ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜನನಾಯಕರ ನಿರ್ಗಮನದ ಸುತ್ತ

ಸಾವು ಬಂದು ಹೋಗುವ ಮನೆಯಲ್ಲಿನ ಸಂಗತಿಗಳು ಚಿತ್ರ-ಚಿತ್ರವಾಗಿರುತ್ತವೆ. ಅಲ್ಲಿ ಆತಂಕ- ದುಃಖ, ಬೇಸರ- ನಿರಾಸೆಗಳ ಜತೆಯಲ್ಲಿಯೇ ನಿರೀಕ್ಷೆ - ಕನಸುಗಳೂ ಬಂದು ಸೇರುತ್ತವೆ. ಹಲವು ಕಾಲ ಬದುಕಿದ್ದ ಜೀವ ಇಲ್ಲವಾಗುವ ಸಂಕಟ ಒಂದೆಡೆಗಾದರೆ ಅದರ ವಾರಸುದಾರಿಕೆಗಾಗಿ ನಡೆವ ತಂತ್ರ, ಕುತಂತ್ರ, ಪೈಪೋಟಿಗಳು ಮತ್ತೊಂದೆಡೆಗಿರುತ್ತವೆ. ವಾರಸುದಾರಿಕೆಯ ಪ್ರಶ್ನೆ ದೊಡ್ಡ ಅರಮನೆಯ ಒಡೆಯರಿಗೆ, ಹಣ-ಆಸ್ತಿಪಾಸ್ತಿ- ಅಧಿಕಾರ ಹೊಂದಿದವರಿಗೆ ಮಾತ್ರ ಎಂದೇನೂ ಇಲ್ಲ. ಯಾವ ಅಧಿಕಾರದ- ಪ್ರಭಾವದ ಸೋಂಕು ಕೂಡ ಇಲ್ಲದ ಕಡೆಗಳಲ್ಲಿಯೂ ’ನನ್ನದು’ ಎಂಬ ಹಠ ಕಾಣಿಸುತ್ತದೆ. ತಮ್ಮ ಬದುಕಿನ ಬಹುಭಾಗ ಸೆರೆವಾಸದಲ್ಲಿಯೇ ಕಳೆದ ದಕ್ಷಿಣ ಆಫ್ರಿಕಾದ ಮಂಡೇಲಾ ಅವರು ಕೊನೆಯುಸಿರು ಎಳೆಯುವ ಮುನ್ನವೇ ಆಸ್ತಿ ಹಂಚಿಕೆಯ ವಿವಾದ ಆರಂಭವಾಯಿತು. ಕನ್ನಡಕ್ಕೆ ಸೊಗಸಾದ ಹಾಡುಗಳನ್ನು ನೀಡಿದ ಅನುಭಾವಿ ಕವಿ ಶರೀಫರು ಇಹಲೋಕ ತ್ಯಜಿಸಿದಾಗ ಅವರ ದೇಹದ ಅಂತಿಮ ಸಂಸ್ಕಾರ ಯಾವ ವಿಧಿವಿಧಾನಗಳಲ್ಲಿ ನಡೆಯಬೇಕು ಎಂಬ ಚರ್ಚೆ ನಡೆದಿತ್ತು. ಹಾಗೆ ನೋಡಿದರೆ ಸಾವು ಒಂದು ಜೀವದ ಅಂತ್ಯ ಮಾತ್ರ ಅಲ್ಲ. ಹಲವು ಚರ್ಚೆ-ಹೊಸ ಬದುಕಿನ ಆರಂಭ. ಅಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಲೆಕ್ಕಾಚಾರ ಇರುತ್ತದೆ. ಅದು ಸಹಜ ಕೂಡ. ಗುಲ್ಬರ್ಗ ಜಿಲ್ಲೆಗೆ ಮಾತ್ರವಲ್ಲದೇ ತನ್ನ  ಕೋಲಿ-ಕಬ್ಬಲಿಗ ಸಮುದಾಯದ ಜನಪ್ರಿಯ ನೇತಾರ ಆಗಿದ್ದ ವಿಠಲ ಹೇರೂರು ಇತ್ತೀಚೆಗೆ ’ಇನ್ನಿಲ್ಲ’ ಆದರು. ಖಾಸಗಿ ಆಸ್ಪತ್ರೆಯಲ್ಲಿದ್ದ ಅವರ ಕೊನೆಯ ದಿನಗಳಲ್ಲಿ

ಬಿಸಿಲು -ಬೆವರಿನ ಮಧ್ಯೆ ಮರೆಯಾದ ಚಿನ್ನ

ಚಿನ್ನದ ಮೇಲಿನ ಮೋಹ ಇಂದು ನಿನ್ನೆಯದೇನಲ್ಲ. ಚಿನ್ನದ ಹುಡುಕಾಟ ಕೂಡ. ಉತ್ತರ ಪ್ರದೇಶದ  ’ಉನ್ನಾವ’ದಲ್ಲಿ ಕನಸಿನಲ್ಲಿ ಕಂಡ ಚಿನ್ನ ಹುಡುಕುತ್ತ ಪಿಕಾಸಿ ಹಿಡಿಯಲು ಹೊರಟ ಉದಾರಣೆ ತೀರಾ ಇತ್ತೀಚಿನದು. ಕಲಾವಿದ ಚಾರ್ಲಿ ಚಾಪ್ಲಿನ್ ಚಿನ್ನದ ಬೇಟೆಯನ್ನು ಕುರಿತೇ ’ಗೋಲ್ಡ್ ರಷ್’ ಸಿನಿಮಾ ಮಾಡಿದ್ದ. ಕಂಬಾರರ ’ಸೂರ್ಯ ಶಿಕಾರಿ’ಯಲ್ಲಿ ಚಿನ್ನ ಹುಡುಕುತ್ತ ಹೊರಟ ದಾರಿ ತಪ್ಪಿದ ಕಥೆಯಿದೆ. ಕರ್ನಾಟಕದ ಈಶಾನ್ಯ ‘ಾಗದಲ್ಲಿ ಹಳದಿಲೋಹದ ನೆಲೆಯಿತ್ತು. ಅದನ್ನು ಹುಡುಕುತ್ತ ಬಂದವರೇ ಚರಿತ್ರೆಯ ಪುಟ ಸೇರಿದ್ದಾರೆ. ಗೋದಾವರಿಯ ದಕ್ಷಿಣ ತೀರದಿಂದ ಕಾವೇರಿಯ ಉತ್ತರದ ವರೆಗೆ ಚಾಚಿಕೊಂಡಿರುವ ದಖನ್ ಕವಿಗಳಿಗೂ ರಾಜರಿಗೂ ’ಮಾರ್ಗ’ ಕಲ್ಪಿಸಿದ ದೇಸಿ ನೆಲ. ಈ ದಖನ್ ದೆಹಲಿಯ ನಿದ್ದೆ ಕೆಡಿಸಿದ ಪ್ರದೇಶ. ದೆಹಲಿಯ ದೊರೆಗಳಿಗೆ ಸೆರೆ ಸಿಕ್ಕಂತೆ ಭಾಸವಾದರೂ ಕೈಗೆಟುಕದ ನೆಲ. ದೆಹಲಿಯ ದೊರೆಗಳಿಗೆ ಮಾತ್ರ ಯಾಕೆ ಭಾರತವನ್ನು ಅಖಂಡವಾಗಿಸಿದ ಸಾಮ್ರಾಟ್‌ರಿಗೂ ದಖನ್ ಅರ್ಥವಾಗದ, ಅರ್ಥೈಸಿಕೊಳ್ಳಲಾಗದ ಮತ್ತು ಸಂಪೂರ್ಣ ದಕ್ಕದ ಭೂಭಾಗ. ಒಡಲಲ್ಲಿ  ಅಪಾರ ಪ್ರಮಾಣದ ಸಂಪತ್ತು ಇಟ್ಟುಕೊಂಡಿದ್ದ  ದಖನ್ ಕೇವಲ ಮಹತ್ವಾಕಾಂಕ್ಷಿ ದೊರೆಗಳ ಗಮನ ಸೆಳೆದಿರಲಿಲ್ಲ. ವ್ಯಾಪಾರಿಗಳು, ವಿದ್ವಾಂಸರು, ಕವಿಗಳು, ಕಲಾವಿದರಿಗೆ ದಖನ್‌ನತ್ತ ಮುಖ ಮಾಡುವದಕ್ಕೆ ಹಲವು ಕಾರಣಗಳಿದ್ದವು. ಅವುಗಳಲ್ಲಿ ಹೊಳೆಯುವ ಹಳದಿಲೋಹದ ನೆಲ-ನೆಲೆ ಎಂಬ ಕಾರಣವೂ ಇತ್ತು. ಅದು ಪ್ರಮುಖವಾಗಿತ್ತು. ಹಳದಿ ಬಣ್ಣದ ಲೋಹ ಹುಡುಕ