ಪೋಸ್ಟ್‌ಗಳು

2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕವಿಗಳ ಕಾಣಿಕಿ- ಬೀದರ್ ಕವಿಗೋಷ್ಠಿಗಾಗಿ ಬೇಂದ್ರೆ ಬರೆದ ಕವಿತೆ

ಇಮೇಜ್
ಕವಿಗಳ ಕಾಣಿಕಿ ೧ ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ ಜಗ ಜಾಹೀರ ವಜ್ರದ ಖಾಣೀಗೆ ಕಾಳಾ ಬಝಾರ ಹಜಾರ ಇದ್ರೂ ಬಾಳೋ ಉಸಿರಿಗೆ ಒಂದೇ ಹೆಸರು: ಅದು ಕವಿ ಕವೀ ಕಾಣಿಕೀ ಅದಕ್ಕ ಬೇಕಿಲ್ಲ ಬ್ಯಾರೆ ಆನಿಕಿ ೨ ಬೀದರಕ್ಕ ಆದಾವರೆಷ್ಟೋ? ಹೋದಾವರೆಷ್ಟೋ? ಆಗದವರೂ ಇದ್ದಾರು ಹೋಗದವರೂ ಇದ್ದಾರು ಬರೋ ಅವರಿಗೆ ಬಾಗಿಲಾ ತೆರದ ಅವ ಹೋಗೋ ಅವರ ಹಾದಿ ಮುಚ್ಚಿಲ್ಲ ೩ ಪ್ರಜಾ ಇಲ್ಲದ ರಾಜಾ ಯಾವ ಖಾ ಜಾ? ಯಾವ ಭಾಷಾದಾಗ ಊದಿರಿ ಬೇಂಡಬಾಜಾ ಕನ್ನಡೀ-ಮರಾಠೀ-ತೇಲಂಗೀ ಊರ್ದೂ, ಪಾರಸೀ, ಅರಬ್ಬೀ ಹಿಂದೀ, ಹಿಂದಿನದೂ, ಇಂದಿನದೂ, ಮುಂದಿನದೂ ಸಂಸ್ಕೃತಾ, ಪ್ರಾಕೃತಾ, ಅಪಭ್ರಂಶಾ, ಪೈಶಾಚಿ  ೪ ಹೊಡೋ ಗಾಡೀ ದ್ರಾವಿಡೀ, ಶಾಬರೀ, ಪುಳಿಂದೀ, ಗೊಂಡೀ ಕರಣದಾಗ ನಾಟಿದ್ದು ನಾಟಲಿ ಉಳಿದದ್ದು ದಾಟಲೀ ಸೋಳಾ ದೇಶಾ, ಸೋಳಾ ಭಾಷಾ, ಸೋಳಾ ಅಂಗೀ ಭಾವ ಇದ್ಹಾಂಗ ಜೀವ, ಜೀವಲಿಂಗೀ ೫ ಹಳೇ ಗೊಂಡಾರಣ್ಯದ ಗಂಗಾಲಹರಿ, ಗೋದಾವರೀ ಇನ್ನೂ ಹರೀತನ ಅದ ಉತ್ತರಕ್ಕ ಬೀದರದ ಹತ್ತರ ಹತ್ತರಕ್ಕ ೬ ’ಅಹಂ ರಾಷ್ಟೀ ಸಂಗಮನೀ’ ದೇಹದಾಗ ಸ್ನೇಹ ಇರದಿದ್ದರ ಮನದ ಮೊನೀಯೊಳಗ ದೀಪ ಎಲ್ಲೀದು? ಜನದ ಜಾತಿ ನೂರಾದರೂ ಜ್ಯೋತಿ ನೂರಾ ಒಂದು ಒಂದು ಬಿಂದುವಿಗೇ ನೂರು ಸಂದು ಸಾವಿರದವರ ಲಕ್ಷ್ಯ ಜೀವ ಕೋಟಿ ಕಡಿಗೆ ಅಬ್ಜದಾಗ ರಸದ ಅಡಿಗೆ ೭ ಹಿಂದುಸ್ಥಾನ, ಪಾಕಿಸ್ಥಾನ ಒಂದಾಗಬೇಕು ’ಭಾರತ ಹಮಾರಾ’ ಮುಂದಾಗಬೇಕು ಮನಕ್ಕೊಂದು ಮತಂ ಮಾಡಿ ಜನ ಧರ್ಮ ಖತಂ ಮಾಡಬ್ಯಾಡ್ರಿ ೮ ಹೋದದ್ದ

ಕತೆ ಹೇಳುವುದೆಂದರೆ ಆತ್ಮಗಳ ಹುಡುಕಾಟ

ಇಮೇಜ್
  ಕತೆಗಾರ ಬಸವಣ್ಣೆಪ್ಪ ಕಂಬಾರ ಅವರೊಂದಿಗೆ ಮುಖಾಮುಖಿ- ಮಾತುಕತೆ

ಸಾಂಸ್ಕೃತಿಕ ಚರಿತ್ರೆ ಕಟ್ಟಿಕೊಡುವ ವ್ಯಕ್ತಿಚಿತ್ರಗಳು

ಇಮೇಜ್
  ಮಾತು ಮುಗಿದಿಲ್ಲ (ಲೇಖಕರ ಒಡನಾಟ) ಸಿದ್ಧಲಿಂಗ ಪಟ್ಟಣಶೆಟ್ಟಿ ಪುಟಗಳು ೨೪೦, ಬೆಲೆ ೨೪೦ ಅನನ್ಯ ಪ್ರಕಾಶನ, ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-೫೮೦೦೦೪ ಕವಿ ಮತ್ತು ಸೃಜನಶೀಲ ಅನುವಾದಕ ಎಂದು ಗುರುತಿಸಲಾಗುವ ಪಟ್ಟಣಶೆಟ್ಟಿ ಅವರು ’ಚಹಾದ ಜೋಡಿ ಚೂಡಾದ್ಹಾಂಗ’ ಅಂಕಣದ ಮೂಲಕ ಚಿರಪರಿಚಿತರು. ಹದಿನೆಂಟು ಕವನ ಸಂಕಲನ ಹಾಗೂ ಹದಿನೆಂಟು ಅನುವಾದಿತ ನಾಟಕಗಳನ್ನು ಪ್ರಕಟಿಸಿರುವ ಅವರ ೧೧ನೇ ಗದ್ಯ ಬರೆಹಗಳ ಸಂಕಲನವಿದು. ಉತ್ತರ ಕರ್ನಾಟಕದ ಆಡುಮಾತನ್ನು ಬಳಸಿ ಬರೆಯುವ ಅವರ ಗದ್ಯವು ಸಹಜ ಮಾತಿನ ಲಯವನ್ನು ವಿಸ್ತರಿಸಿ ಕವಿತೆಯಾಗಿ ಬಿಡಬಲ್ಲದು. ಸರಾಗವಾಗಿ ಓದಿಸಿಕೊಂಡು ಹೋಗುವ ಲವಲವಿಕೆಯ ಗದ್ಯ ಅವರದು. ದಟ್ಟ ನೆನಪಿನ ಓಣಿಯಲ್ಲಿ ಓಡಾಡುತ್ತ ಅಲ್ಲಿನ ವ್ಯಕ್ತಿ ವಿವರ, ಘಟನೆ- ಸಂಗತಿಗಳನ್ನು ಕರಾರುವಾಕ್ಕಾಗಿ ಪದಕ್ಕಿಳಿಸುವ ಕೌಶಲ ಪಟ್ಟಣಶೆಟ್ಟರಿಗೆ ಸಿದ್ಧಿಸಿದೆ. ಹಾಗೆ ದಾಖಲಿಸುವಾಗ ಅದರ ತಾಜಾತನ ಕಳೆದುಹೋಗದಂತೆ ಅವರು ಬರೆಯಬಲ್ಲರು. ಧಾರವಾಡ ಕೇಂದ್ರಿತ ಉತ್ತರ ಕರ್ನಾಟಕದ ಲೇಖಕ-ಕವಿಗಳ ಜೊತೆಗಿನ ಒಡನಾಟದ ಗಳಿಗೆಯನ್ನು ದಾಖಲಿಸುವ ’ಮಾತು ಮುಗಿದಿಲ್ಲ’ ಸಂಕಲನವು ಒಟ್ಟು ಹದಿನಾರು ಬರೆಹಗಳನ್ನು ಒಳಗೊಂಡಿದೆ. ಅದರಲ್ಲಿ ಎರಡು ಲೇಖನಗಳು ಬೇಂದ್ರೆಯವರನ್ನು ಕುರಿತವುಗಳಾಗಿದ್ದರೆ ಮತ್ತೆರಡು ಗಿರಡ್ಡಿ ಗೋವಿಂದರಾಜ ಅವರನ್ನು ಕುರಿತವು. ’ಸಂಕ್ರಮಣ’ ಸಾಹಿತ್ಯ ಪತ್ರಿಕೆ ಆರಂಭಿಸಿ ಸಾಹಿತ್ಯಕ-ಸಾಂಸ್ಕೃತಿಕ ಲೋಕದಲ್ಲಿ ಅದಕ್ಕೊಂದು ಛಾಪು ಮೂಡಿಸಲು ಕಾರಣರಾದವರ

ಪ್ರಭಾಕರ ಜೋಶಿ ಅವರೊಂದಿಗೆ ಮಾತುಕತೆ

ಇಮೇಜ್
  M Prabhakar Joshi Interview | Mukha Mukhi | Yakshagana |  ಬುಕ್ ಬ್ರಹ್ಮದ ಮುಖಾ-ಮುಖಿ ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಶಿ ಅವರ ವಿಶೇಷ ಸಂದರ್ಶನ. ಪೂರ್ಣ ಸಂದರ್ಶನಕ್ಕಾಗಿ

ಕಣವಿ ಅವರೊಂದಿಗೆ ಮಾತುಕತೆ

ಇಮೇಜ್
  Chennaveera Kanavi Mukha Mukhi |  'ಬುಕ್ ಬ್ರಹ್ಮ’ದ ‘ಮುಖಾ-ಮುಖಿ’ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ʼಚೆನ್ನವೀರ ಕಣವಿʼಯವರು ತಮ್ಮ ಸಾಹಿತ್ಯ ಪಯಣದ ಕುರಿತು ಮಾತನಾಡಿದ್ದಾರೆ. ವಿವರವಾದ ಮಾತುಕತೆಗಾಗಿ