ಸಂಗೀತ ಕೇಳುಗರಿಗಾಗಿ; ಪ್ರಶಸ್ತಿಗಾಗಿ ಅಲ್ಲ
ತಮ್ಮ ನೇರ , ನಿಷ್ಠುರ ಮಾತುಗಳಿಂದ ಸಾಂಸ್ಕೃತಿಕ ವಲಯದ ನೈತಿಕ ಎಚ್ಚರವನ್ನು ಜಾಗೃತವಾಗಿಡುತ್ತಿದ್ದ ಉಸ್ತಾದ್ ವಿಲಾಯತ್ ಖಾನ್ ಹಿಂದೂಸ್ತಾನಿ ಸಂಗೀತ ಪರಂಪರೆಯಲ್ಲಿ ಮೂಡಿಬಂದ ಅಪರೂಪದ ನಕ್ಷತ್ರಗಳಲ್ಲಿ ಒಬ್ಬರು . `ಬೀನ್ಕಾರ್' ಶೈಲಿಯಲ್ಲಿ ಪ್ರಚಲಿತವಾಗಿದ್ದ ಸಿತಾರ ವಾದನ ಪರಂಪರೆಗೆ ` ಗಾಯಕಿ ಅಂಗ್ ' ಸೇರಿಸಿದ ಹಿರಿಮೆ ಇವರದು . ಸಿತಾರ್ ವಾದನದಲ್ಲಿ ಗಾಯನ ಶೈಲಿ ಅಳವಡಿಸಿ ಅದಕ್ಕೆ ಅಗತ್ಯವಾಗಿದ್ದ ಸಿತಾರನ್ನು ರೂಪಿಸಿಕೊಂಡವರು . ನಾಲ್ಕು ತಲೆಮಾರುಗಳ ಸಂಗೀತ ಪರಂಪರೆ ಇರುವ ಕುಟುಂಬದಲ್ಲಿ ಜನಿಸಿದ ವಿಲಾಯತ್ ತಂದೆ ಉಸ್ತಾದ್ ಇನಾಯತಖಾನ್ ರಲ್ಲಿ ಸಿತಾರ್ ವಾದನ ಕಲಿಯಲು ಆರಂಭಿಸಿದರು . ವಿಲಾಯತ್ ಬಾಲಕರಾಗಿದ್ದಾಗ ಒಮ್ಮೆ ಅವರ ತಂದೆ ಸಿತಾರ್ ವಾದನ ಪ್ರಸ್ತುತ ಪಡಿಸುತ್ತಿರುವಾಗ ` ಕಣ್ಮುಂದೆ ಹಳದಿ ಬಣ್ಣವೇ ಹರಡಿ ' ದಂತಾಗಿದ್ದನ್ನು ತಂದೆಗೆ ಹೇಳಿದರು . ಅದಕ್ಕೆ ಇನಾಯತಖಾನರು ` ಬುದ್ದು , ನಾನೀಗ ನುಡಿಸಿದ್ದ ` ಬಸಂತ್ ' ರಾಗ ' ಎಂದು ಹೇಳಿದ್ದರು . ಸಂಗೀತದಲ್ಲಿ ಬಣ್ಣದ ಛಾಯೆ ಕಂಡ ವಿಲಾಯತರಿಗೆ ತಂದೆಯಿಂದ ಹೆಚ್ಚಿನ ಸಿತಾರ್ ಶಿಕ್ಷಣ ದೊರೆಯಲಿಲ್ಲ . ಕೇವಲ ಹತ್ತು ವರ್ಷದವರಾಗಿದ್ದಾಗಲೇ ಪಿತೃವಿಯೋಗಕ್ಕೆ ಒಳಗಾಗಬೇಕಾಯಿತು . ವಿಧಿಯಾಟದಿಂದ ನೊಂದ ವಿಲಾಯತರಿಗೆ ಅಜ್ಜ ಉಸ್ತಾದ್ ಬಂದೆ ಹುಸೇನ್ ಖಾನ್ ( ತಾಯಿಯ ತಂದೆ ) ಮತ್...
ಕಾಮೆಂಟ್ಗಳು