ಶ್ರೀದೇವಿ ಪುರಾಣದ ಕರ್ತೃ ಚಿದಾನಂದ ಅವಧೂತರ ಉಪಾಸನಾ ದೈವ ’ಅಂಬಾ’ಮಾತೆಯ ವಿಗ್ರಹಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಗಡ್ಡದ ಅವರ ಮನೆಯಲ್ಲಿ ನಿತ್ಯಪೂಜೆ ನಡೆಯುತ್ತಿದೆ. ನವರಾತ್ರಿಯ ಈ ದಿನಗಳಲ್ಲಿ ಅಲ್ಲಿ ವಿಶೇಷ ಪೂಜೆ- ಅರ್ಚನೆಗಳು ಶ್ರದ್ಧೆ- ಭಕ್ತಿಯಿಂದ ನಡೆಯುತ್ತಿವೆ. ಸುರಪುರ ಪಟ್ಟಣದ ಮುಜಂದಾರ ಗಲ್ಲಿಯ ಪಾಂಡುರಂಗ ದೇವಸ್ಥಾನದ ಹಿಂಬದಿಯಲ್ಲಿ ಇರುವ ವೆಂಕಣ್ಣಭಟ್ ಗಡ್ಡದ ಅವರ ಮನೆಯಲ್ಲಿ ಚಿದಾನಂದ ಅವಧೂತರು ಪೂಜಿಸುತ್ತಿದ್ದ ಉಪಾಸನಾ ಮೂರ್ತಿ ಇದೆ. ನಿತ್ಯಪೂಜೆ ಸಲ್ಲುವ ಶ್ರೀಚಕ್ರ ಸಮೇತ ಇರುವ ದೇವಿಯ ಪ್ರತಿಮೆಯು ಸುಮಾರು ೧೨ ಇಂಚು ಎತ್ತರದ್ದಾಗಿದೆ. ಪಾಶ ಅಂಕುಶ, ಬಿಲ್ಲುಬಾಣಗಳನ್ನು ಕೈಯಲ್ಲಿ ಹಿಡಿದಿರುವ ಚತುರ್ಭುಜೆ ದೇವಿಯ ಪ್ರತಿಮೆಗೆ ಕೇವಲ ಧಾರ್ಮಿಕ ಕಾರಣಗಳಿಗಾಗಿ ಮುಖ್ಯ ಅಲ್ಲ. ಇದೊಂದು ಐತಿಹಾಸಿಕ, ಸಾಂಸ್ಕೃತಿಕ ಮಹತ್ವ ಇರುವಂತಹದ್ದು. ಆಸ್ಥೆ ಮತ್ತು ಶ್ರದ್ಧೆಯ ಕಾರಣಗಳಿಂದ ಮೂರ್ತಿಯನ್ನು ಸಮೀಪದಿಂದ ನೋಡಲು ಸಾಧ್ಯವಿಲ್ಲದಿದ್ದರೂ ಪೂಜಾಲಂಕೃತ ವಿಗ್ರಹವನ್ನು ನೋಡುವುದೇ ಒಂದು ಸೊಬಗು. ಚಿದಾನಂದ ಅವಧೂತರೇ ಸ್ವತಃ ಪೂಜಿಸುತ್ತಿದ್ದ ಈ ವಿಗ್ರಹ ಅವರ ಕಾಲಾನಂತರ ಗಡ್ಡದ ಮನೆ ಸೇರಿಕೊಂಡಿತು. ಸದ್ಯ ಸುರಪುರ ನಿವಾಸಿಗಳಾಗಿರುವ ಕನಕಗಿರಿ ಮೂಲದ ಗಡ್ಡದ ಮನೆತನದ ಹಿರಿಯರಿಗೆ ಈ ಪ್ರತಿಮೆಯನ್ನು ಸ್ವತಃ ಅವಧೂತರೇ ತಮ್ಮ ಕೊನೆಯ ದಿನಗಳಲ್ಲಿ ನಿತ್ಯಪೂಜೆ ನಡೆಸುವಂತೆ ಸೂಚಿಸಿ ಹಸ್ತಾಂತರ ಮಾಡಿದರು ಎಂಬ ಐತಿಹ್ಯ ಇದೆ. ವೆಂಕಣ್ಣಭಟ್ಟರು ಈ ಐ...
ಕಾಮೆಂಟ್ಗಳು