ಪೋಸ್ಟ್‌ಗಳು

ಮೇ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು

ಬರವಣಿಗೆ ಮಾತ್ರವಲ್ಲದೆ ಓದು ಅದರಲ್ಲೂ ವಿಶೇಷವಾಗಿ ’ಸಾಹಿತ್ಯದ ಓದು’ ಕೂಡ ಅಭಿವ್ಯಕ್ತಿಯ ಮಾಧ್ಯಮ ಎಂದು ಖಚಿತವಾಗಿ ನಂಬಿದವ, ನಂಬುವವ ನಾನು. ಕಳೆದ ಎರಡು ದಶಕಗಳ ಅವಧಿಯಲ್ಲಿ ಓದುಗನಾಗಿ ಸಾಹಿತ್ಯಲೋಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕುತೂಹಲ - ಆಸಕ್ತಿಯಿಂದ ಗಮನಿಸುತ್ತ ಬಂದಿದ್ದೇನೆ. ಹಲವು ಸಲ ಹೊರಗಿನವನಾಗಿ ಕೆಲವೊಮ್ಮೆ ’ಒಳಗಿನವ’ನಾಗಿ ಯೋಚಿಸಿ, ವರ್ತಿಸಿದ್ದೇನೆ. ಹೀಗಾಗಿ ಸಾಹಿತ್ಯದ ಜೊತೆಗೆ ನಿರ್ಧಿಷ್ಟವಾದ ಮತ್ತು ಹದವಾದ ’ಮಾನಸಿಕ ದೂರ’ ಇಟ್ಟುಕೊಳ್ಳುವುದು ಸಾಧ್ಯವಾಗಿದೆ. ಬರಹಗಾರನಾಗಿ ನನಗೆ ಇರುವ ಅನುಭವ ಸೀಮಿತವಾದದ್ದು. ಮೊದಲೇ ಹೇಳಿದ ಹಾಗೆ ನನಗೆ ಓದುವುದೇ ಅಭಿವ್ಯಕ್ತಿ ಎಂದು ನಂಬಿದ್ದರಿಂದ ಓದುವ ಖುಷಿಯನ್ನೇ ಬೆಳೆಸಿಕೊಳ್ಳುತ್ತ ಹೋದೆ. ಬರೆಯುವುದಕ್ಕಿಂತ ಓದುಗನಾಗುವುದೇ ನನ್ನ ಆಸಕ್ತಿ ಮತ್ತು ಗುರಿಯಾಗಿತ್ತು. ಹಾಗೆ ನೋಡಿದರೆ ನನ್ನ ಮತ್ತು ನನ್ನಂತಹ ಹಲವರ ಸಾಹಿತ್ಯದ ಆಸಕ್ತಿ ಬೆಳೆಯಲು ಆರಂಭವಾದದ್ದು ಭಾನುವಾರದ ಸಾಪ್ತಾಹಿಕ ಮತ್ತು ವಾರಪತ್ರಿಕೆಗಳ ಮೂಲಕ, ಕಳೆದ ಒಂದು ದಶಕದ ಅವಧಿಯಲ್ಲಿ ಸಾಹಿತ್ಯ ಪತ್ರಿಕೆಗಳ ಜೊತೆಗಿನ ಒಡನಾಟ ಮತ್ತು ಪ್ರಮುಖ ದೈನಿಕದಲ್ಲಿ ಅದರಲ್ಲೂ ವಿಶೇಷವಾಗಿ ಸಾಪ್ತಾಹಿಕ ವಿಭಾಗದಲ್ಲಿ ಕೆಲಸ ಮಾಡಿದ ಅನುಭವದ ಹಿನ್ನೆಲೆಯಲ್ಲಿ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ. ’ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು’ ಎಂಬ ಶೀರ್ಷಿಕೆಯ ಅಡಿಯಲ್ಲಿ ಚರ್ಚೆ ನಡೆಸುವುದಕ್ಕಾಗಿ ಇಲ್ಲಿ ನಿಂತಿದ್ದೇನ

ಕೃಷಿಯ ಪ್ರಗತಿಯಲ್ಲಿ ಮುದ್ರಣ ಮಾಧ್ಯಮದ ಪಾತ್ರ

ಒಂದು ಸಕ್ಸೆಸ್ ಸ್ಟೋರಿಯ ಮುಖಾಂತರ ನನ್ನ ಮಾತುಗಳನ್ನು ಆರಂಭಿಸುತ್ತೇನೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನಲ್ಲಿ ಅಹಮದಾಬಾದ್ ಎಂಬ ಪುಟ್ಟ ಹಳ್ಳಿಯಿದೆ. ೧೯೭೦ರಲ್ಲಿ ಆ ಊರಿನ ಒಬ್ಬ ಡಿಪ್ಲೊಮಾ ಪದವೀಧರ ಯುವಕ ಪುಣೆಯಲ್ಲಿ ಜ್ಯೂನಿಯರ್ ಎಂಜಿನಿಯರ್ ಆಗಿದ್ದ. ಜಡ್ಡುಗಟ್ಟಿದ ಸರ್ಕಾರಿ ವ್ಯವಸ್ಥೆ ಮತ್ತು ವ್ಯಾಪಕ ಭ್ರಷ್ಟಾಚಾರ ಮತ್ತಿತರ ಕಾರಣಗಳಿಗಾಗಿ ಸರ್ಕಾರಿ ನೌಕರಿ ತೊರೆಯಲು ನಿರ್ಧರಿಸಿದ. ತನ್ನ ಮೇಲಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿದ. ಆಗಿನ ಕಾಲದಲ್ಲಿ ಕೈ ತುಂಬ ಅಲ್ಲದಿದಿದ್ದರೂ ನೆಮ್ಮದಿಯಿಂದ ಬದುಕು ಸಾಗಿಸಬಹುದಾದಷ್ಟು ವೇತನ ಬರುತ್ತಿತ್ತು. ಮೇಲಧಿಕಾರಿ ಯುವಕನಿಗೆ ಕೆಲಸ ತೊರೆಯದೇ ಸಲಹೆ ಮಾಡಿದರು. ತಲೆ ತುಂಬ ಆದರ್ಶ ತುಂಬಿಕೊಂಡಿದ್ದ ಯುವಕ ತನ್ನ ನಿರ್ಧಾರದಲ್ಲಿ ಗಟ್ಟಿಯಾಗಿದ್ದ. ಕೆಲಸ ಬಿಟ್ಟು ಏನ್ ಮಾಡ್ತೀರಿ? ಎಂಬ ಪ್ರಶ್ನೆಗೆ ಹೊಲಕ್ಕೆ ಹೋಗಿ ಕೃಷಿ ಮಾಡ್ತೀನಿ ಎಂದು ಉತ್ತರಿಸಿ ಊರಿಗೆ ಬಂದ. ಊರಿನ ಹಿರಿಯರು ಪ್ರಮುಖರು ’ತಮ್ಮಾ ಹೊಲದಾಗ ಎಷ್ಟು ಅಗ್ದರೂ ಮಣ್ಣು ಮತ್ತು ಕಸಾನೇ ಬರ್‍ತಾದ ಹೊರ್‍ತು ನೋಟು ಬರಂಗಿಲ್ಲ. ಸುಮ್ಮನೆ ವಾಪಾಸ್ ಕೆಲಸಕ್ಕೆ ಹೋಗು ಅಂತ ಕಿವಿಮಾತು ಹೇಳಿದರು. ಹಠಮಾರಿ ಯುವಕ ಕೇಳಲಿಲ್ಲ. ಒಂದಷ್ಟು ಸಾಲ ಮಾಡಿ ಕೃಷಿ ಆರಂಭಿಸಿದ. ಅವನ ಟೈಮ್ ಚೆನ್ನಾಗಿರಲಿಲ್ಲ. ದೇಶವನ್ನು ಕಾಡಿದ ೧೯೭೧ರ ಭೀಕರ ಬರಗಾಲ ಆರಂಭವಾಗಿತ್ತು. ಮಳೆ ಕೈಕೊಟ್ಟು ಮುಂಗಾರು-ಹಿಂಗಾರುಗಳೆರಡೂ ಬೆಳೆಯಲಿಲ್ಲ. ಎರಡನೇ ವರ್ಷ ಮತ್ತಷ್ಟು ಸಾಲ ಮಾಡಿ

ಶರಣಪ್ರಕಾಶ ಪಾಟೀಲ

ಇಮೇಜ್
ಕನರ್ಾಟಕದ ರಾಜಕೀಯ ಲೋಕದಲ್ಲಿ ಕೋಟಿಗಳ ಲೆಕ್ಕದಲ್ಲಿ ನಡೆಯುತ್ತಿರುವ `ವ್ಯವಹಾರ'- ಚಚರ್ೆಗಳು ರಾಜಕಾರಣಿಗಳು ಮತ್ತು ರಾಜಕೀಯ ಎಂದರೇ ಜನ ಅಸಹ್ಯ ಪಟ್ಟುಕೊಳ್ಳುವ ಸ್ಥಿತಿ ತಲುಪಿದೆ. ಅಂತಹುದರಲ್ಲಿ ಕಾಯಿನ್ ಬಾಕ್ಸ್ನಿಂದ ಫೋನ್ ಬಂದರೆ ರಿಸೀವ್ ಮಾಡುವ ಶಾಸಕರೂ ಇದ್ದಾರೆ ಎಂಬುದೇ ನಂಬಲಿಕ್ಕೆ ಕಷ್ಟವಾಗುವ ಸಂಗತಿ. ಜನಪ್ರತಿನಿಧಿಗಳು ಅದರಲ್ಲೂ ವಿಶೇಷವಾಗಿ ಶಾಸಕರಗಳು ಪೈಕಿ ಬಹುತೇಕ ಜನ ತಮ್ಮ ಸುತ್ತ ಕಾರಣ ಇಲ್ಲದ್ದಿದರೂ ಸದಾ ನೂರಾರು ಜನ ನೆರೆದಿರಬೇಕು ಎಂದು ಭಾವಿಸುತ್ತಾರೆ. ರಾಜಕಾರಣಿಗಳು ತಮ್ಮ ದೊಡ್ಡಸ್ತಿಕೆಯ ಪ್ರದರ್ಶನಕ್ಕೆ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲು ಹೆಣಗಾಡುತ್ತಾರೆ. ಎಲ್ಲ ಸಾಮಾನ್ಯ ಸಂಗತಿ, ಗ್ರಹಿಕೆಗಳಿಗೂ `ಅಪವಾದ' ಇದ್ದೇ ಇರುತ್ತವೆ ಎಂಬುದು ಕೂಡ ಸುಳ್ಳೇನಲ್ಲ. `ಕಾಯಿನ್ ಬಾಕ್ಸ್ನಿಂದ ಫೋನ್ ಮಾಡಿ ನಿಮ್ಮ ಸಮಸ್ಯೆ, ಆಗಬೇಕಾದ ಕೆಲಸ ಹೇಳಿ. ಸಾಧ್ಯವಾದರೆ ಮಾಡಿಸಿಕೊಡುತ್ತೇನೆ' ಎಂದು ಜನರಿಗೆ ಹೇಳುವ ಹಾಗೆಯೇ ಜನರಿಂದ ಬರುವ ಕಾಲ್ಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಶ್ರದ್ಧೆಯಿಂದ ಗುರುತು ಹಾಕಿಕೊಂಡು, ಅವುಗಳನ್ನು ಬಗೆ ಹರಿಸಲು ಪ್ರಯತ್ನಿಸುವ ಶಾಸಕರಿದ್ದಾರೆೆ. ಗುಲ್ಬರ್ಗ ಜಿಲ್ಲೆಯ ಸೇಡಂ ವಿಧಾನಸಭಾ ಮತಕ್ಷೇತ್ರವನ್ನು ಸತತ ಎರಡನೇ ಬಾರಿಗೆ ಪ್ರತಿನಿಧಿಸುತ್ತಿರುವ ಶಾಸಕ ಡಾ. ಶರಣಪ್ರಕಾಶ ಪಾಟೀಲ್ ಅವರು ಜನಪರವಾಗಿ, ಸರಳವಾಗಿ, ನೇರವಾಗಿ ಯೋಚಿಸುವವರು. ಹಾಗೆಯೇ ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡವರು. ಕ

ಮಾಧ್ಯಮಗಳು ಮತ್ತು ಸಾಮಾಜಿಕ ಕಾಳಜಿ

* ಬದಲಾದ ಈ ದಿನಗಳಲ್ಲ್ಲಿ ವೇಗ, ಓಟ ಎಷ್ಟು ಹೆಚ್ಚಾಗಿದೆ ಎಂದರೆ ಮಾಡಿದ ವರದಿಯ ಬಗ್ಗೆ ಮತ್ತೊಮ್ಮೆ ವಿಚಾರಿಸಿ ಪರಿಶೀಲನೆ ನಡೆಸುವಷ್ಟೂ ವ್ಯವಧಾನ ಇಲ್ಲದಂತಾಗಿದೆ. ಕೈಯಲ್ಲಿ ಇರುವುದನ್ನು ಮುಗಿಸುತ್ತಿದ್ದಂತೆಯೇ ಮತ್ತೊಂದನ್ನು ತೆಗೆದುಕೊಂಡು ಮಾಡಿ ಮುಗಿಸುವ ಅವಸರ ಮತ್ತು ಒತ್ತಡಗಳ ಮಧ್ಯೆ ಯೋಚನೆ ಮಾಡುವುದಕ್ಕೆ ಪುರುಸೊತ್ತಿಲ್ಲ. ಬಹಳಷ್ಟು ಜನ ಮೆಚ್ಚಿಕೊಂಡರೆ ಮಾಡಿದ ಕೆಲಸ ’ಯಶಸ್ವಿ’ ಎಂದೂ ಬಹಳಷ್ಟು ಜನ ಬೈದರೆ ’ವೈಫಲ್ಯ’ ಎಂದೂ ಪರಿಗಣಿಸಬಹುದಾದ ದಯನೀಯ ಸ್ಥಿತಿಯಿದೆ. ಅಂದರೆ ಇಡೀ ಬದುಕು ಸೋಲು- ಗೆಲವು, ಯಶಸ್ಸು -ಅಪಯಶಸ್ಸುಗಳ ದ್ವಿಭಾಗೀಯ ವರ್ಗೀಕರಣಕ್ಕೆ ಸೀಮಿತವಾಗಿದೆ. ಇವುಗಳ ಮಧ್ಯೆ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಯೋಚಿಸುವುದಕ್ಕೆ ಅವಕಾಶವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. * ವಿಷಯ, ವಿವಾದ, ಚರ್ಚೆ, ಸಂಗತಿಗಳ ’ಕೇಂದ್ರ’ಗಳಿಂದ ದೂರ ಸಾಗುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ವ್ಯಾಪಕವಾಗಿದೆ. ವಿಭಿನ್ನವಾಗಿ ಮತ್ತು ಅದನ್ನು ಎಲ್ಲರಿಗಿಂತ ಮೊದಲು ಹಾಗೂ ಬೇಗ ಕೊಡಬೇಕು ಎನ್ನುವ ಕಾರಣಕ್ಕಾಗಿ ಸಮಸ್ಯೆಯ ಕೇಂದ್ರದ ಸುತ್ತ ಗಿರಕಿ ಹೊಡೆದು ಅದರ ಬಗ್ಗೆ ಮಾಹಿತಿ, ಅರಿವು ಮೂಡಿಸುವ ಬದಲು ಪರಿಧಿಯ ಯಾವುದೋ ಬಿಂದುವನ್ನು ಕೇಂದ್ರ ಅಂತ ಭಾವಿಸಿ ಅದರ ಸುತ್ತ ಚರ್ಚೆ ಬೆಳೆಸಲಾಗುತ್ತದೆ. ಇದರಿಂದಾಗಿ ಯಾವುದೋ ಅಮುಖ್ಯ ಸಂಗತಿಗೆ ಪ್ರಾಮುಖ್ಯತೆ ಬಂದರೆ ಮುಖ್ಯ ಸಂಗತಿ ಹಿನ್ನೆಲೆಗೆ ಸರಿದು ಬಿಡುತ್ತದೆ. ಇದು ಎರಡೂ ಕಡೆಯಿಂದ ನೋಡಿದರ

ನೂತನ ಜಿಲ್ಲೆಯ ನೂರೆಂಟು ಸಮಸ್ಯೆಗಳು:

ಇಮೇಜ್
ನೂತನ ಜಿಲ್ಲೆಯ ನೂರೆಂಟು ಸಮಸ್ಯೆಗಳು: ಗೋಳು ಕೇಳೋರ್‍ಯಾರು? ರಾಜ್ಯದ ನೂತನ ಜಿಲ್ಲೆ ಯಾದಗಿರಿ ಹಿಂದಿನ ಬಿಜೆಪಿ ಸರಕಾರದ ಕೊಡುಗೆ. ಐದು ವರುಷದ ಅವಯಲ್ಲಿ ಬಿಜೆಪಿ ಸರಕಾರ ಘೋಷಿಸಿದ ಏಕೈಕ ಜಿಲ್ಲೆ ಇದು. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಗುಲ್ಬರ್ಗ ಜಿಲ್ಲೆಯ ವಿಭಜನೆಯನ್ನು ಯಾದಗಿರಿ ನೂತನ ಜಿಲ್ಲಾ ಕೇಂದ್ರವಾಗಿ ಪ್ರಕಟಿಸುವ ಮೂಲಕ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗು ಮಾಡಿದ್ದರು. ಭೌಗೋಳಿಕವಾಗಿ ಎರಡನೇ ದೊಡ್ಡ ಜಿಲ್ಲೆಯಾಗಿದ್ದ ಗುಲ್ಬರ್ಗ ವಿಭಜಿಸುವುದು ಅನಿವಾರ್ಯವೂ ಅಗತ್ಯವೂ ಆಗಿತ್ತು. ಅದನ್ನು ಜಿಲ್ಲಾ ಪುನರ್‌ವಿಂಗಡಣೆಯ ಕುರಿತು ಅಧ್ಯಯನ ನಡೆಸಿದ ಸಮಿತಿಗಳು ಖಚಿತ ಪಡಿಸಿದ್ದವು. ಜಿಲ್ಲಾ ಕೇಂದ್ರ ಯಾವುದು ಆಗಬೇಕು? ಎಂಬ ಬಗ್ಗೆ ಭಿನ್ನ ಅಭಿಪ್ರಾಯ ಕೇಳಿ ಬಂದದ್ದರಿಂದ ನೂತನ ಜಿಲ್ಲೆಯ ಘೋಷಣೆ ಮರೀಚಿಕೆ ಆಗಿತ್ತು. ಗದಗ - ಹಾವೇರಿ, ದಾವಣಗೆರೆ, ಬಾಗಲಕೋಟ ಜಿಲ್ಲೆಗಳ ರಚನೆ ಮಾಡಿದ ಜೆಎಚ್ ಪಟೇಲ್ ನೇತೃತ್ವದ ಸರಕಾರ ತೀವ್ರ ಒತ್ತಡ ಎದುರಾದ ಹಿನ್ನೆಲೆಯಲ್ಲಿ ಗುಲ್ಬರ್ಗ ವಿಭಜನೆಯನ್ನು ಕೈ ಬಿಟ್ಟಿತ್ತು. ಜಿಲ್ಲಾ ಕೇಂದ್ರ ಯಾದಗಿರಿ ಆಗಬೇಕೋ? ಅಥವಾ ಕೇಂದ್ರದಲ್ಲಿ ಇರುವ ಶಹಾಪುರ ಅಥವಾ ಐತಿಹಾಸಿಕ ಕಾರಣಗಳಿಂದ ಮಹತ್ವದಾಗಿದ್ದ ಸುರಪುರವೋ? ಎಂಬ ಅಂಶ ಜಿಜಸೆಗೆ ಕಾರಣವಾಗಿತ್ತು. ಉದ್ದೇಶಿತ ನೂತನ ತಾಲೂಕು ಕೇಂದ್ರಗಳಿಂದ ಸಮಾನ ದೂರದಲ್ಲಿ ಇರುವ ನಗರ ಜಿಲ್ಲಾ ಕೇಂದ್ರ ಆಗಬೇಕು ಎಂಬ ವಾದವೂ ಇತ್ತು. ಆದರೆ, ಸ್ಥಳೀಯ- ಪ್ರಮುಖ ರಾಜಕೀಯ ನಾ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಶ್ರೀದೇವಿ ಪುರಾಣದ ಕರ್ತೃ ಚಿದಾನಂದ ಅವಧೂತರ ಉಪಾಸನಾ ದೈವ ’ಅಂಬಾ’ಮಾತೆಯ ವಿಗ್ರಹಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಗಡ್ಡದ ಅವರ ಮನೆಯಲ್ಲಿ ನಿತ್ಯಪೂಜೆ ನಡೆಯುತ್ತಿದೆ. ನವರಾತ್ರಿಯ ಈ ದಿನಗಳಲ್ಲಿ ಅಲ್ಲಿ ವಿಶೇಷ ಪೂಜೆ- ಅರ್ಚನೆಗಳು ಶ್ರದ್ಧೆ- ಭಕ್ತಿಯಿಂದ ನಡೆಯುತ್ತಿವೆ. ಸುರಪುರ ಪಟ್ಟಣದ ಮುಜಂದಾರ ಗಲ್ಲಿಯ ಪಾಂಡುರಂಗ ದೇವಸ್ಥಾನದ ಹಿಂಬದಿಯಲ್ಲಿ ಇರುವ ವೆಂಕಣ್ಣಭಟ್ ಗಡ್ಡದ ಅವರ ಮನೆಯಲ್ಲಿ ಚಿದಾನಂದ ಅವಧೂತರು ಪೂಜಿಸುತ್ತಿದ್ದ ಉಪಾಸನಾ ಮೂರ್ತಿ ಇದೆ. ನಿತ್ಯಪೂಜೆ ಸಲ್ಲುವ ಶ್ರೀಚಕ್ರ ಸಮೇತ ಇರುವ ದೇವಿಯ ಪ್ರತಿಮೆಯು ಸುಮಾರು ೧೨ ಇಂಚು ಎತ್ತರದ್ದಾಗಿದೆ. ಪಾಶ ಅಂಕುಶ, ಬಿಲ್ಲುಬಾಣಗಳನ್ನು ಕೈಯಲ್ಲಿ ಹಿಡಿದಿರುವ ಚತುರ್ಭುಜೆ ದೇವಿಯ ಪ್ರತಿಮೆಗೆ ಕೇವಲ ಧಾರ್ಮಿಕ ಕಾರಣಗಳಿಗಾಗಿ ಮುಖ್ಯ ಅಲ್ಲ. ಇದೊಂದು ಐತಿಹಾಸಿಕ, ಸಾಂಸ್ಕೃತಿಕ ಮಹತ್ವ ಇರುವಂತಹದ್ದು. ಆಸ್ಥೆ ಮತ್ತು ಶ್ರದ್ಧೆಯ ಕಾರಣಗಳಿಂದ ಮೂರ್ತಿಯನ್ನು ಸಮೀಪದಿಂದ ನೋಡಲು ಸಾಧ್ಯವಿಲ್ಲದಿದ್ದರೂ ಪೂಜಾಲಂಕೃತ ವಿಗ್ರಹವನ್ನು ನೋಡುವುದೇ ಒಂದು ಸೊಬಗು. ಚಿದಾನಂದ ಅವಧೂತರೇ ಸ್ವತಃ ಪೂಜಿಸುತ್ತಿದ್ದ ಈ ವಿಗ್ರಹ ಅವರ ಕಾಲಾನಂತರ ಗಡ್ಡದ ಮನೆ ಸೇರಿಕೊಂಡಿತು. ಸದ್ಯ ಸುರಪುರ ನಿವಾಸಿಗಳಾಗಿರುವ ಕನಕಗಿರಿ ಮೂಲದ ಗಡ್ಡದ ಮನೆತನದ ಹಿರಿಯರಿಗೆ ಈ ಪ್ರತಿಮೆಯನ್ನು ಸ್ವತಃ ಅವಧೂತರೇ ತಮ್ಮ ಕೊನೆಯ ದಿನಗಳಲ್ಲಿ ನಿತ್ಯಪೂಜೆ ನಡೆಸುವಂತೆ ಸೂಚಿಸಿ ಹಸ್ತಾಂತರ ಮಾಡಿದರು ಎಂಬ ಐತಿಹ್ಯ ಇದೆ. ವೆಂಕಣ್ಣಭಟ್ಟರು ಈ ಐ

‘ಬಹಿಷ್ಕೃತ ಭಾರತ’ದ ಮೂಕನಾಯಕ

ಇಮೇಜ್
ಅಂಬೇಡ್ಕರ್ ಎಂದಾಕ್ಷಣ ತಕ್ಷಣ ನೆನಪಿಗೆ ಬರುವುದು ಭಾರತದ ಸಂವಿಧಾನದ ಕರಡು ಸಿದ್ಧಪಡಿಸಿದವರು ಮತ್ತು ಶೋಷಿತ ದಲಿತರಿಗೆ ಬಿಡುಗಡೆಯ ಬೆಳಕು ತೋರಿಸಿದ ಮಹಾನ್ ಚೇತನ. ಹೌದು ಈ ಎರಡೂ ಅಂಶಗಳು ನಿಜ. ಅವು ತುಂಬಾ ಮಹತ್ವದ ಸಂಗತಿಗಳು ಎಂಬುದರಲ್ಲಿ ಎರಡು ಮಾತೇನಲ್ಲ. ಆದರೆ, ಅಂಬೇಡ್ಕರ್ ಅವರ ಪ್ರತಿಭೆ ಹಾಗೂ ಚಿಂತನೆಯ ಹೊಳಹುಗಳು ಕೇವಲ ಅವೆರಡಕ್ಕೇ ಸೀಮಿತವೇ? ಎಂಬ ಪ್ರಶ್ನೆ ಕೇಳಿಕೊಂಡರೆ ಉತ್ತರ ಸಿಗುವುದು ಕಷ್ಟವೇನಲ್ಲ. ಅಂಬೇಡ್ಕರ್ ಒಬ್ಬ ಪ್ರಖರ ವಿಚಾರವಾದಿ, ಚಿಂತಕ. ಹಾಗೆಯೇ ಅವರೊಬ್ಬ ರಾಷ್ಟ್ರೀಯವಾದಿ. ಆರ್ಥಿಕ- ಸಾಮಾಜಿಕ- ಧಾರ್ಮಿಕ ವಿಚಾರಗಳ ಚಿಂತನೆಯ ವಿಷಯಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಅವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಮತ್ತೊಂದು ವ್ಯಕ್ತಿತ್ವ ದೊರೆಯುವುದು ಕಷ್ಟ. ಅಥವಾ ಬಹುತೇಕ ಅಸಾಧ್ಯ. ಆಧುನಿಕ ಭಾರತದ ಅದ್ಭುತ ವ್ಯಕ್ತಿ-ವ್ಯಕ್ತಿತ್ವ ಅಂಬೇಡ್ಕರ್. ಅವರದು ಅಸಾಧಾರಣ  ಸಾಧನೆ. ಅರಿವಿನ ಕ್ಷಿತಿಜದ ಮೇರೆಯನ್ನು ವಿಸ್ತರಿಸುತ್ತಲೇ ಹೋಗುವ ಅಂಬೇಡ್ಕರ್ ಅವರು ಅಮೆರಿಕಾದ ಕೋಲಂಬಿಯಾ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ ಪಡೆದಿದ್ದರು.  ಕೋಲಂಬಿಯಾ ವಿಶ್ವವಿದ್ಯಾಲಯ ಆರಂಭವಾಗಿ ಸರಿ ಸುಮಾರು 300 ವರ್ಷಗಳಾಗಿವೆ. ಈ ಮೂರು ಶತಮಾನಗಳ ಕಾಲಘಟ್ಟದಲ್ಲಿ ಕೋಲಂಬಿಯಾದಿಂದ ಪದವಿ ಪಡೆದ ಮತ್ತು ಜಾಗತಿಕ ನಕಾಶೆಯಲ್ಲಿ ತಮ್ಮ ಸಾಧನೆಯ ಮೂಲಕ ತಮ್ಮದೇ ಛಾಪು ಮೂಡಿಸಿದ ಹಲವು ಗಣ್ಯರು ನೋಡಸಿಗುತ್ತಾರೆ. ಅವರೆಲ್ಲರಿಗಿಂತ ಒಂದು ಹೆಜ್ಜೆ ಹೆಚ್ಚು ಮುಂಚೂ

ಹಾವು ಹೊಡೆದು ಹದ್ದಿಗೆ ಹಾಕಿದ ‘ಕೃಷ್ಣ’

ಇಮೇಜ್
ಮರೆವು ಹಾಗೂ ದಿವ್ಯ ಮೌನದಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೊರ ಬಂದಿದ್ದಾರೆ. ಅವರಿಗೀಗ ಅವಮಾನ ಆಗಿದೆಯಂತೆ. ಇರಬಹುದು. ಅವರವರ ನೋಟಕ್ಕೆ ಹಾಗೂ ಮೂಗಿನ ನೇರಕ್ಕೆ ತಾವು ಸರಿ ಅಂದುಕೊಂಡದ್ದು ಮಾತ್ರ ಕಾಣಿಸುತ್ತದೆ. ಅದರಲ್ಲೇನು ವಿಶೇಷವಿಲ್ಲ. ಕಾಂಗ್ರೆಸ್ ವಿರೋಧಿ ರಾಜಕಾರಣದಿಂದ ರಾಜಕೀಯ ಪ್ರವೇಶಿಸಿರುವುದಾಗಿ ನೆನಪಿಸಿಕೊಂಡಿರುವ ಕೃಷ್ಣ ಅವರು ಅದಕ್ಕಾಗಿ ತಾವು ಪ್ರಜಾ ಸೋಷಲಿಸ್ಟ್ ಪಾರ್ಟಿಯಿಂದ ಮೊದಲ ಬಾರಿಗೆ ಆಯ್ಕೆಯಾದ ಕ್ಷಣವನ್ನು ಮೆಲುಕು ಹಾಕಿದ್ದಾರೆ. ಅಲ್ಲಿಂದ ಕಾಂಗ್ರೆಸ್ ಸೇರಿದ ನಂತರದ ಎಲ್ಲ ಬದಲಾವಣೆ, ಬೆಳವಣಿಗೆಗಳನ್ನು ಕೃಷ್ಣ ಮರೆತು ಬಿಟ್ಟಿದ್ದಾರೆ. ಇದೊಂದು ರೀತಿಯ ಜಾಣ ಮರೆವು. ವಯಸ್ಸಿನ ಕಾರಣಕ್ಕಾಗಿ ಅವರನ್ನು ಕಾಡುತ್ತಿದ್ದ ಮರೆವಿನ ರೋಗ ಇದೀಗ ಇದ್ದಕ್ಕಿದ್ದಂತೆ ಇಲ್ಲವಾಗಿರುವುದು ಸೋಜಿಗದ ಸಂಗತಿ. ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದ ಕೃಷ್ಣ ಅವರು ವಿಶ್ವಸಂಸ್ಥೆಯಲ್ಲಿ ತಮ್ಮದಲ್ಲದ ಭಾಷಣ ಓದಿ ನಗೆಪಾಟಲಿಗೆ ಈಡಾಗಿದ್ದರು. ಹಾಗೂ ಇಡೀ ದೇಶ ತಲೆತಗ್ಗುವಂತೆ ಮಾಡಿದ್ದರು. ಅಷ್ಟೆಲ್ಲ ಅವಾಂತರಕ್ಕೂ ಮುನ್ನ ಕಾಂಗ್ರೆಸ್ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ಮಾಡಿತ್ತು. ಅಷ್ಟಕ್ಕೇ ಸುಮ್ಮನಿರದ ಕಾಂಗ್ರೆಸ್ ರಾಜಭವನದಲ್ಲಿ ರಾಜಕೀಯ ನಿವೃತ್ತ ಜೀವನ ನಡೆಸುತ್ತಿದ್ದ ಕೃಷ್ಣರನ್ನು 2009ರ ವಿಧಾನಸಭೆಯ ಮುನ್ನಾದಿನಗಳಲ್ಲಿ ರಾಜೀನಾಮೆ ಕೊಡಿಸಿ ರಾಜ್ಯ ರಾಜಕಾರಣಕ್ಕೆ ಮರಳಿ ಬರುವಂತ

ಮಲ್ಲಿಕಾರ್ಜುನ ಬಾಗೋಡಿ

ಸಂಶೋದಕನ ಅರಿಯ ಬಯಸುವ ಹಂಬಲ ಮತ್ತು ಕುತೂಹಲ, ಕಲಾವಿದನ ಸೃಜನಶೀಲ ಮನಸ್ಸು,  ಲೇಖಕನ ಮನವರಿಕೆ ಮಾಡಿಸುವ ಕಾಳಜಿ, ಅಧ್ಯಾಪಕನ ಕಲಿಸುವ ಕಳಕಳಿ ಹೊಂದಿರುವ ಮಲ್ಲಿಕಾರ್ಜುನ ಬಾಗೋಡಿ ಅವರು ಕೇವಲ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಾತ್ರವಲ್ಲದೆ ಕನ್ನಡದ ಪ್ರಮುಖ ಕಲಾ ಲೇಖಕರಲ್ಲಿ ಒಬ್ಬರು. ದೃಶ್ಯ ಮಾಧ್ಯಮಕ್ಕೆ ಸಂಬಂಧಿಸಿದ ವಿಷಯ, ಮಾಹಿತಿ, ಸಂಗತಿಗಳನ್ನು ಮನಮುಟ್ಟುವಂತೆ ಅಕ್ಕರದಲ್ಲಿ ದಾಖಲಿಸಬಲ್ಲರು. ಕಲಬುರಗಿಯ ಅನನ್ಯ ಹಾಗೂ ಅಜ್ಞಾತ ಕಲಾವಿದ ನಾಗಭೂಷಣ ಅವರನ್ನು ಕುರಿತ ಈ ಪುಟ್ಟ ಹೊತ್ತಿಗೆಯು ಬಾಗೋಡಿಯವರ ಆಸಕ್ತಿ ಹಾಗೂ ಪ್ರೀತಿಗೆ ಕನ್ನಡಿ ಹಿಡಿದಂತಿದೆ. ಭಾವನಾತ್ಮಕ ಹಾಗೂ ಸೃಜನಾತ್ಮಕ ಮನಸ್ಸಿನ ನಾಗಭೂಷಣ ಅವರು ಮುಂಬಯಿ ನ ಪ್ರತಿಷ್ಠಿತ ಜೆ.ಜೆ. ಕಲಾಶಾಲೆಯ ವಿದ್ಯಾರ್ಥಿ ಆಗಿದ್ದವರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅದರ ಕಥೆಯೇ ಬೇರೆ ಆಗಿರುತ್ತಿತ್ತು. ದುರದೃಷ್ಟವಶಾತ್ ಹಾಗೆ ಆಗಲಿಲ್ಲ. ಆದರೆ, ಅದು ಮತ್ತೊಂದು ವಿಭಿನ್ನ ಕಲಾಸೃಷ್ಟಿಗೆ ಅನುವು ಮಾಡಿಕೊಟ್ಟಿತು. ಕ್ರಿಶ್ಚಿಯಮನ್ ಸ್ನೇಹಿತರ ಒಡನಾಟದಿಂದ ಪ್ರಭಾವಿತರಾಗಿದ್ದ ನಾಗಭೂಷಣ ಕಲಾಕೃತಿಗಳು ಕರ್ನಾಟಕದ ದೃಶ್ಯ ಮಾಧ್ಯಮ ಲೋಕಕ್ಕೆ ನೀಡಿದ ವಿಭಿನ್ನ ಮತ್ತು ಅಪರೂಪದ ಕೊಡುಗೆ. ವಸ್ತುವಿನ ಆಯ್ಕೆಯೂ ಸೇರಿದಂತೆ ಅದನ್ನು ಮಂಡಿಸುವ ಕ್ರಮದಲ್ಲಿಯೂ ನಾಗಭೂಷಣ ಭಿನ್ನರಾಗಿ ನಿಲ್ಲುತ್ತಾರೆ. ಬಹುತ್ವ ಪ್ರಪ್ರಿಯರೂ ಮತ್ತು ಅದರ ಪ್ರತಿಪಾದಕರೂ ಆಗಿದ್ದ ನಾಗಭೂಷಣ ಅವರು ಕಲಾಲೋಕವು ಮರೆತಿರುವ ಹಾಗೂ ಮರೆ

ಸಂಶೋಧನೆ ಮತ್ತು ನಾನು

ನಾನು ವೃತ್ತಿಪರ (ಪ್ರೊಫೇಷನಲ್) ಸಂಶೋಧಕನಲ್ಲ. ಹವ್ಯಾಸಿ (ಅಮೆಚ್ಯೂರ್) ಮಾತ್ರ. ಇದೇನಿದು ಮೊದಲಿಗೇ ಕೇವಿಯಟ್ ಎಂದು ಭಾವಿಸಬೇಕಿಲ್ಲ. ವೃತ್ತಿಪರರಿಗೆ ಇರುವ ಗಾಢವಾದ ಹಿನ್ನೆಲೆ- ತಿಳುವಳಿಕೆ- ಶಾಸ್ತ್ರೀಯ ಜ್ಞಾನಗಳು ಅವರನ್ನು ಹೆಚ್ಚು ಆಳಕ್ಕೆ ಇಳಿಯುವಂತೆ ಮಾಡಬಲ್ಲವು. ಹಾಗೆಯೇ ಅವು ಅಬೇಧ್ಯವಾದ, ದಟ್ಟವಾದ ಅರಣ್ಯದೊಳಕ್ಕೆ ಹೋಗದಂತೆ ತಡೆಯಬಲ್ಲವು ಕೂಡ. ಚೌಕಟ್ಟಿನೊಳಗಡೆಯೇ ಕೆಲಸ ಮಾಡಬೇಕಾದ ಅನಿವಾರ್ಯ ಅಗತ್ಯವೂ ಇರುತ್ತದೆ. ಅಮೆಚ್ಯೂರ್ ಗಳ ಸಂಗತಿ ಹಾಗಲ್ಲ. ಅವರು ಎಲ್ಲಿ ಬೇಕೆಂದಲ್ಲಿಗೆ ನುಗ್ಗಿ ಬಿಡಬಲ್ಲರು. ಪೂರ್ವಾನುಭವ ಇಲ್ಲದಿದ್ದರೂ ಅಲ್ಲಲ್ಲಿಯೇ ದೊರೆಯುವ ಅನುಭವ ಮತ್ತು ಅದರ ಅರಿವು ಆಧರಿಸಿ ದಟ್ಟಾರಣ್ಯದಲ್ಲಿ, ಮೇಡುಗಳಲ್ಲಿ ಅಲೆಯುವುದಕ್ಕೆ ಹಿಂದೇಟು ಹಾಕುವುದಿಲ್ಲ. ಪೂರ್ವಾನ್ವಯದ ತಿಳುವಳಿಕೆ ಇಲ್ಲದೇ ಇರುವುದರಿಂದ ದೊರೆತ ವಸ್ತು ಅಮೂಲ್ಯ ಹೌದೋ ಅಲ್ಲವೋ ಎಂಬ ಅರಿವು ತಕ್ಷಣಕ್ಕೆ ಆಗುವುದಿಲ್ಲ. ಅದಕ್ಕಾಗಿ ವೃತ್ತಿಪರರಿಗಿಂತ ಹೆಚ್ಚು ಕಷ್ಟ ಪಡಬೇಕಾಗುತ್ತದೆ. ಹಾಗೆ ಪಡುವ ಕಷ್ಟ ಸರಿಯಾದ ದಾರಿಯಲ್ಲಿ ಇದ್ದರೆ ಫಲ ಸಿಕ್ಕುವುದು ಗ್ಯಾರಂಟಿ. ಇಲ್ಲದೇ ಹೋದರೆ ಸುತ್ತಾಡಿ ಪಟ್ಟ ಶ್ರಮವೆಲ್ಲ ವ್ಯರ್ಥ. ದೊರೆತ ಅನುಭವವೊಂದೇ ಲಾಭ. ಹೀಗಾಗಿ ಅಮೆಚ್ಯೂರ್ ಗಳಿಗೆ ಭಯ- ನಿರ್ಭಯಗಳೆರಡೂ ಜೊತೆ ಜೊತೆಯಲ್ಲಿಯೇ ಇರುತ್ತವೆ. ಹಾಗೆ ನೋಡಿದರೆ ಅದು ಕೇವಲ ಅಮೆಚ್ಯೂರ್ ಗಳಿಗೆ ಮಾತ್ರ ಸೀಮಿತವೇನಲ್ಲ. ವೃತ್ತಿಪರರು ಮುತ್ತುಗಳಿರುವ ಕಡಲನ್ನೇ ಪತ್ತೆಹಚ್ಚಿ ಅಲ್ಲ

ಮನುಕುಲದ ಕಾಜಾಣ

ಇಮೇಜ್
ನೋಡಲು ಗುಬ್ಬಿಗಿಂತ ದೊಡ್ಡದಾಗಿರುವ ಹಾಗೂ ಗಿಳಿಗಿಂತ ಸಣ್ಣ ಗಾತ್ರದ ಕಪ್ಪುಹಕ್ಕಿ ಡ್ರೊಂಗೊ. ಕಾಜಾಣ ಎಂದು ಕನ್ನಡದಲ್ಲಿ ಕರೆಯಲಾಗುವ ಈ ಹಾಡುಹಕ್ಕಿಗೆ ಸಿಂಹಹೃದಯ. ಅದರ ಇರುವಿಕೆ ಸಣ್ಣಹಕ್ಕಿಗಳ ಕಲರವದಿಂದ ಅರಿವಿಗೆ ಬರುತ್ತದೆ. ಅದಕ್ಕಿಂತ ಹೆಚ್ಚಾಗಿ ಡ್ರೊಂಗೋದ ವಿಶೇಷತೆ ಎಂದರೆ ಅದರ ಯಾರಿಗೂ ಹೆದರದ ಗುಣ. ಸಣ್ಣಹಕ್ಕಿಗಳ ಮೇಲೆ ದಾಳಿ ನಡೆಸಿ ಭೀತಿ ಉಂಟು ಮಾಡುವ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುವ ಹದ್ದು ಮತ್ತು ಗಿಡುಗನಂತಹ ಬೇಟೆಗಾರ ಹಕ್ಕಿಗೂ ಸವಾಲು ಹಾಕುವ ಸಾಮರ್ಥ್ಯ ಮತ್ತು ಎದೆಗಾರಿಕೆ ಡ್ರೊಂಗೋಕ್ಕೆ ಇದೆ. ನೂರಾರು ಅಡಿ ಮೇಲಿನಿಂದ ನೆಲದ ನಡೆಯುವ ಚಟುವಟಿಕೆಯನ್ನು ನೋಡುವ ಕಣ್ಣಿನ ವಿಶೇಷ ಸಾಮರ್ಥ್ಯ ಹೊಂದಿರುವ ಮತ್ತು ಅದಕ್ಕೆ ಪ್ರತಿಕ್ರಿಯಿಸುವ, ದಾಳಿ ನಡೆಸುವ ಗಿಡುಗನ ಶಕ್ತಿ ಮತ್ತು ಸಾಮರ್ಥ್ಯ ವಿವರಿಸುವ ಅಗತ್ಯವಿಲ್ಲ. ಅಂತಹ ಅಸಾಧ್ಯ ಬಲ-ಪ್ರಾಬಲ್ಯದ ಗಿಡುಗನ ನೆತ್ತಿಯ ಮೇಲೆ ಕುಳಿತು ಆಡುವ- ಆಡಿಸುವ- ಕಾಡಿಸುವ ಎದೆಗಾರಿಕೆ ಛಾತಿ ಕಾಜಾಣಕ್ಕಿದೆ. ಗಿಡುಗ ಮತ್ತು ಕಾಜಾಣದ ಮುಖಾಮುಖಿ ಹಾಗೂ ದೊಡ್ಡಣ್ಣನ ಮೇಲೆಯೇ ಸವಾರಿ ಮಾಡುವ ನಿರ್ಭೀತ ಮನೋಭಾವದ ಕಾಜಾಣವು ಹಕ್ಕಿಲೋಕದ ಕೌತುಕ. ಮಾನವ ಬದುಕಿನಲ್ಲಿಯೂ ದೊಡ್ಡಣ್ಣರನ್ನು ಗೋಳು ಹೋಯ್ದುಕೊಳ್ಳುವ ಸಣ್ಣವರ (?) ಸಂಖ್ಯೆಯೂ ಕಡಿಮೆಯೇನಿಲ್ಲ. ಹಾಗೆಯೇ  ‘ದೊಡ್ಡಣ್ಣ’ ಗಿಡುಗನನ್ನೂ ಭೀತಿಯ, ಆತಂಕದ ಛಾಯೆ ಹರಡುವಂತೆ ಮಾಡಿ ಅದನ್ನು ಹಲವು ದಶಕಗಳ ಕಾಲ ಜೀವಂತವಾಗಿರಿಸಿದ್ದ ಪುಟ್ಟ ಹಕ್ಕಿ ಕ್ಯೂಬಾ. ಎ

ಹಿರಿದಾದ ಕೆಲಸ ಮಾಡಿದ ಮರಿ

ಇಮೇಜ್
ಕಲಾ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಮರಿಶಾಮಾಚಾರ್ ಮರಿಶಾಮಚಾರ್ ಅವರಿಗೂ ನನಗೂ ಸುಮರು ಎಂಟ್ಹತ್ತು ವರ್ಷದ ಒಡನಾಟ. ಅವರಿಗೀಗ ಅರವತ್ತು ವರ್ಷ. ಹಾಗೆಯೇ ನನಗೀಗ ೩೮. ಸುಮರು ೨೨ ವರ್ಷಗಳಷ್ಟು ವಯಸ್ಸಿನ ಅಂತರ ಇದ್ದರೂ ಅವರು ಎಂದೂ ನನ್ನನ್ನು ‘ಹುಡುಗ’ ಎಂಬಂತೆ ನೋಡಿದ್ದಿಲ್ಲ. ವಯಸ್ಸಿನ ಅಂತರದ ನಡುವೆಯೂ ಅವರು ಗೆಳೆಯನ ಹಾಗೆಯೇ ನೋಡುತ್ತ ಬಂದಿದ್ದಾರೆ. ಅದು ಅವರ ದೊಡ್ಡ ಗುಣ. ಸೌಜನ್ಯ, ಸಜ್ಜನಿಕೆ, ಒಳ್ಳೆಯತನದ ಸಾಕಾರ ರೂಪದಂತಿರುವ ಮರಿಶಾಮಚಾರ್ ಅವರು ನನಗೆ ಮೊದಲು ಪರಿಚಯವಾದದ್ದು ಸಂಸ್ಕೃತಿ ಇಲಾಖೆಯ ಅಧಿಕಾರಿಯಗಿ. ಅದರಲ್ಲೂ ವಿಶೇಷವಾಗಿ ಅವರು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಆಗಿದ್ದಾಗ. ಬಾಲ್ಯದ, ಹರಯದ ದಿನಗಳಿಂದಲೂ ಸಾಹಿತ್ಯ, ಸಂಸ್ಕೃತಿ, ಕಲೆ, ಶಿಲ್ಪದ ಬಗ್ಗೆ ಆಸಕ್ತಿ ಇಟ್ಟುಕೊಂಡ ನಾನು ಧಾರವಾಡದಲ್ಲಿ ಇಂಗ್ಲಿಷ್ ಎಂ.ಎ. ಮುಗಿಸಿ, ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ.ಗೆ ರಿಜಿಸ್ಟ್ರೇಷನ್ ಮಡಿಸಿ ಪೂರ್ಣ ಮಡದೇ ಬಿಟ್ಟು ‘ನೆಲೆ’ ಅರಸಿ ಬೆಂಗಳೂರು ಮಹಾನಗರಕ್ಕೆ ಬಂದಿದ್ದೆ. ಕೆಲವೇ ದಿನಗಳಷ್ಟಾದರೂ ಅರೆಕಾಲಿಕ ಉಪನ್ಯಾಸಕನಾಗಿ ಕೆಲಸ ಮಡಿ ಹೈರಾಣಾಗಿದ್ದ ನನಗೆ ‘ಪ್ರಜಾವಾಣಿ’ಯಲ್ಲಿ ಸಿಕ್ಕ ಕೆಲಸ ನೆಮ್ಮದಿಗೆ ಕಾರಣವಾಗಿತ್ತು. ಆದರೆ, ಆಗಾಗ ಕವಿತೆ, ಕತೆ ಬರೆದು ಕೊಂಡಿದ್ದ ನನಗೆ ಪತ್ರಿಕೋದ್ಯಮದ ಎಬಿಸಿಡಿ ಕೂಡ ಗೊತ್ತಿರಲಿಲ್ಲ. ಅದೇ ಮೊದಲ ಬಾರಿಗೆ ಕಂಪ್ಯೂಟರ್ ಮುಟ್ಟಿ ಥ್ರಿಲ್ ಅನುಭವಿಸಿದ

ನೀಲಾಕಾಶದಲ್ಲಿ ತೇಲಿ ಬಿಟ್ಟ ಟರ್ಕಿ ಕಿರೀಟ

ಇಮೇಜ್
ಅಷ್ಟಕೋನ ಆಕೃತಿಯ ಅಪರೂಪದ ಸ್ಮಾರಕ ನೀಲಾಕಾಶದಲ್ಲಿ ತೇಲಿ ಬಿಟ್ಟ ಟರ್ಕಿ ಕಿರೀಟ ಆಕಾಶದ ನೀಲಿಯೇ ಕ್ಯಾನ್ವಾಸ್. ಸುತ್ತಲಿನ ಹಸಿರು ಹ್ದೊದ ನಿಂತ ಬೆಟ್ಟಗಳ ನಡುವೆ ಎತ್ತರದಲ್ಲಿ ತಂದಿಟ್ಟ ಟರ್ಕಿ ಅರಸನ ಕಿರೀಟ. ಹೌದು  ಕಣ್ಮನ ತಣಿಸುವ ಇಂತಹ ಸುಂದರ ಐತಿಹಾಸಿಕ ಸ್ಮಾರಕ ಇರುವುದು ಬೀದರ್ ನಗರದ ಹೊರಭಾಗದಲ್ಲಿ. ‘ಬೀದರ್’ ಎಂದರೆ ‘ಬರದ ನಾಡು’ ಎಂಬ ಕಲ್ಪನೆಯನ್ನು ಸುಳ್ಳಾಗಿಸುವುದಕ್ಕಾಗಿಯೇ ದಟ್ಟ ಹಸಿರಿನ ಬಣ್ಣ ಎರಚಿದಂತೆ ಕಾಣುವ ಗುಡ್ಡಗಳ ಸಾಲು. ಹಸಿರು ವನರಾಶಿಯ ನಡುವೆ ಬಹಳಷ್ಟು ದೂರದಿಂದಲೇ ತಟ್ಟನೆ ಗಮನ ಸೆಳೆಯುವ ಸ್ಮಾರಕ ‘ಚೌಖಂಡಿ’. ಎತ್ತರದ ಸಮತಟ್ಟಾದ ಪ್ರದೇಶದ ಮೇಲೆ ಬೀದರ್ ನಗರ ಮತ್ತು ಕೋಟೆಯನ್ನು ನಿರ್ಮಿಸಲಾಗಿದೆ. ನಗರದಿಂದ ಯವ ದಿಕ್ಕಿನ ಕಡೆಗೆ ಹೋಗಬೇಕಾದರೂ ಇಳಿದೇ ಹೋಗಬೇಕು. ಕೋಟೆಯ ಗೋಡೆಯ ಮೇಲೆ ಹತ್ತಿ ನಿಂತರೆ ಹತ್ತಾರು ಕಿ.ಮೀ. ದೂರದ ವರೆಗೆ ಅಂದರೆ ದೃಷ್ಟಿಗೆ ಗೋಚರವಾಗುವಷ್ಟು ದೂರದ ವರೆಗಿನ ಎಲ್ಲವನ್ನೂ ನೋಡಬಹುದು. ಕೋಟೆಯ ಪ್ರವೇಶಕ್ಕೆ ಏಳು ಆಕರ್ಷಕವಾದ ದ್ವಾರಗಳಿವೆ. ಬೀದರ್ ನಗರದಿಂದ ಪೂರ್ವಕ್ಕೆ ಅಭಿಮುಖವಾಗಿರುವ ‘ದುಲ್ಹನ್ ದರ್ವಾಜ’ದ ಮೂಲಕ ಕೆಳಕ್ಕೆ ಇಳಿಯಲು ಆರಂಭಿಸುತ್ತ್ದಿದಂತೆಯೇ ‘ಅಗ್ರಹಾರ’ ಎನ್ನುವ ಪುಟ್ಟಹಳ್ಳಿ ಸಿಗುತ್ತಿದೆ. ಅಗ್ರಹಾರದ ನಡುವೆ ಹಾದು ಹೋಗುವ ಬೆಟ್ಟದ ಇಳಿಜಾರಿನಗುಂಟ ಸಾಗುತ್ತ್ದಿದಂತೆಯೇ ದೂರದಲ್ಲಿ ಅಷ್ಟಕೋನ ಆಕೃತಿಯ ಕಟ್ಟಡ ಗೋಚರವಾಗುತ್ತದೆ. ನೋಡಲು ಆಕರ್ಷಕವಾಗಿರುವ ಅನನ್ಯ ಸ್ಮಾರಕಕ್ಕೆ ವಿಶಿ

ಬೀದರ್ -ಬಿಸಿಲಲ್ಲ; ಝರಿಗಳ ನಾಡು: ಬೀದರ್

ಇಮೇಜ್
ಕರ್ನಾಟಕದ ನಕಾಶೆಯಲ್ಲಿ ಅತ್ಯಂತ ಮೇಲ್ಭಾಗದ ತುತ್ತತುದಿಯಲ್ಲಿ ಇರುವ ಜಿಲ್ಲೆ ಬೀದರ್. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಅತ್ಯಂತ ದೂರದಲ್ಲಿ ಇರುವ ಜಿ. ಕೇವಲ ರಾಜಧಾನಿಯಿಂದ ಮತ್ರವಲ್ಲದೆ ರಾಜ್ಯದ ಎಲ್ಲ ಜಿಗಳಿಂದಲೂ ‘ದೂರ’ ಇರುವಂತಹದ್ದು. ಈ ದೂರ ಕೇವಲ ಭೌಗೋಳಿಕ ಮತ್ರ ಅಲ್ಲ ‘ಮನಸಿಕ’ವಾದದ್ದು. ‘ದೂರ’ ಇರುವ ಕಾರಣಕ್ಕಾಗಿ ಬೀದರ್ ಬಗ್ಗೆ ರಾಜ್ಯದ ಜನತೆಗೆ ವಾಸ್ತವಕ್ಕಿಂತ ಕಾಲ್ಪನಿಕ ಚಿತ್ರವೇ ಕಣ್ಮುಂದೆ ಬರುತ್ತದೆ. ಬೀದರ್ ಕುರಿತು ‘ಕಥೆ’ಗಳು ‘ಕಟ್ಟುಕಥೆ’ಗಳು, ದಂತಕಥೆಗಳು ಸಾಕಷ್ಟಿವೆ. ಅವುಗಳಲ್ಲಿ ಎಲ್ಲವಕ್ಕೂ ಹುರುಳಿಲ್ಲ ಎಂದೇನಲ್ಲ. ಭೌತಿಕ ದೂರದಿಂದಾಗಿ ಕಥೆಗಳಿಗೆ ಹೆಚ್ಚಿನ ರಂಜನೀಯತೆಯ ಗುಣಬಂದಿದೆ. ‘ಬೀದರ್’ ಎಂದರೆ ಬರಗಾಲದ ನಾಡು. ನೀರಿಲ್ಲದ ಊರು ‘ಬೀದರ್’ ಎಂಬ ಮತು ಮೇಲಿಂದ ಮೇಲೆ ಕೇಳಿ ಬರುತ್ತವೆ. ‘ಗುಲ್ಬರ್ಗ ಬಿಸಿಲ ನಾಡು’ ನಕಾಶೆಯಲ್ಲಿ ಅದಕ್ಕಿಂತ ಮೇಲ್ಭಾಗದಲ್ಲಿ ಇರುವ ಬೀದರ್‌ನ ಬೇಸಿಗೆಯಲ್ಲಿ ‘ಕೆಂಡ’ವೇ ಸುತ್ತ ಇರಬಹುದು ಎಂಬ ತಪ್ಪುಕಲ್ಪನೆಯಿದೆ. ಅವುಗಳನ್ನೆಲ್ಲ ಪಟ್ಟಿ ಮಡಿ, ಸಮಜಾಯಿಷಿ ನೀಡುವ ಉದ್ದೇಶವಿಲ್ಲ. ಸದ್ಯ ಇರುವ ವಾಸ್ತವ ಚಿತ್ರಣ ಅಥವಾ ನೈಜ ಬೀದರ್ ಬಗ್ಗೆ ಕೆಲವು ಟಿಪ್ಪಣಿಗಳನ್ನು ಇಲ್ಲಿ ನೀಡಲಾಗಿದೆ. ಬಿಸಿಲಲ್ಲ, ಝರಿಗಳ ನಾಡು: ಬೀದರ್ ಸಮಶೀತೋಷ್ಣ ವಲಯದ ನಾಡು. ಗುಲ್ಬರ್ಗದ ಬಿಸಿಲ ಬೇಗೆಯಗಲಿ, ಬಿಜಾಪುರದ ನೀರಿಲ್ಲದ ಸ್ಥಿತಿಯಗಲಿ ಬೀದರ್‌ಗಿಲ್ಲ. ಬೇಸಿಗೆಯಲ್ಲೂ ಕೂಡ ಬೀದರ್‌ನ ಉಷ್ಣಾಂಶ ೩೯ ಡಿಗ್ರಿಗಿಂತ