ಎನ್. ಧರಂಸಿಂಗ್ : ಸಿಕಂದರ್ ಜಬ್ ಚಲಾ ದುನಿಯಾ ಸೆ ದೋನೋ ಹಾತ್ ಖಾಲಿ
ಸಿಕಂದರ್ ಜಬ್ ಚಲಾ ದುನಿಯಾ ಸೆ ದೋನೋ ಹಾತ್ ಖಾಲಿ ಥೇ ಕ್ಯಾ ಲಾಯಾ ಥಾ ಸಿಕಂದರ್ ದುನಿಯಾ ಮೇ, ಲೇ ಚಲಾ ಕ್ಯಾ ಹೈ ಹಾತ್ ದೋನೊ ಖಾಲಿ ಬಾಹರ್ ಕಫನ್ ಕೆ (ದೊರೆಯು ಜಗತ್ತಿನಿಂದ ಹೊರ ನಡೆದಾಗ ಎರಡೂ ಕೈಗಳು ಖಾಲಿಯಿದ್ದವು ಈ ಜಗಕೆ ಬರುವಾಗ ದೊರೆ ತಂದದ್ದಾದರೂ ಏನು? ತೆಗೆದುಕೊಂಡು ಹೋದದ್ದಾದರೂ ಏನು? ಶವವಸ್ತ್ರದ ಹೊರಗೆ ಎರಡೂ ಕೈ ಖಾಲಿ) ಮಾಜಿ ಮುಖ್ಯಮಂತ್ರಿ ಎನ್ . ಧರಂಸಿಂಗ್ ಅವರು ರಾಜಕೀಯ ಜೀವನದ ‘ ಇನ್ನಿಂಗ್ಸ್ ’ ಪೂರ್ಣಗೊಳಿಸಿದ್ದಾರೆ . ಸತತ 49 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಅವರು ಕಂಡದ್ದು ಕೇವಲ ಎರಡು ಸೋಲು . ಆ ಎರಡು ಸೋಲುಗಳನ್ನು ಹೊರತು ಪಡಿಸಿದರೆ ಅವರದು ಯಶೋಗಾಥೆ . ರಾಜಕೀಯ ಕ್ಷೇತ್ರಕ್ಕೆ ಬಂದಾಗಿನಿಂದ ಕೊನೆಯ ಉಸಿರು ಇರುವ ವರೆಗೆ ಒಂದೇ ರಾಜಕೀಯ ಪಕ್ಷದಲ್ಲಿದ್ದ ಧರಂಸಿಂಗ್ ಅವರು ಮಾತೃಪಕ್ಷದಲ್ಲಿಯೇ ನೆಲೆ ಕಂಡುಕೊಂಡಿದ್ದರು . ಪಕ್ಷ ನಿಷ್ಠೆಯೇ ಅವರನ್ನು ಮುಖ್ಯಮಂತ್ರಿ ಹುದ್ದೆಯವರೆಗೆ ಕರೆದೊಯ್ದಿತು . ಅದೇ ಅವರಿಗೆ ಸಂಸತ್ತಿಗೆ ಪ್ರವೇಶಿಸುವಂತೆ ಮಾಡಿತು . ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ , ವಿರೋಧ ಪಕ್ಷದ ನಾಯಕನ ಸ್ಥಾನಗಳೂ ಒಲಿದು ಬಂದದ್ದಕ್ಕೆ ಪಕ್ಷ ನಿಷ್ಠೆಯೇ ಪ್ರಮುಖ ಕಾರಣ . ‘ ಅಜಾತ ಶತ್ರು ’ ಎಂದೇ ಗುರುತಿಸಲಾಗುತ್ತಿದ್ದ ಧರಂಸಿಂಗ್ ಅವರು ಬದುಕಿನ ವಿವರಗಳನ್ನು ಎರಡು ಸೋಲುಗಳ ಮೂಲಕ ಉಲ್ಲೇಖ ಮಾಡುವಂತಾದದ್ದು ಮಾತ್ರ ವಿಷಾದದ ಸಂಗತಿ . ವಕೀಲರಾಗಿದ್ದ ಧರಂಸಿಂಗ್ ಅವರು ...