ಸಾಮರ್ಥ್ಯಕ್ಕೆ ತಕ್ಕ ಕೆಲಸ ತೋರಿಸದ ‘ಕನಸುಗಾರ’


ಕೆಲವರು ಹೀಗಿರುತ್ತಾರೆ. ತಾವು ಮಾಡಿದ ಕೆಲಸವನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅಥವಾ ಅವರಿಗೆ ತಾವು ಮಾಡಿದ ಕೆಲಸವನ್ನು ಹೇಳಿಕೊಳ್ಳಲು ಬರುವುದಿಲ್ಲ. ಕಲ್ಪನೆ ಕೂಡ ಮಾಡ್ದದನ್ನೇ ‘ಸಾಧನೆ’ ಎಂದು ಬಿಂಬಿಸಿಕೊಳ್ಳುವ ಈ ದಿನಗಳಲ್ಲಿ ‘ಹಿಂದೇಟು’ ಇಂತಹ ವ್ಯಕ್ತಿಗಳು ಸಹಜವಾಗಿಯೇ ಹಿಂದಕ್ಕೆ ಸರಿಯುತ್ತಾರೆ.
ಸಾರ್ವಜನಿಕ ಬದುಕಿನಲ್ಲಿ ಅದರಲ್ಲೂ ರಾಜಕಾರಣದಲ್ಲಿ ಸುಳ್ಳು ಹೇಳುವವ, ಜೋರಾಗಿ ಮಾತನಾಡುವವ, ಹೆದರಿಸಿ- ಬೆದರಿಸಿ ರೋಪು ಹಾಕುವವರೇ ಬದುಕುತ್ತಾರೆ. ಬಹುಸಂಖ್ಯಾತ ಜನಪ್ರತಿನಿಧಿಗಳು ಇದೇ ವರ್ಗಕ್ಕೆ ಸೇರಿದವರಾಗಿರುವುದರಿಂದ ಸಹಜವಾಗಿಯೇ ಅದು ಇಡೀ ರಾಜಕಾರಣಿಗಳ ಗುಣಲಕ್ಷಣದಂತೆ ಕಾಣಿಸುತ್ತದೆ. ಉಳಿದವರೆಲ್ಲ ‘ಅಪವಾದ’ದಂತೆ ಗೋಚರವಾದರೆ ಅಚ್ಚರಿಯಿಲ್ಲ.
ನಾಲ್ಕು ಬಾರಿ ಬೀದರ್ ಲೋಕಸಭಾ (ಮೀಸಲು) ಕ್ಷೇತ್ರವನ್ನು ಪ್ರತಿನಿಧಿಸಿ ಸದ್ಯ ರಂಗದಿಂದ ಹಿಂದಕ್ಕೆ ಸರಿಯಲು ಸಿದ್ಧತೆ ನಡೆಸಿರುವ ಸಂಸದ ನರಸಿಂಗರಾವ ಸೂರ್ಯವಂಶಿ ಅವರದು ಜನರಿಗೆ ಕಾಣಿಸಿದ ವ್ಯಕ್ತಿತ್ವ. ಹಾಗೆಯೇ ಅವರಿಗೆ ತೋರಿಸಿಕೊಳ್ಳಲು ಕೂಡ ಬರುವುದಿಲ್ಲ. ಅವರೊಂದು ಆಮೆಯ ತರಹ. ಸದಾ ಕವಚದೊಳಗೇ ಅಡಗಿರುತ್ತಾರೆ. ಆಗಾಗ ಕವಚದಿಂದ ತಮ್ಮ ದೇಹದ ಭಾಗಗಳನ್ನು ಹೊರ ತೆಗೆದು ಸುತ್ತ ಏನಾಗುತ್ತಿದೆ ಎಂದು ಕಣ್ಣು ಹಾಯಿಸಿ ಅಪಾಯವಿರಲಿ ಸಣ್ಣಪುಟ್ಟ ಸ್ದದುಗ್ದದಲವ್ದಿದರೂ ಸುಮ್ಮನಾಗಿ ಬಿಡುತ್ತಾರೆ. ಸೂರ್ಯವಂಶಿ ಕೂಡ ಅದೇ ತರಹದವರು.
ಆಮೆಯ ಹಾಗೆಯೇ ಕಠಿಣ ಮತ್ತು ತಡವಾಗಿಯಾದರೂ ‘ಗುರಿ’ ತಲುಪುವ ಕನಸುಗಾರಿಕೆ ಉಳ್ಳವರು. ಅಂತಹ ರಾಜಕಾರಣಿಗಳ ಸಾಧನೆ ಸಾಮಾನ್ಯ ಜನರಿಗೆ ಕಾಣಿಸುವುದಿರಲಿ, ನುರಿತ ಪತ್ರಕರ್ತರ ಗಮನಕ್ಕೂ ಬರುವುದಿಲ್ಲ. ಈ ಪತ್ರಕರ್ತರು ಒಂದು ರೀತಿಯ ವಿಚಿತ್ರ ರೀತಿಯ ಜನ. ತಮ್ಮ ಸಾಧನೆಯನ್ನು ತಾವೇ ಹೇಳಿದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತಾವಾಗಿಯೇ ಹುಡುಕಿಕೊಂಡು ಹೋಗಿ ‘ಶೋಧ’ ನಡೆಸಿ ಪತ್ತೆಹಚ್ಚಿ ಗುಣಮಟ್ಟ ನಿರ್ಧರಿಸುವ ಆಸೆ, ಮನಸ್ಸು, ಸಮಯ ಅವರ ಬಳಿ ಇರುವುದಿಲ್ಲ. ತಮಗೆ ಹತ್ತಿರದಲ್ಲಿ ಇರುವ ಯಾರಾದರೂ ಮೆಚ್ಚುಗೆಯ ಮಾತುಗಳನ್ನು ಆಡಿದಾಗ ಮಾತ್ರ ‘ವಸ್ತು’ವಿನತ್ತ ಗಮನ ಹರಿಸುತ್ತಾರೆ. ಇದರಿಂದ ಎಷ್ಟೊ ಸಂಗತಿ- ವ್ಯಕ್ತಿಗಳಿಗೆ ಅರ್ಹತೆಗೆ ತಕ್ಕಂತೆ ಗೌರವ ಸಿಕ್ಕಿದೆ. ಹಾಗೆಯೇ ಹಲವರಿಗೆ ಇ?ದದ್ದದಕ್ಕಿಂತ ಹೆಚ್ಚಿನ ಮನ್ನಣೆಯೂ ದೊರೆತಿದೆ. ಎಷ್ಟೋ ಜನರಿಗೆ ಅನ್ಯಾಯವಾಗಿದೆ ಕೂಡ.
ಸಂಸದ ನರಸಿಂಗರಾವ ಸೂರ್ಯವಂಶಿ ಕೂಡ ಅದೇ ಕೆಟಗರಿಗೆ ಸೇರುತ್ತಾರೆ. ಮಾಧ್ಯಮಗಳ ಮುಂದೆ, ಜನರ ಮುಂದೆ ಬಾಯಿ ಬಿಚ್ಚದ ‘ಅಪರೂಪ’ದ ರಾಜಕಾರಣಿ. ಸದಾ ಗಂಭೀರ ವದನರಾಗಿಯೇ ಇರುವ ಅವರು ಸಭೆ- ಸಮಾರಂಭಗಳಿರಲಿ ಲೋಕಸಭೆಯಲ್ಲಿಯೂ ಹೆಚ್ಚಿಗೆ ಮಾತನಾಡಿದವರಲ್ಲ. ರಾಜಕಾರಣವೆಂದರೆ ಕೇವಲ ಮಾತನಾಡುವುದು ಎಂದು ಬಿಂಬಿತ ಆಗಿರುವ ಈ ದಿನಗಳಲ್ಲಿ ಆಡದ ಜನಪ್ರತಿನಿಧಿಗಳು ಅಪ್ರಸ್ತುತರಾಗುತ್ತಾರೆ. ಸೂರ್ಯವಂಶಿ ಅವರಿಗೆ ಆಗ್ದಿದು ಕೂಡ ಅದೇ. ಆ ಕಾರಣಕ್ಕಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಔರಾದ್ನಿಂದ ಸ್ಪಧರ್?ಸಿ ದಯನೀಯವಾದ ಸೋಲು ಕಂಡ್ದದು ಅವರಿಗೆ ದುಸ್ವಪ್ನದಂತೆ ಕಾಡುತ್ತಿದೆ.
ಹೀಗಂದರೆ ಸೂರ್ಯವಂಶಿ ಅವರಿಗೆ ರಾಜಕಾರಣದ ಪಟ್ಟುಗಳು ಗೊತ್ತಿಲ್ಲ ಎಂದರ್ಥವಲ್ಲ. ಅವರು ಪಳಗಿದ ರಾಜಕಾರಣಿ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಅದನ್ನು ತಮ್ಮ ರಾಜಕೀಯ ಜೀವನದಲ್ಲಿ ಆಡದೆಯೂ ಮಾಡಿ ತೋರಿಸ್ದಿದಾರೆ. ಪ್ರಬಲರನ್ನು ಮೂಲೆಗುಂಪು ಮಾಡುವಲ್ಲಿ ಅವರು ತೋರಿಸಿದ ರಾಜಕೀಯಪ್ರಜ್ಞೆ ಕುತೂಹಲಕಾರಿ ಅಂಶ.
ಶೋಷಿಸುವುದು ಮತ್ತು ತುಳಿಯುವುದು ಮೇಲ್ವರ್ಗ ಮತ್ತು ಮೇಲ್ಜಾತಿಗಳಿಗೆ ಅಂಟಿದ ಮಾನಸಿಕ ರೋಗ. ಎಲ್ಲರೂ ತಮ್ಮ ಕಾಲ ಬಳಿಯಲ್ಲಿಯೇ ಕುಳಿತು ಆದೇಶ, ನಿದರ್?ಶನ, ಸೂಚನೆಗಳನ್ನು ಪಾಲಿಸಬೇಕು ಎನ್ನುವ ಮೇಲ್ವರ್ಗದ ಪ್ರಜ್ಞೆಗೆ ವಿರುದ್ಧವಾಗಿ ಅಂದರೆ ಜೋರಾದ ಘೋಷಣೆ- ಪ್ರತಿಭಟನೆ ಮಾತ್ರವಲ್ಲದೆ ಸಾತ್ವಿಕ ನೆಲೆಯಲ್ಲಿ ಪ್ರತಿರೋಧ ದಾಖಲಿಸಲು ಬರುತ್ತದೆ. ಅದನ್ನು ಸೂರ್ಯವಂಶಿ ಹೆಚ್ಚು ಲೆಕ್ಕಾಚಾರದಿಂದ ಮಾಡ್ದಿದಾರೆ. ಅವಕಾಶ ಸಿಕ್ಕಾಗಲೆಲ್ಲ ಚತುರ ರಾಜಕಾರಣಿಯಂತೆ ವತರ್?ಸಿರುವ ಸೂರ್ಯವಂಶಿ ಮೇಲ್ವರ್ಗದ ಅಸಹನೆಯಿಂದಾಗಿ ದುಬಾರಿ ಬೆಲೆ ತೆತ್ತ್ದಿದಾರೆ.
ನರಸಿಂಗರಾವ ಸೂರ್ಯವಂಶಿ ಅವರ ರಾಜಕೀಯ ಗ್ರಾಫ್ ಏಕಮುಖಿಯಾಗಿಲ್ಲ. ಅದು ಬಹುತೇಕ ಎಲ್ಲ ರಾಜಕಾರಣಿಗಳ ಹಾಗೆ ಏರಿಳಿತಗಳಿಂದ ಕೂಡಿದೆ. ವಿದ್ಯಾಥರ್?ಯಾಗ್ದಿದ ದಿನಗಳಲ್ಲಿಯೇ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡವರು ನರಸಿಂಗರಾವ್. ಬಿ.ಎಸ್ಸಿ. ಪದವೀ ವಿದ್ಯಾಥರ್?ಯಾಗ್ದಿದಾಗ ಸಂಜಯ್ಗಾಂಧಿ ನೇತೃತ್ವದ ಯುವ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡ್ದಿದರು. ೧೯೭೪ರಲ್ಲಿ ಪದವೀಧರ ಆಗುತ್ತ್ದಿದಂತೆಯೇ ‘ಸಮಾಜ ಸೇವೆ’ಯತ್ತ ಮುಖ ಮಾಡಿ ತನ್ನ ಸಮುದಾಯದ ಯುವಕರಿಗೆ ಶಿಕ್ಷಣದ ಮಹತ್ವ ವಿವರಿಸುವ ಮತ್ತು ಅದಕ್ಕಾಗಿ ಸಕರ್?ರದ ಸೌಲಭ್ಯ ಕೊಡಿಸುವುದರಲ್ಲಿ ನಿರತರಾದರು.
೨೧ನೇ ಶತಮಾನದಲ್ಲಿಯೇ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿ ಇರುವ ಔರಾದ್ ತಾಲ್ಲೂಕಿನ ಡೋಣಗಾಂವ (ಎಂ) ಸೂರ್ಯವಂಶಿ ಅವರ ಹುಟ್ಟೂರು. ಅಸ್ಪೃಶ್ಯ ಸಮುದಾಯದ ಮಾಂಗ್ (ಮಾದಿಗ) ಜಾತಿಗೆ ಸೇರಿದ ಸೂರ್ಯವಂಶಿ ಅವರ ಬಾಲ್ಯದ ದಿನಗಳು ಗಮನಾರ್ಹ. ಎಮ್ಮೆ ಕಾಯುತ್ತ್ದಿದ ನರಸಿಂಗರಾವ ಹಸು ಹತ್ತಿ ದೆಹಲಿ ತಲುಪಿದ ಕಥೆ ರೋಚಕ. ನರಸಿಂಗ್ ಅವರ ಅಪ್ಪ- ಅವ್ವ ಸೇರಿದಂತೆ ಮನೆಯವರೆಲ್ಲ ಕೃಷಿ ಕೂಲಿ ಕಾಮರ್?ಕರು. ನರಸಿಂಗರಾವ ಅವರ ತಂದೆಗೆ ಹೊಸತನ್ನು ಮಾಡುವ ಹಂಬಲ. ಅದಕ್ಕಾಗಿ ಆಕಳು ಖರೀದಿಸುವುದಕ್ಕೆ ಬೇಕಾಗುವಷ್ಟು ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾದರು. ಆ ಹಸು ಪ್ರತಿ ವರ್ಷಕ್ಕೆ ಒಂದು ಕರುವನ್ನು ನೀಡುತ್ತ ಕುಟುಂಬದ ಆದಾಯ ಹೆಚ್ಚಿಸುತ್ತ ಹೋಯಿತು. ಮನೆಯ ಹಿರಿ ಮಗನಾಗ್ದಿದ ನರಸಿಂಗ್ಗೆ ದನ ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿತ್ತು.
ಪ್ರಬಲ ಲಿಂಗಾಯತ ಮತ್ತು ಮರಾಠ ಸಮುದಾಯದ ನಡುವೆಯೇ ಇ?ದದ ಕೆಲವು ಸಮಾಜಾವಾದಿ ಚಿಂತನೆಯ ವ್ಯಕ್ತಿಗಳು ನರಸಿಂಗ್ ಅವರ ತಂದೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮಹತ್ವ ವಿವರಿಸಿದರು. ಇದರಿಂದಾಗಿ ದನ ಕಾಯುತ್ತ್ದಿದ ನರಸಿಂಗ್ ಶಾಲೆಯತ್ತ ಮುಖ ಮಾಡುವುದು ಸಾಧ್ಯವಾಯಿತು. ಮೀಸಲಾತಿಯ ಸೌಲಭ್ಯಗಳ ಜೊತೆಗಿನ ಕಷ್ಟ ನಷ್ಟಗಳ ನಡುವೆಯೇ ಪದವಿ ಪಡೆದರು. ಅದೇ ದಿನಗಳಲ್ಲಿ ನರಸಿಂಗ್ ಅವರ ತಂದೆ ತಮ್ಮ ಊರಿನ ದೇಶಮುಖರಿಂದ ಸಾಲ ಪಡೆದು ಹತ್ತು ಎಕರೆ ಜಮೀನು ಖರೀದಿಸುವಲ್ಲಿ ಯಶಸ್ವಿಯಾದರು. ‘ಪಾಲು’ ನೀಡಿ ಎರವಲು ಎತ್ತು ತಂದು ನೀಡಿ ಕೃಷಿ ಆರಂಭಿಸಿದರು. ಆದರೆ, ನರಸಿಂಗ್ ಅವರಿಗೆ ನಿಶ್ಚಿತ ಆದಾಯ ಎಂದು ಬರಲು ಆರಂಭವಾದ್ದದೇ ಸಂಸದನಾಗಿ ಆಯ್ಕೆಯಾದ ಮೇಲೆ.
ಪದವಿಯಲ್ಲಿ ಇ?ದದಾಗಲೇ ಯುವಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡ್ದಿದರೂ ನರಸಿಂಗ್ ಅವರಿಗೆ ಯಾರೂ ‘ಗಾಡ್ಫಾದರ್’ ಇರಲಿಲ್ಲ. ಅದಕ್ಕಾಗಿ ಸೂರ್ಯವಂಶಿ ಅವರು ಬೀದರ್ ಲೋಕಸಭೆಯಲ್ಲಿ ಸ್ಪಧರ್?ಸುವಲ್ಲಿ ಅವಕಾಶ ಕಲ್ಪಿಸುವಂತೆ ಅಂಚೆಯ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಅಜರ್? ಸಲ್ಲಿಸಿದರು. ಘಟಾನುಘಟಿ ನಾಯಕರ ಮಧ್ಯೆ ರಾಜಕೀಯದ ಎಬಿಸಿಡಿ.. ಗೊತ್ತಿಲ್ಲದ ಯುವಕನಿಗೆ ಅದೂ ಜಿಲ್ಲಾ ಕಾಂಗ್ರೆಸ್ ನಾಯಕರಿಗೇ ‘ಅಪರಿಚಿತ’ನಾಗ್ದಿದವನಿಗೆ ಟಿಕೆಟ್ ಸಿಗಬಹುದು ಎಂದು ಯಾರೂ ಅಂದಾಜು ಮಾಡಿರಲಿಲ್ಲ. ಆದರೆ, ಒಮ್ಮೊಮ್ಮೆ ಅಚ್ಚರಿಗಳು ಸಂಭವಿಸುತ್ತವೆ.
ಸೂರ್ಯವಂಶಿ ಅವರಿಗೆ ಬೀದರ್ ಮೀಸಲು ಕ್ಷೇತ್ರದಿಂದ ಸ್ಪಧರ್?ಸುವ (೧೯೮೦) ಅವಕಾಶ ದೊರೆತ್ದದು ಆಕಸ್ಮಿಕ. ಕಾಂಗ್ರೆಸ್ನಲ್ಲಿಯೂ ಆಗ ವಿಭಿನ್ನವಾಗಿ ಯೋಚಿಸುವವರು ಇ?ದದರು ಎನ್ನುವುದಕ್ಕೆ ಸೂರ್ಯವಂಶಿ ಅವರಿಗೆ ಟಿಕೆಟ್ ದೊರತ್ದದೇ ಸಾಕ್ಷಿ. ಮತ್ತು ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪಧರ್?ಸಿದರೆ ಗೆಲುವು ಕೂಡ ಸಾಧಿಸುವುದು ಸುಲಭವಿತ್ತು. ಸೂರ್ಯವಂಶಿ ಆಯ್ಕೆಯಾದ್ದದು ಕೂಡ ಅದೇ ಮಾನದಂಡದ ಮೇಲೆ. ಏಳನೇ ಲೋಕಸಭೆಯಲ್ಲಿ ಚುನಾಯಿತರಾದ ಸದಸ್ಯರ ಪೈಕಿ ಸೂರ್ಯವಂಶಿ ಅತ್ಯಂತ ಕಿರಿಯ ವಯಸ್ಸಿನವರಾಗ್ದಿದರು.
ಅದಕ್ಕೂ ಮುನ್ನ ಮುಖ್ಯಮಂತ್ರಿಯಾಗ್ದಿದ ದೇವರಾಜು ಅರಸು ಅವರು ಇಂದಿರಾ ಕಾಂಗ್ರೆಸ್ ತೊರೆದ್ದಿದರು. ಲೋಕಸಭಾ ಚುನಾವಣೆಯ ನಂತರ ಉಂಟಾದ ರಾಜಕೀಯ ಸ್ಥಿತ್ಯಂತರದಲ್ಲಿ ವಿರೋಧ ಪಕ್ಷದ ನಾಯಕರಾಗ್ದಿದ ಆರ್. ಗುಂಡೂರಾವ್ ಮುಖ್ಯಮಂತ್ರಿಯಾದರು. ಗುಂಡೂರಾವ್ ಆಡಳಿತದ ಬಗ್ಗೆ ಎಲ್ಲೆಡೆ ಅಪಸ್ವರ ಕೇಳಿಸಲು ಆರಂಭವಾಯಿತು. ಮಾಧ್ಯಮಗಳು ಗುಂಡೂರಾವ ಕಾರ್ಯವೈಖರಿಯನ್ನು ಬಿಚ್ಚಿಡಲು ಆರಂಭಿಸಿದವು. ಅದೇ ದಿನಗಳಲ್ಲಿ ಮುಖ್ಯಮಂತ್ರಿ ಬದಲಿಸಬೇಕು ಎನ್ನುವ ಪ್ರಸ್ತಾಪ ನಡೆಯಿತು. ಅದೇ ಹೊತ್ತಿಗೆ ಎರಡು ರಾಜ್ಯಗಳಲ್ಲಿ ವಿಧಾನಸಭೆಯ ಚುನಾವಣೆಗಳ್ದಿದವು. ಮುಖ್ಯಮಂತ್ರಿ ಹ್ದುದೆಯನ್ನು ದಲಿತ ನಾಯಕನಿಗೆ ನೀಡುವ ಮೂಲಕ ರಾಜಕೀಯ ಲಾಭ ಗಳಿಸಲು ಇಂದಿರಾ ಯೋಚಿಸುತ್ತ್ದಿದಾರೆ ಎಂಬ ಚಚರ್? ಆರಂಭವಾಯಿತು.
ಸಂಸದನಾಗಿ ಆಯ್ಕೆಯಾದ ನಂತರ ಸೂರ್ಯವಂಶಿ ಅವರು ಕ್ರಿಯಾಶೀಲರಾಗಿ ಕೆಲಸ ಮಾಡಲು ಆರಂಭಿಸ್ದಿದ ದಿನಗಳವು. ದಕ್ಷಿಣ ಭಾರತದ ಏಕೈಕ ‘ಕೈಗಾರಿಕಾ ರಹಿತ ಜಿಲ್ಲೆ’ ಎಂದು ಘೋಷಣೆ ಮಾಡಿಸುವ ದೂರದೃಷ್ಟಿ ತೋರಿಸ್ದಿದರು. ಆ ಮೂಲಕ ಕೈಗಾರಿಕೋದ್ಯಮ ಬೆಳೆಸುವುದು ಮತ್ತು ಜಿಲ್ಲೆಯ ಆಥರ್?ಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಯೋಚಿಸ್ದಿದರು. ಭರವಸೆಯ ನಾಯಕನಂತೆ ಕಾಣಿಸುತ್ತ್ದಿದ ಸೂರ್ಯವಂಶಿ ಮುಂದಿನ ಮುಖ್ಯಮಂತ್ರಿ ಆಗಲ್ದಿದಾರೆ ಎಂಬ ಚಚರ್?ಗೆ ಜೀವ ಬಂತು. ಗುಂಡೂರಾವ್ ಮತ್ತವರ ಬೆಂಬಲಿಗರು ಇಂದಿರಾ ಮೇಲೆ ಪ್ರಭಾವ ಬೀರಿ ಸಿಎಂ ಬದಲಾಗದಂತೆ ನೋಡಿಕೊಂಡರು. ಸೂರ್ಯವಂಶಿ ಹೆಸರು ಚಾಲ್ತಿಗೆ ಬಂದಷ್ಟೇ ವೇಗವಾಗಿ ಹಿಂದಕ್ಕೆ ಸರಿಯಿತು. ಆದರೆ, ಅದರಿಂದ ಸೂರ್ಯವಂಶಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಬೇಕಾಯಿತು. ಪ್ರಬಲ ಸಮುದಾಯದ ನಾಯಕರು ಸೂರ್ಯವಂಶಿ ಅವರಲ್ಲಿ ‘ಪ್ರತಿಸ್ಪಧರ್?’ಯನ್ನು ನೋಡಲು ಆರಂಭಿಸಿದರು.
ನಂತರದ ಹೆಜ್ಜೆಗಳು ಅಷ್ಟೇ ಸುಲಭ ಆಗಿರಲಿಲ್ಲ. ಪ್ರತಿಯೊಂದು ಹಂತದಲ್ಲಿಯೂ ಎಚ್ಚರದ ಹೆಜ್ಜೆ ಇಡಬೇಕಾಗಿತ್ತು.
ಬೀದರ್ ಜಿಲ್ಲೆಯ ಪ್ರಮುಖ ನಾಯಕ ಭೀಮಣ್ಣ ಖಂಡ್ರೆ ಅವರು ಮೊದಲ ಬಾರಿಗೆ ಸೋಲು ಕಂಡ್ದಿದರು. ಆಗ ರೇಲ್ವೆ ಇಲಾಖೆಗೆ ಸಂಬಂಧಿಸಿದ ಸಮಾರಂಭ ನಡೆಯಿತು. ಸಂಸದರಾಗ್ದಿದ ಸೂರ್ಯವಂಶಿ ಸಹಜವಾಗಿಯೇ ವೇದಿಕೆ ಮೇಲೆ ಆಸೀನರಾಗ್ದಿದರು. ಹಿರಿಯ ನಾಯಕರೆಂದು ಭಾವಿಸ್ದಿದ ಖಂಡ್ರೆ ಅವರು ಸಾರ್ವಜನಿಕರ ಮೊದಲ ಸಾಲಿನಲ್ಲಿ ಕೂಡಬೇಕಾಯಿತು. ಅಧಿಕಾರ ಇಲ್ಲದ್ದಿದರೂ ವೇದಿಕೆಯ ಮೇಲೆ ಕರೆಯಬೇಕು ಎಂಬ ‘ಆಸೆ’ ಖಂಡ್ರೆ ಅವರಿಗೆ ಇತ್ತಂತೆ. ತಮ್ಮ ಪಕ್ಷದ ಮುಖಂಡನನ್ನು ಸೂರ್ಯವಂಶಿ ವೇದಿಕೆಗೆ ಕರೆಯುವ ಗೋಜಿಗೆ ಹೋಗಲಿಲ್ಲ. ಮುನಿಸಿನಿಂದಲೇ ಸಭೆಯಿಂದ ಹೊರನಡೆದರು ಖಂಡ್ರೆ. ಸೂರ್ಯವಂಶಿ ಅದನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ.
ಕೇವಲ ಇದೊಂದೇ ಘಟನೆಯಲ್ಲ. ಪಕ್ಷದಲ್ಲಿ ತಮ್ಮ ಅಭಿಪ್ರಾಯ ನಡೆಯುವ ಕಡೆಗಳಲ್ಲಿ ಖಂಡ್ರೆ ಅವರಿಗೆ ‘ಅವಕಾಶ’ ಸಿಗದಂತೆ ನೋಡಿಕೊಳ್ಳುತ್ತ್ದಿದಾರೆ ಎಂಬ ಮಾತುಗಳು ಚಾಲ್ತಿಗೆ ಬಂದು ರೆಕ್ಕೆಪುಕ್ಕಗಳೊಂದಿಗೆ ಹಾರಾಡಲು ಆರಂಭಿಸಿದವು. ಅವುಗಳನ್ನು ಕಡಿಮೆ ಮಾಡಬೇಕು ಎನ್ನುವ ಮುಂದಾಲೋಚನೆ ಸೂರ್ಯವಂಶಿ ಅವರಿಗೆ ಹೊಳೆಯಲಿಲ್ಲ. ಸತತ ಮೂರು ಬಾರಿಗೆ ಸಂಸದರಾಗಿ ಆಯ್ಕೆಯಾದ್ದದು ಅವರ ಯೋಚನಾಶಕ್ತಿಯನ್ನು ಕುಂದಿಸಿತ್ತು.
ನಾಲ್ಕನೇ ಚುನಾವಣೆಯ ಸಂದರ್ಭದಲ್ಲಿ ಖಂಡ್ರೆ ಅವರು ಕಾಂಗ್ರೆಸ್ನಲ್ಲಿಯೇ ಇ?ದದರು. ಕಾಂಗ್ರೆಸ್ ನಾಯಕರಾಗ್ದಿದರೂ ರಿಟೈರ್ ಆಗಿ ಮೂಲೆಯಲ್ಲ್ದಿದ ರಾಮಚಂದ್ರ ವೀರಪ್ಪ ಎಂಬ ಹೆಬ್ಬಟ್ಟಿನ ನಾಯಕರನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಲಾಯಿತು. ಕಾಂಗ್ರೆಸ್ಸಿಗರು ಒಳಒಪ್ಪಂದದ ಮೂಲಕ ಬಿಜೆಪಿ ಅಭ್ಯಥರ್?ಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಸೂರ್ಯವಂಶಿ ಮೂಲೆಗುಂಪಾದರು. ಮೀಸಲು ಕ್ಷೇತ್ರಗಳಲ್ಲಿ ನಿರಪಯಕಾರಿ, ನಿರುಪಯುಕ್ತ ನಾಯಕರನ್ನು ಆರಿಸುವ ಪರಿಪಾಠ ಆಗಲೇ ಆರಂಭವಾಗಿತ್ತು. ಬೀದರ್ನಲ್ಲಿ ಅದು ಮುಂದುವರೆಯಿತು. ಸೂರ್ಯವಂಶಿ ಅವರ ಕೇವಲ ಕನಸುಗಾರಿಕೆ ಕೆಲಸ ಮಾಡಲಿಲ್ಲ.
ರಾಮಚಂದ್ರ ವೀರಪ್ಪ ಅವರು ಸಕ್ರಿಯ ರಾಜಕಾರಣಕ್ಕೆ ಮರಳಿದ ನಂತರದ ೧೩ ವರ್ಷಗಳ ಕಾಲ ಸೂರ್ಯವಂಶಿ ‘ರಾಜಕೀಯ’ದಿಂದ ದೂರ ಉಳಿದು ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತ್ದಿದರು. ಚುನಾವಣೆ ಬಂದಾಗ ಮತ್ತು ಪ್ರಮುಖ ನಾಯಕರ ಬೀದರ್ ಭೇಟಿಯ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಮೂಲಕ ಆಸೆ ಜೀವಂತ ಇಟ್ಟುಕೊಂಡ್ದಿದರು.
೨೦೦೪ರ ಮಾಚರ್?ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯ ರಾಮಚಂದ್ರ ವೀರಪ್ಪ ಚುನಾಯಿತರಾದರು. ೧೪ನೇ ಲೋಕಸಭೆಯಲ್ಲಿ ಚುನಾಯಿತರಾದ ಸದಸ್ಯರ ಪೈಕಿ ಅತ್ಯಂತ ಹಿರಿಯ ವಯಸ್ಸಿನವರಾಗ್ದಿದರು. ಅವರಿಗಾಗ ೯೬ ವರ್ಷ. ಬಿಜೆಪಿಗೆ ಅಧಿಕಾರದಲ್ಲಿ ಇರುವುದಕ್ಕೆ ಬೇಕಾದಾಗಲೆಲ್ಲ ಸಂಖ್ಯೆ ಹೆಚ್ಚಿಸುವುದಕ್ಕಾಗಿ ದೆಹಲಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಜನರಿಗೂ ಕೂಡ ರಾಮಚಂದ್ರ ವೀರಪ್ಪ ಅವರ ಆಕರ್ಷಕ ಮಾತುಗಾರಿಕೆ ಸಾಕಾಗಿತ್ತು. ಆದರೆ, ಚುನಾವಣೆ ನಡೆದ ೨-೩ ತಿಂಗಳಲ್ಲಿಯೇ ಸಂಸದರು ನಿಧನರಾದ್ದದರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಿತು. ಸೂರ್ಯವಂಶಿ ಅವರ ಅಜ್ಞಾತವಾಸ ಕೊನೆಗೊಂಡಿತು.
ನಾಲ್ಕನೇ ಬಾರಿಗೆ ನಾಲ್ಕುವರೆ ವರ್ಷಗಳ ಕಾಲ ಸಂಸದರಾದರು. ಈ ಅವಧಿಯಲ್ಲಿ ಅವರಿಂದ ಹೇಳಿಕೊಳ್ಳುವಂತಹ ಕೆಲಸ ಆಗಿಲ್ಲ ಎಂಬುದೇ ಎಲ್ಲರ ಅಭಿಪ್ರಾಯ. ಅದನ್ನವರು ನಿರಾಕರಿಸುವುದಿಲ್ಲ ಕೂಡ. ಬೀದರ್- ಗುಲ್ಬರ್ಗ ರೇಲ್ವೆ ಲೈನ್ ಕಾಮಗಾರಿ ಚುರುಕುಗೊಂಡು ಬೀದರ್ ಜಿಲ್ಲೆಯಲ್ಲಿನ ಕೆಲಸ ತ್ವರಿತಗತಿಯಲ್ಲಿ ಆಗುವಂತೆ ಮಾಡ್ದಿದು, ರಕ್ಷಣಾ ಇಲಾಖೆಯ ಬೀದರ್ ರನ್ವೇಅನ್ನು ನಾಗರಿಕ ವಿಮಾನಯಾನಕ್ಕೆ ಬಳಸಲು ಅನುಮತಿ ನೀಡಿಸ್ದಿದು, ರಸ್ತೆಗಳ ಅಭಿವೃದ್ಧಿಗಾಗಿ ೫೮ ಕೋಟಿ ರೂಪಾಯಿ ಬಿಡುಗಡೆ ಮಾಡಿಸ್ದಿದು ಅವರ ಸಾಧನೆಯ ಪಟ್ಟಿಯಲ್ಲಿ ಬರುತ್ತವೆ. ಆದರೆ, ಅದನ್ನವರು ಗಟ್ಟಿಯಾದ ಧ್ವನಿಯಲ್ಲಿ ಹೇಳುವುದಿಲ್ಲ. ತಣ್ಣಗಿನ ಮಾತುಗಳಲ್ಲಿ ‘ನನ್ನ ಕೈಲಾದ ಕೆಲಸ ಮಾಡ್ದಿದೇನೆ’ ಎಂದು ಸುಮ್ಮನಾಗುತ್ತಾರೆ.
ಕ್ಷೇತ್ರ ಪುನರ್ವಿಂಗಡಣೆಯ ನಂತರ ಬೀದರ್ ಲೋಕಸಭಾ ಕ್ಷೇತ್ರ ಸಾಮಾನ್ಯ ಅಭ್ಯಥರ್?ಗಳಿಗಾಗಿ ತೆರವಾಯಿತು. ಸ್ಥಾನ ವಂಚಿತರಾಗುವ ಆತಂಕದಿಂದ ಔರಾದ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಕಣಕ್ಕೆ ಇಳಿದರು. ಔರಾದ್ ಕ್ಷೇತ್ರ ಪ್ರತಿನಿಧಿಸುತ್ತ್ದಿದ ಗುರುಪಾದಪ್ಪ ನಾಗಮಾರಪಳ್ಳಿ ಅವರು ಬೀದರ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗ್ದಿದರು. ಅಲ್ಪಸಂಖ್ಯಾತರು ಹೆಚ್ಚಾಗಿರುವ ಬೀದರ್ ಕ್ಷೇತ್ರದಲ್ಲಿ ಗುರುಪಾದಪ್ಪ ಅವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಿರಾಕರಿಸಿತು. ಆಗ ಪಕ್ಷ ತೊರೆಯುವ ಮಾತುಗಳನ್ನು ಗುರುಪಾದಪ್ಪ ಆಡಲು ಆರಂಭಿಸಿದರು. ಔರಾದ್ನಲ್ಲಿ ಕಾಂಗ್ರೆಸ್ ಎಂದರೇ ಗುರುಪಾದಪ್ಪ. ಅವರಿಲ್ಲದೆ ಕಾಂಗ್ರೆಸ್ ಗೆಲ್ಲುವುದು ಸಾಧ್ಯವೇ ಇಲ್ಲ ಎಂದು ಭಾವಿಸಿದ ಸೂರ್ಯವಂಶಿ ಹೈಕಮಾಂಡ್ ಮೇಲೆ ಒತ್ತಡ ತಂದು ಟಿಕೆಟ್ ಕೊಡಿಸಿದರು. ಅದನ್ನು ಕೂಡ ಹೇಳಲಿಲ್ಲ.
ರಾಜಕೀಯ ಲಾಭದ ಆಕಾಂಕ್ಷೆಯಿಂದ ಅಥವಾ ತಾವೇ ಹಿಂದೆ ಮಾಡ್ದಿದ ಪ್ರಬಲರ ವಿರೋಧಿ ರಾಜಕಾರಣದಿಂದ ಉಂಟಾದ ನಷ್ಟದ ಅನುಭವ ಅವರನ್ನು ಪ್ರಬಲರ ಪರವಾಗಿ ರಾಜಕೀಯ ಮಾಡುವಂತೆ ಮಾಡಿಸಿತು. ಇದು ಅಲ್ಪಸಂಖ್ಯಾತರ ಮುನಿಸಿಗೆ ಕಾರಣವಾಯಿತು. ತಾವು ಮತ್ತು ಕಾಂಗ್ರೆಸ್ ನಂಬ್ದಿದ ಹಿಂದುಳಿದ, ಅಲ್ಪಸಂಖ್ಯಾತರ ಮತಬ್ಯಾಂಕ್ ಕೈಬಿಟ್ಟು ಹೋಯಿತು. ಸೂರ್ಯವಂಶಿ ದಯನೀಯ ರೀತಿಯಲ್ಲಿ ಸೋಲು ಅನುಭವಿಸಿದರು. ಗುರುಪಾದಪ್ಪ ಅವರ ಕಷ್ಟಕಾಲದಲ್ಲಿ ಸೂರ್ಯವಂಶಿ ಸಹಾಯಕ್ಕೆ ನಿಂತ್ದಿದರು. ಆದರೆ, ಗುರುಪಾದಪ್ಪ ಅದನ್ನು ಮರಳಿಸಲಿಲ್ಲ. ಸೂರ್ಯವಂಶಿ ಕೇವಲ ಚುನಾವಣೆಯಲ್ಲಿ ಸೋಲಲಿಲ್ಲ. ಅಂದಾಜು ಮಾಡುವಲ್ಲಿ ಸೋತರು. ಜಾತಿ ರಾಜಕಾರಣದ ಒಳಸುಳಿಗಳು ಉಂಟು ಮಾಡುವ ಅಪಾಯ ಅರಿಯುವಲ್ಲಿ ಸೂರ್ಯವಂಶಿ ವಿಫಲರಾದರು.
ಬೀದರ್ ಜಿಲ್ಲೆಯ ಮಾರ್ಗವಾಗಿ ರಿಲಯನ್ಸ್ ಕಂಪೆನಿಯ ಗ್ಯಾಸ್ ಪೈಪ್ ಹಾದು ಹೋಗುತ್ತದೆ. ಅನಿಲ ಬಳಸಿ ವಿದ್ಯುತ್ ಉತ್ಪಾದಿಸಿ ಅದನ್ನು ಕೈಗಾರಿಕೆಗಳಿಗೆ ಗುಣಮಟ್ಟದ ವಿದ್ಯುತ್ ನೀಡಬೇಕು. ಅದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸಕರ್?ರ ಮುಂದಾಗಬೇಕು ಎಂಬ ಯೋಜನೆಯನ್ನು ಸೂರ್ಯವಂಶಿ ಸಿದ್ಧಪಡಿಸ್ದಿದರು. ಅದನ್ನು ಹೇಳುವುದು ಮತ್ತು ಪ್ರತಿಪಾದಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಅವರ ಸಂಸದಗಿರಿಯ ಕೊನೆಯ ಆರೆಂಟು ತಿಂಗಳು ಸೋಲಿನ ಹಳಹಳಿಕೆಯಲ್ಲಿಯೇ ಕಳೆದರು. ಜಾತಿಯ ಪ್ರಾಬಲ್ಯದ ನಡುವೆ ಅವರ ಕನಸುಗಾರಿಕೆ ಕಮರಿಹೋದ್ದದು ಇಂಡಿಯಾದ ವಿಚಿತ್ರ ವಾಸ್ತವ.
ಇಂತಹ ಕಾರಣಗಳಿಗಾಗಿಯೇ ಸೂರ್ಯವಂಶಿ ಅಂತವರಿಗೆ ‘ಇತಿ’ಹಾಸದಿಂದ ಅನ್ಯಾಯವಾಗುತ್ತದೆ. ಆದರೆ ಅದಕ್ಕಾಗಿ ಕೂಡ ಅವರು ಗೊಣಗುವುದಿಲ್ಲ. ಅನ್ಯಾಯಕ್ಕೆ ಒಳಗಾಗುವಲ್ಲಿ ಅವರ ಪಾಲೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ