಮ ಕಣ್ಣಮುಂದೆಯೇ ಕಮರಿಹೋಗುವುದನ್ನು ನೋಡುತ್ತ ಅಸಹಾಯಕರಾಗಿ ಇರಬೇಕಾಗುತ್ತದೆ. ನಾನು ಕನರ್ಾಟಕ ಎಂಬ ಬಾವಿ ಅಲ್ಲಲ್ಲ. 'ಬೀದರ್' ಎಂಬ ರಾಜಧಾನಿಯಿಂದ ದೂರ ಇರುವ, ನಾಲ್ಕೈದು ತಾಲ್ಲೂಕುಗಳಿರುವ ಸಣ್ಣ ಬಾವಿಯೊಳಗಿನ ಕಪ್ಪೆ. ಅದಕ್ಕೆ ತಾನಂದುಕೊಂಡದ್ದೇ ದೊಡ್ಡ ಜಗತ್ತು. ಇದೇ ನೆಪದಲ್ಲಿ ನನ್ನ ಬಗ್ಗೆ ಒಂದಿಷ್ಟು ಬರೆಯುತ್ತೇನೆ. ಹೈದರಾಬಾದ್ ಕರ್ನಾಟಕ ಎಂಬ ಬಿರುಬಿಸಿಲಿನ ಗುಲ್ಬರ್ಗ ಜಿಲ್ಲೆಯ ಶಹಾಪುರ ಎಂಬ ಪಟ್ಟಣ ನನ್ನ ಊರು. ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಈಗ ನಿವೃತ್ತರಾಗಿದ್ದಾರೆ. ಅವರು ಕೆಲಸ ಮಾಡುತ್ತಿದ್ದ 'ಅಣಬಿ' ಕುಗ್ರಾಮದಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಆರಂಭವಾಯಿತು. ಕರೆಂಟ್ ಇಲ್ಲದ, ಬಸ್ಗಳೇ ಬಾರದ ಯಾವ ದಿಕ್ಕಿನಿಂದ ಹೋದರೆ ನಡೆದುಕೊಂಡೇ ಹೋಗಬೇಕಾಗಿದ್ದ ಗ್ರಾಮ ಅದು. ಕತ್ತಲಾಗುತ್ತಿದ್ದಂತೆ ಸಿರಿವಂತರಂತೆ ಕಂದೀಲು...

ಛಾಯಾಗ್ರಾಹಕ ಅಲ್ಲ, ಫೋಟೊ ಎಂಜಿನಿಯರ್

ಇಮೇಜ್
ತನ್ನಲ್ಲಿರುವ ಅಪರೂಪದ ಕ್ಯಾಮರಾಗಳು ಮತ್ತು ಅವುಗಳಿಂದ ಕ್ಲಿಕ್ಕಿಸಿದ ಫೋಟೆಗಳಿಂದ ಬೆರಗುಗೊಳಿಸುವ ವ್ಯಕ್ತಿ ಗುಲಾಂ ಮುಂತಾಕ್. ಐತಿಹಾಸಿಕವಾಗಿ ಮಹತ್ವದ ನಗರವಾದರೂ ಸಮಕಾಲೀನವಾಗಿ `ಹಿಂದುಳಿದ' ಹಣೆಪಟ್ಟಿ ಕಟ್ಟಿಕೊಂಡ ಬೀದರ್‌ನಂತಹ ಪುಟ್ಟ ಪಟ್ಟಣದಲ್ಲಿ ಇರುವ ಅದ್ಭುತ ವ್ಯಕ್ತಿ. ಕ್ಯಾಮರಾ ಹುಚ್ಚಿನ ಈ ಛಾಯಾಗ್ರಾಹಕ ಜಗತ್ತಿನಲ್ಲಿಯೇ ಅತಿ ದೊಡ್ಡ ನೆಗೆಟಿವ್ ಒಡೆಯ. ಅವರ ಬಳಿ ಇರುವ ಎಂಟು ಅಡಿ ಅಗಲದ ನೆಗೆಟಿವ್ನಷ್ಟು ದೊಡ್ಡ ನೆಗೆಟಿವ್ ಜಗತ್ತಿನಾದ್ಯಂತ ಬೇರೆಲ್ಲಿಯೂ ಇಲ್ಲ. ನೆಹರೂ ಕಾಲದ ದೆಹಲಿಯ ಛಾಯಾಗ್ರಾಹಕ ಎ.ಆರ್.ದತ್ತಾ ಸಂದರ್ಶನವೊಂದರಲ್ಲಿ `ನನ್ನ ಹತ್ತಿರ ಇರುವ ಆರು ಅಡಿ ಅಗಲದ ನೆಗೆಟಿವ್ ಅತ್ಯಂತ ದೊಡ್ಡದು' ಎಂದು ತಿಳಿಸಿದ್ದರು. ಆದರೆ, ಮುಂತಾಕ್ ಬಳಿ ಅದಕ್ಕಿಂತ ಎರಡು ಅಡಿ ಹೆಚ್ಚು ಅಗಲವಾಗಿರುವ ನೆಗೆಟಿವ್ ಇದೆ. ಸಾಲಾಗಿ 400ಕ್ಕೂ ಹೆಚ್ಚು ಜನ ಕುಳಿತಾಗ ಕ್ಲಿಕ್ಕಿಸಿದ ಗ್ರೂಪ್ ಫೋಟೊ (ಸಮೂಹ ಚಿತ್ರ)ದಲ್ಲಿನ ಪ್ರತಿಯೊಬ್ಬರನ್ನೂ ನಿಚ್ಚಳವಾಗಿ ಕಾಣಿಸುವಂತೆ ಒಂದೇ ಕಾಲಕ್ಕೆ ಸೆರೆ ಹಿಡಿಯಬಲ್ಲರು ಮುಂತಾಕ್. ಆ ಚಿತ್ರದ ನೆಗೆಟಿವ್ನಿಂದ ಪ್ರತಿಯೊಬ್ಬ ವ್ಯಕ್ತಿಯ ಪ್ರತ್ಯೇಕ ಛಾಯಾಚಿತ್ರ ಪ್ರಕಟಿಸಬಹುದು. ಸಮೂಹದಲ್ಲಿರುವ ಎಲ್ಲರ ಮುಖದ ಮೇಲಿನ ನೆರಿಗೆಗಳು, ಹಣೆಯ ಮೇಲಿನ ಬೆವರ ಹನಿಯನ್ನೂ ಈ ಕ್ಯಾಮರಾ ದಾಖಲಿಸುತ್ತದೆ.ಕೇವಲ ಇವಷ್ಟೇ ಅಲ್ಲ. ಅಂತಹ ಹತ್ತು ಹಲವು ವೈಶಿಷ್ಟ್ಯಗಳ ಆಗರ ಈ ಮುಂತಾಕ್. ಪರಸ್ಪರ ಮುಖಾಮುಖಿಯಾಗಿರುವ ಮುಂಬೈನ ಗೇಟ್...

ಜೌಗು ನೆಲದಲ್ಲಿ ಬಂಪರ್‌ ಬೆಳೆ

ಇಮೇಜ್
ಕೇವಲ 15ವರ್ಷಗಳ ಹಿಂದೆ ಬೆಳೆ ಬೆಳೆಯಲು ಉಪಯುಕ್ತವಲ್ಲದ ಜೌಗು ಪ್ರದೇಶವಾಗಿದ್ದ ನೆಲ ಇಂದು ರಾಜ್ಯದಲ್ಲಿಯೇ ಅತಿ ಹೆಚ್ಚು ಕಡಲೆ ಇಳುವರಿ ತರುತ್ತಿದೆ. ಕಾರಂಜಾ ನದಿಗುಂಟ ಇರುವ ಕಾರಣಕ್ಕಾಗಿಯೇ ಭಾಲ್ಕಿ ತಾಲ್ಲೂಕಿನ ಕುರುಬಖೇಳಗಿಯ ಶೇಷಪ್ಪ ಬಿರಾದಾರ ಅವರಿಗೆ ಸೇರಿದ ಬೀಳು ಬಿಡಲಾಗಿತ್ತು. ಆಗಾಗ ಬರುವ ನೆರೆ ಮತ್ತು ಅತಿ ನೀರಿನ ಕಾರಣದಿಂದಾಗಿ ಬಿತ್ತಿ ಬೆಳೆಯಲು ಸಾಧ್ಯವಿಲ್ಲದ ಹೊಲವಾಗಿತ್ತು. ದನಕರುಗಳಿಗೆ ಮೇವಾದರೂ ಆಗಲಿ ಎನ್ನುವ ಕಾರಣಕ್ಕಾಗಿ ಆ ಹೊಲವನ್ನು ಬೀಳು ಬಿಡಲಾಗಿತ್ತು. ಹರಿಯುತ್ತಿದ್ದ ಕಾರಂಜಾ ನದಿಗೆ ಅಡ್ಡಗಟ್ಟಿ ಜಲಾಶಯ ನಿರ್ಮಿಸಿದ ಮೇಲೆ ನದಿಯ ಹರಿವು ನಿಂತೇ ಹೋಯಿತು. ನದಿ ನೀರು ಬರುವುದು ನಿಂತ ಮೇಲೆ ಹೊಲಕ್ಕೆ ಜೀವ ಬಂತು. ಹಿಂದೆ ನದಿಯ ನೀರಿನಗುಂಟ ಬಂದಿದ್ದ ಮೆಕ್ಕಲು ಮಣ್ಣು ಹೊಲವನ್ನು ಫಲವತ್ತಾಗಿಸಿತ್ತು. ಅದೇ ಹೊಲದಲ್ಲಿ ಕೃಷಿ ಆರಂಭಿಸಲು ನಿರ್ಧರಿಸಿದರು ಶೇಷಪ್ಪ ಬಿರಾದಾರ. ಕೆಲವು ವರ್ಷಗಳ ಸತತ ಪ್ರಯತ್ನದ ನಂತರ ಏನನ್ನೂ ಬೆಳೆಯಲು ಸಾಧ್ಯವಿಲ್ಲದ ಜಮೀನಿನಲ್ಲಿ ಸುತ್ತಲ ಹತ್ತು ಹಳ್ಳಿಯ ಯಾರೊಬ್ಬರ ಹೊಲದಲ್ಲಿಯೂ ಇರದಷ್ಟು ಪ್ರಮಾಣದ ಇಳುವರಿ ಬರಲಾರಂಭಿಸಿತು. ಬಿತ್ತಿದ ವಸ್ತು ಏನೇ ಆದರೂ ಬಂಪರ್ ಇಳುವರಿ ತರುವ ಅದೃಷ್ಟಶಾಲಿ ಹೊಲವಾಯಿತು. ಮಳೆನೀರನ್ನೇ ಆಶ್ರಯಿಸಿ ಕೃಷಿ ಮಾಡುವುದನ್ನು ಮುಂದುವರೆಸಿದ ಶೇಷಪ್ಪ ಅವರು ಕೆಲ ವರ್ಷಗಳ ನಂತರ ಕಡಲೆ ಆ ನೆಲಕ್ಕೆ ಸೂಕ್ತ ಎಂದು ನಿರ್ಧರಿಸಿದರು. ಅದಾದ ಮೇಲೆ ಕಡಲೆಯ ಬೆಳೆಯು ಅವರಿಗೆ ಕೈತುಂಬ ಹಣ...

ದಶಮಾನೋತ್ಸವ ಪೂರ್ಣಗೊಳಿಸಿದ `ನಾದವೇದಿಕೆ'

ಇಮೇಜ್
ಹವ್ಯಾಸಿ ಸಂಗೀತ ಆಸಕ್ತರು ಹುಟ್ಟು ಹಾಕಿದ ಪುಟ್ಟ ನಾದದ ತೊರೆಯೊಂದು ಅವಿರತವಾಗಿ ಕಳೆದ ಹತ್ತು ವರ್ಷಗಳಿಂದ ಹರಿದು ಬರುತ್ತಿದೆ. ಶಾಸ್ತ್ರೀಯ ಸಂಗೀತಕ್ಕೇ ಪ್ರಾಧಾನ್ಯ ನೀಡುವ ಬೀದರ್ ಜಿಲ್ಲೆಯ ಹುಮನಾಬಾದ್ನ `ನಾದ ವೇದಿಕೆ' ಸಂಗೀತದ ಆಸಕ್ತಿ ಉಳಿಸಿ ಬೆಳೆಸುವಲ್ಲಿ ಮಾಡಿದ ಸಾಧನೆ ಅನನ್ಯ ಮತ್ತು ಅಪೂರ್ವ. ಸಂಗೀತದಲ್ಲಿ ಆಸಕ್ತಿ ಇರುವ ಹತ್ತಾರು ಜನ ತಮ್ಮ `ಪಾಕೆಟ್ ಮನಿ' ಆರಂಭಿಸಿದ ಈ ಸಂಸ್ಥೆ ಮಾಡಿದ ಕೆಲಸ ಗಮನಾರ್ಹ. `ನಾದ ವೇದಿಕೆ'ಯಲ್ಲಿ ಇರುವ ಬೆರಳೆಣಿಕೆಯಷ್ಟು ಜನರಲ್ಲಿ ಬಹುತೇಕ ಜನ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸದಲ್ಲಿ ಇರುವವರು. ಅದರಲ್ಲೂ ಉಪನ್ಯಾಸಕ ಅಥವಾ ಶಿಕ್ಷಕ ಹ್ದುದೆಯಲ್ಲಿ ಇರುವವರು. ನಿತ್ಯದ ನೂರು ಜಂಜಡಗಳ ನಡುವೆಯೇ ಅಲ್ಪ ಆದಾಯದಲ್ಲಿಯೇ ಒಂದಷ್ಟು ಹಣ ಉಳಿಸಿಟ್ಟು ವೇದಿಕೆಯ ಕಾರ್ಯಕ್ರಮಗಳಿಗೆ ನೀಡುತ್ತಾರೆ. ಅದೇ ವೇದಿಕೆಯ ಚಟುವಟಿಕೆಗಳಿಗೆ ಪ್ರಮುಖ ಆಧಾರ. ಸರ್ಕಾರದಿಂದ ಅಥವಾ ಉದ್ಯಮಿಗಳಿಂದ ಆರ್ಥಿಕ ನೆರವು ಪಡೆಯದೇ ಸಂಗೀತ ಕಚೇರಿಗಳನ್ನು ನಡೆಸುವ ಉದ್ದೇಶದಿಂದ ಆರಂಭವಾದ ಈ ಸಂಗೀತ ಸಂಸ್ಥೆ ನಂತರದ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಸಂಗೀತಗಾರರಿಗೆ `ಸಂಗೀತ ಸಿರಿ' ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿತು. ಎಲೆ ಮರೆಯ ಕಾಯಿಯಂತೆ ಪ್ರಚಾರ- ಪ್ರಭಾವಗಳಿಂದ ದೂರ ಉಳಿದ ಕಲಾವಿದರಿಗೇ ಈ ವೇದಿಕೆಯಲಿ ಮನ್ನಣೆ. ಹುಮನಾಬಾದ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗ...

’೧೮೫೭ರ ಸಿಪಾಯಿದಂಗೆ’ ಮತ್ತು ’ಭಾಲ್ಕಿ ಪಿತೂರಿ

ಇಮೇಜ್
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಸರಿಯಾಗಿ ೬೧ ವರ್ಷಗಳು ಪೂರ್ಣಗೊಂಡಿವೆ. ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಟ ಆರಂಭವಾಗಿ ೧೫೧ ವರ್ಷಗಳಾಗಿವೆ. ಸತತ ೯೦ ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಭಾಗಿಯಾದ ಬಹುತೇಕರು `ಕಾಲ'ನ ಮನೆ ಸೇರಿದ್ದಾರೆ. ಹೊರಾಟ ಮತ್ತು ಅದರ ನೆನಪುಗಳು ಇತಿಹಾಸದ ಪುಟ ಸೇರಿವೆ. ಹಲವು ಪ್ರಸಂಗ- ಘಟನೆಗಳು ಪುಸ್ತಕದ ಪುಟಗಳಲ್ಲಿ ಮರೆತು ಹೋಗಿವೆ. ಮರೆತು ಹೋದ, ಆದರೆ , ಮರೆಯಬಾರದ ಒಂದು ಘಟನೆಯ ವಿವರ ಇಲ್ಲಿದೆ- **** ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಬೀದರ್ ಜಿಲ್ಲೆಯ ಭಾಲ್ಕಿಗೂ ಏನು ಸಂಬಂಧ? ವಿದೇಶಿ ವಿದ್ವಾಂಸರು `ಸಿಪಾಯಿ ದಂಗೆ' ಗುರುತಿಸುವ `ಮೊದಲ ಸ್ವಾತಂತ್ರ್ಯ ಸಂಗ್ರಾಮ' ಆರಂಭವಾದದ್ದು ಸರಿಯಾಗಿ ೧೫೧ ವರ್ಷಗಳ ಹಿಂದೆ. ಸತತ ಹತ್ತು ವರ್ಷಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ನಡೆದ ದಂಗೆ- ಪಿತೂರಿಗಳು ಕಂಪೆನಿ ಸರ್ಕಾರವನ್ನು ಕಂಗೆಡಿಸ್ದಿದವು. ಸರಿಯಾಗಿ ಹತ್ತು ವರ್ಷಗಳ ನಂತರ `ಭಾಲ್ಕಿ ಪಿತೂರಿ'ಯನ್ನು ವಿಫಲಗೊಳಿಸುವ ಮೂಲಕ ಬ್ರಿಟಿಷರು ಮೊದಲ ಹೋರಾಟವನ್ನು ಸಂಪೂರ್ಣವಾಗಿ ಕೊನೆಗೊಳಿಸುವಲ್ಲಿ ಯಶಸ್ವಿಯಾದರು. ಆ ಕಥೆಯ ಕೆಲವು ಐತಿಹಾಸಿಕ ವಿವರಗಳು ಇಲ್ಲಿವೆ- ೧೮೫೭ಮೇ ೧೦ರಂದು ಮೀರತ್‌ನಲ್ಲಿ ಮತ್ತು ಅಂಬಾಲಾಗಳ ಬ್ರಿಟಿಷ್ ಸೇನಾ ಪಡೆಯಲ್ಲಿ ಆರಂಭವಾದ ದಂಗೆಯು ರಾಷ್ಟ್ರದ ಹಲವೆಡೆಗಳಲ್ಲಿ ಪಸರಿಸಿತು. ಭಾರತೀಯರು ನಡೆಸಿದ ೧೮೫೭ರ ಹೋರಾಟದ ತಕ್ಷಣದ ಕಾರಣ ಬಂದೂಕಿನ ತೋಟಾಗಳಿಗೆ `ಹಂದಿ ಮತ್ತು ಗೋವಿನ ಕ...

ಕವಿಗಳು ಮತ್ತು ತಾಜಮಹಲ್

ಇಮೇಜ್
ಚೆಲುವಾಗಿರುವ ತಾಜ್ ಸಹಜವಾಗಿ ಭಾವನಾಜೀವಿಗಳನ್ನು ತನ್ನತ್ತ ಸೆಳೆಯುತ್ತಿದೆ. ಅದರ ಸುತ್ತ ಹರಡಿರುವ ಕತೆ- ದಂತಕತೆಗಳು ಕೂಡ ಅದರ ಸೌಂದರ್ಯವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿವೆ. ತಾಜ್ ಜೊತೆಗೆ ಕವಿಗಳು, ಕಲಾವಿದರು, ಪ್ರೇಮಿಗಳು ಮತ್ತು ರಸಿಕರಿಗೆ ಅತ್ಯಂತ ಭಾವನಾತ್ಮಕ ಸಂಬಂಧ. ಪ್ರತಿಯೊಬ್ಬ ಕವಿಯೂ ಒಂದಲ್ಲ ಒಂದು ಹಂತದಲ್ಲಿ ತಾಜ್ ಬಗ್ಗೆ ಪ್ರೀತಿ- ಒಲವು ತೋರಿಸಿರುತ್ತಾನೆ. ಆ ಒಲವು ಕೇವಲ ರಮ್ಯವಾದ ಚಿತ್ರಣದಲ್ಲಿ ಕೊನೆಗೊಂಡಿರಬೇಕೆಂದೆನೂ ಇಲ್ಲ. ತಾಜ್ ಕುರಿತು ಹಲವು ವಿಭಿನ್ನ ನೋಟ- ದೃಷ್ಟಿಕೋನಗಳ ಕವಿತೆಗಳಿವೆ. ಕನ್ನಡ ಮತ್ತು ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಹಲವು ಕವಿಗಳ 'ಪ್ರೇಮಾರಾಧನೆ'ಯ ಸಂಕೇತವಾಗಿ ತಾಜ್ ಚಿತ್ರಿತವಾಗಿದೆ. ರವೀಂದ್ರನಾಥ್ ಠಾಕೂರ್ `ಕಾಲದ ಕೆನ್ನೆಯ ಮೇಲಿನ ಮುತ್ತಿನ ಹನಿ' ಎಂದು ತಾಜ್ ಬಗ್ಗೆ ಬರೆದರೆ ಇಂಗ್ಲಿಷ್ ಕವಿ ಸರ್ ಎಡ್ವಿನ್ ಅರ್ನಾಲ್ಡ್‌ `ಸಾಮಾನ್ಯ ವಾಸ್ತುಶಿಲ್ಪದ ತುಣುಕಲ್ಲ. ಜೀವಂತ ಕಲ್ಲುಗಳ ಮೇಲೆ ಕೆತ್ತಿದ ಸಾಮ್ರಾಟನ ಪ್ರೇಮ-ಕನಸು' ಎಂದು ವ್ಯಾಖ್ಯಾನಿಸುತ್ತಾನೆ. ಬೆಂದ್ರೆಯವರು `ಬೆಲೆ ಕಟ್ಟಬರದ ಈ ಪ್ರೇಮ ಸ್ಮಾರಕ ಕೊನೆಗೆ ಕಾಲಲೀಲೆಗೆ ಈಡೇ?' ಎಂದು ಪ್ರಶ್ನಿಸಿ `ಮಣ್ಣ ಪ್ರಕೃತಿಗೆ ಸದಾ ಮಣ್ಣ ಆಟವೆ ಸಾಜ/ಅಂದು ಕತೆಯಾದೀತು ಇಂದಿನದ್ಭುತ ತಾಜ;/ ಬಿಟ್ಟಾವು ಈ ಕಥಾಕಲ್ಪವೃಕ್ಷದ ಕೊನೆಗೆ ಪ್ರೇಮಸ್ಮಾರಕಕೆ ಸಾವಿರದ ಸಾವಿರ ಕವನ' ಎಂದು ಪ್ರೀತಿ- ಗೌರವ ಸೂಚಿಸುತ್...

ಬೇಡದ ಜಂಗದ- ಬೆಲ್ದಾಳ ಶರಣರು

ಇಮೇಜ್
ತಾವು ಧರಿಸಿರುವ ನೊರೆ ಹಾಲಿನಂತಹ ಅಚ್ಚ ಬಿಳುಪಿನ ಬಟ್ಟೆಯಿಂದ ತಟ್ಟನೆ ಗಮನ ಸೆಳೆಯುವ ಸಿದ್ಧರಾಮ ಶರಣರು ಬಸವ ತತ್ವದಲ್ಲಿ ಅಚಲ ನಂಬುಗೆ ಇಟ್ಟವರು. `ಬೆಲ್ದಾಳ ಶರಣರು' ಎಂದೇ ಧಾರ್ಮಿಕ- ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತರಿರುವ ಅವರದು ಖಚಿತ ನಿಲುವು. ಹಾಗೆಯೇ ಅಷ್ಟೇ ನಿರ್ಭಿಡೆಯಿಂದ ಕಡ್ಡಿ ತುಂಡು ಮಾಡುವಂತೆ ಮಾತನಾಡುವವರು. ವಚನ ಸಾಹಿತ್ಯದ ಬಗ್ಗೆ ಅಪಾರ ಗೌರವ ಇರಿಸಿಕೊಂಡಿರುವ ಬೆಲ್ದಾಳ ಶರಣರು ಮಠ ಮಾನ್ಯಗಳ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಲೂ ಹಿಂದೇಟು ಹಾಕುವವರಲ್ಲ. ಕರ್ನಾಟಕದ ತುತ್ತ ತುದಿಯಲ್ಲಿರುವ ಔರಾದ್ ತಾಲ್ಲೂಕಿನ ಕೌಠಾ ಗ್ರಾಮದಲ್ಲಿ ಶಾಲೆ-ಕಾಲೇಜು ಮತ್ತು ಆಸ್ಪತ್ರೆಗಳಂತಹ ಸಾರ್ವಜನಿಕ ಸೇವೆಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡ್ದಿದಾರೆ. ಮಾಂಜ್ರಾ ನದಿಯ ದಡದ ಮೇಲಿರುವ ಆಶ್ರಮ ಅವರ ಕಾರ್ಯಕ್ಷೇತ್ರ. ದಲಿತ ವರ್ಗದಲ್ಲಿ ಹುಟ್ಟಿ ಬೆಳೆದ ಅವರು ಸತತ ಅಧ್ಯಯನ, ಸತ್ಸಂಗಗಳ ಮೂಲಕ ಆಧ್ಯಾತ್ಮಿಕ ಲೋಕ ನಿರ್ಮಿಸಿಕೊಂಡು ಪರಂಪರಾನುಗತ ಧಾರ್ಮಿಕ ವ್ಯವಸ್ಥೆಗೆ ಸೆಡ್ಡು ಹೊಡೆದು ಪರ್ಯಾಯ ಲೋಕ ಸೃಷ್ಟಿಸಿದವರು. ಅವರ ಕೌಠಾ ಜಗತ್ತಿನಲ್ಲಿ, ಲೋಕದಲ್ಲಿ ಅಕ್ಷರಶಃ ಮೇಲು-ಕೀಳುಗಳಿಲ್ಲ. ದೀನರ ಸೇವೆಯನ್ನು ಯಾವುದೇ ಆಡಂಬರಗಳಿಲ್ಲದೇ ನಡೆಸುತ್ತ ಬಂದಿರುವ ಅವರಿಗೆ 2006ನೇ ಸಾಲಿನಲ್ಲಿ `ಅನುಭವ ಮಂಟಪ ಪ್ರಶಸ್ತಿ' ಸಂದಿದೆ. ಸೌಜನ್ಯದ ಸಾಕಾರ ಮೂರ್ತಿಯಂತಿರುವ ಬೆಲ್ದಾಳ ಶರಣರು ಶಿಸ್ತು ಮತ್ತು ಸಂಯಮದ ಬದುಕಿಗೆ ಹೆಸರಾದವರು. ನಿಜಾಂ ಆಡಳಿತದಲ್ಲಿ...

ಪಾಲಿಟಿಕ್ಸ್ ಅಂದ್ರ ಗ್ಯಾಂಬ್ಲಿಂಗ್ ಇದ್ಹಾಂಗ- ಮೆರಾಜುದ್ದೀನ್‌ ಪಟೇಲ್‌

ಇಮೇಜ್
ಮೆರಾಜುದ್ದೀನ್‌ ನಿಜವಾದ ಅರ್ಥದಲ್ಲಿ ಅಪರೂಪದ ರಾಜಕಾರಣಿ. ಅಂತಹ ಚಾಣಾಕ್ಷ್ಯ ರಾಜಕಾರಣಿಗಳು ಬಹಳಷ್ಟು ಜನ ಸಿಗುವುದಿಲ್ಲ. ರಾಜಕಾರಣದ ನಿತ್ಯ ಜಂಜಾಟದಲ್ಲಿ ಇದ್ದರೂ ತನ್ನ ಜನಪರ ನಿಲುವು ಉಳಿಸಿಕೊಂಡಿದ್ದ ಮೆರಾಜ್‌ ಅವರು ಬಹಳಷ್ಟು ರಾಜಕಾರಣಿಗಳ ಹಾಗೆ ತೋರಿಕೆಗಾಗಿ ಬಡಜನರ ಪರವಾಗಿ ನಿಂತವರಲ್ಲ. ನಿಜವಾದ ಕಾಳಜಿ ಅವರ ಮಾತು ಮತ್ತು ನಡತೆಯಲ್ಲಿ ವ್ಯಕ್ತವಾಗುತ್ತಿತ್ತು. ಕಳೆದ ವಿಧಾನಸಭಾ (೨೦೦೮) ಚುನಾವಣೆ ಸಂದರ್ಭದಲ್ಲಿ ನಡೆಸಿದ ಸಂದರ್ಶನ ಯಥಾವತ್ತಾಗಿ ಹಾಕುತ್ತಿದ್ದೇನೆ. ಅವರ ವ್ಯಕ್ತಿತ್ವ ಬಿಂಬಿಸುತ್ತದೆ ಎನ್ನುವ ಕಾರಣಕ್ಕಾಗಿ ಇದು ನನಗೆ ಪ್ರಿಯವಾದ ಬರವಣಿಗೆಗಳಲ್ಲಿ ಒಂದು. ***** `ರಾಜಕೀಯದಾಗ ಯಾವಾಗ ಏನು ಬೇಕಾದರೂ ಆಗಬಹುದು. ಪಾಲಿಟಿಕ್ಸ್ (ರಾಜಕೀಯ), ಅಗ್ರಿಕಲ್ಚರ್ (ಕೃಷಿ) ಮತ್ತು ಗ್ಯಾಂಬ್ಲಿಂಗ್ (ಜೂಜು) ಇವು ಮೂರು ಒಂದೇ ಕೆಟಗರಿಗೆ ಸೇರಿದವು. ಹೀಗೇ ಅಂತ ಖಚಿತ ಹೇಳಲಿಕ್ಕೆ ಆಗುವುದಿಲ್ಲ' ಇದು ಜೆಡಿ(ಎಸ್) ರಾಜ್ಯ ಘಟಕದ ಅಧ್ಯಕ್ಷ ಮೆರಾಜ್ದುದೀನ್ ಪಟೇಲ್ ಅವರ ಖಚಿತ ಅಭಿಪ್ರಾಯ. ಪಕ್ಷದ ಹಿರಿಯ ನಾಯಕರಿಗೆ ಆದ `ಮೋಸ' ನಿಮಗೆ ಆಗಲಿಕ್ಕಿಲ್ಲವೇ? ಎಂಬ ಪ್ರಶ್ನೆಗೆ `ನಿನ್ನೆ ಸಿದ್ಧರಾಮಯ್ಯ, ಪಿ.ಜಿ.ಆರ್.ಸಿಂಧ್ಯಾ, ಎಂ.ಪಿ.ಪ್ರಕಾಶ್ಗೆ ಆದ್ದದು ನಾಳೆ ನನಗೂ ಆಗಬಹುದು. ಯಾವಾಗ ಯಾರಿಗೆ ಏನು ಆಗ್ತದ ಹೇಳ್ಲಿಕ್ಕೆ ಆಗುವುದಿಲ್ಲ, ಹೇಳಲಿಕ್ಕೆ ಬರುವುದಿಲ್ಲ. ಆದರೆ, ಮುಂದೊಂದು ದಿನ ಒಳ್ಳೆಯದಾಗಬಹುದು ಅಂತ ಅಂದಾಜು ಇಟ್ಟುಕೊಂಡು ಕೆಲಸ ಮಾಡುತ್ತ...

ಕಲಾಗುರು- ಕಲಾವಿದ ಎಂ.ಬಿ. ಲೋಹಾರ್

ಇಮೇಜ್
ಕಲಾವಿದ ಎಂ.ಬಿ. ಲೋಹಾರ್ ಅವರು ಸರಳ, ಸಜ್ಜನ ವ್ಯಕ್ತಿತ್ವದ ಮೃದುಹೃದಯಿ. ಮಿತಭಾಷಿಯಾಗಿದ್ದ ಅವರು ಯಾವುದೇ ಸಂದರ್ಭದಲ್ಲಿಯೂ ಸಂಯಮದ ಎಲ್ಲೆ ಮೀರಿ ಮಾತನಾಡಿದವರಲ್ಲ. ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ ಹೊಂದಿದ್ದ ಅಪರೂಪದ ಕಲಾಗುರು ಅವರಾಗಿದ್ದರು. ಮೂರು ದಶಕಗಳ ಕಲಾಜೀವನವನ್ನು ಇತ್ತೀಚೆಗೆ (ಆಗಸ್ಟ್ 3) ಗುಲ್ಬರ್ಗದಲ್ಲಿ ಪೂರ್ಣಗೊಳಿಸಿದರು. ಅವರಿಗೊಂದು ನುಡಿನಮನ ಇಲ್ಲಿದೆ.-- ಸತತ ಮತ್ತು ಕಠಿಣ ಪರಿಶ್ರಮದಿಂದ ಕಲಾಲೋಕದಲ್ಲಿ ನೆಲೆ ಕಂಡುಕೊಂಡ ಕಲಾವಿದ ಎಂ.ಬಿ. ಲೋಹಾರ್. `ಕಪಲ್ಸ್' ಸರಣಿ ಅವರ ಚಿತ್ರಗಳ ಮೂಲಕ ನಾಡಿನ ಕಲಾವಲಯದಲ್ಲಿ ಜನಪ್ರಿಯರಾಗಿದ್ದ ಲೋಹಾರ್ ಅವರು ವಸ್ತುವಿನ ಆಯ್ಕೆಯಲ್ಲಿ ಜನಪರ- ಜೀವಪರ ಧೋರಣೆ ತಳೆಯುತ್ತಿದ್ದವರಾಗಿದ್ದರು. ಅವರ ಕುಂಚದ ಬೀಸುಗಳಲ್ಲಿ ಯಾವುದೇ ಗೊಂದಲ- ಗಲಿಬಿಲಿ ಇರುತ್ತಿರಲಿಲ್ಲ. ತಮ್ಮ ಕಲಾಕೃತಿಗೆ ಪರ್ಫೆಕ್ಟ್ ಆದ `ಲೋಹಾರ ಟಚ್' ನೀಡುತ್ತಿದ್ದರು. ರೂಢಿಗತವಾದ ನಿಸರ್ಗ ಚಿತ್ರಣ ಇರುವ ಲ್ಯಾಂಡ್‌ಸ್ಕೇಪ್‌ ಮತ್ತು ವ್ಯಕ್ತಿಚಿತ್ರಣದ ಪೋಟ್ರೇಟ್‌ಗಳನ್ನು ಲೋಹಾರ ರಚಿಸುತ್ತಿದ್ದರು. ಆದರೆ, ಅವರ ಕಲಾಕೃತಿಗಳ ಅನನ್ಯತೆ ಇರುವುದು ನವ್ಯ ಆಕೃತಿಗಳ ಮೂಲಕ ನಿಸರ್ಗ ಮತ್ತು ಮಾನವನ ನಡುವಿನ ಮುಖಾಮುಖಿಯಲ್ಲಿ. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕಣಜಿಯಲ್ಲಿ 1949ರಲ್ಲಿ ಜನಿಸಿದ ಮನೋಹರ ಬಸವಂತ ಲೋಹಾರ ಅವರು ಕಲಾವಲಯದಲ್ಲಿ `ಎಂ.ಬಿ.ಲೋಹಾರ' ಎಂದೇ ಚಿರಪರಿಚಿತರು. ಗುಲ್ಬರ್ಗದ ಐಡಿಯಲ್ ...

ಸಂಗೀತದಿಂದಲೇ ರೊಟ್ಟಿ ಚಟ್ನಿ ಸಿಕ್ಕದ್ದು

ಇಮೇಜ್
`ಸಂಗೀತಕ್ಕಾಗಿಯೇ ಇಡೀ ಜೀವನವನ್ನು ಮುಡಿಪಿಟ್ಟ ನನಗೆ ಅದರಿಂದಲೇ ಅರ್ಧ ರೊಟ್ಟಿ ಚಟ್ನಿ ಸಿಕ್ಕದ್ದು' ಎಂದು ನೇರವ ಾಗಿ ಹೇಳುವ ಪಂಡಿತ್ ನರಸಿಂಹಲು ವಡವಾಟಿ ಕ್ಲಾರಿಯೋನೆಟ್ ವಾದಕರು ಮಾತ್ರವಲ್ಲ, ಉತ್ತಮ ಗಾಯಕರು ಕೂಡ. `ಒಂದೇ ವೇದಿಕೆ ಮೇಲೆ ಹಾಡುವುದು ಮತ್ತು ನಂತರ ಕ್ಲಾರಿಯೋನೆಟ್ ನುಡಿಸುವುದು ಕಷ್ಟದ ಕೆಲಸ ಎಂದು ಕಛೇರಿಗಳಲ್ಲಿ ಗಾಯನ ಕಾರ್ಯಕ್ರಮ ನೀಡುವುದನ್ನು ನಿಲ್ಲಿಸಿದೆ' ಎನ್ನುವ ವಡವಾಟಿಯವರು `ಈಗಲೂ ಪ್ರತಿದಿನ ಗಾಯನದ ರಿಯಾಜ್ ಮಾಡುತ್ತೇನೆ. ಗಾಯನದ ಅನುಭವ ಇಲ್ಲದೇ ನುಡಿಸುವ ವಾದನದಲ್ಲಿ 'ಕೊರತೆ' ಕಾಣಿಸುತ್ತದೆ. ಗಾಯನ ಬಿಟ್ಟು ವಾದ್ಯ ಇಲ್ಲ, ವಾದ್ಯ ಬಿಟ್ಟು ಗಾಯನ ಇಲ್ಲ ಎರಡೂ ಒಂದೇ' ಎಂದು ಹೇಳಲು ಮರೆಯುವುದಿಲ್ಲ. ಪಂಡಿತ್ ಸಿದ್ಧರಾಮ ಜಂಬಲದಿನ್ನಿಯವರ ಹತ್ತಿರ 1965ರಿಂದ 88ರ ಅವಧಿಯಲ್ಲಿ ಗಾಯನ ಕಲಿತ ವಡವಾಟಿಯವರು ಕಛೇರಿಗಳಲ್ಲಿ ಅವರ ಜೊತೆ ಗಾಯನ ಪ್ರಸ್ತುತ ಪಡಿಸುತ್ತಿದ್ದಾರೆ. ಆಗಲೇ ಅದಕ್ಕೂ ಮುನ್ನ ಹೊಟ್ಟೆಪಾಡಿಗಾಗಿ ಕಲಿತಿದ್ದ ಕ್ಲಾರಿಯೋನೆಟ್‌ನ್ನು ಯಾಕೆ ಶಾಸ್ತ್ರೀಯ ಸಂಗೀತಕ್ಕೆ ಬಳಸಬಾರದು ಅನ್ನುವ ಯೋಚನೆ ಬಂದು ಸತತ ಪ್ರಯತ್ನದಿಂದ ಗಾಯನದ ಶೈಲಿಯಲ್ಲಿ ಕ್ಲಾರಿಯೋನೆಟ್ ನುಡಿಸುವುದಕ್ಕೆ ಆರಂಭಿಸಿದರು. ಗಾಯನ- ವಾದನದ ಹದವಾದ ಮಿಶ್ರಣವಿರುವ ಗಾಯಕಿ ಶೈಲಿಯ ಕ್ಲಾರಿಯೋನೆಟ್ ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು. `ಕ್ಲಾರಿಯೋನೆಟ್ ಒಂದು ಇನ್ ಸ್ಟ್ರುಮೆಂಟ್‌ ಅದನ್ನು ಸರ್ಕಸ್ಗೆ, ಬ್ಯಾಂಡ್‌ಗೆ ಬಳಸಬಹುದು. ಶ...

’ಒಕ್ಕಲತನದ ಮ್ಯಾಲ ನನಗ ಭಾಳ ಒಲವು’

ಇಮೇಜ್
ತಮ್ಮ ಕಲಾಕೃತಿಗಳಲ್ಲಿ ಹೈದರಾಬಾದ್ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಕಲ್ಬುರ್ಗಿ ಸುತ್ತಲಿನ ಬದುಕಿನ ಅನುಭವ- ಜೀವಂತಿಕೆಯನ್ನು ಚಿತ್ರಿಸುವ ವಿ.ಜಿ. ಅಂದಾನಿಯವರು ಪ್ರಾದೇಶಿಕ ಅನನ್ಯ ಶೈಲಿಯ ಮೂಲಕ ಹೆಸರುವಾಸಿಯಾಗಿರುವವರು. ಕಲ್ಬುರ್ಗಿಯಂತಹ ಬರಡು ನೆಲದಲ್ಲಿ ` ಐಡಿಯಲ್ ಫೈನ್ ಆರ್ಟ್‌ ಸ್ಕೂಲ್ ' ಮೂಲಕ ಕಲಾಪರಂಪರೆಯನ್ನು ಹುಟ್ಟುಹಾಕಿರುವ ಅಂದಾನಿಯವರು ತಮ್ಮ ಕುಟುಂಬ , ನೆನಪು- ಹಳಹಳಿಕೆ- ಕನಸುಗಳನ್ನು ಮನಬಿಚ್ಚಿ ಮಾತನಾಡುತ್ತಾರೆ. ` ನಮ್ಮೂರು ಕಲ್ಬುರ್ಗಿಗೆ 25 ಕಿ.ಮೀ. ದೂರದಲ್ಲಿರುವ ಕಿರಣಗಿ. ನಾ ಸಣ್ಣಾವ್ದಿದಾಗ ನಮ್ಮದು ಜಾಯಿಂಟ್ ಫ್ಯಾಮಿಲಿ. ಒಬ್ಬ ಅಕ್ಕ ಸೇರಿದಂತೆ 11 ಸಹೋದರರಲ್ಲಿ ನಾನೇ ಕಡೆಯವ. ನಿಜಾಂ ಕಾಲದಲ್ಲಿ ಪಟವಾರಿ ಆಗಿದ್ದ ಅಜ್ಜ ಭಾರೀ ಮನಸ್ಯಾ ಇದ್ದ . ಅವನಿಂದಾನೇ ಮನ್ಯಾಗ ಎಲ್ಲರಿಗಿ ಎಜ್ಯುಕೇಷನ್ ಸಿಕ್ಕಿದ್ದು. ಆದ್ರ ನಮ್ಮ ಫಾದರ್ ಮಾತ್ರ ಪೂರ್ತಿ ಹೊಲಾನೇ ನಂಬಿ ಬದುಕಿದ್ದವರು. ನನಗೂ ಒಕ್ಕಲತನದ ಮ್ಯಾಲ ಭಾಳ ಒಲವ ಐತಿ. ಈಗೀಗ ಕಲ್ಬುರ್ಗಿ ಊರ ಹೊರಗ ಒಂದೀಟು ಹೊಲ ತಗೊಂಡು ತೋಟ-ಪಟ್ಟಿ ತರಹ ಮಾಡಬೇಕು ಅಂತ ಅಂದುಕೊಂಡೀನಿ ' ಎಂದು ತಮ್ಮ ಹಿನ್ನೆಲೆ ಮತ್ತು ` ಕನಸು ' ವಿವರಿಸುತ್ತಾರೆ. ` ನಮ್ಮೂರಿಗೆ ಸನೀಪದ ದೊಡ್ಡ ಊರಂದ್ರ ಎಸಿಸಿ ಫ್ಯಾಕ್ಟರಿಯಿಂದ ಫೇಮಸ್ ಆಗಿದ್ದ ಶಹಾಬಾದ. ಅಲ್ಲಿಗೆ ಸಿನಿಮಾ ನೋಡುದಕ್ಕೆ ಹೋಗ್ತಿದ್ವಿ. ನಾನು ` ಆವಾರಾ ', `420' ನೋಡಿದ್ದೆಲ್ಲಾ ಅಲ್ಲಿಯೇ. ಆಗೇ ನಾಕಾರು ಸರ...

ಕೇವಲ ಕೌಶಲ್ಯ ಕಲೆಯಲ್ಲ; ಅನುಕರಣೆಯೂ ಕಲೆ ಅಲ್ಲ

ಇಮೇಜ್
ಗುಲ್ಬರ್ಗದ ಹಿರಿಯ ಕಲಾವಿದ ಜೆ.ಎಸ್‌. ಖಂಡೇರಾವ್‌ ಜಾಗತೀಕರಣದ ಹೊಸ ಗಾಳಿಯಿಂದಾಗಿ ಬದುಕಿಗಾಗಿ ಕಲೆಯನ್ನು ಆಶ್ರಯಿಸಿರುವ ಕಮರ್ಷಿಯಲ್‌ ಆರ್ಟಿಸ್ಟ್‌ಗಳಿಗೆ ಹೊಡೆತ ಬಿದ್ದಿದೆ, ಬೀಳುತ್ತಿದೆ. ಆನ್ವಯಿಕ ಕಲಾವಿದರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬದಲಾದ ಕಾಲಕ್ಕೆ ತಕ್ಕಂತೆ ಅವರು ವೇಗವಾಗಿ ಬದಲಾಗ ಬೇಕಾದ ಸ್ಥಿತಿ ಇದೆ. ಅವರಿಗೀಗ ಕಂಪ್ಯೂಟರ್ ಕಲಿಯುವುದು ಅನಿವಾರ್ಯವಾಗಿದೆ. ಎಷ್ಟೇ ಆಧುನಿಕ ಕಂಪ್ಯೂಟರ್ ಬಂದರೂ ಅದು ಕಲಾವಿದನ ಸ್ಥಾನ ಆಕ್ರಮಿಸುವುದಿಲ್ಲ. ಎರಡೂ ಬೇರೆ. ಕಲಾವಿದ ಕುಂಚದ ಬದಲಿಗೆ ಕಂಪ್ಯೂಟರ್ ಬಳಸಬಹುದು. ಅದರರ್ಥ ಬ್ರಷ್ ಬದಲಿಗೆ ಮೌಸ್ ಬರುತ್ತದೆ ಅಷ್ಟೇ. ಅದಕ್ಕೂ ಕಲಾವಿದನ ಚಿಂತನೆ ಮತ್ತು ಕೌಶಲ್ಯ ಬೇಕೇ ಬೇಕಾಗುತ್ತದೆ. ಆಧುನಿಕ ತಂತ್ರಜ್ಞಾನದ ಫಲವಾಗಿ ಬಂದಿರುವ ಡಿಜಿಟಲ್ ಪ್ರಿಂಟ್‌ಗಳಿಂದ ಓರಿಜಿನಲ್ ಆಗಿ ರಚಿಸಲಾಗುವ ಕಲಾಕೃತಿಗಳ ಮಹತ್ವ ಕಡಿಮೆ ಆಗುವ ಸಾಧ್ಯತೆಗಳೇ ಇಲ್ಲ. ತಂತ್ರಜ್ಞ ಮ್ಯಾಕ್ಸಿಮಮ್ ಕಷ್ಟಪಟ್ಟರೂ ಮೂಲ ಕಲಾಕೃತಿಯ ಅರ್ಧದಷ್ಟು ಗುಣಮಟ್ಟ ತರುವುದೂ ಸಾಧ್ಯವಿಲ್ಲ. ಕ್ಯಾನ್ವಾಸ್ ಮೇಲಿನ ಥಿಕ್‌ನೆಸ್ ಕುಂಚದ ಬೀಸುಗಳು ಪ್ರಿಂಟ್‌ನಲ್ಲಿ ಬರುವುದೇ ಇಲ್ಲ. ಕಾಲದ ಪರೀಕ್ಷೆಯಲ್ಲಿ ಓರಿಜಿನಲ್ ಕಲಾಕೃತಿಗಳು ಉಳಿದುಕೊಳ್ಳುತ್ತವೆ. ಪ್ರಿಂಟ್‌ಗಳಿಗೆ ಆ ಭಾಗ್ಯ ಇಲ್ಲ. *** ಕಲಾಸಕ್ತರು ಮತ್ತು ಕಲಾವಿದರು ಮುಖಾಮುಖಿ ಆಗುವುದಕ್ಕೆ ಗ್ಯಾಲರಿಗಳು ಅನಿವಾರ್ಯ. ಕಲಾವಿದರಿಗೂ ತಮ್ಮ ಕಲಾಕೃತಿಗಳು ಒಳ್ಳೆಯ ಬೆಲೆಗೆ ಮಾರಾಟ ಆಗಬೇಕು ಮತ...

ಸಂಗೀತ ಕೇಳುಗರಿಗಾಗಿ; ಪ್ರಶಸ್ತಿಗಾಗಿ ಅಲ್ಲ

ಇಮೇಜ್
ತಮ್ಮ ನೇರ , ನಿಷ್ಠುರ ಮಾತುಗಳಿಂದ ಸಾಂಸ್ಕೃತಿಕ ವಲಯದ ನೈತಿಕ ಎಚ್ಚರವನ್ನು ಜಾಗೃತವಾಗಿಡುತ್ತಿದ್ದ ಉಸ್ತಾದ್ ವಿಲಾಯತ್ ಖಾನ್ ಹಿಂದೂಸ್ತಾನಿ ಸಂಗೀತ ಪರಂಪರೆಯಲ್ಲಿ ಮೂಡಿಬಂದ ಅಪರೂಪದ ನಕ್ಷತ್ರಗಳಲ್ಲಿ ಒಬ್ಬರು . `ಬೀನ್‌ಕಾರ್‍' ಶೈಲಿಯಲ್ಲಿ ಪ್ರಚಲಿತವಾಗಿದ್ದ ಸಿತಾರ ವಾದನ ಪರಂಪರೆಗೆ ` ಗಾಯಕಿ ಅಂಗ್ ' ಸೇರಿಸಿದ ಹಿರಿಮೆ ಇವರದು . ಸಿತಾರ್ ವಾದನದಲ್ಲಿ ಗಾಯನ ಶೈಲಿ ಅಳವಡಿಸಿ ಅದಕ್ಕೆ ಅಗತ್ಯವಾಗಿದ್ದ ಸಿತಾರನ್ನು ರೂಪಿಸಿಕೊಂಡವರು . ನಾಲ್ಕು ತಲೆಮಾರುಗಳ ಸಂಗೀತ ಪರಂಪರೆ ಇರುವ ಕುಟುಂಬದಲ್ಲಿ ಜನಿಸಿದ ವಿಲಾಯತ್ ತಂದೆ ಉಸ್ತಾದ್ ಇನಾಯತಖಾನ್ ರಲ್ಲಿ ಸಿತಾರ್ ವಾದನ ಕಲಿಯಲು ಆರಂಭಿಸಿದರು . ವಿಲಾಯತ್ ಬಾಲಕರಾಗಿದ್ದಾಗ ಒಮ್ಮೆ ಅವರ ತಂದೆ ಸಿತಾರ್ ವಾದನ ಪ್ರಸ್ತುತ ಪಡಿಸುತ್ತಿರುವಾಗ ` ಕಣ್ಮುಂದೆ ಹಳದಿ ಬಣ್ಣವೇ ಹರಡಿ ' ದಂತಾಗಿದ್ದನ್ನು ತಂದೆಗೆ ಹೇಳಿದರು . ಅದಕ್ಕೆ ಇನಾಯತಖಾನರು ` ಬುದ್ದು , ನಾನೀಗ ನುಡಿಸಿದ್ದ ` ಬಸಂತ್ ' ರಾಗ ' ಎಂದು ಹೇಳಿದ್ದರು . ಸಂಗೀತದಲ್ಲಿ ಬಣ್ಣದ ಛಾಯೆ ಕಂಡ ವಿಲಾಯತರಿಗೆ ತಂದೆಯಿಂದ ಹೆಚ್ಚಿನ ಸಿತಾರ್ ಶಿಕ್ಷಣ ದೊರೆಯಲಿಲ್ಲ . ಕೇವಲ ಹತ್ತು ವರ್ಷದವರಾಗಿದ್ದಾಗಲೇ ಪಿತೃವಿಯೋಗಕ್ಕೆ ಒಳಗಾಗಬೇಕಾಯಿತು . ವಿಧಿಯಾಟದಿಂದ ನೊಂದ ವಿಲಾಯತರಿಗೆ ಅಜ್ಜ ಉಸ್ತಾದ್ ಬಂದೆ ಹುಸೇನ್ ಖಾನ್ ( ತಾಯಿಯ ತಂದೆ ) ಮತ್...