ಬೀದರ್ ಉತ್ಸವ-೨೦೧೨ ಮರೆತು ಹೋದ ಉದೇಶ; ಸಂಭ್ರಮಾಚರಣೆಗಷ್ಟೆ ಸೀಮಿತ




ಜ್ಲಿಲೆಯ ಪ್ರಗತಿಗೆ ‘ದಾರಿ’ ಕಲ್ಪಿಸುವ ಉದೇಶದಿಂದ ಆರಂಭಿಸಲಾಗ್ದಿದ ‘ಬೀದರ್ ಉತ್ಸವ’ ಪ್ರವಾಸೋದ್ಯಮ ಅವಕಾಶ ಕಲ್ಪಿಸುವುದರೊಂದಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುತ್ತದೆ ಎಂಬ ಆಸೆ, ಆಶಯ ಇತ್ತು. ಮೊದಲ ಉತ್ಸವ ನಡೆದು ಆರು ವರ್ಷಗಳ ನಂತರ ಹಿಂತಿರುಗಿ ನೋಡಿದರೆ ‘ನಡೆದು ಬಂದ ದಾರಿ’ಯ ಬಗ್ಗೆ ನಿರಾಸೆ- ವಿಷಾದ ಮಾತ್ರ ಉಳಿದುಕೊಂಡಿದೆ.
೨೦೦೬ರ್‍ಲಲಿ ‘ಬೀದರ್ ಉತ್ಸವ’ ಆರಂಭಿಸಿದ ಸಂದರ್ಭದ್ಲಲಿ ಈಗ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪಾ ಕಾಶೆಂಪೂರ್ ಅವರು ಜ್ಲಿಲಾ ಉಸ್ತುವಾರಿ ಸಚಿವರಾಗ್ದಿದರು. ‘ಪ್ರವಾಸೋದ್ಯಮ’ ಬೆಳೆದರೆ ಜ್ಲಿಲೆಯ ಆರ್ಥಿಕ ಸ್ಥಿತಿ-ಗತಿಯೇ ಬದಲಾಗಿ ಬಿಡುತ್ತದೆ’ ಎಂದು ಕನಸು ಬಿತ್ತ್ದಿದರು. ಆಗ ಜ್ಲಿಲಾಧಿಕಾರಿ ಆಗ್ದಿದ ಮುನೀಷ್ ಮೌದ್ಗಿಲ್ ಅವರು ಕೂಡ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವುದರೊಂದಿಗೆ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ತಂಡಗಳು ಬೀದರಿಗೆ ಬರುವಂತೆ ಕಾರ್ಯಕ್ರಮ ರೂಪಿಸ್ದಿದರು. ಬದಲಾವಣೆ ಕನಸು ಸಾಕಾರವಾಗುವ ಆಸೆಯು ಮಡುವುಗಟ್ಟ್ದಿದರಿಂದ ಮೊದಲ ಉತ್ಸವ ‘ನ ಭೂತೋ  ನ ಭವಿಷ್ಯತಿ’ ಎಂಬಂತಹ ಯಶಸ್ಸು ಕಂಡಿತ್ತು. ಅತ್ಯಂತ ಕಡಿಮೆ ವೆಚ್ಚದ್ಲಲಿ ನಡೆಸಲಾದ ಉತ್ಸವದ ಬಗ್ಗೆ ಜನ ಹಾದಿ ಬೀದಿಗಳ್ಲಲಿ ಮಾತಾಡಿಕೊಳ್ಳುವಂತಾಗಿತ್ತು. ಈಗಲೂ ಜನ ಆ ದಿನಗಳನ್ನು ಮೆಲುಕು ಹಾಕುತ್ತಾರೆ.
‘ಕಳೆದ ಆರು ವರ್ಷಗಳ ಅವಧಿಯ್ಲಲಿ ಜ್ಲಿಲಾ ಕೇಂದ್ರವಾದ ಬೀದರ್‌ನ್ಲಲಿ ‘ಪ್ರವಾಸೋದ್ಯಮ ಕಚೇರಿ’ ಆರಂಭಿಸುವ ಕನಿಷ್ಠ ಮಟ್ಟದ ಕೆಲಸ ಕೂಡ ಆಗ್ಲಿಲ. ಬರುವ ಪ್ರವಾಸಿಗಳಿಗೆ ಮಾಹಿತಿ ಒದಗಿಸುವ ನಿಟ್ಟಿನ್ಲಲಿ ಯಾವುದೇ ರೀತಿಯ ಪ್ರಗತಿಯಾಗ್ಲಿಲ. ಪ್ರವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿಯ್ಲಲಿ ಯಾವುದೇ ರೀತಿಯ ಪ್ರಗತಿ ಆಗ್ಲಿಲ’ ಎಂದು ಹಿರಿಯ ನಾಗರಿಕ ಕಾಜಿ ಅಲಿಯ್ದೊದೀನ್ ವಿಷಾದಿಸುತ್ತಾರೆ.
‘ಪ್ರವಾಸೋದ್ಯಮಕ್ಕೆ ಪೂರಕವಾಗಿ ನಗರದ ಪಾಪನಾಶ ಕೆರೆಯ್ಲಲಿ ಆರಂಭಿಸಲಾಗ್ದಿದ ಬೋಟಿಂಗ್ ವ್ಯವಸ್ಥೆ ಸ್ಥಗಿತಗೊಂಡಿದೆ. ಕೋಟೆಯ ಆವರಣದ್ಲಲಿ ಇರುವ ಮಲೆರಿಯಾ ಕಟ್ಟಡದ್ಲಲಿ ಆರಂಭಿಸಲಾಗ್ದಿದ ಲಿಯಾಕತ್ ಅಲಿಖಾನ್ ಅವರ ಸಂಗ್ರಹದ್ಲಲಿನ ಅಪೂರ್ವ ವಸ್ತುಗಳನ್ನು ಪ್ರದರ್ಶನ ಕೂಡ ಹಠಾತ್ತನೆ ಕೊನೆಗೊಂಡಿದೆ. ಕೋಟೆಯ್ಲಲಿ ಕ್ಯಾಂಟಿನ್ ಆರಂಭವಾದ್ದದು ಬಿಟ್ಟರೆ ಬೇರಾವುದೇ ಪ್ರಗತಿಯಾಗ್ಲಿಲ. ಪ್ರವಾಸೋದ್ಯಮ ಬೆಳೆಸುವ ನಿಟ್ಟಿನ್ಲಲಿ ಜ್ಲಿಲಾಡಳಿತ ಮತ್ತು ಜನಪ್ರತಿನಿಧಿಗಳು ನಿರಾಸಕ್ತಿ ತೋರಿಸ್ದಿದಾರೆ’ ಎಂದು ಅಲಿಯ್ದೋದೀನ್ ಟೀಕಿಸುತ್ತಾರೆ.
‘ಕೋಟೆಗೆ ಬರುವ ಪ್ರವಾಸಿಗಳ ಸಂಖ್ಯೆ ಹೆಚ್ಚಾಗಿದೆ’ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ಬೆನ್ನು ಚಪ್ಪರಿಸಿಕೊಳ್ಳುತ್ತಾರೆ. ಆದರೆ, ಹಾಗೆ ಬರುವ ಜನರಿಗೆ ಸೌಲಭ್ಯ ಕಲ್ಪಿಸುವ ಪ್ರವಾಸವನ್ನು ಉದ್ಯಮವಾಗಿ ಪರಿವರ್ತಿಸಿ ಅದರ ಲಾಭ ಸ್ಥಳೀಯರಿಗೆ ದೊರಕಿಸಿಕೊಡುವ ನಿಟ್ಟಿನ್ಲಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಐತಿಹಾಸಿಕ ತಾಣಗಳನ್ನು ನೋಡಲು ಬರುವ ಪ್ರವಾಸಿಗಳು ‘ಬೀಗ ಹಾಕಿರುವ ರಂಗೀನ್ ಮಹಲ್’, ‘ರಾತ್ರಿ ಹೊತ್ತು ಬೆಳಕು ಕಾಣದ ಮಹಮೂದ್ ಗಾವಾನ್ ಮದರಸಾ’ ನೋಡಿ ಶಾಪ ಹಾಕುತ್ತ ಮರಳುತ್ತಾರೆ. ಸ್ಮಾರಕಗಳು ಜನರಿಗೆ ಹತ್ತಿರ ಆಗುವ ಬದಲು ಜನರಿಂದ ದೂರ ಹೋಗುವಂತಹ ವ್ಯವಸ್ಥೆ ರೂಪುಗೊಂಡಿದೆ’ ಎಂದು ಇತಿಹಾಸದ್ಲಲಿ ಆಸಕ್ತಿ ಇರುವ ವೈದ್ಯ ಖೇದ ವ್ಯಕ್ತಪಡಿಸುತ್ತಾರೆ.
ನಂತರದ ದಿನಗಳ್ಲಲಿ ‘ಪ್ರವಾಸೋದ್ಯಮ- ಸಂಸ್ಕೃತಿ’ಯಿಂದ ದೂರ ಸಾಗಿದ ಉತ್ಸವದ ಸ್ವರೂಪ ಬದಲಾಗಿ ‘ಮನರಂಜನೆ’ಯತ್ತ ವಾಲಿತು. ಸಿನಿಮಾ ಹಾಡು, ಕುಣಿತಗಳಿಗೆ ಮಾತ್ರ ಸೀಮಿತವಾಯಿತು. ‘ಐಟಂ ಸಾಂಗ್’ ನಟಿಯರೂ ಉತ್ಸವದ ವೇದಿಕೆಯಿಂದ ಕುಣಿದು ಹಾಡ್ದಿದು ಜ್ಲಿಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿತ್ತು. ಆಗಲೇ ಮೊದಲ ಬಾರಿಗೆ ಉತ್ಸವ ಸಾಗುತ್ತಿರುವ ದಾರಿಯ ಬಗ್ಗೆ ಅಪಸ್ವರಗಳು ಕೇಳಿ ಬಂದ್ದಿದವು. ‘ಉತ್ಸವ ಕೇವಲ ಸಂಭ್ರಮಾಚರಣೆಗೆ ಮಾತ್ರ ಸೀಮಿತವಾಗಿ ಬಿಟ್ಟಿದೆ. ಕುಣಿಯುವ ನಟಿಯರನ್ನು ಕರೆಸಿ ಕುಣಿಸುವುದಕ್ಕೆ ಉತ್ಸವ ಸೀಮಿತವಾಗಿದೆ. ಇತಿಹಾಸ, ಪರಂಪರೆ, ಕಲೆ-ಸಂಸ್ಕೃತಿ ಕೇಂದ್ರಿತ ಉತ್ಸವ ನಡೆಸುವ ಅಗತ್ಯವಿದೆ’ ಉಪನ್ಯಾಸಕ ಡಾ. ಬಸವರಾಜ ಬ್ಲಲೂರು ಅಭಿಪ್ರಾಯಪಟ್ಟ್ದದನ್ನು ಇಲಿ ಸ್ಮರಿಸಬಹುದು.
‘ಮೊದಲ ಉತ್ಸವದ ನಂತರದ ದಿನಗಳ್ಲಲಿ ಬೀದರ್‌ನ ‘ಇಮೇಜ್’ ಬದಲಾಯಿಸುವ ನಿಟ್ಟಿನ್ಲಲಿ ಒಂದಷ್ಟು ಪ್ರಯತ್ನಗಳು ನಡೆದಿವೆ. ಆದರೆ, ಅವುಗಳ ಪ್ರಮಾಣ ಏನೇನೂ ಸಾಲದು. ರಾಜ್ಯದ್ಲಲಿ ಬೀದರ್‌ನ ‘ಇಮೇಜ್’ ಬದಲಾದ್ದದರಿಂದ ನಾಲ್ಕಾರು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಆದರೆ, ಅದರಿಂದ ಯಾವುದೇ ರೀತಿಯ ಆರ್ಥಿಕ, ವ್ಯಾಪಾರ-ವಹಿವಾಟಿನ ಲಾಭ ಆಗ್ಲಿಲ. ಹೊರಗಡೆಯಿಂದ ಬಂದ ಜನ ಜ್ಲಿಲೆಯ್ಲಲಿ ಓಡಾಡಿ ಇಲಿ ಹಣ ಖರ್ಚು ಮಾಡಿದರೆ ಅದರ ಲಾಭ ಜ್ಲಿಲೆಗೆ ಆಗುತ್ತದೆ. ಈ ನಿಟ್ಟಿನ್ಲಲಿ ಚಿಂತನ-ಮಂಥನ ನಡೆಯುತ್ತ್ಲಿಲ. ಸರಿಯಾದ ದಾರಿಯ್ಲಲಿ ಸಾಗುತ್ತ್ದಿದರೆ ಇಂದ್ಲಲ ನಾಳೆ ಗುರಿ ಮುಟ್ಟಬಹುದು ಎಂದು ಆಸೆ ಇಟ್ಟುಕೊಳ್ಳಬಹುದಿತ್ತು. ತಲುಪಬೇಕಾದ ಗುರಿಯನ್ನೇ ಮರೆತು ದಾರಿಯ್ಲಲಿಯೇ ಸಂಭ್ರಮಿಸುತ್ತಿರುವುದು’ ಎಂದು ಜಗನ್ನಾಥ ಕಮಲಾಪುರೆ ಅಭಿಪ್ರಾಯಪಡುತ್ತಾರೆ.







ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಬಸವೇಶ್ವರ ಮತ್ತು ಅವನ ಕಾಲ