ಮಧ್ಯಮಗಳು ಮತ್ತು ಹೈದರಾಬಾದ್ ಕರ್ನಾಟಕದ ಚಿತ್ರಕಲೆ



ನಿಮಗೆ ಗೊತ್ತಿಲ್ಲದೇ ಇರುವ ವಿಷಯವನ್ನು ನಿಮಗೆ ಹೇಳುವದಕ್ಕಾಗಿ ಬಂದ್ದಿದೇನೆ ಅಂತ ಭಾವಿಸಿಲ್ಲ. ಬಹಳಷ್ಟು ಸಲ ನಿಮಗೆ ಅನಿಸಿದ- ನೀವು ಯೋಚಿಸಿದ ಸಂಗತಿಗಳಿಗೇ ಒಂದು ಚೌಕಟ್ಟಿನ ರೂಪ ಕೊಡುವ ಕೆಲಸವನ್ನಷ್ಟೇ ಇಲ್ಲಿ ಮಡುತ್ತಿದ್ದೇನೆ.
ನಾನು ನಿಮ್ಮ ಹಾಗೆ ಕಲಾವಿದ ಅಲ್ಲ. ಆದರೆ, ಒಂದು ಕಾಲಕ್ಕೆ ಕಲಾವಿದ ಆಗಬೇಕು ಅಂತ ಕನಸು ಕಂಡಿದ್ದವ. ಏನೇನೋ ಒತ್ತಡಗಳ ಮಧ್ಯೆ ಅದು ಸಾಧ್ಯವಾಗಲಿಲ್ಲ. ಈಗ ಇಲ್ಲಿ ನನಗಿರುವ ಅರ್ಹತೆ ಅಂದರೆ ಕಲೆ ಮತ್ತು ಕಲಾವಿದರ ಬಗೆಗಿನ ಪ್ರೀತಿ ಮತ್ತು ಮಧ್ಯಮದಲ್ಲಿ ಕೆಲಸ ಮಡುತ್ತಿರುವುದು. ಈಗ ಮತನಾಡುತ್ತಿರುವ ವಿಷಯವೂ ಅದಕ್ಕೇ ಸಂಬಂಧಿಸಿದ್ದು ಆಗಿರುವುದರಿಂದ ಪೀಠಿಕೆಯಗಿ ಇಷ್ಟನ್ನು ಹೇಳುತ್ತೇನೆ.
ಸಾಹಿತ್ಯ, ಸಂಗೀತ, ದೃಶ್ಯಕಲೆ ಮತ್ತು ನಾಟಕ ಸೃಜನಶೀಲ ಅಭಿವ್ಯಕ್ತಿ ಮಧ್ಯಮಗಳಿಗೆ ಸಮಜದಲ್ಲಿ ಆದ್ಯತೆ ಕಡಿಮೆಯಗುತ್ತಿರುವ ಸಂಕೀರ್ಣ ಕಾಲಘಟ್ಟದಲ್ಲಿ ನಾವಿದ್ದೇವೆ. ಒಂದೆಡೆ ಕಾವ್ಯವೂ ಸೇರಿದಂತೆ ಸೃಜನಶೀಲ ಅಭಿವ್ಯಕ್ತಿಗೆ ದಾರಿಕಂಡುಕೊಳ್ಳಲಾಗದ ಆತಂಕದ ಸ್ಥಿತಿಯಲ್ಲಿದ್ದೇವೆ. ಅದಕ್ಕೆ ಸಮಕಾಲೀನ ತುರ್ತು ಮತ್ತು ಒತ್ತಡಗಳೂ ಕಾರಣ. ಅದನ್ನಿಲ್ಲಿ ನಾನು ಚರ್ಚಿಸಲು ಹೋಗುವುದಿಲ್ಲ.
*ಕಳೆದ ಒಂದು ಶತಮನದ ಅವಧಿಯಲ್ಲಿ ಕರ್ನಾಟಕದಲ್ಲಿ ದೃಶ್ಯ ಮಧ್ಯಮ ಬೆಳೆದು ನಿಂತಿರುವ ರೀತಿ ಅದ್ಭುತ ಮತ್ತು ಅನನ್ಯವಾದದ್ದು. ದೃಶ್ಯದ ಮೂಲಕ ಹೇಳುವುದಕ್ಕಾಗಿ ಬಳಸಲಾಗುವ ವೈವಿಧ್ಯಮಯವಾದ ಹತ್ತು ‘ಮಧ್ಯಮ’ದ ಬಳಕೆ ಮತ್ತು ಕೌಶಲ್ಯ- ಕುಸುರಿಗಾರಿಕೆಯ ಜೊತೆಯಲ್ಲಿಯೇ ಸಮಕಾಲೀನ ಒತ್ತಡ- ಸಂವೇದನೆಯನ್ನು ಕಟ್ಟಿಕೊಡುವಲ್ಲಿ ನಮ್ಮ ಕಲಾವಿದರು ಹಿಂದೆ ಬಿದ್ದಿಲ್ಲ. ರಾಷ್ಟ್ರಮಟ್ಟದಲ್ಲಿ ಮತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬಹುದಾದ ಸಾಧನೆ ಮಡಿದ ಹಲವು ಕಲಾವಿದರಿದ್ದಾರೆ. ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಅನನ್ಯ ಸಾಧನೆ ಮಾಡಿದ್ದಾರೆ. ಆದರೆ, ಕಲಾಲೋಕದಲ್ಲಿ ನಡೆಯುತ್ತಿರುವ ಚಿಂತನೆ- ಬೆಳವಣಿಗೆಯನ್ನು ಸಾಮನ್ಯರಿಗೆ ಗೊತ್ತು ಮಡುವಲ್ಲಿ- ತಿಳುವಳಿಕೆ ನೀಡುವಲ್ಲಿ ಕಲಾಸಕ್ತಿ ಮತ್ತು ದೃಶ್ಯಪ್ರಜ್ಞೆ ಬೆಳೆಸುವಲ್ಲಿ ಮತ್ರ ಆಗಬೇಕಾದಷ್ಟು ಕೆಲಸ ಆಗಿಲ್ಲವೆಂದೇ ಹೇಳಬೇಕು.
*ಕಲಾಕೃತಿಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪತ್ರಿಕೆಗಳೂ ಸೇರಿದಂತೆ ಟೆಲಿವಿಷನ್, ಇಂಟರ್‌ನೆಟ್‌ನಂತಹ ಮಧ್ಯಮಗಳನ್ನು ಬಳಸಿಕೊಂಡದ್ದು ತೀರಾ ಕಡಿಮೆ. ಮುದ್ರಣ ಮಧ್ಯಮದಲ್ಲಿಯೇ ದೃಶ್ಯಕಲೆಗೆ ಸಂಬಂಧಿಸಿದಂತೆ ಕವಿ-ಲೇಖಕರು ಪಡೆದಷ್ಟು ಸ್ಥಾನವನ್ನು ಪಡೆಯುವುದು ಸಾಧ್ಯವಾಗಿಲ್ಲ. ಅದಕ್ಕೆ ಕಲಾವಿದರು ಮತ್ತು ಮಧ್ಯಮ Pತ್ರದಲ್ಲಿರುವ ವ್ಯಕ್ತಿಗಳ ಅನಾಸಕ್ತಿ ಕಾರಣ ಎಂಬುದರಲ್ಲಿ ಎರಡು ಮತಿಲ್ಲ.
*ಅPರಲೋಕದ ಪ್ರಾಬಲ್ಯ ಕಡಿಮೆಯಗಿ ದೃಶ್ಯ ಮತ್ತು ಶ್ರವ್ಯ ಮಧ್ಯಮಗಳು ಪ್ರಬಲವಾಗುತ್ತಿರುವ ದಿನಗಳಿವು. ಅದೇ ಕಾರಣಕ್ಕಾಗಿಯೇ ದೃಶ್ಯ ಮಧ್ಯಮವನ್ನು ಅಭಿವ್ಯಕ್ತಿಯನ್ನಾಗಿ ಆಯ್ಕೆ ಮಡಿಕೊಂಡವರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ದಿನಗಳು ಕೂಡ. ದೃಶ್ಯ ಮಧ್ಯಮ ಹಿಂದೆಂದಿಗಿಂತ ಹೆಚ್ಚು ಮಹತ್ವದ್ದಾಗಿದೆ. ಕಲಾವಿದರಿಗೆ ಅದು ಒಂದು ಸವಾಲು ಕೂಡ. ನಮ್ಮ ಕಲಾವಿದರು ಸವಾಲನ್ನು ಸ್ವೀಕರಿಸಿದ್ದಾರೆ ಮತ್ತು ಬದಲಾದ ಕಾಲಕ್ಕೆ ತಕ್ಕಂತೆ ಸಾಹಿತಿಗಳಿಗಿಂತ ಹೆಚ್ಚು ಸ್ಪಂದಿಸುತ್ತಿದ್ದಾರೆ ಎಂಬುದರಲ್ಲಿ ಎರಡು ಮತಿಲ್ಲ.
*ಎಲೆಕ್ಟ್ರಾನಿಕ್ ಮಧ್ಯಮಗಳ ಬಹುತೇಕ ಸಂಪಾದಕರು ದೃಶ್ಯಭಾಷೆಯ ಅನPರಸ್ತರು ಎಂಬ ಅಭಿಪ್ರಾಯವನ್ನು ಕಲಾವಿದರು ವ್ಯಕ್ತಪಡಿಸುತ್ತಾರೆ. ಹಾಗೆಯೇ ಕಲಾವಿದರು ತಮ್ಮ ಕಲಾಕೃತಿಯ ಬಗ್ಗೆ ಮತ್ರ ಚಿಂತಿಸುತ್ತಾರೆಯೇ ಹೊರತು ಇಡೀ ಮಧ್ಯಮದ ಸಾಧ್ಯತೆ ಮತ್ತು ಮಿತಿಗಳನ್ನು ಗಮನಿಸುವುದೇ ಇಲ್ಲ ಎಂಬ ಅಸಮಧಾನ ಸಂಪಾದಕರದು. ಮಧ್ಯಮಗಳಲ್ಲಿರುವವರು ಮತ್ತು ಕಲಾಲೋಕಕ್ಕೆ ಸಂಬಂಧಿಸಿದವರಿಬ್ಬರೂ ತಮ್ಮ ತಮ್ಮ ಇಗೋಗಳನ್ನು ಬಿಟ್ಟುಕೊಟ್ಟು ಅಥವಾ ಕಡಿಮೆ ಮಡಿಕೊಂಡು, ಊಟಕ್ಕೆ ಉಪ್ಪಿನಕಾಯಿ ಬಳಸುವಂತೆ ’ಇಗೋ’
ಇಟ್ಟುಕೊಂಡರೆ ಒಳ್ಳೆಯದು ಅದೇ ಊಟವಾದರೆ ಅನಾರೋಗ್ಯದ ಲPಣವಾಗುತ್ತದೆ.
*ಅPರದ ಮೂಲಕ ಅಭಿವ್ಯಕ್ತಿ ಕಂಡುಕೊಂಡಿದ್ದ ಲೇಖಕರು, ಕವಿಗಳೇ ಸಾಂಸ್ಕೃತಿಕ ಲೋಕದ ಯಜಮನಿಕೆಯನ್ನು ವಹಿಸಿಕೊಂಡಿದ್ದರು. ಅದಕ್ಕೆ ಅದರದೇ ಆದ ಸಾಂಸ್ಕೃತಿಕ- ರಾಜಕೀಯ ಕಾರಣಗಳೂ ಇದ್ದವು. ವಿಶ್ವದಾದ್ಯಂತ ಅವರೀಗ ಯಜಮನಿಕೆಯ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಅದಕ್ಕೂ ಹಲವಾರು ಕಾರಣಗಳಿವೆ. ಮಧ್ಯಮಗಳಲ್ಲಿ ಮಲಮಕ್ಕಳಂತೆ ಬೆಳೆದು ಬಂದ ದೃಶ್ಯ ಮತ್ತು ಶ್ರವ್ಯ ಕಲೆಗಳಿಗೀಗ ಮುಂಚೂಣಿಗೆ ಬರುವ ಅವಕಾಶಗಳು ಸ್ಪಷ್ಟವಾಗಿ ಗೋಚರವಾಗುತ್ತಿವೆ.
*ಸಾಂಸ್ಕೃತಿಕ ಜಗತ್ತಿನಲ್ಲಿ ಅPರಲೋಕದ ಸಾಧನೆ ಮತ್ರ ಢಾಳಾಗಿ ಎದ್ದು ಕಾಣುತ್ತಿದೆ. ಅದಕ್ಕೆ ಕಾರಣವೆಂದರೆ ಆ Pತ್ರದಲ್ಲಿರುವ ಜನರು ಸಮೂಹ ಮಧ್ಯಮಗಳನ್ನು ಸದುಪಯೋಗ ಪಡಿಸಿಕೊಂಡದ್ದು. ಹಾಗೆಯೇ ದೃಶ್ಯ ಮಧ್ಯಮದಲ್ಲಿನ ಹೈದರಾಬಾದ್ ಕರ್ನಾಟಕದ ಅತ್ಯುನ್ನತ ಕೊಡುಗೆ, ಉಚ್ಛ್ರಾಯ ಸ್ಥಿತಿ ನಿನ್ನೆಗೆ ಸೀಮಿತವಾಗಿಲ್ಲ. ದೃಶ್ಯ ಮಧ್ಯಮದಲ್ಲಿ ಇಂದು ದೇಶದಲ್ಲಿಯೇ ಅತಿ ಹೆಚ್ಚು ವಿನೂತನ ಪ್ರಯೋಗ ನಡೆಯುತ್ತಿರುವುದು ಕರ್ನಾಟಕದಲ್ಲಿ. ಅದ್ಯಾವುದೂ ಸಾಮನ್ಯ ಜನರಿಗೆ (ಕಲಾವಿದರಲ್ಲದೆ ಕಲೆಯಲ್ಲಿ ಆಸಕ್ತರಾಗಿರುವವರಿಗೆ) ಗೊತ್ತಾಗುತ್ತಿಲ್ಲ. ಅದನ್ನು ಗೊತ್ತು ಮಡುವ ಮತ್ತು ಆ ಮೂಲಕ ಹೊಸ ಕಲಾವಿದರಲ್ಲಿ ಪ್ರೇರಣೆ ಹಾಗೂ ಹೊಸ ’ನೋಡುಗ’ರನ್ನು ಹುಟ್ಟು ಹಾಕುವ, ದೃಶ್ಯ ಮಧ್ಯಮದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಇಂದು ಆಗಬೇಕಿದೆ.
*ಕರ್ನಾಟಕದಲ್ಲಿ ವಿಶ್ವವಿದ್ಯಾಲಯಗಳು ಬಂದು ಸುಮರು ಏಳು ದಶಕಗಳಾಗಿವೆ. ದೃಶ್ಯಕಲೆಯ ಕುರಿತ ಅಧ್ಯಯನ- ಚಿಂತನೆ ನಡೆಯುತ್ತಿರುವುದು ಕಳೆದ ಎರಡ್ಮೂರು ದಶಕಗಳಲ್ಲಿ. ಮಹತ್ವದ ಕಲಾವಿದರ ಬಗ್ಗೆ ಅಕಾಡೆಮಿ ಮತ್ತು ವಿಶ್ವವಿದ್ಯಾಲಯಗಳು ಸ್ವಲ್ಪ ಮಟ್ಟಿನ ಕೆಲಸ ಮಡಿವೆ. ಆದರೆ, ಅದೇನೂ ಸಾಲದು. ಆದರೆ ಕಲಾಕೃತಿಗಳನ್ನು ನೋಡುವ- ಅರಿತುಕೊಳ್ಳುವ, ಅದನ್ನು ಪರಿಚಯಿಸುವ ನಿಟ್ಟಿನಲ್ಲಿ ಕೆಲಸಗಳು ತುಂಬಾ ಆಗಬೇಕಿದೆ. ಅದಕ್ಕಾಗಿ ಅಗತ್ಯವಿರುವ ಸಾಮಗ್ರಿ- ಟೂಲ್‌ಗಳನ್ನು ನಿರ್ಮಿಸಿಕೊಳ್ಳುವ ಅಗತ್ಯವಿದೆ. ಸಾಹಿತ್ಯಕೃತಿಯಂತೆ ಕಲಾಕೃತಿಯನ್ನು ವಿಮರ್ಶೆಗೆ ಒಡ್ಡುವ ಬದಲು ಅವಲೋಕಿಸುವ ಜನಸಾಮನ್ಯರಲ್ಲಿ ಪ್ರಜ್ಞೆ ಮೂಡಿಸುವ ಕೆಲಸ ಆಗಬೇಕು. ದೃಶ್ಯಕಲೆಯತ್ತ ಹೆಚ್ಚು ಜನ ವಾಲಿದಂತೆ ಸಹಜವಾಗಿಯೇ ಅದರ ಬಗ ನೀಡುವ ಮಹತ್ವ ಕೂಡ ಬದಲಾಗುತ್ತದೆ.
*ಪ್ರಬಲ ದೃಶ್ಯಮಧ್ಯಮವಾಗಿ ಬೆಳೆದು ಬಂದ ಸಿನಿಮ Pತ್ರದಲ್ಲಿ ಕೆಲಸ ಮಡುವ ಸಾಹಸವನ್ನು ಕೆಲವು ಕಲಾವಿದರು ಮತ್ರ ಮಡಿದ್ದಾರೆ. ೬೦ ಮತ್ತು ೭೦ರ ದಶಕದಲ್ಲಿ ಆರ್.ಎಂ.ಹಡಪದ್, ಎಸ್.ಜಿ.ವಾಸುದೇವ್ ಮತ್ತು ಎಂ.ಬಿ.ಪಾಟೀಲ್ ಮುಂತಾದ ಕಲಾವಿದರು ಕಲಾನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಸಿನಿಮದಲ್ಲಿ ಚಿತ್ರಕಲೆಯ ಸಾಧ್ಯತೆಗಳನ್ನು ಆವಿಷ್ಕರಿಸಿದ್ದರು. ಆದರೆ, ಏನೇನೋ ಕಾರಣಗಳಿಂದಾಗಿ ಆ ಪರಂಪರೆ ಹೆಚ್ಚು ಬೆಳೆಯಲಿಲ್ಲ. ಕಲಾವಿದರು ಸಿನಿಮದ ಕಲಾನಿರ್ದೇಶನವನ್ನು ವೃತ್ತಿಯಗಿ ಪಡೆಯುವುದು ಸಾಧ್ಯವಾಗಲಿಲ್ಲ. ಇದೆಲ್ಲದರ ಪರಿಣಾಮವಾಗಿ ಚಲನಚಿತ್ರಗಳಲ್ಲಿ ದೃಶ್ಯದ ಕುರಿತ ಕಲಾತ್ಮಕ ಪ್ರಜ್ಞೆ ಕಡಿಮೆಯಯಿತು. ಅದೇ ಕಾಲಕ್ಕೆ ದೃಶ್ಯಪ್ರಜ್ಞೆ ಬೆಳೆಸುವ ಅವಕಾಶವನ್ನು ಕಲಾವಿದರೂ ತಪ್ಪಿಸಿಕೊಂಡರು. ಇದರಿಂದ ಕಲಾವಿದರು ಮತ್ತು ಸಿನಿಮಾದವರಿಗಿಂತ ಹೆಚ್ಚು ನಷ್ಟವಾದದ್ದು ಸಾಮನ್ಯ ವೀPಕರಿಗೇ ಅಂತ ನನ್ನ ಭಾವನೆ.
*ನಂತರದ ದಿನಗಳಲ್ಲಿ ಅತ್ಯಂತ ಶಕ್ತಿಶಾಲಿ ದೃಶ್ಯಮಧ್ಯಮವಾಗಿ ಬಂದ ಕಿರುತೆರೆ, ಟೆಲಿವಿಷನ್‌ಅನ್ನು ಸಾಹಿತಿಗಳಂತೆ ಚಿತ್ರಕಲಾ Pತ್ರದ ಕಲಾವಿದರು ಕೂಡ ’ವೈರಿ’ ಎಂಬಂತೆಯೇ ಪರಿಗಣಿಸಿ ಅದರಿಂದ ದೂರ ಉಳಿಯಲು ಪ್ರಯತ್ನಿಸಿದರು. ಅದರಿಂದ ಮತ್ತೊಂದು ಅವಕಾಶವನ್ನು ಬಿಟ್ಟುಕೊಟ್ಟಂತಾಯಿತು. ಕಿರುತೆರೆಯ ಸಾಧ್ಯತೆಗಳನ್ನು ಬಳಸಿಕೊಂಡು ದೃಶ್ಯಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಕಲಾವಿದರು- ವಿಮರ್ಶಕರು ಗಣನೀಯ ಕೆಲಸ ಮಡುವುದು ಸಾಧ್ಯವಾಗಲಿಲ್ಲ. ಅದಕ್ಕೆ ಲಲಿತಕಲಾ ಮಧ್ಯಮಕ್ಕಿರುವ ಮಿತಿಯೂ ಕಾರಣ. ಆದರೆ ಅಂತಹ ಮಿತಿಗಳನ್ನು ಮೀರುವಂತಹ ಪ್ರಯತ್ನವನ್ನು ಇಂಗ್ಲಿಷ್ ಮಾಧ್ಯಮಗಳು ಮಡಿವೆ.
*ಸಿನಿಮ ಮತ್ತು ಕಿರುತೆರೆಗಳೆರಡರಲ್ಲೂ ಎರಡು ರೀತಿಯ ಸಾಧ್ಯತೆಗಳನ್ನು ಚಿತ್ರಕಲಾ ಮಧ್ಯಮಕ್ಕೆ ಸಂಬಂಧಿಸಿದವರು ಬಳಸಿಕೊಳ್ಳಬಹುದಿತ್ತು. ನೇರವಾಗಿ ಕಲಾಕೃತಿ-ಕಲಾವಿದರನ್ನು ಪರಿಚಯಿಸುವಂತಹ ಕಾರ್ಯಕ್ರಮಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದು ಎರಡನೆಯದಾಗಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳಲ್ಲಿಯೇ ಪರೋPವಾಗಿ ಕಲಾಕೃತಿಗಳನ್ನು ಪರಿಚಯಿಸಿ ದೃಶ್ಯಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಡಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ.
*ದೃಶ್ಯಕಲಾ Pತ್ರಕ್ಕೆ ಏಕಕಾಲಕ್ಕೆ ವರ ಮತ್ತು ಶಾಪ ಎರಡೂ ಆಗಿ ಬಂದ ಇಂಟರ್‌ನೆಟ್ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ. ಹಾಗೆಯೇ ಹಲವು ಸವಾಲುಗಳನ್ನು ಹುಟ್ಟುಹಾಕಿದೆ. ಕಲಾವಿದರು- ಸಹೃದಯ ಮತ್ತು ಮರಾಟಗಾರ, ಖರೀದಿಸುವವರ ನಡುವೆ ಸಂಪರ್ಕ ಕಲ್ಪಿಸುವ ಮಧ್ಯಮವಾಗಿ ಇಂಟರ್‌ನೆಟ್ ಮಡಿದ ಕೆಲಸ ಅನನ್ಯವಾದದ್ದು. ಅದು ಹೈದರಾಬಾದ್ ಕರ್ನಾಟಕದ ಮಟ್ಟಿಗೆ ಅಷ್ಟೊಂದು ವ್ಯಾಪಕವಾಗಿಲ್ಲ ಎಂಬ ಮತು ಬೇರೆ.
*ಪ್ರದೇಶದ ಮತ್ತು ಕಾಲದ ಮಿತಿಗಳನ್ನು ಮುರಿದು ಹಾಕಿದ ಇಂಟರ್‌ನೆಟ್ ಏಕಕಾಲಕ್ಕೆ ವಿವಿಧ ಕಾಲಘಟ್ಟದಲ್ಲಿ ರಚಿತವಾದ ಕಲಾಕೃತಿಗಳನ್ನು ಮತ್ತು ವಿವಿಧ ಪ್ರದೇಶದಲ್ಲಿ ರಚಿತವಾದ ಆಕೃತಿಗಳನ್ನು ನೋಡುವ ಅವಕಾಶವನ್ನು ಕಲ್ಪಿಸಿದೆ. ಕ್ಯಾನ್ವಾಸ್ ಮುಂದೆ ನಿಂತಾಗ ಸಿಗುವ ಅನುಭವ ಮತ್ತು ಅನುಭೂತಿಗಳೆರಡೂ ಕಂಪ್ಯೂಟರ್ ಕಿರುಪರದೆಯ ಮುಂದೆ ಕುಳಿತು ಪಡೆಯುವುದು ಸಾಧ್ಯವಿಲ್ಲ ಎಂಬುದರಲ್ಲಿ ಎರಡು ಮತಿಲ್ಲ. ಆದರೆ, ಕಲಾಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಇದ್ದ ಮುದ್ರಣ ಮಧ್ಯಮದ ಮಿತಿಯೇ ಇಂಟರ್‌ನೆಟ್‌ನಲ್ಲಿಯೂ ಮುಂದುವರೆಯುತ್ತದೆ.
*ಕಲಾವಿದರ ಮತ್ತು ಕಲಾಕೃತಿಯ ಪ್ರತಿಕೃತಿ, ಅದರ ತಾಂತ್ರಿಕ ವಿವರ, ಬೆಲೆ, ಪ್ರಿಂಟ್ ಕುರಿತ ಮಹಿತಿ ಮತ್ತು ಕಲಾಕೃತಿ- ಪ್ರಿಂಟ್ ಬಗ್ಗೆ ಇಂಟರ್‌ನೆಟ್ ಮೂಲಕ ಮಹಿತಿ ನೀಡಬಹುದು. ಹಾಗೆಯೇ ಇ- ಕಾಮರ್ಸ್ ಮೂಲಕ ಖರೀದಿಸುವ ಮತ್ತು ಮರುವ ಅವಕಾಶವನ್ನು ಸಾಗಾಣಿಕೆಯ ಶ್ರಮ, ವೆಚ್ಚ ಮತ್ತು ಕಲಾಕೃತಿ ಹಾಳಾಗುವ ರಿಸ್ಕ್ ಇಲ್ಲದೇ ಮಡಬಹುದು.
*ಜಗತ್ತಿನ ಅಷ್ಟೇಕೆ ಭಾರತದ ಎಲ್ಲ ಮಹತ್ವದ ಕಲಾವಿದರ- ಕಲಾಕೃತಿಗಳ ವಿವರ ಇಂಟರ್‌ನೆಟ್ ಜಾಲತಾಣಗಳಲ್ಲಿ ದೊರೆಯುತ್ತದೆ.  ಆದರೆ ಹೈದರಾಬಾದ್ ಕರ್ನಾಟಕದ ಹೆಚ್ಚು ಸಂಖ್ಯೆಯ ಕಲಾವಿದರಿಗೆ ಆ ಭಾಗ್ಯ ಇನ್ನೂ ದೊರೆತಿಲ್ಲ. ಕರ್ನಾಟಕದ ಹಲವಾರು ಕಲಾವಿದರು ಮತ್ತು ಅವರ ಕಲಾಕೃತಿಗಳು ಮುದ್ರಣ ಮಧ್ಯಮದಲ್ಲಿಯೇ ಇದುವರೆಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಆಧುನಿಕ ಮಧ್ಯಮದಲ್ಲಿ ಮಹಿತಿ ಬರುವುದಕ್ಕೆ ಇನ್ನೆಷ್ಟು ದಿನ ಕಾಯಬೇಕೊ ಗೊತ್ತಿಲ್ಲ. ಯುವಕಲಾವಿದರು ವ್ಯಕ್ತಿಗತವಾಗಿ ತಮ್ಮ ಜಾಲತಾಣಗಳನ್ನು ನಿರ್ಮಿಸಿಕೊಂಡಿದ್ದಾರೆ. ಅದನ್ನು ಹಿರಿಯ ಕಲಾವಿದರಿಗೂ ವಿಸ್ತರಿಸಿದರೆ ಚೆನ್ನಾಗಿರುತ್ತದೆ. ಪಿಕಾಸೊ-ಮನೆಟ್, ಮೈಕೆಲೆಂಜಿಲೊ ಮತ್ತು ಅವರ ಕಲಾಕೃತಿಗಳ ಬಗ್ಗೆ ಸುಲಭವಾಗಿ ಮಹಿತಿ ಪಡೆಯಬಹುದು. ಆದರೆ, ನಮ್ಮದೇ ಕಲಾವಿದರಾದ ಎಸ್.ಎಂ. ಪಂಡಿತ್, ಮನೋಳಿ, ಖಂಡೇರಾವ್, ಅಂದಾನಿ ಅವರ ಬಗ್ಗೆ ಮಹಿತಿ ಪಡೆಯುವುದು ಕಷ್ಟ.
*ವೆಬ್‌ಸೈಟ್‌ಗಳಲ್ಲಿ ಮಹಿತಿ ಇದ್ದಾPಣ ಎಲ್ಲರಿಗೂ ಅದು ದೊರೆಯುತ್ತದೆ ಎಂದೇನಲ್ಲ. ಕಂಪ್ಯೂಟರ್ ಇರುವ, ಇಂಗ್ಲಿಷ್ ಬಲ್ಲ ಮತ್ತು ಕಲಾಕೃತಿಗಳ ಬಗ್ಗೆ ಆಸಕ್ತರಾಗಿರುವವರಿಗೆ ಮತ್ರ ಮಹಿತಿ ಪಡೆಯುವ ಸೌಲಭ್ಯ ಲಭ್ಯವಾಗುತ್ತದೆ. ಕನ್ನಡದಲ್ಲಿಯೂ ಕೆಲವು ವೆಬ್‌ಸೈಟ್‌ಗಳಿವೆ. ಆದರೆ, ಕಲಾಕೃತಿಗಳಿಗೆ ಸಂಬಂಧಿಸಿದಂತೆ ಅವುಗಳ ಸಂಖ್ಯೆ ತೀರಾ ಕಡಿಮೆ.
*ದೃಶ್ಯಕಲಾ ಮಧ್ಯಮದಲ್ಲಿ ಇನ್‌ಸ್ಟಾಲೇಷನ್- ಸ್ಥಾಪನ ಕಲೆ ಇತ್ತೀಚಿನ ಮಧ್ಯಮ ಎಂದು ಪರಿಗಣಿತವಾಗುತ್ತಿದೆ. ಅದರ ನಂತರ ಈಗ ಚಾಲ್ತಿಗೆ ಬರುತ್ತಿರುವುದೇ ’ವಿಡಿಯೋ ಆರ್ಟ್’. ಕೆಲವು ಸೆಕೆಂಡು ಅಥವಾ ಒಂದೆರಡು ನಿಮಿಷಗಳಷ್ಟು ಮೂವಿಂಗ್ ದೃಶ್ಯಗಳನ್ನು ಸಂಯೋಜಿಸಿ ಕಲಾಕೃತಿ ರಚಿಸುವ ಹೊಸ ಪ್ರಕಾರ ಹುಟ್ಟಿಕೊಂಡಿದೆ. ಈ ಪ್ರಕಾರ ಆಧುನಿಕ ತಂತ್ರಜ್ಞಾನದ ಕೊಡುಗೆಯೇ ಸರಿ. ಇಂಟರ್‌ನೆಟ್- ಟೆಲಿವಿಷನ್‌ಗಳನ್ನು ಬಳಸಿಕೊಂಡು ಕಲಾಕೃತಿ ರಚಿಸುವ ನಿಟ್ಟಿನಲ್ಲಿ ನಡೆದ- ನಡೆಯುತ್ತಿರುವ ವಿನೂತನ ಪ್ರಯತ್ನ. ಮುದ್ರಣ ಮಧ್ಯಮಕ್ಕೆ ಸವಾಲಾಗಿರುವ ಹಾಗೆಯೇ ಕಲಾವಿದರ ಕಲ್ಪನೆಗೆ ಹೊಸ ಸಾಧ್ಯತೆಗಳನ್ನು ವಿಡಿಯೋ ಆರ್ಟ್ ಕಲ್ಪಿಸಿದೆ.
ನನಗೆ ತೋಚಿದ ಕೆಲ ವಿಷಯಗಳನ್ನಿಲ್ಲಿ ಪ್ರಸ್ತಾಪಿಸಿದ್ದೇನೆ. ನನಗೆ ಮತನಾಡುವುದಕ್ಕಿಂತ ಸಂವಾದದಲ್ಲಿ ಹೆಚ್ಚು ನಂಬಿಕೆ. ನೀವು ಕೂಡ ನನ್ನ ಮತುಗಳಿಗೆ ಪೂರಕವಾಗಿ ಹೇಳಿದರೆ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತೇನೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು