ಹಿರಿದಾದ ಕೆಲಸ ಮಾಡಿದ ಮರಿ



ಕಲಾ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಮರಿಶಾಮಾಚಾರ್


ಮರಿಶಾಮಚಾರ್ ಅವರಿಗೂ ನನಗೂ ಸುಮರು ಎಂಟ್ಹತ್ತು ವರ್ಷದ ಒಡನಾಟ.
ಅವರಿಗೀಗ ಅರವತ್ತು ವರ್ಷ. ಹಾಗೆಯೇ ನನಗೀಗ ೩೮. ಸುಮರು ೨೨
ವರ್ಷಗಳಷ್ಟು ವಯಸ್ಸಿನ ಅಂತರ ಇದ್ದರೂ ಅವರು ಎಂದೂ ನನ್ನನ್ನು
‘ಹುಡುಗ’ ಎಂಬಂತೆ ನೋಡಿದ್ದಿಲ್ಲ. ವಯಸ್ಸಿನ ಅಂತರದ ನಡುವೆಯೂ ಅವರು
ಗೆಳೆಯನ ಹಾಗೆಯೇ ನೋಡುತ್ತ ಬಂದಿದ್ದಾರೆ. ಅದು ಅವರ ದೊಡ್ಡ ಗುಣ.
ಸೌಜನ್ಯ, ಸಜ್ಜನಿಕೆ, ಒಳ್ಳೆಯತನದ ಸಾಕಾರ ರೂಪದಂತಿರುವ ಮರಿಶಾಮಚಾರ್
ಅವರು ನನಗೆ ಮೊದಲು ಪರಿಚಯವಾದದ್ದು ಸಂಸ್ಕೃತಿ ಇಲಾಖೆಯ
ಅಧಿಕಾರಿಯಗಿ. ಅದರಲ್ಲೂ ವಿಶೇಷವಾಗಿ ಅವರು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ
ರಿಜಿಸ್ಟ್ರಾರ್ ಆಗಿದ್ದಾಗ.
ಬಾಲ್ಯದ, ಹರಯದ ದಿನಗಳಿಂದಲೂ ಸಾಹಿತ್ಯ, ಸಂಸ್ಕೃತಿ, ಕಲೆ, ಶಿಲ್ಪದ ಬಗ್ಗೆ
ಆಸಕ್ತಿ ಇಟ್ಟುಕೊಂಡ ನಾನು ಧಾರವಾಡದಲ್ಲಿ ಇಂಗ್ಲಿಷ್ ಎಂ.ಎ. ಮುಗಿಸಿ, ಗುಲ್ಬರ್ಗ
ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ.ಗೆ ರಿಜಿಸ್ಟ್ರೇಷನ್ ಮಡಿಸಿ ಪೂರ್ಣ ಮಡದೇ ಬಿಟ್ಟು
‘ನೆಲೆ’ ಅರಸಿ ಬೆಂಗಳೂರು ಮಹಾನಗರಕ್ಕೆ ಬಂದಿದ್ದೆ. ಕೆಲವೇ ದಿನಗಳಷ್ಟಾದರೂ
ಅರೆಕಾಲಿಕ ಉಪನ್ಯಾಸಕನಾಗಿ ಕೆಲಸ ಮಡಿ ಹೈರಾಣಾಗಿದ್ದ ನನಗೆ
‘ಪ್ರಜಾವಾಣಿ’ಯಲ್ಲಿ ಸಿಕ್ಕ ಕೆಲಸ ನೆಮ್ಮದಿಗೆ ಕಾರಣವಾಗಿತ್ತು.
ಆದರೆ, ಆಗಾಗ ಕವಿತೆ, ಕತೆ ಬರೆದು ಕೊಂಡಿದ್ದ ನನಗೆ ಪತ್ರಿಕೋದ್ಯಮದ ಎಬಿಸಿಡಿ
ಕೂಡ ಗೊತ್ತಿರಲಿಲ್ಲ. ಅದೇ ಮೊದಲ ಬಾರಿಗೆ ಕಂಪ್ಯೂಟರ್ ಮುಟ್ಟಿ ಥ್ರಿಲ್
ಅನುಭವಿಸಿದ್ದೆ. ಬೆಂಗಳೂರೆಂಬ ಮಹಾನಗರ ಒಡ್ಡುತ್ತಿದ್ದ ನಿತ್ಯದ ಸವಾಲುಗಳು,
ಅದು ಉಂಟು ಮಡುತ್ತಿದ್ದ ಬೆರಗು, ಹೊಸ ಊರು, ಹೊಸ ಜನ, ಹೊಸ ಕೆಲಸ
ಹೀಗೆ ಎಲ್ಲವೂ ಹೊಸದಾಗಿತ್ತು. ಅದನ್ನ ಸಂಭ್ರಮಿಸಿದ್ದಕ್ಕಿಂತ ಹೆಚ್ಚು ಆತಂಕದಿಂದ
ನಿಭಾಯಿಸಿದ್ದೇ ಹೆಚ್ಚು ಅಂತ ಈಗ ಅನ್ನಿಸುತ್ತದೆ. ಬೆಂಗಳೂರು ಮಹಾನಗರಿಗೆ
ಹೊಂದಿಕೊಳ್ಳುತ್ತ ಕೆಲಸ ಕಲಿಯಲು ಆರಂಭಿಸಿದೆ. ಜನರಲ್ ಡೆಸ್ಕ್‌ನಲ್ಲಿ ಕೆಲಸ
ಆರಂಭಿಸಿ ಸ್ವಲ್ಪ ನೆಮ್ಮದಿಯಿಂದ ಉಸಿರಾಡಲು ಆರಂಭಿಸಿದ್ದ ದಿನಗಳಲ್ಲಿಯೇ ಸಿಟಿ
ರಿಪೋರ್ಟಿಂಗ್‌ಗೆ ವರ್ಗಾವಣೆ.
ಆಗ ರಿಪೋರ್ಟಿಂಗ್ ವಿಭಾಗದ ಮುಖ್ಯಸ್ಥರಾಗಿದ್ದವರು ಇ.ವಿ. ಸತ್ಯನಾರಾಯಣ ಸರ್.
ಅದೇ ವಿಭಾಗದಲ್ಲಿ ಚೀಫ್ ರಿಪೋರ್ಟರ್ ಆಗಿದ್ದ ಪದ್ಮರಾಜ ದಂಡಾವತಿ ಸರ್ ನಮಗೆ
ಅಸೈನ್‌ಮೆಂಟ್ ಹಾಕುತ್ತಿದ್ದರು. ಅದೇನು ಕಾರಣದಿಂದಲೋ ಗೊತ್ತಿಲ್ಲ. ನನಗೆ
ಕಲ್ಚರಲ್ ರಿಪೋರ್ಟಿಂಗ್ ಮಡಲು ಹಚ್ಚಿದರು. ಮತ್ತೆ ಕಲಿಕೆ ಆರಂಭ. ಇಂತಹ
ದಿನಗಳಲ್ಲಿ ನನಗೆ ಪರಿಚಯವಾದವರು ಮರಿಶಾಮಚಾರ್. ಸಹಜವಾಗಿಯೇ
ನನಗೆ ಅವರ ಬಗ್ಗೆ ಹೆಚ್ಚಿನ ವಿವರಗಳೇನೂ ಗೊತ್ತಿರಲಿಲ್ಲ. ಒಂದೆರಡು ಭೇಟಿಯ
ನಂತರ ಪರಿಚಯ ಸ್ನೇಹಕ್ಕೆ ತಿರುಗಿತು. ಅದೇ ದಿನಗಳಲ್ಲಿ ಪರಿಚಯವಾದ
ಬೆಂಗಳೂರು ಗ್ರಾಮಂತರ ಜಿಯ ಸಹಾಯಕ ನಿರ್ದೇಶಕರಾಗಿದ್ದ
ಜೆ.ಎನ್.ಶಾಮರಾವ್ ಕೂಡ ಹತ್ತಿರದವರಾದರು. ಅದಾದ ಮೇಲೆ ಕನ್ನಡ
ಭವನಕ್ಕೆ ಭೇಟಿ ನೀಡಿದರೆ ಇವರಿಬ್ಬರನ್ನು ಭೇಟಿಯಗದೇ ಬಂದದ್ದೇ ಇಲ್ಲ.
ಇವರಿಬ್ಬರ ಕೋಣೆಯಲ್ಲಿ ನಡೆಸಿದ ಚರ್ಚೆ, ಮತು, ಹರಟೆಗಳು ನನಗೆ
ವಿಭಿನ್ನ ಲೋಕವನ್ನು ತೋರಿಸಿದವು.

ಕಲೆಯ ಬಗ್ಗೆ, ಶಿಲ್ಪದ ಬಗ್ಗೆ ನನಗಿದ್ದ ಆಸಕ್ತಿಗೆ ಮತ್ತೆ
ತೆರೆದುಕೊಳ್ಳುವುದಕ್ಕೆ ಕಾರಣರಾದವರು ಮರಿಶಾಮಚಾರ್. ಅವರ ಕೋಣೆಗೆ
ಹೋದಾಗಲೆಲ್ಲ ಒಂದಲ್ಲ ಒಂದು ಪುಸ್ತಕ ಕೊಡುತ್ತಿದ್ದರು. ವೃತ್ತಿಗತ
ಸಂಬಂಧಕ್ಕಿಂತ ಹೆಚ್ಚಾಗಿ ಅವರೊಂದಿಗಿದ್ದ ಆತ್ಮೀಯ ಒಡನಾಟ ನನ್ನ ವ್ಯಕ್ತಿತ್ವ
ಬೆಳೆಯುವುದಕ್ಕೆ ಹಾಗೂ ಹಲವು ಆಯಮಗಳಲ್ಲಿ ಯೋಚಿಸುವಂತೆ
ಮಡುವುದಕ್ಕೆ ಕಾರಣವಾಯಿತು. ನನ್ನ ಮದುವೆಗೆ ಸಂಬಂಧಿಸಿದಂತೆ ನಡೆದ
ಚಿತ್ರವಿಚಿತ್ರ ಘಟನೆಗಳು, ಆತಂಕದ ಕ್ಷಣಗಳ ಸಂದರ್ಭದಲ್ಲಿ ಅವರು ತೋರಿಸಿದ
ಪ್ರೀತಿ- ವಿಶ್ವಾಸ ಈಗಲೂ ನನ್ನ ಕಣ್ಣಮುಂದಿದೆ. ಮತಾಡುತ್ತ ಕುಳಿತು ಕಾಲ
ಸರಿದದ್ದೇ ಗೊತ್ತಾಗದೇ ಮಧ್ಯಾಹ್ನದ ಊಟಕ್ಕಾಗಿ ಮನೆಯಿಂದ ತಂದ ಊಟದ
ಡಬ್ಬಿಯಲ್ಲಿ ಪಾಲು ಪಡೆದದ್ದೂ ಇದೆ. ಹೀಗೆ ಹಿರಿಯಣ್ಣನಂತೆ, ಸ್ನೇಹಿತನಂತೆ ನನ್ನ
ಜೊತೆಗಿದ್ದ, ಇರುವ ಮರಿಶಾಮಚಾರ್ ಅವರಿಂದ ಪಡೆದುಕೊಂಡದ್ದು ಬಹಳಷ್ಟಿದೆ.
ಅದನ್ನು ಅಕ್ಷರಗಳಲ್ಲಿ ಹಿಡಿದಿಡುತ್ತೇನೆ ಎಂದು ಹೊರಟರೆ ಅದು
ಹುಂಬತನವಾದೀತು. ಅಕ್ಷರಕ್ಕೆ, ಮತಿಗೆ ನಿಲುಕದ ಸ್ನೇಹ, ಪ್ರೀತಿ, ವಿಶ್ವಾಸ
ತೋರಿಸಿದ ಹಿರಿಯ ಜೀವ ಅವರು.

***
ಮರಿಶಾಮಚಾರ್ ಅವರ ಜೊತೆಗಿನ ಒಡನಾಟದ ಸಂದರ್ಭದಲ್ಲಿಯೇ ಅವರ
ಕಲಾಕೃತಿಗಳನ್ನು ನೋಡುವ, ತಿಳಿಯುವ ಪ್ರಸಂಗಗಳು ಬಂದವು. ಅವುಗಳ
ಪೈಕಿ ನನ್ನನ್ನು ಹೆಚ್ಚು ಸೆಳೆದ ಕಲಾಕೃತಿಗಳೆಂದರೆ ಟೆರ್ರಾಕೋಟಾದಲ್ಲಿ ಮಡಿದ
ಉಬ್ಬಚ್ಚು ಚಿತ್ರಗಳು. ಶಿಲ್ಪ ಮತ್ತು ಚಿತ್ರಗಳೆರಡರ ಹದವಾದ ಸಂಗಮದಂತಿದ್ದ
ಆ ಸರಣಿ ಕಲಾಕೃತಿಗಳು ‘ದೇಸಿ’ ಕಾರಣಗಳಿಗಾಗಿ ಪ್ರಿಯವಾಗುತ್ತವೆ. ಕಲಾವಿದ
ಮರಿಶಾಮಚಾರ್ ಅವರ ವಿಶಿಷ್ಟ ಶೈಲಿ ಮತ್ತು ಅವರ ಕಲಾಕೃತಿಗಳ ಕುರಿತು
ಬೇರೆ ಬೇರೆಯವರು ಬರೆದಿರುವುದರಿಂದ ಕಲಾಸಾಹಿತ್ಯದ ಬಗ್ಗೆ ಕೆಲವು
ಮತುಗಳನ್ನ ಇಲ್ಲಿ ದಾಖಲಿಸಬಯಸುತ್ತೇನೆ.
ಕನ್ನಡ ಕಲಾಸಾಹಿತ್ಯದ ಪ್ರಮುಖ ಲೇಖಕರು ಎಂದು ನನಗೆ ಅರಿವಿಗೆ ಬಂದದ್ದು
ಸ್ವಲ್ಪ ತಡವಾಗಿಯೆ. ಚಿತ್ರ ಮತ್ತು ಶಿಲ್ಪಗಳೆರಡೂ ಸೇರಿದ ದೃಶ್ಯಕಲಾ
ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳು ನನ್ನ ಸಂಗ್ರಹದಲ್ಲಿದ್ದವು.
ಆದರೆ, ಅವುಗಳನ್ನು ಬರೆದವರು ಯರು ಎಂಬುದರ ಕಡೆಗೆ ಗಮನ
ಹರಿಸಿರಲಿಲ್ಲ. ಲಲಿತ ಕಲಾ ಅಕಾಡೆಮಿಯಲ್ಲಿನ ಪುಸ್ತಕಗಳನ್ನು ಸಗಟಾಗಿ
ಖರೀದಿಸುವ ಸಂದರ್ಭವವೊಂದು ಒದಗಿ ಬಂತು. ಆಗ ಕಲಾಸಾಹಿತ್ಯ ಕ್ಷೇತ್ರದಲ್ಲಿ
ಕೆಲಸ ಮಡಿದ ಮಹನೀಯರ ಹೆಸರುಗಳು ಪರಿಚಿತವಾದವು.
ದೃಶ್ಯಕಲಾ ಸಾಹಿತ್ಯದ ಇತಿಹಾಸ, ದಾಖಲೀಕರಣ ಕ್ಷೇತ್ರದಲ್ಲಿ ಮಹತ್ವದ ಕೆಲಸ
ಮಡಿದ ಇಬ್ಬರೆಂದರೆ ಅ.ಲ.ನರಸಿಂಹನ್ ಮತ್ತು ಮರಿಶಾಮಚಾರ್. ಕರ್ನಾಟಕದ
ಯವುದೇ ಭಾಗದ ದೃಶ್ಯ ಪರಂಪರೆಯ ಬಗ್ಗೆ ತಿಳಿದುಕೊಳ್ಳಲು ಹೊರಟರೆ
ಅದಕ್ಕೆ ಇವರಿಬ್ಬರ ಪರಿಶ್ರಮದ ಬೆಳಕು ನೆರವಿಗೆ ಬರುತ್ತದೆ. ಬರವಣಿಗೆಯಲ್ಲಿ
ಹೊಸದಾಗಿ ಕೆಲಸ ಆರಂಭಿಸುವವನಿಗೆ ಮರ್ಗದರ್ಶಿ ಸೂತ್ರಗಳನ್ನು ಇವರಿಬ್ಬರ
ಪುಸ್ತಕಗಳು, ಲೇಖನಗಳು ನೀಡುತ್ತವೆ ಎನ್ನುವುದರಲ್ಲಿ ಅನುಮನವಿಲ್ಲ.
ಕಲಾವಿಮರ್ಶೆ ನಿರೀಕ್ಷಿಸುವ ಅಂಶಗಳು ತಕ್ಷಣಕ್ಕೆ ನೋಡಲು ಸಿಗುವುದಿಲ್ಲ. ಆದರೆ,
ಕನ್ನಡ ಕಲಾವಿಮರ್ಶೆ ಈಗ ತಲುಪಿರುವ ಎತ್ತರದ ಹಿನ್ನೆಲೆಯಲ್ಲಿ ಇವರಿಬ್ಬರ
ಪರಿಶ್ರಮ ಮತ್ರ ಸಾಕಷ್ಟಿದೆ. ಕಲಾಸಾಹಿತ್ಯದ ಬರವಣಿಗೆಗೆ (ವಿಮರ್ಶೆ ಮತ್ರ
ಅಲ್ಲ) ಮರಿಶಾಮಚಾರ್ ನೀಡಿದ ಕೊಡುಗೆ ಅನನ್ಯ, ಅಮೂಲ್ಯ ಎಂಬುದರಲ್ಲಿ ಎರಡು
ಮತಿಲ್ಲ.
ಮೂಲೆಗುಂಪಾದ, ಕಡೆಗಣನೆಗೆ ಒಳಗಾದ ವಿಷಯ, ಸಂಗತಿ, ವ್ಯಕ್ತಿಗಳ
‘ದಾಖಲೀಕರಣ’ ಮರಿಶಾಮಚಾರ್ ಅವರ ಆಸಕ್ತಿಯ ಸಂಗತಿ. ತಿಪ್ಪಾಜಪ್ಪ
ಅವರಂತಹ ಕಲಾವಿದ ನೂರೈವತ್ತು ವರ್ಷದ ನಂತರ ಬೆಳಕಿಗೆ ಬಂದದ್ದು,
ಅದಕ್ಕೆ ಕಾರಣವಾದದ್ದು ಒಂದು ಉದಾಹರಣೆ. ಇಂತಹ ಹಲವು ಉದಾಹರಣೆಗಳನ್ನು
ನೀಡಬಹುದು.
ಲೇಖಕರಾಗಿ ಮರಿಶಾಮಚಾರ್ ಅವರಿಗೆ ಕಲಾವಲಯದ ವ್ಯಕ್ತಿಗಳ ಚಿತ್ರಗಳನ್ನು
ದಾಖಲಿಸುವುದರ ಕಡೆಗೆ ಹೆಚ್ಚು ಆಸಕ್ತಿ. ಪಾಶ್ಚಾತ್ಯ, ಭಾರತೀಯ ಮತ್ತು
ಕರ್ನಾಟಕದ ಕಲಾವಿದರ ಜೀವನ- ಸಾಧನೆಗಳನ್ನು ಅವರು ತಮ್ಮ
ಬರವಣಿಗೆಯಲ್ಲಿ ದಾಖಲಿಸಿದ್ದಾರೆ. ಅವುಗಳಲ್ಲಿ ಬಹುತೇಕ ಬರಹಗಳು ಲೇಖನದ
ಧಾಟಿಯಲ್ಲಿವೆ. ಸರಾಗವಾಗಿ ಓದಿಸಿಕೊಂಡು ಹೋಗುವ ಈ ಲೇಖನಗಳು ಸುಭಗ
ಶೈಲಿಯಿಂದ ಪ್ರಿಯವಾಗುತ್ತವೆ. ಕಲಾವಿದನ ಬದುಕು- ಕಲಾಕೃತಿಗಳ ಬಗ್ಗೆ
ಓದುಗನ ತಿಳುವಳಿಕೆ ಹೆಚ್ಚಿಸುವ ಈ ಬರಹಗಳು ಓದಿದ ನಂತರ ಬಹುಕಾಲ
ನೆನಪಿನಲ್ಲಿ ಉಳಿದುಕೊಳ್ಳುತ್ತವೆ.
ಮರಿಶಾಮಚಾರ್ ಅವರ ಬರವಣಿಗೆಯನ್ನು ಎರಡು ರೀತಿಯಲ್ಲಿ
ವಿಭಾಗಿಸಬಹುದು. ಪಾಶ್ಚಾತ್ಯ ಮತ್ತು ಭಾರತೀಯ ಕಲಾಲೋಕವನ್ನು ಕನ್ನಡ
ಓದುಗನಿಗೆ ಪರಿಚಯಿಸುವಂತಹ ಬರಹಗಳು. ಅವುಗಳಲ್ಲಿನ
ಎನ್‌ಸೈಕ್ಲೋಪಿಡಿಯಕ್ ಗುಣ, ಸರಳ ಭಾಷೆ ಗಮನ ಸೆಳೆಯುತ್ತವೆ. ಜಗತ್ತಿನ
ಬಹುತೇಕ ಎಲ್ಲ ಕಲಾಪರಂಪರೆಗಳ ಬಗೆಗೂ ಅವರು ಬರೆದಿದ್ದಾರೆ.
ಲೇಖನಗಳ ಸ್ವರೂಪದಲ್ಲಿ ವ್ಯಕ್ತಿಚಿತ್ರಗಳನ್ನು ಕಟ್ಟಿಕೊಡುವುದರಲ್ಲಿ
ಮರಿಶಾಮಚಾರ್ ಸಿದ್ಧಹಸ್ತರು. ಹಾಗೆಯೇ ಅವರು ಕೆಲವರ ಬಗ್ಗೆ ಪ್ರತ್ಯೇಕ
ಜೀವನಚರಿತ್ರೆಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕದ
ಕೀರ್ತಿಯನ್ನು ಕಡಲಾಚೆಗೂ ವಿಸ್ತರಿಸಿದ ಕೆ.ಕೆ. ಹೆಬ್ಬಾರ್ ಅಂದರೆ ಮರಿಶಾಮಚಾರ್
ಅವರಿಗೆ ಎಲ್ಲಿಲ್ಲದ ಪ್ರೀತಿ. ಅದು ಹೆಬ್ಬಾರ್ ಬಗ್ಗೆ ಮೂರು ಪುಸ್ತಕ
ಪ್ರಕಟಿಸುವುದರಲ್ಲಿ ವ್ಯಕ್ತವಾಗಿದೆ. ಕರ್ನಾಟಕ ಲಲಿತಕಲಾ ಅಕಾಡೆಮಿಗಾಗಿ
ಮೊನೊಗ್ರಾಫ್ ರಚಿಸಿರುವ ಮರಿಶಾಮಚಾರ್ ಅವರು ಹೆಬ್ಬಾರ್ ಕುರಿತು ಆಗಾಗ
ಬರೆದ ಲೇಖನಗಳನ್ನು ಸಂಕಲಿಸಿ ‘ಕಲಾಸಾಧಕ’ ಪ್ರಕಟಿಸಿದ್ದಾರೆ. ಹೆಬ್ಬಾರ್‌ರ
ರೇಖಾಚಿತ್ರಗಳನ್ನು ಒಳಗೊಂಡ ಸುಂದರ ಪುಸ್ತಕವನ್ನು ಪ್ರಕಟಿಸಿರುವ
ಮರಿಶಾಮಚಾರ್ ಅವರು ಅದರಲ್ಲಿ ಹೆಬ್ಬಾರ್‌ರ ರೇಖೆಗಳ ಮಹತ್ವವನ್ನು
ಕುರಿತು ವಿವರಿಸಿದ್ದಾರೆ.
ಹೆಬ್ಬಾರ್ ಅವರಲ್ಲದೇ ಭಾರತದ ಅತ್ಯಂತ ಮಹತ್ವದ ಕಲಾವಿದರಲ್ಲಿ ಒಬ್ಬರಾದ
ಎಂ.ಎಫ್.ಹುಸೇನ್ ಕುರಿತು ಒಂದು ಜೀವನ ಚರಿತ್ರೆ ಪ್ರಕಟಿಸಿದ್ದಾರೆ. ಹಾಗೆಯೇ
ಎಸ್.ಎನ್.ಸ್ವಾಮಿ, ತಮ್ಮ ಗುರು ಕೆ.ಜಿ.ಸುಬ್ರಮಣ್ಯನ್, ರಾಜಾ ರವಿವರ್ಮ ಕುರಿತ
ಪ್ರತ್ಯೇಕ ಜೀವನಚಿತ್ರಗಳು ಮೆಚ್ಚುಗೆಗೆ ಪಾತ್ರವಾಗುತ್ತವೆ. ತಮ್ಮ
ಕಲಾಗುರು ಆರ್.ಎಂ. ಹಡಪದ ಅವರ ಜೀವನ ಕಲೆಯನ್ನು ಕುರಿತ
ಲೇಖನಗಳನ್ನು ಸಂಯೋಜಿತ ಸಂಸ್ಥೆಯಿಂದ ಸಂಕಲಿಸಿ ಪ್ರಕಟಿಸಿದ್ದಾರೆ.
ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಕಟಿಸಿದ ‘ಭಾರತದ ದೃಶ್ಯ ಕಲಾವಿದರು’
(೧೯೯೨)ರಲ್ಲಿ ಭಾರತೀಯ ಕಲಾಪರಂಪರೆಯನ್ನು ಜೀವಂತವಾಗಿಟ್ಟ ಮಹಾನ್
ಚೇತನಗಳನ್ನು ಕುರಿತ ಬರಹಗಳಿವೆ. ಅಬನೀಂದ್ರನಾಥ ಟಾಗೋರ್ ಅವರಿಂದ ಹಿಡಿದು
ನಂದಲಾಲ್ ಬೋಸ್, ಕ್ಷಿತೀಂದ್ರನಾಥ್ ಟಾಗೋರ್, ಕೆ.ವೆಂಕಟಪ್ಪ, ಜಾಮಿನಿರಾಯ್,
ಅಸಿತಕುಮರ ಅಲ್ದಾರ್, ದೇವಿಪ್ರಸಾದ ಚೌಧುರಿ, ಶೈಲಜ್ ಮುಖರ್ಜಿ, ಅಮೃತಾ
ಶೇರ್‌ಗಿಲ್, ರವೀಂದ್ರನಾಥ ಟಾಗೋರ್, ರಾಮಕಿಂಕರ್ ಬೈಜ, ಬಿನೋದ ಬಿಹಾರಿ
ಮುಖರ್ಜಿ, ಎನ್.ಎಸ್.ಬೇಂದ್ರೆ, ಕೆ.ಸಿ.ಎಸ್.ಫಣಿಕ್ಕರ್, ಸುಲ್ತಾನ ಅಲಿ,
ಸೋಮನಾಥ ಹೋರೆ ಸೇರಿದಂತೆ ೨೦ ಕಲಾವಿದರನ್ನು ಪರಿಚಯಿಸಿದ್ದಾರೆ.
ದೃಶ್ಯಕಲಾ ಅವರ ಮತ್ತೊಂದು ಮಹತ್ವದ ಪುಸ್ತಕ. ಇದರಲ್ಲಿ ಚಿತ್ರಕಲೆ-
ಸಾಹಿತ್ಯ ಕುರಿತಾದ ೧೮ ಬರಹಗಳಿವೆ. ಮರಿಶಾಮಚಾರ್ ಅವರಿಗೆ ಪ್ರಿಯವಾದ
ರವಿವರ್ಮ, ಹೆಬ್ಬಾರ್, ಹುಸೇನ್, ಸುಬ್ರಮಣ್ಯನ್ ಕುರಿತ ಲೇಖನಗಳು ಈ
ಪುಸ್ತಕದಲ್ಲಿಯೂ ಮತ್ತೆ ಕಾಣಿಸಿಕೊಂಡಿವೆ. ಅದಲ್ಲದೇ ‘ಸಾಹಿತ್ಯದಲ್ಲಿ ಚಿತ್ರಕಲೆ’
ಮತ್ತು ‘ಕಲಾ ವಿಮರ್ಶೆಯ ಹೊಣೆಗಳು’, ‘ಚಿತ್ರಕಲೆಯ ಭಾಷೆ’ ರೀತಿಯ
ಲೇಖನಗಳು ಮರಿಶಾಮಚಾರ್ ಅವರ ಅಧ್ಯಯನದ ಆಳ-ಅಗಲಗಳನ್ನು
ಪರಿಚಯಿಸುತ್ತವೆ. ಜನಪದ ಕಲೆ, ಸಮಕಾಲೀನ ಕಲೆ ಬಗ್ಗೆ ಹಾಗೂ ರೇಖಾಚಿತ್ರ,
ಸರ್ರಿಯಲಿಸಂ ಕುರಿತ ಬರಹಗಳು ಹೊಸ ಒಳನೋಟಗಳನ್ನು ನೀಡುತ್ತವೆ.
ಕಲೆಯ ಅಧ್ಯಯನ ಮಡಬಯಸುವ ವಿದ್ಯಾರ್ಥಿಗಳಿಗೆ ಅಕ್ಷರಶಃ ಮಗದರ್ಶಿ
ಬರಹಗಳಾಗಿವೆ.
ಮರಿಶಾಮಚಾರ್ ಅವರ ಮತ್ತೊಂದು ಮಹತ್ವದ ಕೊಡುಗೆ ಎಂದರೆ
‘ಸಂಪಾದನೆ’. ಅ.ಲ.ನರಸಿಂಹನ್ ಅವರ ಜೊತೆ ಸೇರಿ ಸಂಪಾದಿಸಿದ ಚಿತ್ರಕಲಾ
ಪ್ರಪಂಚ ಮತ್ತು ಶಿಲ್ಪಕಲಾ ಪ್ರಪಂZ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ
ಮಹತ್ವದ ಕೊಡುಗೆಗಳು. ಕಲಾಕೋಶ ಎಂಬ ವಿಶ್ವಕೋಶ ಮದರಿಯ
ಪುಸ್ತಕವನ್ನು ವಿ.ಟಿ.ಕಾಳೆ, ಬಿ.ಕೆ.ಹಿರೇಮಠ, ನರಸಿಂಹನ್ ಜೊತೆ ಸೇರಿ
ಸಂಪಾದಿಸಿದ್ದಾರೆ. ಶಿಲ್ಪಸಿದ್ಧಾಂತಿ ಶ್ರೀಸಿದ್ಧಲಿಂಗಸ್ವಾಮಿಗಳು ಎನ್ನುವ ಪುಸ್ತಕ ಕೂಡ
ಮರಿಶಾಮಚಾರ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಶಿಲ್ಪಕಲಾ
ಅಕಾಡೆಮಿಯಿಂದ ಪ್ರಕಟವಾದ ‘ಕಲಾಚರಿತ್ರೆ’ ಜಗತ್ತಿನ ವಿವಿಧ ದೇಶಗಳ
ಕಲಾಲೋಕವನ್ನು ಅನಾವರಣಗೊಳಿಸುತ್ತದೆ.
ಮರಿಶಾಮಚಾರ್ ಕೇವಲ ತಾವು ಮತ್ರ ಬರೆಯುವ ಲೇಖಕರಲ್ಲ. ಹಲವರಿಂದ
ಬರೆಸುವ ಗುಣ ಉಳ್ಳವರು. ಕಲೆಯ ಬಗ್ಗೆ ಆಸಕ್ತಿ ಹುಟ್ಟುವಂತೆ ಮಡಿ
ಬರವಣಿಗೆಗೆ ತೊಡಗುವಂತೆ ಮಡಬಲ್ಲರು. ಅದಕ್ಕೆ ಪೂರಕವಾದ ಮಹಿತಿ,
ವಿವರಗಳನ್ನು ಕೂಡ ಒದಗಿಸುತ್ತಾರೆ. ಕಲಾವಿದ ಎಸ್.ಜಿ.ವಾಸುದೇವ ಅವರ
ಮನೆಗೆ ಕರೆದೊಯ್ದು ಸಂದರ್ಶನ ಮಡಿ ಬರೆಯುವಂತೆ ಮಡಿದ್ದನ್ನು,
ಪ್ರಕಟವಾದ ನಂತರ ಅದನ್ನು ಮೆಚ್ಚಿ ಮತನಾಡಿದ್ದನ್ನು  ನಾನು
ಮರೆಯುವುದಿಲ್ಲ್ಲ.
ದೃಶ್ಯ, ಕಾವ್ಯ ಮತ್ತು ಸಂಗೀತ ಕ್ಷೇತ್ರಗಳು ಪರಸ್ಪರ
ಮುಖಾಮುಖಿಯಗುವ, ಹೊಸ ಸೃಷ್ಟಿಗೆ ಕಾರಣವಾಗುವ ಕುರಿತು ಅಧ್ಯಯನ
ನಡೆಸಬೇಕು ಎಂದು ನಿರ್ಧರಿಸಿದಾಗ ನನಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದವರು
ಮರಿಶಾಮಚಾರ್. ಅವರ ಜೊತೆಗಿನ ಚರ್ಚೆಯ ನಂತರ ನನ್ನ ವಿಚಾರಗಳು
ಖಚಿತವಾಗ ತೊಡಗಿದವು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರೊ.
ಮಪುರಂ ಜಿ.ವೆಂಕಟೇಶ್ ಸರ್ ಅವರ ಮರ್ಗದರ್ಶನದಲ್ಲಿ ಪಿಎಚ್.ಡಿ.ಗೆ
ರಿಜಿಸ್ಟ್ರೇಷನ್ ಮಡಿಸಿದೆ. ಹಲವು ಕಾರಣಗಳಿಂದ ಅದನ್ನು ಪೂರ್ಣಗೊಳಿಸಿ
ವಿಶ್ವವಿದ್ಯಾಲಯಕ್ಕೆ ಸಲ್ಲಿಸುವುದು ಸಾಧ್ಯವಾಗಲಿಲ್ಲ. ಆದರೆ, ಆ ನಿಟ್ಟಿನಲ್ಲಿ ನಡೆಸಿದ
ಚಿಂತನೆ ಮತ್ತು ಸಂಶೋಧನೆ ಈಗಲೂ ನನ್ನ ಸಂಗ್ರಹದಲ್ಲಿದೆ. ಅದು
ಹಿಗ್ಗುವಂತೆ ಮಡಿದವರು ಮರಿಶಾಮಚಾರ್.
ಮರಿಶಾಮಚಾರ್ ಅವರನ್ನು ಕಲಾಲೋಕದಲ್ಲಿ ಸ್ನೇಹಿತರು, ಆಪ್ತರು ‘ಮರಿ’
ಎಂದು ಪ್ರೀತಿಯಿಂದ ಕರೆಯುತ್ತಾರೆ. ಆದರೆ, ಅವರು ಮಡಿದ ಸಾಧನೆ
‘ಹಿರಿ’ದಾದದ್ದು. ಸ್ವತಃ ಕಲಾವಿದರಾಗಿ ಅನನ್ಯ ಕಲಾಕೃತಿಗಳನ್ನು ನೀಡಿರುವ
ಅವರು ಲೇಖಕರಾಗಿ ಕಲಾಸಾಹಿತ್ಯಕ್ಕೆ ನೀಡಿದ ಕೊಡುಗೆ ಮಹತ್ವದ್ದು.
ಕಲಾಸಂಘಟಕರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯಗಿ,
ಶಿಲ್ಪಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಆಗಿ, ಕೇಂದ್ರ ಲಲಿತಕಲಾ ಅಕಾಡೆಮಿ ಸದಸ್ಯರಾಗಿ
ಮಡಿದ ಕೆಲಸ ಮೆಚ್ಚುಗೆಗೆ ಪಾತ್ರವಾಗುವಂತಹದ್ದು. ಅರೆರೆ ಒಬ್ಬ ವ್ಯಕ್ತಿ
ಇಷ್ಟೆಲ್ಲ ಕೆಲಸ ಮಡಲು ಸಾಧ್ಯವೇ? ಎಂದು ಬೆರಗು, ಸೋಜಿU
ಪಡುವಂತಹದ್ದು. ಇಂತಹ ಮಹತ್ವದ ಕಲಾಜೀವ ನೂರ್ಕಾಲ ನಮ್ಮೊಂದಿಗೆ ಇದ್ದು
‘ದಾರಿದೀಪ’, ‘ಕೈಮರ’ ಆಗಿರಲಿ...



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು