ಪೋಸ್ಟ್‌ಗಳು

Karnataka ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮುಖಾಮುಖಿ-1-siddalingayya

ಇಮೇಜ್
ಬುಕ್ ಬ್ರಹ್ಮ'ದ ಮುಖಾ-ಮುಖಿ ಸಂವಾದದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರ ವಿಶೇಷ ಸಂದರ್ಶನ. 'ಬುಕ್ ಬ್ರಹ್ಮ' ಸಂಪಾದಕರಾದ ದೇವು ಪತ್ತಾರ್ ಅವರು ಕವಿಗಳೊಂದಿಗೆ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಕಾವ್ಯ ಮತ್ತು ಕಾಲದ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಯುಟ್ಯೂಬ್‌ ಲಿಂಕ್‌

ಕರ್ನಾಟಕ ಚುನಾವಣಾ ಫಲಿತಾಂಶ ಮತ್ತು 2019ರ ಲೋಕಸಭಾ ಚುನಾವಣೆ

ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಮಾಧ್ಯಮಗಳು ಮತ್ತು ರಾಜಕೀಯ ವಿಶ್ಲೇಷಕರು 2019ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದು ಬಿಂಬಿಸಿವೆ. ಮೇಲ್ನೋಟಕ್ಕೆ ಅದು ಸರಿ ಎಂದು ಕೂಡ ಅನ್ನಿಸುತ್ತಿತ್ತು. ಅನ್ನಿಸುತ್ತಿದೆ. ರಾಜಕಾರಣದಲ್ಲಿ ಕಂಡದ್ದು, ಕೇಳಿದ್ದು ಮಾತ್ರ ‘ಸತ್ಯ’ ಅಲ್ಲ. ಹಾಗಾದರೆ ಕರ್ನಾಟಕದ ಚುನಾವಣೆಯು ಸೆಮಿಫೈನಲ್ ಅಲ್ಲವೇ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆಟದ ನಿಯಮಗಳು ರಾಜಕೀಯಕ್ಕೆ ಅನ್ವಯಿಸುವುದಿಲ್ಲ. ಜನ ರಾಜಕೀಯ ಆಯ್ಕೆಯನ್ನು ಆಟದ ರೀತಿಯಲ್ಲಿ ಮನರಂಜನೆ ಎಂದು ಭಾವಿಸುವುದಿಲ್ಲ. ಯಾಕೆಂದರೆ ಅವರಿಗೆ ತಮ್ಮ ಆಯ್ಕೆ ಉಂಟು ಮಾಡುವ ಅಪಾಯದ ಅರಿವು –ಮುನ್ಸೂಚನೆ ಇದ್ದೇ ಇರುತ್ತದೆ. ಎರಡು ಚುನಾವಣೆಯ ನಡುವಿನ ಅವಧಿಯಲ್ಲಿ ‘ಮತದಾರ ಪ್ರಭು’ ಅಸಹಾಯಕ. ಅದು ಅವನಿಗೆ ಗೊತ್ತಿರದ ಸಂಗತಿಯೇನಲ್ಲ. ಸಣ್ಣಪುಟ್ಟ ಬದಲಾವಣೆ- ಘಟನೆ-ಬೆಳವಣಿಗೆಗಳೂ ಸಂಕೇತ-ಸೂಚನೆ ನೀಡುತ್ತವೆ ಎನ್ನುವುದು ಒಂದು ಹಂತದ ಮಟ್ಟಿಗಿನ ತರ್ಕಕ್ಕೆ ಸರಿ. ತರ್ಕವು ಸತ್ಯದ ಸಮೀಪ ಹೋಗಬಹುದಾದ ದಾರಿ ಮಾತ್ರ. ತರ್ಕದಿಂದಲೇ ಸತ್ಯವನ್ನು ಅರಿಯಲು-ಪಡೆಯಲು ಸಾಧ್ಯವಿಲ್ಲ. ಹಾಗಾದರೆ ಅದು ಹೇಗೆ ಸಿಗುತ್ತದೆ? ಅದನ್ನು ಪಡೆಯುವ ಕ್ರಮ ಏನು? ಅದು ವರ್ತಮಾನವನ್ನು ಹಿಡಿಯುವ ಹಂಬಲದ ಹಾಗೆ. ಸಿಕ್ಕಿತು ಎಂದು ಅನ್ನಿಸುವ ವೇಳೆಗಾಗಲೇ ಅದು ಬದಲಾಗಿ ಬಿಟ್ಟಿರುತ್ತದೆ. ಅದಿರಲಿ. ಒಮ್ಮೆ ಓಟು ಕೊಟ್ಟ ಮೇಲೆ ಮತದಾರ ಮೂಕ ಪ್ರೇಕ್ಷಕ ಆಗುತ್ತಾನೆ. ಐದು ವರ್ಷದ ವರೆಗೆ ಬರಿ ನೋಡುವುದಷ್ಟೇ ಅ...

ಕರ್ನಾಟಕ ಮಾಧ್ಯಮ: ಹಿಂದಣ ಹೆಜ್ಜೆ- ಮುಂದಣ ದಾರಿ?

ಕರ್ನಾಟಕದ ಮಾಧ್ಯಮಗಳ ಕೊಡುಗೆ- ಸಾಧನೆಗಳು ಅನನ್ಯವಾದುದು.   ರಾಜ್ಯದ ಸುದ್ದಿಗಳು ಇಂಗ್ಲೆಂಡಿನ ಆಂಗ್ಲಭಾಷೆಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಮಾಧ್ಯಮದ   ಜೊತೆಗಿನ ಒಡನಾಟ ಆರಂಭವಾಯಿತು. ನಂತರದ ದಿನಗಳಲ್ಲಿ ಜರ್ಮನಿಯ ಮಿಶಿನರಿಗಳು ಕನ್ನಡ ಪತ್ರಿಕಾ ಲೋಕವನ್ನು ಅನಾವರಣ ಮಾಡಿದರು. 20ನೇ ಶತಮಾನದ ಆರಂಭದ ದಿನಗಳಲ್ಲಿ, ಕನ್ನಡ ನವೋದಯ ಲೇಖಕರು ಸಾಹಿತ್ಯ ಪತ್ರಿಕೆಗಳು-ನಿಯತಕಾಲಿಕೆಗಳ ಮೂಲಕ ಸಾಂಸ್ಕೃತಿಕ ವಾತಾವರಣ ರೂಪುಗೊಳ್ಳಲು ಕಾರಣರಾದರು. ನಿಯತಕಾಲಿಕೆ ಪ್ರಕಟಿಸಿದ ಅಥವಾ ಸಂಪಾದಕರಾಗಿರದ   ಅಥವಾ ಅವುಗಳಿಗೆ ಬರೆಯದ ನವೋದಯ ಕಾಲಕ್ಕೆ ಸೇರಿದ ಲೇಖಕರು ಇಲ್ಲವೇ ಎಲ್ಲ ಎನ್ನುವಷ್ಟು ಕಡಿಮೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲುಗೊಳ್ಳುವುದಕ್ಕಾಗಿಯೇ ಪತ್ರಿಕೆಗಳು ರೂಪುಗೊಂಡವು. ಆಗಿನ ವರ್ತಮಾನದ ಒತ್ತಡವನ್ನು ಅನಾವರಣ ಮಾಡಿ, ರಾಜಕೀಯ- ಸಾಮಾಜಿಕ ಚಟುವಟಿಕೆಗಳಿಗೆ ಇಂಬು ನೀಡಿದವು. ಕೆಲವರು ಭೂಗತರಾಗಿದ್ದು, ಕರಪತ್ರಗಳನ್ನು, ಸುದ್ದಿಪತ್ರಿಕೆಗಳನ್ನು ಹೊರಡಿಸಿದರು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಒಂದೇ ಆಡಳಿತಕ್ಕೆ ಸೇರಬೇಕು ಎಂಬ ಕನಸು ಕಂಡವರು ಕನ್ನಡದ ಬರಹಗಾರರು. ಅವರು ರೂಪಿಸಿದ ಸಾಂಸ್ಕೃತಿಕ ಒತ್ತಡವನ್ನು ಪತ್ರಿಕೆಗಳು ಕೂಡ ಜೀವಂತವಾಗಿಟ್ಟವು. ಏಕೀಕರಣಕ್ಕೆ ಸಂಬಂಧಸಿದಂತೆ ರಾಜಕಾರಣದ ದಿಕ್ಕುದೆಸೆಗಳನ್ನು ರೂಪಿಸಿದ ಹಿರಿಮೆ ಕನ್ನಡ –ಕರ್ನಾಟಕದ ಪತ್ರಿಕೆಗಳಿಗೆ ಸಲ್ಲುತ್ತದೆ. ಪ್ರಗತಿಶೀಲ ಸಾಹಿತಿಗಳು ತಮ್...

ಎನ್. ಧರಂಸಿಂಗ್ : ಸಿಕಂದರ್ ಜಬ್ ಚಲಾ ದುನಿಯಾ ಸೆ ದೋನೋ ಹಾತ್ ಖಾಲಿ

ಇಮೇಜ್
ಸಿಕಂದರ್ ಜಬ್ ಚಲಾ ದುನಿಯಾ ಸೆ ದೋನೋ ಹಾತ್ ಖಾಲಿ ಥೇ ಕ್ಯಾ ಲಾಯಾ ಥಾ ಸಿಕಂದರ್ ದುನಿಯಾ ಮೇ, ಲೇ ಚಲಾ ಕ್ಯಾ ಹೈ ಹಾತ್ ದೋನೊ ಖಾಲಿ ಬಾಹರ್ ಕಫನ್ ಕೆ (ದೊರೆಯು ಜಗತ್ತಿನಿಂದ ಹೊರ ನಡೆದಾಗ ಎರಡೂ ಕೈಗಳು ಖಾಲಿಯಿದ್ದವು ಈ ಜಗಕೆ ಬರುವಾಗ ದೊರೆ ತಂದದ್ದಾದರೂ ಏನು? ತೆಗೆದುಕೊಂಡು ಹೋದದ್ದಾದರೂ ಏನು? ಶವವಸ್ತ್ರದ ಹೊರಗೆ ಎರಡೂ ಕೈ ಖಾಲಿ)   ಮಾಜಿ ಮುಖ್ಯಮಂತ್ರಿ ಎನ್ . ಧರಂಸಿಂಗ್ ಅವರು ರಾಜಕೀಯ ಜೀವನದ ‘ ಇನ್ನಿಂಗ್ಸ್ ’ ಪೂರ್ಣಗೊಳಿಸಿದ್ದಾರೆ . ಸತತ 49 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಅವರು ಕಂಡದ್ದು ಕೇವಲ ಎರಡು ಸೋಲು . ಆ ಎರಡು ಸೋಲುಗಳನ್ನು ಹೊರತು ಪಡಿಸಿದರೆ ಅವರದು ಯಶೋಗಾಥೆ . ರಾಜಕೀಯ ಕ್ಷೇತ್ರಕ್ಕೆ ಬಂದಾಗಿನಿಂದ ಕೊನೆಯ ಉಸಿರು ಇರುವ ವರೆಗೆ ಒಂದೇ ರಾಜಕೀಯ ಪಕ್ಷದಲ್ಲಿದ್ದ ಧರಂಸಿಂಗ್ ಅವರು ಮಾತೃಪಕ್ಷದಲ್ಲಿಯೇ ನೆಲೆ ಕಂಡುಕೊಂಡಿದ್ದರು . ಪಕ್ಷ ನಿಷ್ಠೆಯೇ ಅವರನ್ನು ಮುಖ್ಯಮಂತ್ರಿ ಹುದ್ದೆಯವರೆಗೆ ಕರೆದೊಯ್ದಿತು . ಅದೇ ಅವರಿಗೆ ಸಂಸತ್ತಿಗೆ ಪ್ರವೇಶಿಸುವಂತೆ ಮಾಡಿತು . ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ , ವಿರೋಧ ಪಕ್ಷದ ನಾಯಕನ ಸ್ಥಾನಗಳೂ ಒಲಿದು ಬಂದದ್ದಕ್ಕೆ ಪಕ್ಷ ನಿಷ್ಠೆಯೇ ಪ್ರಮುಖ ಕಾರಣ . ‘ ಅಜಾತ ಶತ್ರು ’ ಎಂದೇ ಗುರುತಿಸಲಾಗುತ್ತಿದ್ದ ಧರಂಸಿಂಗ್ ಅವರು ಬದುಕಿನ ವಿವರಗಳನ್ನು ಎರಡು ಸೋಲುಗಳ ಮೂಲಕ ಉಲ್ಲೇಖ ಮಾಡುವಂತಾದದ್ದು ಮಾತ್ರ ವಿಷಾದದ ಸಂಗತಿ . ವಕೀಲರಾಗಿದ್ದ ಧರಂಸಿಂಗ್ ಅವರು ...

’೧೮೫೭ರ ಸಿಪಾಯಿದಂಗೆ’ ಮತ್ತು ’ಭಾಲ್ಕಿ ಪಿತೂರಿ

ಇಮೇಜ್
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಸರಿಯಾಗಿ ೬೧ ವರ್ಷಗಳು ಪೂರ್ಣಗೊಂಡಿವೆ. ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಟ ಆರಂಭವಾಗಿ ೧೫೧ ವರ್ಷಗಳಾಗಿವೆ. ಸತತ ೯೦ ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಭಾಗಿಯಾದ ಬಹುತೇಕರು `ಕಾಲ'ನ ಮನೆ ಸೇರಿದ್ದಾರೆ. ಹೊರಾಟ ಮತ್ತು ಅದರ ನೆನಪುಗಳು ಇತಿಹಾಸದ ಪುಟ ಸೇರಿವೆ. ಹಲವು ಪ್ರಸಂಗ- ಘಟನೆಗಳು ಪುಸ್ತಕದ ಪುಟಗಳಲ್ಲಿ ಮರೆತು ಹೋಗಿವೆ. ಮರೆತು ಹೋದ, ಆದರೆ , ಮರೆಯಬಾರದ ಒಂದು ಘಟನೆಯ ವಿವರ ಇಲ್ಲಿದೆ- **** ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಬೀದರ್ ಜಿಲ್ಲೆಯ ಭಾಲ್ಕಿಗೂ ಏನು ಸಂಬಂಧ? ವಿದೇಶಿ ವಿದ್ವಾಂಸರು `ಸಿಪಾಯಿ ದಂಗೆ' ಗುರುತಿಸುವ `ಮೊದಲ ಸ್ವಾತಂತ್ರ್ಯ ಸಂಗ್ರಾಮ' ಆರಂಭವಾದದ್ದು ಸರಿಯಾಗಿ ೧೫೧ ವರ್ಷಗಳ ಹಿಂದೆ. ಸತತ ಹತ್ತು ವರ್ಷಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ನಡೆದ ದಂಗೆ- ಪಿತೂರಿಗಳು ಕಂಪೆನಿ ಸರ್ಕಾರವನ್ನು ಕಂಗೆಡಿಸ್ದಿದವು. ಸರಿಯಾಗಿ ಹತ್ತು ವರ್ಷಗಳ ನಂತರ `ಭಾಲ್ಕಿ ಪಿತೂರಿ'ಯನ್ನು ವಿಫಲಗೊಳಿಸುವ ಮೂಲಕ ಬ್ರಿಟಿಷರು ಮೊದಲ ಹೋರಾಟವನ್ನು ಸಂಪೂರ್ಣವಾಗಿ ಕೊನೆಗೊಳಿಸುವಲ್ಲಿ ಯಶಸ್ವಿಯಾದರು. ಆ ಕಥೆಯ ಕೆಲವು ಐತಿಹಾಸಿಕ ವಿವರಗಳು ಇಲ್ಲಿವೆ- ೧೮೫೭ಮೇ ೧೦ರಂದು ಮೀರತ್‌ನಲ್ಲಿ ಮತ್ತು ಅಂಬಾಲಾಗಳ ಬ್ರಿಟಿಷ್ ಸೇನಾ ಪಡೆಯಲ್ಲಿ ಆರಂಭವಾದ ದಂಗೆಯು ರಾಷ್ಟ್ರದ ಹಲವೆಡೆಗಳಲ್ಲಿ ಪಸರಿಸಿತು. ಭಾರತೀಯರು ನಡೆಸಿದ ೧೮೫೭ರ ಹೋರಾಟದ ತಕ್ಷಣದ ಕಾರಣ ಬಂದೂಕಿನ ತೋಟಾಗಳಿಗೆ `ಹಂದಿ ಮತ್ತು ಗೋವಿನ ಕ...

ಅಂಬಿಕಾತನಯದತ್ತ ಅಲ್ಲ; ಪತ್ರಕರ್ತ ಬೇಂದ್ರೆ

ಇಮೇಜ್
ಪಟ್ಟ ಪಾಡನ್ನೇ ಹಾಡಾಗಿಸಿ ' ಕಾವ್ಯೋದ್ಯೋಗ ' ಮಾಡಿದ ವರಕವಿ ದ . ರಾ . ಬೇಂದ್ರೆ ತುತ್ತಿನಚೀಲ ತುಂಬಿಸಿಕೊಳ್ಳುವುದಕ್ಕಾಗಿ - ಹವ್ಯಾಸಕ್ಕಾಗಿ ಪತ್ರಿಕೆಗಳನ್ನು ಆರಂಭಿಸಿ - ಸಂಪಾದಕರಾಗಿ ಪತ್ರಕರ್ತರಾಗಿ ಕೆಲಸ ಮಾಡಬೇಕಾಯಿತು . ಚಲನಶೀಲ ಪ್ರತಿಭೆ ತನ್ನತನ ಕಂಡುಕೊಳ್ಳಲು ಹಲವಾರು ಸಾಧ್ಯತೆಗಳನ್ನು ಪ್ರಯತ್ನಿಸುತ್ತಿರುತ್ತದೆ . ನೆಲೆ ಸಿಕ್ಕ ತಕ್ಷಣ ಅಲ್ಲಿ ತಳ ಊರುತ್ತದೆ . ಆದರೆ , ಬೇಂದ್ರೆಯವರು ಕಾವ್ಯಲೋಕದಲ್ಲಿ ಗತಿ ಸಿಕ್ಕ ಮೇಲೂ ` ಹೊಟ್ಟೆಪಾಡಿಗಾಗಿ ' ಸಾಹಿತ್ಯ ಪತ್ರಿಕೋದ್ಯಮವನ್ನು ಅವಲಂಬಿಸಿದ್ದರು ಎಂಬುದು ಕುತೂಹಲ ಹುಟ್ಟಿಸುವ ಸಂಗತಿ . ಕೈಬರಹದ ಪತ್ರಿಕೆಗಳಾದ ' ಕೊಳಲು ', ' ಗೆಳೆಯ ', ` ನಸುಕು ' ಮತ್ತು ಮುದ್ರಣ ಕಂಡ ' ಸ್ವಧರ್ಮ ' ವನ್ನು ಕಾವ್ಯಾಸಕ್ತಿ ಮತ್ತು ಹವ್ಯಾಸಕ್ಕಾಗಿ ಆರಂಭಿಸಿದ್ದ ಬೇಂದ್ರೆಯವರು ಮಾಸ್ತಿಯವರ ಸಹಾಯದಿಂದ ` ಜೀವನ ' ಮಾಸಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸಿದ್ದರು. '1940 ರ ವರೆಗೆ ಎಲ್ಲೂ ಕೆಲಸ ಸಿಕ್ಕದೆ ಅಣ್ಣ ಮಾಸ್ತಿಯವರ ವಾತ್ಸಲ್ಯದ ಬೆಂಬಲದಿಂದ ಜೀವನ ಸಂಪಾದಕನೆಂದು ಗೌರವದಿಂದ ಅಲೆದಾಡಿದೆ '' ಎಂದು ತಮ್ಮ ಆತ್ಮಕತೆ ` ಕಾವ್ಯೋದ್ಯೋಗ ' ದಲ್ಲಿ ಬೇಂದ್ರೆ ಬರೆದಿದ್ದಾರೆ. ಪತ್ರಿಕೆಗಳನ್ನು ನಡೆಸಿದ ಅವಧಿಯಲ್ಲಿ ಬೇಂದ್ರೆಯವರು ವೈವಿಧ್ಯಮ...