ಶರಣಪ್ರಕಾಶ ಪಾಟೀಲ

ಕನರ್ಾಟಕದ ರಾಜಕೀಯ ಲೋಕದಲ್ಲಿ ಕೋಟಿಗಳ ಲೆಕ್ಕದಲ್ಲಿ ನಡೆಯುತ್ತಿರುವ `ವ್ಯವಹಾರ'- ಚಚರ್ೆಗಳು ರಾಜಕಾರಣಿಗಳು ಮತ್ತು ರಾಜಕೀಯ ಎಂದರೇ ಜನ ಅಸಹ್ಯ ಪಟ್ಟುಕೊಳ್ಳುವ ಸ್ಥಿತಿ ತಲುಪಿದೆ. ಅಂತಹುದರಲ್ಲಿ ಕಾಯಿನ್ ಬಾಕ್ಸ್ನಿಂದ ಫೋನ್ ಬಂದರೆ ರಿಸೀವ್ ಮಾಡುವ ಶಾಸಕರೂ ಇದ್ದಾರೆ ಎಂಬುದೇ ನಂಬಲಿಕ್ಕೆ ಕಷ್ಟವಾಗುವ ಸಂಗತಿ. ಜನಪ್ರತಿನಿಧಿಗಳು ಅದರಲ್ಲೂ ವಿಶೇಷವಾಗಿ ಶಾಸಕರಗಳು ಪೈಕಿ ಬಹುತೇಕ ಜನ ತಮ್ಮ ಸುತ್ತ ಕಾರಣ ಇಲ್ಲದ್ದಿದರೂ ಸದಾ ನೂರಾರು ಜನ ನೆರೆದಿರಬೇಕು ಎಂದು ಭಾವಿಸುತ್ತಾರೆ. ರಾಜಕಾರಣಿಗಳು ತಮ್ಮ ದೊಡ್ಡಸ್ತಿಕೆಯ ಪ್ರದರ್ಶನಕ್ಕೆ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲು ಹೆಣಗಾಡುತ್ತಾರೆ. ಎಲ್ಲ ಸಾಮಾನ್ಯ ಸಂಗತಿ, ಗ್ರಹಿಕೆಗಳಿಗೂ `ಅಪವಾದ' ಇದ್ದೇ ಇರುತ್ತವೆ ಎಂಬುದು ಕೂಡ ಸುಳ್ಳೇನಲ್ಲ.
`ಕಾಯಿನ್ ಬಾಕ್ಸ್ನಿಂದ ಫೋನ್ ಮಾಡಿ ನಿಮ್ಮ ಸಮಸ್ಯೆ, ಆಗಬೇಕಾದ ಕೆಲಸ ಹೇಳಿ. ಸಾಧ್ಯವಾದರೆ ಮಾಡಿಸಿಕೊಡುತ್ತೇನೆ' ಎಂದು ಜನರಿಗೆ ಹೇಳುವ ಹಾಗೆಯೇ ಜನರಿಂದ ಬರುವ ಕಾಲ್ಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಶ್ರದ್ಧೆಯಿಂದ ಗುರುತು ಹಾಕಿಕೊಂಡು, ಅವುಗಳನ್ನು ಬಗೆ ಹರಿಸಲು ಪ್ರಯತ್ನಿಸುವ ಶಾಸಕರಿದ್ದಾರೆೆ. ಗುಲ್ಬರ್ಗ ಜಿಲ್ಲೆಯ ಸೇಡಂ ವಿಧಾನಸಭಾ ಮತಕ್ಷೇತ್ರವನ್ನು ಸತತ ಎರಡನೇ ಬಾರಿಗೆ ಪ್ರತಿನಿಧಿಸುತ್ತಿರುವ ಶಾಸಕ ಡಾ. ಶರಣಪ್ರಕಾಶ ಪಾಟೀಲ್ ಅವರು ಜನಪರವಾಗಿ, ಸರಳವಾಗಿ, ನೇರವಾಗಿ ಯೋಚಿಸುವವರು. ಹಾಗೆಯೇ ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡವರು. ಕಲುಷಿತಗೊಂಡಂತೆ ಭಾಸವಾಗುತ್ತಿರುವ ಸಾರ್ವಜನಿಕ ಬದುಕಿನಲ್ಲಿ ಇಂತಹವರೂ ಇದ್ದಾರಾ? ಎಂದು ಅಚ್ಚರಿ ಪಡುವ ಹಾಗೆ ಶರಣಪ್ರಕಾಶ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ತನ್ನ ಕ್ಷೇತ್ರದ ಜನರನ್ನ ಬೆಂಗಳೂರಿಗೆ ಕರೆಯಿಸಿಕೊಂಡು ಅಲ್ಲಿನ ಕಲ್ಲಿನ ಕಟ್ಟಡದಲ್ಲಿ ಓಡಾಡಿಸಿ ರಾಜಧಾನಿಯಲ್ಲಿ ತನಗಿರುವ `ವರ್ಚಸ್ಸು' ತೋರಿಸಿ ಕೆಲಸ ಮಾಡಿಸಿಕೊಡುವ `ಆಶ್ವಾಸನೆ' ಕೊಡುವ ಶಾಸಕರಿಗೆ ಕೊರತೆಯೇನಿಲ್ಲ. ಆದರೆ, ಶರಣಪ್ರಕಾಶ್ ಅವರು `ಸುಮ್ಮನೆ ಖಚರ್ು ಮಾಡಿಕೊಂಡು ಬೆಂಗಳೂರಿಗೆ ಯಾಕೆ ಬರುತ್ತೀರಿ? ಏನಾಗಬೇಕು ಹೇಳಿ? ಆಗುವ ಕೆಲಸ ಇದ್ದರೆ ನಾನೇ ಖುದ್ದಾಗಿ ಹೋಗಿ ಮಾಡಿಸಿಕೊಂಡು ಬರುತ್ತೇನೆ' ಎಂದು ಹೇಳುತ್ತಾರೆ. ಮಾತ್ರವಲ್ಲ ಕಾನೂನು ಹಾಗೂ ನಿಯಮದ ಚೌಕಟ್ಟಿನಲ್ಲಿ ಬರುವ ಹಾಗಿದ್ದರೆ ಪಟ್ಟುಹಿಡಿದು ಕುಳಿತು ಅಂತಹ ಕೆಲಸ ಮಾಡಿಸಿಕೊಂಡು ಬರುತ್ತಾರೆ. ನಿಯಮಬಾಹಿರವಾಗಿ ಕೆಲಸ ಮಾಡಿಸಬೇಕು ಎಂದು ಹೇಳುವ, ಆಗ್ರಹಿಸುವವರಿಗೆ ಶಾಸಕರ ನಕಾರಾತ್ಮಕ ಪ್ರತಿಕ್ರಿಯೆ ಸಿದ್ಧವಾಗಿಯೇ ಇರುತ್ತದೆ. ಅಂದಹಾಗೆ ಶರಣಪ್ರಕಾಶ ಅವರು ರಾಜಧಾನಿಯಲ್ಲಿ ಕಡಿಮೆ ಕ್ಷೇತ್ರದಲ್ಲಿ ಜಾಸ್ತಿ ಇರುವ ಅಪರೂಪದ ಶಾಸಕರ ಪಟ್ಟಿಯಲ್ಲಿ ಸೇರುತ್ತಾರೆ.
ಸೇಡಂನಲ್ಲಿ ಶಾಸಕರ ಕಚೇರಿಯಿದೆ. ಪಟ್ಟಣದಲ್ಲಿ ಇದ್ದಷ್ಟು ದಿನವೂ ತಪ್ಪದೇ ಕಚೇರಿಗೆ ಬರುತ್ತಾರೆ. ಬರುವಾಗ ಮನೆಯಿಂದ ಮಧ್ಯಾಹ್ನದ ಊಟಕ್ಕಾಗಿ ಬುತ್ತಿ ಕಟ್ಟಿಕೊಂಡು ಬರುತ್ತಾರೆ. ಸಮಯವಾದ ತಕ್ಷಣ ತಮಗಾಗಿ ತಂದ ಬುತ್ತಿ ಬಿಚ್ಚಿ ಊಟ ಮಾಡುತ್ತಾರೆ. ಶಾಸಕರೇ ಮನೆಯಿಂದ ಕಟ್ಟಿಕೊಂಡು ಬಂದ ಊಟ ಮಾಡುವಾಗ `ಬೆಂಗಲಿಗ ಪಡೆ'ಗೆಲ್ಲಿ ಭೂರಿ ಭೋಜನದ ಅವಕಾಶ? ಶರಣಪ್ರಕಾಶ ಅವರನ್ನು ಮೊದಲಿನಿಂದ ಗಮನಿಸುತ್ತ ಬಂದವರಿಗೆ ಇದು ಹೊಸತೇನಲ್ಲ. ಹೊಸಬರಿಗೆ ಮಾತ್ರ ಅಚ್ಚರಿ ಎನಿಸುತ್ತದೆ. ಕ್ಷೇತ್ರದ ಜನರಿಗೆ ಮತ್ತು ಅವರು ಇರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಮ್ಮ ಶಾಸಕರು ಸಿಂಪಲ್ಲಾಗಿ ಇರುವ ಬಗ್ಗೆ ಖುಷಿ- ಬೇಸರಗಳೆರಡೂ ಇವೆ. ಅದನ್ನ ಸಮಯ ಸಿಕ್ಕಾಗಲೆಲ್ಲ `ಆಡಿಕೊಳ್ಳುತ್ತಾರೆ'- ಮಾತಾಡಿಕೊಳ್ಳುತ್ತಾರೆ. `ವಿಚಿತ್ರ ಮನುಷ್ಯ' ಎಂದುಕೊಳ್ಳುವುದರ ಜೊತೆಗೆ ಅವರಿರುವುದೇ ಹಾಗೆ ಎಂದು `ಸಮಾಧಾನ' ಪಟ್ಟುಕೊಳ್ಳುತ್ತಾರೆ.
ಸೇಡಂ ತಾಲ್ಲೂಕಿನ ಉಡಗಿ ಗ್ರಾಮದವರಾದ ಡಾ. ಶರಣಪ್ರಕಾಶ (ಜ. 20 ಏಪ್ರಿಲ್ 1967) ಅವರು ಮೆಡಿಕಲ್ನಲ್ಲಿ (ಡಮರ್ಿಟಾಲಜಿ =ಚರ್ಮಶಾಸ್ತ್ರ)ದಲ್ಲಿ ಸ್ನಾತಕೋತ್ತರ ಪದವಿ (ಎಂ.ಡಿ) ಪಡೆದವರು. ಒಂದೊಂದು ಮೆಟ್ಟಿಲು ಹತ್ತುತ್ತಲೇ ರಾಜಕೀಯದಲ್ಲಿ ನೆಲೆ ಕಂಡುಕೊಂಡವರು. ವೃತ್ತಿಯಿಂದ ವೈದ್ಯರಾಗಿದ್ದ ಶರಣಪ್ರಪ್ರಕಾಶ 1994ರಲ್ಲಿ ಗುಲ್ಬರ್ಗ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕೃತವಾಗಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರು. ಅದಕ್ಕೆ ತಂದೆ ರುದ್ರಪ್ಪ ಪಾಟೀಲ್ರಿಗಿದ್ದ ವರ್ಚಸ್ಸು ಮತ್ತು ಗುಲ್ಬರ್ಗದ ಪ್ರಭಾವಿ ರಾಜಕಾರಣಿ ಮಲ್ಲಿಕಾಜರ್ುನ ಖಗರ್ೆ ಅವರ ಒತ್ತಾಸೆ ಕಾರಣವಾಗಿತ್ತು. 2000ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಶರಣಪ್ರಕಾಶ ಅವರಿಗೆ 2002ರಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಅವಕಾಶ ಒದಗಿಬಂತು. ಅದನ್ನವರು ಸರಿಯಾಗಿ ಉಪಯೋಗಿಸಿಕೊಂಡು ಜನಪರ ಕೆಲಸ ಮಾಡಿದರು. ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾಡಿದ ಕೆಲಸ ಅವರನ್ನು ಸೇಡಂ ಕ್ಷೇತ್ರದಿಂದ 2004ರಲ್ಲಿ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗುವುದಕ್ಕೆ ದಾರಿ ಮಾಡಿಕೊಟ್ಟಿತು. 2008ರಲ್ಲಿ ನಡೆದ ವಿಧಾನಭೆಯ ಚುನಾವಣೆಯಲ್ಲಿಯೂ ಸೇಡಂನ ಜನತೆ ಶರಣಪ್ರಕಾಶ ಅವರನ್ನು ಪುನರಾಯ್ಕೆ ಮಾಡಿದರು. ಕನರ್ಾಟಕ ಪ್ರದೇಶ ಪಂಚಾಯಿತಿ ಸಂಘಟನೆಯ ಅಧ್ಯಕ್ಷರಾಗಿರುವ ಶರಣಪ್ರಕಾಶ ಅವರು ಸದ್ಯ (2010) ಗುಲ್ಬರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷತೆಯ ಹೊಣೆ ಹೊತ್ತಿದ್ದಾರೆ.
ರಾಜಕೀಯದಲ್ಲಿ ಡಾ. ಶರಣಪ್ರಕಾಶ ಅವರಿಗೆ ಮಲ್ಲಿಕಾಜರ್ುನ ಖಗರ್ೆ ಅವರು `ಗಾಡ್ಫಾದರ್' ಎನ್ನುವುದು ಗುಟ್ಟಿನ ಸಂಗತಿಯೇನಲ್ಲ. ರಾಜ್ಯ ರಾಜಕಾರಣದಲ್ಲಿ ವರ್ಚಸ್ಸಿರುವ ಖಗರ್ೆಯವರು ಶರಣಪ್ರಕಾಶ ಅವರಿಗೆ ಅವಕಾಶ ಸಿಗುವಂತೆ ಮಾಡಿದ್ದು ಹಾಗೂ ಎರಡೂ ಚುನಾವಣೆಯಲ್ಲಿ ಬೆಂಬಲಕ್ಕೆ ನಿಂತದ್ದು ಕೂಡ ಸುಳ್ಳೇನಲ್ಲ. ಆದರೆ, ಅವಕಾಶ ದೊರಕಿದ ನಂತರ ಶರಣಪ್ರಕಾಶ ಬೆಳೆಸಿಕೊಂಡ `ವ್ಯಕ್ತಿತ್ವ' ಮತ್ತು ಕಂಡುಕೊಂಡ `ನೆಲೆ' ಹಾಗೂ ತೆಗೆದುಕೊಂಡ `ನಿಲುವು' ಮಹತ್ವದ್ದು. ಅಧ್ಯಯನಶೀಲ ಮನೋಭಾವದ ಶರಣಪ್ರಕಾಶ ಅವರು ಸೂಕ್ಷ್ಮಸಂವೇದಿ ಕೂಡ. ಸುತ್ತ ನಡೆಯುತ್ತಿರುವ ಬದಲಾವಣೆ, ಬೆಳವಣಿಗೆಗಳ ಬಗ್ಗೆ ಗಮನ ಹರಿಸುವ ಅವರನ್ನು ಕಾಪಾಡಿದ್ದು ಓದುವ ಹವ್ಯಾಸ. ತಮಗೆ ಗೊತ್ತಿರದ ಸಂಗತಿಗಳ ಬಗ್ಗೆ ಅರಿತುಕೊಳ್ಳಬೇಕು ಮತ್ತು ಅದು ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ ಎಂಬ ಯೋಚನಾಕ್ರಮ `ಓದಲು' ಹಚ್ಚಿತು. ವಿಷಯದ ಬಗ್ಗೆ ಅರಿತು, ತಿಳಿದುಕೊಂಡು ಮಾತನಾಡುವ ಗುಣಸ್ವಭಾವ ಅವರದು. ವಿಧಾನಸಭೆಯ ಅಧಿವೇಶನಕ್ಕೆ ತೆರಳುವ ಮುನ್ನ ನಡೆಯುವ ಚಚರ್ೆಯ ವಿಷಯಗಳಿಗ ಸಂಬಂಧಿಸಿ ಪೂರ್ಣ ಪ್ರಮಾಣದ ಹೋಮ್ವಕರ್್ ಮಾಡಿರುತ್ತಾರೆ. 
ಯಾವುದನ್ನೂ ಲಘುವಾಗಿ ಪರಿಗಣಿಸದ ಶರಣಪ್ರಕಾಶ ಅವರಿಗೆ ನಾಯಕತ್ವದ ಗುಣವೂ ಇದೆ. ಹಾಗಂತ ಶರಣಪ್ರಕಾಶ ಅವರಿಗೆ `ಮಿತಿಗಳಿಲ್ಲ' ಎಂದೇನು ಅರ್ಥವಲ್ಲ. ಮನುಷ್ಯ ಸಹಜವಾದ ಲೋಪದೋಷಗಳನ್ನ ಅವರಲ್ಲಿಯೂ ಹುಡುಕಬಹುದು. ಹಾಗೆ ಹುಡುಕ ಹೊರಟರೆ ಸಿಕ್ಕೇ ಸಿಗುತ್ತದೆ. ಕೆಲವು ಅಂದರೆ ಕಡಿಮೆ ಮಿತಿಗಳ ನಡುವೆ ಪಾಸಿಟಿವ್ ಆಗಿ ಜನಪರವಾಗಿ ಯೋಚಿಸುವ, ಕೆಲಸ ಮಾಡುವ ಜನಪ್ರತಿನಿಧಿಯೊಬ್ಬರು ಇದ್ದಾರಲ್ಲ ಎಂಬುದು ಸಮಾಧಾನ ತರುವ ಸಂಗತಿ.
 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು