ಬೀದರ್ -ಬಿಸಿಲಲ್ಲ; ಝರಿಗಳ ನಾಡು: ಬೀದರ್
ಕರ್ನಾಟಕದ ನಕಾಶೆಯಲ್ಲಿ ಅತ್ಯಂತ ಮೇಲ್ಭಾಗದ ತುತ್ತತುದಿಯಲ್ಲಿ ಇರುವ ಜಿಲ್ಲೆ ಬೀದರ್. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಅತ್ಯಂತ ದೂರದಲ್ಲಿ ಇರುವ ಜಿ. ಕೇವಲ ರಾಜಧಾನಿಯಿಂದ ಮತ್ರವಲ್ಲದೆ ರಾಜ್ಯದ ಎಲ್ಲ ಜಿಗಳಿಂದಲೂ ‘ದೂರ’ ಇರುವಂತಹದ್ದು. ಈ ದೂರ ಕೇವಲ ಭೌಗೋಳಿಕ ಮತ್ರ ಅಲ್ಲ ‘ಮನಸಿಕ’ವಾದದ್ದು. ‘ದೂರ’ ಇರುವ ಕಾರಣಕ್ಕಾಗಿ ಬೀದರ್ ಬಗ್ಗೆ ರಾಜ್ಯದ ಜನತೆಗೆ ವಾಸ್ತವಕ್ಕಿಂತ ಕಾಲ್ಪನಿಕ ಚಿತ್ರವೇ ಕಣ್ಮುಂದೆ ಬರುತ್ತದೆ. ಬೀದರ್ ಕುರಿತು ‘ಕಥೆ’ಗಳು ‘ಕಟ್ಟುಕಥೆ’ಗಳು, ದಂತಕಥೆಗಳು ಸಾಕಷ್ಟಿವೆ. ಅವುಗಳಲ್ಲಿ ಎಲ್ಲವಕ್ಕೂ ಹುರುಳಿಲ್ಲ ಎಂದೇನಲ್ಲ. ಭೌತಿಕ ದೂರದಿಂದಾಗಿ ಕಥೆಗಳಿಗೆ ಹೆಚ್ಚಿನ ರಂಜನೀಯತೆಯ ಗುಣಬಂದಿದೆ.
‘ಬೀದರ್’ ಎಂದರೆ ಬರಗಾಲದ ನಾಡು. ನೀರಿಲ್ಲದ ಊರು ‘ಬೀದರ್’ ಎಂಬ ಮತು ಮೇಲಿಂದ ಮೇಲೆ ಕೇಳಿ ಬರುತ್ತವೆ. ‘ಗುಲ್ಬರ್ಗ ಬಿಸಿಲ ನಾಡು’ ನಕಾಶೆಯಲ್ಲಿ ಅದಕ್ಕಿಂತ ಮೇಲ್ಭಾಗದಲ್ಲಿ ಇರುವ ಬೀದರ್‌ನ ಬೇಸಿಗೆಯಲ್ಲಿ ‘ಕೆಂಡ’ವೇ ಸುತ್ತ ಇರಬಹುದು ಎಂಬ ತಪ್ಪುಕಲ್ಪನೆಯಿದೆ. ಅವುಗಳನ್ನೆಲ್ಲ ಪಟ್ಟಿ ಮಡಿ, ಸಮಜಾಯಿಷಿ ನೀಡುವ ಉದ್ದೇಶವಿಲ್ಲ. ಸದ್ಯ ಇರುವ ವಾಸ್ತವ ಚಿತ್ರಣ ಅಥವಾ ನೈಜ ಬೀದರ್ ಬಗ್ಗೆ ಕೆಲವು ಟಿಪ್ಪಣಿಗಳನ್ನು ಇಲ್ಲಿ ನೀಡಲಾಗಿದೆ.
ಬಿಸಿಲಲ್ಲ, ಝರಿಗಳ ನಾಡು:
ಬೀದರ್ ಸಮಶೀತೋಷ್ಣ ವಲಯದ ನಾಡು. ಗುಲ್ಬರ್ಗದ ಬಿಸಿಲ ಬೇಗೆಯಗಲಿ, ಬಿಜಾಪುರದ ನೀರಿಲ್ಲದ ಸ್ಥಿತಿಯಗಲಿ ಬೀದರ್‌ಗಿಲ್ಲ. ಬೇಸಿಗೆಯಲ್ಲೂ ಕೂಡ ಬೀದರ್‌ನ ಉಷ್ಣಾಂಶ ೩೯ ಡಿಗ್ರಿಗಿಂತ ಹೆಚ್ಚಾಗಿರುವುದಿಲ್ಲ. ಸಮುದ್ರ ಮಟ್ಟದಿಂದ ೨,೩೩೦ ಅಡಿ ಎತ್ತರದಲ್ಲಿದೆ. ಬಹುತೇಕ ಮಡಿಕೇರಿ ಜಿಯಷ್ಟು ಸಮುದ್ರಮಟ್ಟದಿಂದ ಎತ್ತರದಲ್ಲಿ ಇರುವ ಬೀದರ್‌ನಲ್ಲಿ ವಾರ್ಷಿಕ ಮಳೆಯ ಸರಾಸರಿ ಪ್ರಮಣ ಶಿವಮೊಗ್ಗ ಜಿಯಷ್ಟಿದೆ. ಮಳೆಯ ವಾರ್ಷಿಕ ಸರಾಸರಿ ೮೪೭.೨ ಮಿ.ಮೀಟರ್. ಜಿಯ ಬಹುತೇಕ ಪ್ರದೇಶ ಲ್ಯಾಟ್ರೈಟ್ (ಕೆಂಪು ಬಣ್ಣದ ಹರಳು ಮಿಶ್ರಿತ ಗಟ್ಟಿಯದ ನೆಲ)ನಿಂದ ಕೂಡಿದ್ದರೆ ಸ್ವಲ್ಪ ಭಾಗ ಕಪ್ಪುನೆಲವಿದೆ. ಬೀದರ್ ನಗರವೂ ಸೇರಿದಂತೆ ಜಿಯದ್ಯಂತ ಸತತವಾಗಿ ಹರಿಯುವ ‘ಝರಿ’ಗಳಿವೆ. ಬೀದರ್ ನಗರದ ಪ್ರತಿಯೊಂದು ಮನೆಗಳಲ್ಲಿಯೂ ಬಾವಿಗಳಿವೆ. ಗೋದಾವರಿ ನದಿ ಕಣಿವೆಯಲ್ಲಿ ಬರುವ ರಾಜ್ಯದ ಏಕೈಕ ಜಿ ಬೀದರ್.
ಬೀದರ್‌ನಲ್ಲಿ ನೀರು ಸಮೃದ್ಧವಾಗಿದೆ ಎನ್ನುವ ಕಾರಣಕ್ಕಾಗಿಯೇ ಕಬ್ಬು ಜಿಯ ಪ್ರಧಾನ ಬೆಳೆಯಗಿದೆ. ನಂತರದ ಸ್ಥಾನ ಉದ್ದು, ಕಡಲೆ, ತೊಗರಿ, ಹೆಸರುಗಳಂತಹ ದ್ವಿದಳ ಧಾನ್ಯದ್ದು. ಜೋಳ ಕೂಡ ಪ್ರಮುಖ ಬೆಳೆಯಗಿದೆ. ನೆಲದ ಅಸಮತೋಲನ ‘ಹಂಚಿಕೆ’ಯಿಂದಾಗಿ ಉಳ್ಳವರು ಮತ್ತು ಇಲ್ಲದವರ ನಡುವಿನ ‘ಅಂತರ’ ಬೇರೆಲ್ಲ ಕಡೆಗಳಿಗಿಂತ ಹೆಚ್ಚಾಗಿದೆ. ಹೀಗಾಗಿ ತಲಾವಾರು ಆದಾಯ ಅತ್ಯಂತ ಕಡಿಮೆ ಇದೆ. ಜಿಯ ಜನರ ಕೈಗೆ ಕೆಲಸ ನೀಡುವ ಉದ್ದಿಮೆಗಳು ಇಲ್ಲದೇ ಇರುವುದರಿಂದ ಆದಾಯದ ಮೂಲಗಳು ಸೀಮಿತವಾಗಿವೆ. ‘ಮಧ್ಯಮ ವರ್ಗ’ವು ಅಲ್ಪಸಂಖ್ಯಾತ ಆಗಿರುವುದರಿಂದ ಸಾಂಸ್ಕೃತಿಕ ವಾತಾವರಣ ಬಹುತೇಕ ‘ಶೂನ್ಯ’. ಸಮಜದಲ್ಲಿ ಚಲನಶೀಲತೆ ತರುವ, ಚಳವಳಿಗಳ ಮೂಲಕ ಆರೋಗ್ಯಕರ ಸಮತೋಲನ ತರುವ, ಕಾಪಾಡುವ ಅಂಶಗಳು ಕಡಿಮೆ.
ಜಿಯಲ್ಲಿ ಒಟ್ಟು ಐದು ತಾಲ್ಲೂಕುಗಳಿವೆ. ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಬೀದರ್‌ನ್ನು ಮೂರು ರಾಜ್ಯಗಳಲ್ಲಿ ಹಂಚಲಾಯಿತು. ಅದಕ್ಕೆ ಜಿಯ ಭಾಷಾ ವೈವಿಧ್ಯತೆಯೇ ಕಾರಣ. ೧೯೫೬ರಲ್ಲಿ ‘ವಿಶಾಲ ಮೈಸೂರು’ ರಾಜ್ಯದಲ್ಲಿ ಸೇರ್ಪಡೆಯಗುವ ಮುನ್ನ ಹೈದರಾಬಾದ್ ಪ್ರಾಂತ್ಯದಲ್ಲಿತ್ತು. ಜಿಯ ಒಂಬತ್ತು ತಾಲ್ಲೂಕುಗಳ ಪೈಕಿ ಬೀದರ್, ಔರಾದ್, ಭಾಲ್ಕಿ ಮತ್ತು ಹುಮನಾಬಾದ್ ತಾಲ್ಲೂಕುಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ತೆಲುಗು ಭಾಷಿಕರು ಹೆಚ್ಚಾಗಿರುವ ನಾರಾಯಣಖೇಡ, ಜಹೀರಾಬಾದ್ ಆಂಧ್ರಪ್ರದೇಶಕ್ಕೆ ಸೇರಿದರೆ ಮರಾಠಿ ಮತನಾಡುವ ಜನರ ಹೆಚ್ಚಿರುವ ಉದ್ಗೀರ್. ಅಹ್ಮದಪುರ, ನಿಲಂಗಾ ಮಹಾರಾಷ್ಟ್ರಕ್ಕೆ ಸೇರ್ಪಡೆಯದವು. ಏಕೀಕರಣದ ನಂತರ ಹುಮನಾಬಾದ್ ತಾಲ್ಲೂಕನ್ನು ವಿಭಜಿಸಿ ‘ಬಸವಕಲ್ಯಾಣ’ ಎಂಬ ಹೊಸ ತಾಲ್ಲೂಕು ರಚಿಸಲಾಯಿತು.
ಐತಿಹಾಸಿಕ ಪರಂಪರೆ:
ರಾಜ್ಯದ ಅತ್ಯಂತ ಹಳೆಯ ನಗರಗಳ ಪಟ್ಟಿಯಲ್ಲಿ ಬೀದರ್ ಮತ್ತು ಬಸವಕಲ್ಯಾಣ ಪ್ರಮುಖ ಸ್ಥಾನ ಪಡೆಯುತ್ತವೆ. ಎರಡೂ ಕಡೆಗಳಲ್ಲಿ ಬೃಹತ್ ಸಾಮ್ರಾಜ್ಯಗಳು ಉದಯಿಸಿ, ಅಂತ್ಯ ಕಂಡಿವೆ. ಮನ್ಯಖೇಟಕ್ಕಿಂತ ಬೀದರ್ ಜಿಯ ಮಯೂರಕಿಂಡಿ (ಮೋರಖಿಂಡಿ) ರಾಷ್ಟ್ರಕೂಟರ ರಾಜಧಾನಿಯಗಿತ್ತು. ಅದಾದ ಮೇಲೆ ಬಂದದ್ದು ಕಲ್ಯಾಣ ಚಾಲುಕ್ಯರ ಕಾಲ. ಆರನೇ ವಿಕ್ರಮದಿತ್ಯ ಮತ್ತು ಮೂರನೇ ಸೋಮೇಶ್ವರನ ನಂತರ ಚಾಲುಕ್ಯರ ಆಳ್ವಿಕೆ ಕುಸಿತ ಕಂಡಿತು. ಕಳಚುರಿ ಬಿಜ್ಜಳ ಅಧಿಕಾರಕ್ಕೆ ಬಂದ. ೧೨ನೇ ಶತಮನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳವಳಿಗೆ ಸಾಕ್ಷಿಯಯಿತು.
ಬಹಮನಿ ಅರಸರ ರಾಜಧಾನಿಯದ ನಂತರ ಬೀದರ್ ಪ್ರವರ್ಧಮನಕ್ಕೆ ಬಂತು. ದಕ್ಷಿಣ ಭಾರತದ ಬಹುತೇಕ ಪ್ರದೇಶವನ್ನು ವ್ಯಾಪಿಸಿದ್ದ ಬಹಮನಿ ಸಾಮ್ರಾಜ್ಯದಲ್ಲಿ ಪ್ರಧಾನಿಯಗಿದ್ದ ಮಹಮೂದ್ ಗಾವಾನ್ ಶಿಕ್ಷಣದ ಜೊತೆಗೆ ಆಡಳಿತಾತ್ಮಕ ಸುಧಾರಣೆಗೆ ಒತ್ತು ನೀಡಿದ. ಗಾವಾನ್‌ನ ‘ಕೊಲೆ’ಯೊಂದಿಗೆ ಬಹಮನಿಯ ಕುಸಿತ ಆರಂಭವಾಯಿತು. ಐದು ಸಾಮ್ರಾಜ್ಯಗಳಾಗಿ ಒಡೆದು ಹೋಯಿತು. ಬರೀದ್‌ಷಾಹಿ ಅರಸರಿಗೆ ಬೀದರ್ ನೆಲೆ ಕಲ್ಪಿಸಿತು. ಔರಂಗಜೇಬ್ ಯುವರಾಜನಾಗಿದ್ದ ಸಂದರ್ಭದಲ್ಲಿ ಬೀದರ್ ವಶಪಡಿಸಿಕೊಂಡ. ನಂತರ ಹೈದರಾಬಾದ್ ನಿಜಾಂರ ಆಳ್ವಿಕೆಗೆ ಒಳಪಟ್ಟಿತು.
ಸೌಹಾರ್ದತೆಯೇ ಜೀವಾಳ:
ಇದೆಲ್ಲ ಇತಿಹಾಸದ ಮತಾಯಿತು. ಐತಿಹಾಸಿಕ, ಭೌಗೋಳಿಕ ಕಾರಣಗಳಿಂದಾಗಿ ಹಲವು ಭಾಷೆಗಳನ್ನಾಡುವ ಜನ ಜಿಯಲ್ಲಿದ್ದಾರೆ. ಜಿಯ ಭಾಷಾ ವೈವಿಧ್ಯತೆಯನ್ನು ಅರಿಯುವುದೇ ಒಂದು ಸೊಗಸು. ಕನ್ನಡ, ಉರ್ದು, ಮರಾಠಿ, ತೆಲುಗು ಮತನಾಡುವ ಜನ ಜಿಯಲ್ಲಿದ್ದಾರೆ. ತಮ್ಮ ಮನೆಯಲ್ಲಿ ಮತೃಭಾಷೆ ಬಳಸುವ ಜನ ಹೊರಗಡೆ ಸಂಪರ್ಕ ಭಾಷೆಯಗಿ ಹಿಂದಿ- ಉರ್ದು ಮಿಶ್ರಿತ ‘ದಖನಿ’ ಬಳಸುತ್ತಾರೆ. ಭಾಷಾ ಮತ್ತು ಕೋಮು ಸೌಹಾರ್ದ ಬೀದರ್‌ನ ಪ್ರಮುಖ ಲಕ್ಷಣ. ತೀರಾ ಸಂಕಷ್ಟದ ಕ್ಷಣಗಳನ್ನು ಹೊರತು ಪಡಿಸಿದರೆ ಭಾಷೆ ಮತ್ತು ಧರ್ಮದ ಕಾರಣಕ್ಕಾಗಿ ಜನ ಹೊಡೆದಾಡದ್ದು ಕಡಿಮೆ.
ಶ್ರೀಮಂತ: ನಿನ್ನೆ ಮತ್ರ ಅಲ್ಲ-ಇಂದು ಕೂಡ:
ವಾಯುಪಡೆಯ ತರಬೇತಿ ಕೇಂದ್ರ ಇರುವ ಬೀದರ್‌ನ ಸೂರ್ಯಕಿರಣ ಏರೋಬ್ಯಾಟಿಕ್ ತಂಡವು ಬಾನಂಗಣದಲ್ಲಿ ಸಾಹಸ ಪ್ರದರ್ಶನ ನೀಡುವ ಜಗತ್ತಿನ ಅತ್ಯುತ್ತಮ ತಂಡಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂಬತ್ತು ವಿಮನಗಳನ್ನು ಬಳಸಿ ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಜಗತ್ತಿನ ಮೂರು ತಂಡಗಳ ಪೈಕಿ ಭಾರತದ ವಾಯುಪಡೆಯೂ ಒಂದು. ಅದರ ಮೂಲ ನೆಲೆ ಇರುವುದು ಬೀದರ್‌ನಲ್ಲಿ. ಅತ್ಯಾಧುನಿಕ ‘ಹಾಕ್ ಎಂ.ಕೆ.೧೩೨’ ಯುದ್ಧ ವಿಮನ ಹಾರಾಟದ ತರಬೇತಿ ನೀಡುವ ದೇಶದ ಏಕೈಕ ಕೇಂದ್ರ ಬೀದರ್‌ನಲ್ಲಿದೆ.
ಮಹಿಳೆಯರ ಸ್ವಸಹಾಯ ಗುಂಪು (ಎಸ್‌ಎಚ್‌ಜಿ)ಗಳ ಮೂಲಕ ಜಿಯಲ್ಲಿ ನಡೆದ ಮೌನಕ್ರಾಂತಿ ಜಿಯ ಪ್ರಮುಖ ಮೈಲಿಗಲ್ಲು. ಜಿಯ ಎಸ್‌ಎಚ್‌ಜಿಗಳ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿ, ತರಬೇತಿ ಪಡೆಯುವುದಕ್ಕಾಗಿ ರಾಷ್ಟ್ರದ ವಿವಿಧ ಜಿಗಳಿಂದ ಅಧಿಕಾರಿಗಳು ಬೀದರ್ ಬರುತ್ತಾರೆ.
ಹಾಲು ಸಮೃದ್ಧಿಯ ಸಂಕೇತ. ಬೀದರ್‌ನಲ್ಲಿ ಹಾಲು ಸಮೃದ್ಧವಾಗಿದೆ. ಗುಜರಾತಿನಲ್ಲಿ ‘ಶ್ವೇತಕ್ರಾಂತಿ’ಗೆ ಕಾರಣರಾದ ಕುರಿಯನ್ ಅವರು ಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಲು ಉತ್ಪಾದಿಸುವ ಸಾಮರ್ಥ್ಯವನ್ನು ಕಂಡು ‘ಪೈಪ್‌ಲೈನ್ ಮೂಲಕ ಹಾಲು ಸರಬರಾಜು’ ಮಡಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಜಿಯ ಹಲವು ಕಡೆಗಳಲ್ಲಿ ತಯರಾಗು ಖೋವಾ ಮತ್ತಿತರ ಹಾಲಿನ ಪದಾರ್ಥಗಳು ಪರದೇಶಗಳಿಗೂ ರವಾನೆಯಗುತ್ತವೆ. ಎಲ್ಲ ಇರುವ, ಇದ್ದರೂ ಶಾಪಗ್ರಸ್ತವಾಗಿರುವ ಬೀದರ್‌ನ ‘ಶಾಪ ವಿಮೋಚನೆ’ ಲಕ್ಷಣಗಳು ಕಾಣಿಸಲು ಆರಂಭವಾಗಿವೆ. ಇನ್ನು ಮುಂದೆ ಬೀದರ್ ಬದಲಾಗಲಿದೆ.
**
ಮಹಲುಗಳ ಸಂಕೀರ್ಣ- ಬೀದರ್ ಕೋಟೆ
ಬಹಮನಿ ಮತ್ತು ಬರೀದ್‌ಷಾಹಿ ಅರಸರ ರಾಜಧಾನಿಯಗಿದ್ದ ಬೀದರ್‌ನಲ್ಲಿ ಇರುವ ಐತಿಹಾಸಿಕ ಮಹತ್ವದ ಕೋಟೆಯು ಹಲವು ಮಹಲುಗಳ (ಅರಮನೆ) ಸಂಕೀರ್ಣ. ಸುತ್ತ ಮೂರು ಕಂದಕ ಇರುವ ಭಾರತದ ಏಕೈಕ ಕೋಟೆ. ತುರ್ಕಿಯ ಯುದ್ಧನಿಪುಣರ ನಿಮಣ ಕೌಶಲ್ಯವು ‘ಸಾಕಾರ’ಗೊಂಡಿರುವ ಅನನ್ಯ ಕೋಟೆಯ ೫.೫ ಕಿ.ಮೀ. ಸುತ್ತಳತೆ ಇದೆ. ಅಂದ ಹಾಗೆ ಬೀದರ್‌ನಲ್ಲಿ ಒಂದಲ್ಲ ಎರಡು ಕೋಟೆಗಳಿವೆ. ಒಂದು ರಾಜಮನೆತನಕ್ಕೆ ಸೇರಿದ ಗಣ್ಯರು ವಾಸಿಸುವ ಕೋಟೆ (ಖಿಲಾ). ಮತ್ತೊಂದು ಸಾಮನ್ಯರ ವಾಸಸ್ಥಾನವಾದ ನಗರದ ಸುತ್ತ ಇರುವ ಕೋಟೆ. ಮಧ್ಯಕಾಲೀನ ‘ನಗರ ಯೋಜನೆ’ಗಳಲ್ಲಿ ಬೀದರ್‌ನ ಸ್ಥಾನ ಮಹತ್ವದ್ದು. ಮಧ್ಯಪ್ರಾಚ್ಯ ದೇಶಗಳಲ್ಲಿ ಚಾಲ್ತಿಯಲ್ಲಿದ್ದ ‘ಖಿಲಾ ಎ ಅರ್ಕ್’ ಪರಿಕಲ್ಪನೆ ಮೊದಲ ಬಾರಿಗೆ ಭಾರತಕ್ಕೆ ಬಂದದ್ದು ಬೀದರ್‌ನಲ್ಲಿ. ನಂತರ ನಿಮಣವಾದ ಗೊಲ್ಕೊಂಡ, ಬಿಜಾಪುರ, ಹೈದರಾಬಾದ್, ಶ್ರೀರಂಗಪಟ್ಟಣ ಮತ್ತು ಬೆಂಗಳೂರು ನಗರಗಳ ಮೇಲೆ ಬೀದರ್ ‘ನಗರ ಯೋಜನೆ’ ಪ್ರಭಾವ ದಟ್ಟವಾಗಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಅದೆಲ್ಲ ಇರಲಿ.
ಅರಸು ಮನೆತನದವರ ನಿವಾಸಕ್ಕಾಗಿ ನಿಮಣವಾದ ಕೋಟೆಯಲ್ಲಿ ಸಹಜವಾಗಿಯೇ ವೈಭವಪೂರ್ಣ ವಾಸತಾಣಗಳಿವೆ. ‘ಮಹಲು’ಗಳು ಎಂದು ಗುರುತಿಸಲಾಗುವ ಅರಮನೆಗಳ ನಿಮಣದಲ್ಲಿ ಭಾರತೀಯ, ತುರ್ಕಿ, ಪರ್ಷಿಯದ ಎಂಜಿನಿಯರುಗಳು, ಕಲಾವಿದರು ಮತ್ತು ತಂತ್ರಜ್ಞರ ಚಿಂತನೆ ಮತ್ತು ಕೌಶಲ್ಯ ವೈಶಿಷ್ಟ್ಯಪೂರ್ಣವಾಗಿ ದಾಖಲಾಗಿವೆ. ತಖ್ತ್ ಮಹಲ್ (ಸಿಂಹಾಸನ ಇರುವ ಅರಮನೆ), ಗಗನ್ ಮಹಲ್, ತರ್ಕಷ್ ಮಹಲ್, ಚೀನಿ ಮಹಲ್, ನಗೀನಾ ಮಹಲ್, ರಂಗೀನ್ ಮಹಲುಗಳಲ್ಲದೆ ‘ದಿವಾನ್ ಏ ಆಮ್’ (ಸಾರ್ವಜನಿಕರ ಸಭಾಂಗಣ), ಷಾಹಿ ಹಮಮ್ (ಅರಸರ ಸ್ನಾನಗೃಹ) ಷಾಹಿ ಮಲ್ಬಾಖ್ (ಸುಲ್ತಾನರ ಪಾಕಶಾಲೆ)ಗಳು ಕೂಡ ಕೋಟೆಯನ್ನು ಅಕ್ಷರಶಃ ‘ಅರಮನೆಗಳ ಸಂಕೀರ್ಣ’ವನ್ನಾಗಿ ಮಡಿವೆ. ಸಂರಕ್ಷಣೆಗಾಗಿ, ಅಡಗುತಾಣಗಳಾಗಿ ಬಳಸುತ್ತ್ದಿದ ‘ಹಜಾರ್ ಕೋಟ್ರಿ’ ಎಂಬ ನೆಲಮಳಿಗೆ ವ್ಯವಸ್ಥೆಯು ಬೀದರ್ ಕೋಟೆಯ ಮತ್ತೊಂದು ಪ್ರಮುಖ ಅಂಶ.
ಒಂದೊಂದು ಅರಮನೆಯೂ ಮತ್ತೊಂದಕ್ಕಿಂತ ಭಿನ್ನ ಮತ್ತು ವೈಶಿಷ್ಟ್ಯಪೂರ್ಣ. ಗುಲ್ಬರ್ಗದಿಂದ ಬೀದರಿಗೆ ರಾಜಧಾನಿಯನ್ನು ಸ್ಥಳಾಂತರಿಸಿದ ಬಹಮನಿ ಅರಸ ಅಹಮದ್ ಶಹಾ ಅಲಿ ‘ವಲಿ’ಯ ಕಾಲದಲ್ಲಿ ಮಹಲುಗಳ ನಿಮಣ ಆರಂಭವಾಯಿತು. ನಂತರ ಬರೀದ್‌ಷಾಹಿ ಅರಸರು ಬದಲಾದ ಸನ್ನಿವೇಶ ಮತ್ತು ಅಗತ್ಯಕ್ಕೆ ತಕ್ಕಂತೆ ಮರ್ಪಾಡುಗಳನ್ನು ಮಡಿಕೊಂಡರು. ಸುಮರು ೩೦೦ ವರ್ಷಗಳ ಅವಧಿಯಲ್ಲಿ ಹಲವು ರೂಪಾಂತರ, ಬದಲಾವಣೆಗಳನ್ನು ಕಾಣುತ್ತ ಬಂದಿರುವ ಕೋಟೆಯೊಳಗಿನ ಕಟ್ಟಡಗಳ ಸ್ವರೂಪ ಅಚ್ಚರಿ ಹುಟ್ಟಿಸುವಂತಿದೆ.
ಕೋಟೆಯ ಒಳಗಡೆ ಇರುವ ಮಹಲುಗಳನ್ನು ಕೂಡ ಝನಾನಾ (ರಾಣಿವಾಸ) ಮತ್ತು ಇತರೆ ಎಂದು ವರ್ಗೀಕರಿಸಬಹುದು. ರಾಣಿವಾಸದ ವಿಭಾಗದಲ್ಲಿ ತರ್ಕಷ್ ಮಹಲ್ ಮತ್ತು ಗಗನ್‌ಮಹಲ್ ಪ್ರಮುಖವಾದವುಗಳು. ಸೋಲಹ ಕಂಭ ಮಸೀದಿಯ ಪಕ್ಕದಲ್ಲಿ ಬರುವ ಎರಡು ಅರಮನೆಗಳು ರಾಣಿವಾಸಕ್ಕೆ ಮೀಸಲಾದಂತವುಗಳು. ‘ತರ್ಕಷ್ ಮಹಲ್’ ಎಂದು ಕರೆಯಲಾಗುವ ಏಳಂತಸ್ತಿನ ಕಟ್ಟಡದಲ್ಲಿ ಸದ್ಯ ಐದು ಅಂತಸ್ತು ಮತ್ರ ನೋಡಲು ಸಿಗುತ್ತದೆ. ಕೆಳಗಿನ ಹಂತಗಳನ್ನು ಬಹಮನಿ ಅರಸರು ನಿರ್ಮಿಸಿದರೆ ನಂತರದ ಮಹಡಿಗಳನ್ನು ಬರೀದ್‌ಷಾಹಿ ಅರಸರ ಕಾಲಕ್ಕೆ ಅಭಿವೃದ್ಧಿಪಡಿಸಿರಬಹುದು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಬರೀದ್ ಅರಸರ ಕಾಲಕ್ಕೆ ಪರ್ಷಿಯ, ಜಾರ್ಜಿಯ, ತುರ್ಕಿ ಸೇರಿದಂತೆ ಬೇರೆ ಬೇರೆ ಪ್ರದೇಶದ ರಾಜಕುಮರಿಯರು ರಾಣಿವಾಸದಲ್ಲಿ ಇರುತ್ತಿದ್ದರು. ಆಗಿನ ತುರ್ಕಿಯಿಂದ ರಾಣಿಯ ವಾಸಕ್ಕಾಗಿ ನಿರ್ಮಿಸಿದ್ದು ಎಂಬ ಪ್ರತೀತಿ ಇದೆ. ತರ್ಕಷ್ ಮಹಲ್‌ನಲ್ಲಿನ ಬರೀದ್‌ಷಾಹಿ ಅರಸರ ಕಾಲದ ವಾಸ್ತುಶಿಲ್ಪ, ಕಲೆಯು ಗಮನ ಸೆಳೆಯುವಂತಿದೆ. ಸ್ಟಕೋ (ಉಬ್ಬಚ್ಚು) ಚಿತ್ರಗಳು ತರ್ಕಷ್ ಮಹಲಿನಲ್ಲಿ ಗಮನ ಸೆಳೆಯುತ್ತವೆ. ಅಳಿದುಳಿದಿರುವ ಬಣ್ಣದ ಟೈಲುಗಳು ವರ್ಣವೈಭವವನ್ನು ಮೆಲುಕು ಹಾಕುವಂತಿವೆ.
ತರ್ಕಷ್ ಮಹಲ್‌ನ ಪಕ್ಕದಲ್ಲಿಯೇ ಇರುವ ಗಗನ್ (ಸ್ವರ್ಗ) ಮಹಲ್‌ನ ಗಾಳಿ ಮತ್ತು ಬೆಳಕಿನ ಪೂರೈಸುವ ವ್ಯವಸ್ಥೆಯು ಗಮನ ಸೆಳೆಯುವಂತಿದೆ. ಗಾಳಿಯಲ್ಲಿ ತೇಲಿದ ಅನುಭವ ಉಂಟು ಮಡುವ ಈ ಅರಮನೆಯು ರಾಣಿಯರಿಗಾಗಿಯೇ ಮೀಸಲಾಗಿದ್ದ ಕಟ್ಟಡವಾಗಿತ್ತು. ಅದಕ್ಕೆ ಬಿಗಿ ಪಹರೆಯ ವ್ಯವಸ್ಥೆಯೂ ಇತ್ತು. ಎರಡಂತಸ್ತಿನ ಈ ಕಟ್ಟಡದ ಛಾವಣಿಯ ಮೇಲೆ ನಿಂತು ನಗರದ ಸೌಂದರ್ಯವನ್ನು ಸವಿಯಲು ಅವಕಾಶ ಕಲ್ಪಿಸಲಾಗಿತ್ತು.
ಗಗನ್ ಮಹಲ್‌ನಿಂದ ಪಶ್ಚಿಮ ದಿಕ್ಕಿನಲ್ಲಿ ಅನತಿ ದೂರದಲ್ಲಿ ಇರುವ ‘ದಿವಾನ್ ಏ ಆಮ್’ (ಸಾರ್ವಜನಿಕ ಸಭಾಂಗಣ)ಅನ್ನು ‘ಜಾಲಿ ಮಹಲ್’ ಎಂದು ಕೂಡ ಕರೆಯುತ್ತಾರೆ. ಅಲ್ಲಿ ಸೊಗಸಾದ ಜಾಲಂದ್ರಗಳು ಇದಿರಬಹುದು. ಕಟ್ಟಡದ ಮೇಲ್ಭಾಗವು ಕುಸಿದಿರುವುದರಿಂದ ಕೇವಲ ನೆಲಹಂತ ಮತ್ತು ಗೋಡೆಗಳು ಮತ್ರ ಉಳಿದಿವೆ. ಬಹುಶಃ ಈ ಕಟ್ಟಡದಲ್ಲಿ ಕಟ್ಟಿಗೆ ಕಂಬಗಳನ್ನು ಬಳಸಿರಬಹುದು. ಈಗ ಕಂಬಗಳ ಕೆಳಭಾಗದ ಚಿತ್ತಾರದ ಕೆತ್ತನೆ ಕಲ್ಲಿನ ಪೀಠಗಳು ಮತ್ರ ಉಳಿದುಕೊಂಡಿವೆ.
ರಾಜಾಂಗಣವನ್ನು ‘ತಖ್ತ್ (ಸಿಂಹಾಸನ) ಮಹಲ್’ ಎಂದು ಗುರುತಿಸಲಾಗುತ್ತದೆ. ಅಲ್ಲಿಯೇ ರಾಜನಿಗೆ ನಜರು ಒಪ್ಪಿಸಲಾಗುತ್ತಿತ್ತು. ಬಹುಶಃ ಇದನ್ನು ಕುರಿತಾಗಿಯೇ ‘ಎಷ್ಟೊಂದು ಸೊಗಸಾಗಿದೆ! ಈ ಗಟ್ಟಿಯದ ಅರಮನೆ. ಆಕಾಶದ ಅಂಗಳದಲ್ಲಿ ನಿಲ್ಲಿಸಿದಂತಹ ಅನುಭವ ನೀಡುವ ಇದರ ಬೃಹತ್ತು ಮತ್ತು ಮಹತ್ತನ್ನು ಸ್ವರ್ಗದೊಂದಿಗೆ ಹೋಲಿಸುವುದು ಕೂಡ ಕಡಿಮೆಯೇ. ಈ ಅರಮನೆಯು ಸುಲ್ತಾನ್ ಅಹಮದ್ ಶಹಾನಿಗೆ ಸೇರಿದ್ದು’ ಎಂದು ಚೌಪದಿಯಲ್ಲಿ ಕವಿ ಅಝರಿ ಬರೆದಿದ್ದಾನೆ. ‘ಚೀನಿಮಹಲ್’ ಎಂದು ಕೂಡ ಕರೆಯಲಾಗುವ ಈ ಕಟ್ಟಡದಲ್ಲಿನ ಬಣ್ಣದ ಟೈಲುಗಳಲ್ಲಿನ ಚಿತ್ತಾರಗಳು ಆಕರ್ಷಕವಾಗಿದ್ದವು. ಬಹಮನಿ ಅರಸರ ಲಾಂಛನವಾಗಿದ್ದ ಉದಯಿಸುತ್ತಿರುವ ಸೂರ್ಯ ಹಾಗೂ ಹಾರುತ್ತಿರುವ ಹುಲಿಯ ಎರಡು ಬಣ್ಣದ ಟೈಲುಗಳ ಚಿತ್ರಗಳು ಈ ಕಟ್ಟಡದಲ್ಲಿಯೇ ಇದ್ದವು. ಕಾಲನ ದಾಳಿಗೆ ತುತ್ತಾಗಿ ಈಗ ಅವು ಕೇವಲ ನಾಮವಶೇಷ. (ಬೀದರ್‌ನ ಇತಿಹಾಸ ಮತ್ತು ಸ್ಮಾರಕಗಳ ಬಗ್ಗೆ ಗುಲಾಂ ಯಜ್ದಾನಿ ಬರೆದಿರುವ ಪುಸ್ತಕದ ಮುಖಪುಟದಲ್ಲಿ ಈ ಚಿತ್ರ ದಾಖಲಾಗಿದೆ.) ಈ ಕಟ್ಟಡದಲ್ಲಿನ ಈಜುಕೊಳ, ಕಾರಂಜಿಗಳು ಮತ್ತು ಅದಕ್ಕೆ ನೀರು ಪೂರೈಸುವುದಕ್ಕೆ ಇದ್ದ ವಿಧಾನ ಗಮನ ಸೆಳೆಯುವಂತಿವೆ. ಉಗಿನೀರಿನ ಸ್ನಾನ ಮಡಲು ಅವಕಾಶ ಕಲ್ಪಿಸುವ ನೆಲಮಳಿಗೆಯಲ್ಲಿನ ಪುಟ್ಟಕೋಣೆಯ ಸೊಬಗನ್ನು ನೋಡಿಯೇ ಅರಿಯಬೇಕು.
‘ಹಜಾರ್ ಕೋಟ್ರಿ’ಯಲ್ಲಿ ಸಾವಿರ ಕೋಣೆಗಳೇನೂ ಇಲ್ಲ. ಸಾವಿರಾರು ಎಂಬರ್ಥದಲ್ಲಿ ಅದನ್ನು ಬಳಸಿರಬಹುದು. ನೆಲಮಳಿಗೆಯಲ್ಲಿ ಬರುವ ಈ ಕಟ್ಟಡಗಳನ್ನು ಇತ್ತೀಚೆಗೆ ನವೀಕರಿಸಲಾಗಿದೆ. ಅಡಗುತಾಣಗಳಾಗಿ ಬಳಸಲಾಗುತ್ತಿದ್ದ ಈ ಕಟ್ಟಡದಲ್ಲಿ ಕತ್ತಲೆಯೊಡನೆ ಬೆಳಕು ನಡೆಸುವ ಚಿನ್ನಾಟ ಸೊಗಸಾಗಿರುತ್ತದೆ.
ಬಣ್ಣದ ಲೋಕವನ್ನೇ ಅನಾವರಣಗೊಳಿಸುವ ಕಲಾತ್ಮಕ ಅರಮನೆ ರಂಗೀನ್ ಮಹಲ್ ಎಲ್ಲ ಅರಮನೆಗಳಿಗೆ ಕಳಶಪ್ರಾಯವಾಗಿದೆ. ಕಪ್ಪುಕಲ್ಲಿನ ಮೇಲೆ ಕೆತ್ತಿ ಕೂಡಿಸಲಾದ ಕಪ್ಪೆಚಿಪ್ಪಿನಿಂದ ಕಲಾತ್ಮಕ ಸೊಬಗು ವರ್ಣನೆಗೆ ನಿಲುಕದಂತಹದ್ದು. ಅಲಿ ಬರೀದ್ ಕಟ್ಟಿಸಿದ ಈ ಪುಟ್ಟ ಅರಮನೆಯಲ್ಲಿನ ಕಟ್ಟಿಗೆಯ ಕೆತ್ತನೆ ಕೂಡ ಕಣ್ಮನ ತಣಿಸುವಂತಿದೆ. ನೀಲಿ, ಹಳದಿ ಮತ್ತು ಹಸಿರು ಬಣ್ಣದ ಟೈಲುಗಳನ್ನು ಬಳಸಿ ಮಡಿರುವ ಡಿಸೈನುಗಳು ಪರ್ಷಿಯ ಮದರಿಯವಾಗಿವೆ.
ಇಷ್ಟೆಲ್ಲ ಮಹಲುಗಳಿರುವ ಕೋಟೆಯ ಆವರಣದಲ್ಲಿ ‘ರಾಯಲ್ ಹಮಮ್’ (ಸ್ನಾನಗೃಹ) ಹಾಗೂ ಅಡುಗೆ ಮಡುವುದಕ್ಕೆ ಬೃಹತ್ ಪಾಕಶಾಲೆಯೂ ಇದೆ. ರಾಯಲ್ ಹಮಮ್‌ಅನ್ನು ಭಾರತೀಯ ಪುರಾತತ್ವ ಇಲಾಖೆಯು ಸದ್ಯ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿದೆ. ಅಲ್ಲಿಂದ ಸ್ವಲ್ವವೇ ದೂರದಲ್ಲಿ ಮದ್ದುಗುಂಡು ಸಂಗ್ರಹಿಸಿಡುತ್ತಿದ್ದ ‘ಬಾರೂದ್‌ಖಾನಾ’ ಇದೆ.
ಭಾರತೀಯ ಮತ್ತು ಮಧ್ಯಪ್ರಾಚ್ಯ ದೇಶಗಳ ಕಟ್ಟಡ ನಿಮಣ ತಂತ್ರಜ್ಞಾನ, ವಿನ್ಯಾಸ, ಕಲೆ ಮೇಳೈಸಿರುವ ಬೀದರಿನ ಕೋಟೆಯೊಳಗಿನ ಕಟ್ಟಡಗಳನ್ನು ನೋಡಿ ಸವಿಯುವುದೇ ಒಂದು ವಿಶಿಷ್ಟ ಅನುಭವ.
ಅನನ್ಯ ಕಲಾಕೃತಿ- ಬಿದರಿ
ಬೀದರ್‌ನ ಅನನ್ಯ ಕಲೆ ’ಬಿದರಿ’. ಸತು ಮತ್ತು ತಾಮ್ರ ಮಿಶ್ರಿತ ಲೋಹದ ಆಕೃತಿಯ ಮೇಲೆ ಡಿಸೈನ್ ಕೊರೆಯಲಾಗುತ್ತದೆ. ಹಾಗೆ ಕೊರೆದ ಪ್ರತಿಭಾಗದಲ್ಲಿಯೂ ಬೆಳ್ಳಿಯ ತಂತಿ ಕೂಡಿಸಲಾಗುತ್ತದೆ. ಅಪಾರ ಏಕಾಗ್ರತೆ, ಕುಸುರಿತನ ಬಯಸುವ ಬಿದರಿ ಕಲೆ ಅತ್ಯಂತ ಶ್ರಮದಾಯಕ ಕಲಾ ಪ್ರಕಾರ. ಬೆಳ್ಳಿ ಕೂಡಿಸಿದ ಕಡೆ ಮತ್ರ ಹೊಳೆಯುವಂತೆ ಮಡಿ ಇಡೀ ಲೋಹವನ್ನು ಕಪ್ಪಾಗಿಸುವ ಸಾಧ್ಯತೆ ಇರುವುದು ಬೀದರ್‌ನ ಕೋಟೆಯ ಆವರಣದಲ್ಲಿ ಇರುವ ಮಣ್ಣಿಗೆ ಮತ್ರ. ಇದೇ ಕಾರಣಕ್ಕಾಗಿ ದೇಶದ ಬೇರಾವುದೇ ಭಾಗದಲ್ಲಿ ಬಿದರಿ ಕಲಾಕೃತಿ ಮಡಲು ಸಾಧ್ಯವಿಲ್ಲ. ಹಾಗೆ ಮಡುವುದಾದರೆ ಬೀದರ್‌ನ ಮಣ್ಣನ್ನೇ ತೆಗೆದುಕೊಂಡು ಹೋಗಬೇಕು. ಆದ್ದರಿಂದಲೇ ಬಿದರಿ ಕಲೆಗೆ ಪ್ರಾದೇಶಿಕ ಪೇಟೆಂಟ್ ಕೂಡ ಲಭ್ಯವಾಗಿದೆ.
ಕಪ್ಪು ಕ್ಯಾನ್ವಾಸ್‌ನಲ್ಲಿ ಬೆಳ್ಳಿಗೆರೆಗಳ ಮೂಲಕ ಮಿಂಚುವ, ಹೊಳೆಯುವ ’ಬಿದರಿ’ ಅದ್ಭುತ ಕಲೆ. ಪ್ರತಿಯೊಂದು ಎಳೆಯನ್ನೂ ಕೊರೆದು ಅದರಲ್ಲಿ ಬೆಳ್ಳಿ ತುಂಬುವ ಕಲಾವಿದನ ಶ್ರಮ ಶ್ಲಾಘನೀಯ. ಆಧುನಿಕ ತಂತ್ರಜ್ಞಾನದ ಫಲವಾಗಿ ಏಕಕಾಲಕ್ಕೆ ಹತ್ತಾರು, ನೂರಾರು ಪ್ರತಿಗಳನ್ನು ತಯರಿಸುವ ದಿನಗಳಲ್ಲಿ ‘ಒಂದು ಕಲಾಕೃತಿ’ಗಾಗಿ ವಾರಗಟ್ಟಲೇ ಕೆಲಸ ಮಡಬೇಕಾಗುತ್ತದೆ. ದೈಹಿಕ ಶ್ರಮ ಹಾಕಬೇಕಾಗುತ್ತದೆ. ಬಿದರಿ ಕಲಾವಿದರು ಸೊಗಸಾಗಿ, ಕುಸುರಿತನದಿಂದ ಕೆಲಸ ಮಡುತ್ತಾರೆ.
ಬಿದರಿ ಕಲಾಕೃತಿ ತಯಾರಿಸುವುದಕ್ಕೆ ಬಳಸಲಾಗುವ ಪ್ರಮುಖ ಲೋಹ ಜಿಂಕ್ (ಸತು). ಜಿಂಕ್ ಮತ್ತು ತಾಮ್ರವನ್ನು ೧೬:೧ರ ಪ್ರಮಾಣದಲ್ಲಿ ಬೆರೆಸಿದ ಲೋಹವನ್ನು ಬಿದರಿ ಕಲಾಕೃತಿಗಳಿಗಾಗಿ ಬಳಸಲಾಗುತ್ತದೆ. ಲೋಹದ ಮೇಲೆ ಕೂಡಿಸುವ ಲೋಹ ಸಾಮಾನ್ಯವಾಗಿ ಬೆಳ್ಳಿ ಕೂಡಿಸಲಾಗುತ್ತದೆ. ಕೆಲವೊಮ್ಮೆ ಚಿನ್ನ ಕೂಡ ಬಳಸಲಾಗುತ್ತದೆ. ಕಂಚು- ಹಿತ್ತಾಳೆಗಳೂ ಉಪಯೋಗಿಸಲಾಗುತ್ತದೆ. ಎರಡ್ಮೂರು ಲೋಹಗಳನ್ನು ಬಳಸಿದ ಆಕೃತಿಗಳನ್ನು ’ಗಂಗಾ-ಜಮುನಾ’ ಎಂದು ಕರೆಯಲಾಗುತ್ತದೆ.
ಅತ್ಯಂತ ಹಳೆಯ ಬಿದರಿ ಕಲಾಕೃತಿಗಳೆಂದರೆ ಹುಕ್ಕಾದ ಬೇಸ್ ಮತ್ತು ಹೂದಾನಿ, ಉಗುಳುದಾನಿ ಹಾಗೂ ಮದಿರೆಯನ್ನು ಹಾಕಿಡಲು ಬಳಸಲಾಗುತ್ತಿದ್ದ ಪಾತ್ರೆಗಳಾಗಿದ್ದವು. ಕಲಾಸಕ್ತರ ಅಭಿರುಚಿ ಬದಲಾದಂತೆ ಆಕೃತಿಗಳ ಸ್ವರೂಪವೂ ಬದಲಾಗುತ್ತ ಬಂದಿದೆ. ವೈಭವದ ಉಪಯೋಗಿ ಸಾಮಗ್ರಿಗಳಾಗಿದ್ದ ಬಿದರಿ ನಂತರದ ದಿನಗಳಲ್ಲಿ ಆಲಂಕಾರಿಕ ವಸ್ತುಗಳಾಗಿ ಪರಿವರ್ತನೆಗೊಂಡವು. ಮನೆಯ ಶೋಕೇಸುಗಳಲ್ಲಿ ಅಂದಕ್ಕಾಗಿ ಇಡಲಾಗುವ ವಸ್ತುಗಳಿಗೆ ಬೇಡಿಕೆ ಬಂತು. ಈಗ ಮಹಿಳೆಯರಿಗೆ ಪ್ರಿಯವಾಗುವ ಆಭರಣಗಳು ಕೂಡ ತಯಾರಿಸಲಾಗುತ್ತಿದೆ.
ಒಂದು ಮೂಲದ ಪ್ರಕಾರ ಇರಾನ್-ಇರಾಕ್ ಮೂಲದ ಈ ಕಲೆಯು ಸೂಫಿ ಸಂತ ಖ್ವಾಜಾ ಮೊಹಿನ್ದುದೀನ್ ಚಿಸ್ತಿಯ ಮೂಲಕ ರಾಜಸ್ಥಾನದ ಅಜ್ಮೀರ್‌ಗೆ ಬಂತು. ‘ಬಿದರಿ’ ಎಂದು ಈಗ ಕರೆಯಲಾಗುವ ಕಲೆಯ ಮರ್ಮ ಅರಿತಿದ್ದ ಅಬ್ದು ಬಿನ್ ಕೈಸರ್ ಎಂಬ ಕುಶಲಕರ್ಮಿಯು ಅಜ್ಮೀರ್‌ನಿಂದ ವಿಜಾಪುರಕ್ಕೆ ವಲಸೆ ಬಂದ. ಕೈಸರ್ ಜೊತೆ ಬೆಳೆದ ಒಡನಾಟದಿಂದ ವಿಜಾಪುರದ ಬಡಗಿ ಕೆಲಸ ಮಡುವ ಶಿವಣ್ಣ ಈ ಕಲೆಯ ಒಳಗುಟ್ಟುಗಳನ್ನು ಕಲಿತ. ಶಿವಣ್ಣನನ್ನು ಬಿದರಿ ಕಲೆ ಕಲಿತ ಮೊದಲ ಭಾರತೀಯ ಎಂದು ಗುರುತಿಸಲಾಗುತ್ತದೆ. ಕೆಲವು ತಲೆಮಾರುಗಳ ಕಾಲ ಈ ಕಲೆಯು ಕೇವಲ ಶಿವಣ್ಣನ ಕುಟುಂಬ ವರ್ಗದವರಿಗೆ ಮತ್ರ ಸೀಮಿತವಾಗಿತ್ತು.
ಬಹಮನಿ ಅರಸ ೨ನೇ ಅವುದ್ದೀನ್ (೧೪೪೩) ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಬಂದ ಉಡುಗೊರೆಗಳ ಪೈಕಿ ಇದ ಆಕರ್ಷಕ ಮತ್ತು ಕಲಾತ್ಮಕ ವಸ್ತುಗಳು ಅರಸನ ಗಮನ ಸೆಳೆದವು. ಕಲೆಯ ಮಹಿತಿ ಪಡೆದ ಸುಲ್ತಾನ್ ವಿಜಾಪುರದಿಂದ ಕುಶಲಕರ್ಮಿಗಳನ್ನು ಕರೆಸಿ ಅವರಿಗೆ ರಾಜಾಶ್ರಯ ನೀಡಿದ. ನಂತರ ಸುಲ್ತಾನ್‌ನ ಜನ್ಮದಿನದಂದು ‘ಬಿದರಿ’ ಎಂದು ನಾಮಕರಣ ಮಡಲಾಯಿತು. ಪ್ರಧಾನಿ ಮಹಮೂದ್ ಗಾವಾನ್ ತೋರಿಸಿದ ಆಸಕ್ತಿಯ ಫಲವಾಗಿ ಬಿದರಿ ಕಲೆಯು ಬೀದರ್‌ನಲ್ಲಿ ನೆಲೆಯೂರಿತು. ಬರೀದ್‌ಷಾಹಿ ಅರಸರ ಕಾಲದಲ್ಲಿ ರೂಪುಗೊಂಡ ವಿಶಿಷ್ಟ ಮದರಿಯ ಕಲಾಕೃತಿಗಳು ಜಗತ್ತಿನಾದ್ಯಂತ ಗಮನ ಸೆಳೆದವು. ಸದ್ಯ ಅಳಿವಿನ ಅಂಚಿನಲ್ಲಿ ಇರುವ ಬಿದರಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ಬೀದರ್‌ನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಕೆಲವರು ಕಲಾವಿದರಿದ್ದಾರೆ. ಅವರಲ್ಲಿ ರಷೀದ್ ಅಹ್ಮದ್ ಖಾದ್ರಿ ಹಿರಿಯರು. ಖಾದ್ರಿ ಅವರಲ್ಲದೆ ರೌಫ್ ಕೂಡ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹೊಸ ವಿನ್ಯಾಸ ಸಿದ್ಧಪಡಿಸುವ ಮಾಸ್ಟರ್ ಕ್ರಾಫ್ಟ್‌ಮನ್‌ಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಶಸ್ತಿ ನೀಡಿ ಮನ್ನಣೆ ನೀಡಿವೆ.
’ಕಲ್ಯಾಣ ಕ್ರಾಂತಿ’ಯು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಕೈಗೊಂಡ ಪರಿವರ್ತನೆಯ ಪ್ರಯತ್ನದ ಫಲವಾಗಿ ಘಟಿಸಿದ ಮಹಾಕ್ರಾಂತಿ. ೧೨ನೇ ಶತಮಾನದಲ್ಲಿ ಅಸಹನೀಯ ಅಸ್ಪೃಶ್ಯತೆ, ಶೋಷಣೆಯಿಂದಾಗಿ ದೀನ, ದಲಿತ, ದುರ್ಬಲರ ಬದುಕು ಜರ್ಜರಿತವಾಗಿತ್ತು. ಅದಕ್ಕಾಗಿ ಸಮಾನತೆಯ ನವ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಟೊಂಕ ಕಟ್ಟಿ ನಿಂತರು. ಶರಣ ಗಣವನ್ನು ಸಂಘಟಿಸಿ ಅನುಭವ ಮಂಟಪದ ಮೂಲಕ ನವೀನ ವಿಚಾರಗಳ ಬೀಜವನ್ನು ನೆಡಲು ಪ್ರಯತ್ನಿಸಿದರು. ಎದುರಿಗೆ ನಿಂತು ಸಮಗಾರ ಹರಳಯ್ಯ ಮತ್ತು ಬ್ರಾಹ್ಮಣನಾದ ಮಧುವಯ್ಯನವರ ಮಕ್ಕಳ ಮದುವೆ ಮಾಡಿಸಿದರು. ಇದರಿಂದಾಗಿ ಎಲ್ಲೆಡೆ ಹಾಹಾಕಾರ ಎದ್ದಿತು. ಕೋಪಗೊಂಡ ಬಿಜ್ಜಳ ಅರಸನು ಹರಳಯ್ಯ ಮಧುವಯ್ಯನವರನ್ನು ಆನೆ ಕಾಲಿಗೆ ಕಟ್ಟಿ ಎಳೆಯುವ ಶಿಕ್ಷೆ ಕೊಟ್ಟ. ಜಾತಿವಾದಿಗಳು ಶರಣರನ್ನು ‘ಕಲ್ಯಾಣ’ದಿಂದ ( ಇಂದಿನ ಬಸವಕಲ್ಯಾಣ) ಓಡಿಸಿದರು. ಅವರು ಬರೆದ ಅಮೂಲ್ಯ ತತ್ವಗಳನ್ನು ಒಳಗೊಂಡ ವಚನ ಸಾಹಿತ್ಯವನ್ನು ಸುಟ್ಟರು. ಹೀಗಾಗಿ ಕಾಲಕ್ರಮೇಣ ಎಲ್ಲವೂ ಹಾಳಾಗಿ ಮಣ್ಣಿನಲ್ಲಿ ಹೂತು ಹೋಯಿತು. ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ಅಂದಿನ ಭವ್ಯ ಪಟ್ಟಣದ ಯಾವುದೇ ಕುರುಹುಗಳು ಇಲ್ಲಿ ಉಳಿಯಲಿಲ್ಲ. ಬಸವಾದಿ ಶರಣರ ನೇತೃತ್ವದಲ್ಲಿ ನಿರ್ಮಾಣಗೊಂಡ ಮಠ, ಮಂದಿರ, ಮಂಟಪ ಯಾವುದೂ ಇಲ್ಲದಂತಾಯಿತು.
ಹಾಗೆ ನೋಡಿದರೆ, ಬಸವಣ್ಣನವರು ವರ್ಗ, ಜಾತಿ ಭೇದದ ಬಗ್ಗೆ ತಾಳಿದ್ದ ನಿಲುವಿನಂತೆಯೇ ಸ್ಥಾವರಕ್ಕೂ ವಿರೋಧಿಸಿದ್ದರು. ‘ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡುವೆ ಬಡವನಯ್ಯ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯಾ...’ ಎಂದು ಅವರು ಒಂದು ವಚನದಲ್ಲಿ ಹೇಳಿದ್ದಾರೆ. ಇದು ಅವರು ದೇವಾಲಯ ಸಂಸ್ಕೃತಿ ಬಗ್ಗೆ ಹೊಂದಿದ್ದ ತಿರಸ್ಕಾರದ ಭಾವನೆಯನ್ನು ಎತ್ತಿ ತೋರಿಸುತ್ತದೆ. ಒಂದುವೇಳೆ ಈ ತತ್ವವನ್ನು ಆಧಾರವಾಗಿಟ್ಟುಕೊಂಡು ಯೋಚಿಸಿದರೆ ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ಏನೂ ನಿರ್ಮಾಣ ಆಗಿಲ್ಲ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ.
ಆದರೆ ಅಂದು ಅವರ ಕರೆಗೆ ಓಗೊಟ್ಟು ದೂರದೂರದ ಅಸಂಖ್ಯಾತ ಶರಣರು ಇಲ್ಲಿಗೆ ಆಗಮಿಸಿದರು. ಅವರೆಲ್ಲರೂ ಶಿವಯೋಗ ಸಾಧನೆ ಮಾಡುವುದಕ್ಕೆ ಹಾಗೂ ಒಂದೆಡೆ ಕುಳಿತು ಚರ್ಚಿಸಲು ಕೆಲವೊಂದು ಕಟ್ಟಡಗಳನ್ನು ಕಟ್ಟಿದರು. ಮಹಾಮನೆ, ಮಠ, ಅನುಭವ ಮಂಟಪವನ್ನು ನಿರ್ಮಿಸಿದರು ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ. ವಿಪರ್ಯಾಸವೆಂದರೆ ನಂತರದ ಕಾಲದಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ವಾಸ್ತವಿಕತೆಯನ್ನು ಅರಿಯುವ ಪ್ರಯತ್ನ ನಡೆದಿಲ್ಲ ಉತ್ಖನನ ಕೈಗೊಂಡು ಮಣ್ಣಿನಡಿ ಹೂತುಹೋಗಿರುವುದನ್ನು ತೆಗೆಯಲು ಯತ್ನಿಸಲಾಗಿಲ್ಲ. ಹೀಗಾಗಿ ಬಸವಣ್ಣನ ಕಾಲದ ‘ಕಲ್ಯಾಣ’ ಕೇವಲ ಕಲ್ಪನೆಯಾಗಿಯೇ ಉಳಿದಿದೆ.
ಇತಿಹಾಸ:
ಐತಿಹಾಸಿಕ ಆಧಾರಗಳ ಪ್ರಕಾರ ಕಲ್ಯಾಣವು ೯ರಿಂದ ೧೨ನೇ ಶತಮಾನದವರೆಗೆ ಚಾಲುಕ್ಯರ ರಾಜಧಾನಿಯಾಗಿತ್ತು. ಅಂದು ಕಲ್ಯಾಣದಂಥ ಪಟ್ಟಣ ಎಲ್ಲಿಯೂ ಇರಲಿಲ್ಲ ಎಂದು ಕೆಲವರು ಬರೆದಿಟ್ಟಿದ್ದಾರೆ. ವಚನಗಳಲ್ಲಿಯೂ ಕಲ್ಯಾಣದ ವಿಸ್ತಾರ ಮತ್ತು ಭವ್ಯತೆಯ ವರ್ಣನೆ ಬರುತ್ತದೆ. ಕ್ರಾಂತಿ ನಡೆದು ಶರಣರು ಇಲ್ಲಿಂದ ಬೇರೆಡೆ ಹೋದ ನಂತರವೂ ದೇವಗಿರಿ ಯಾದವರು, ಕಾಕತೀಯರು ಆಳ್ವಿಕೆ ನಡೆಸುತ್ತಾರೆ. ನಂತರ ಮುಸ್ಲಿಂ ದೊರೆಗಳಾದ ತುಘಲಕ್, ಬಹಮನಿ ಸುಲ್ತಾನರು, ಮೊಗಲ ದೊರೆಗಳು ಇಲ್ಲಿ ಆಳಿದ್ದಾರೆ. ಕೆಲಕಾಲ ಮರಾಠರ ಶಿವಾಜಿ ಸಹ ಇಲ್ಲಿನ ಕೋಟೆಯನ್ನು ವಶಪಡಿಸಿಕೊಂಡ ಬಗ್ಗೆ ಇತಿಹಾಸ ಹೇಳುತ್ತದೆ. ೧೭೪೦ ರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯುವವರೆಗೆ ಇದು ಹೈದ್ರಾಬಾದ ಸಂಸ್ಥಾನದ ನಿಜಾಮ ಅರಸರು ನೇಮಿಸಿದ ನವಾಬ್ರ ಆಧೀನದಲ್ಲಿತ್ತು.
ಮುಖ್ಯವೆಂದರೆ ‘ಕಲ್ಯಾಣ ಕ್ರಾಂತಿ’ಯ ಕಾಲದ ಯಾವುದೇ ಕುರುಹು ಹೇಗೆ ಉಳಿದಿಲ್ಲವೋ ಹಾಗೆಯೇ ನಂತರ ಆಳ್ವಿಕೆ ನಡೆಸಿದ ಅರಸರ ಕಾಲದಲ್ಲಿನ ವೈಭವವೂ ಇಂದು ನೋಡಲು ಸಿಗುವುದಿಲ್ಲ. ಅರಸರು, ಸಾಮಂತರು ಮತ್ತು ನವಾಬ್ರು ಕೇವಲ ಕೋಟೆಯ ಸಂರಕ್ಷಣೆ ಮಾತ್ರ ಮಾಡಿದ್ದಾರೆ. ಆದ್ದರಿಂದ ಅದನ್ನು ಬಿಟ್ಟರೆ ಹಿಂದಿನದು ಇಲ್ಲಿ ಏನೂ ಇಲ್ಲ. ಕೋಟೆ ಸಹ ಅನೇಕ ಸಲ ದುರುಸ್ತಿ ಮಾಡಿದ್ದರಿಂದ ಮೂಲ ರೂಪದಲ್ಲಿ ಇಲ್ಲದಿರುವುದು ಅದನ್ನು ನೋಡಿದಾಗ ಗೊತ್ತಾಗುತ್ತದೆ. ಇಲ್ಲಿ ಮುಸ್ಲಿಂ ಅರಸರು ಹೆಚ್ಚಿನ ಕಾಲ ಆಳ್ವಿಕೆ ನಡೆಸಿದ್ದರಿಂದ ಮಠ, ಮಂದಿರಗಳ ಅಭಿವ್ರಧಿ ಆಗಿರಲಿಕ್ಕಿಲ್ಲ ಎಂದೂ ಕೆಲವರು ಅಭಿಪ್ರಾಯಪಡುತ್ತಾರೆ. ಆದರೂ ಇಂದು ಬಸವಕಲ್ಯಾಣದ ಸುತ್ತ ಕೆತ್ತನೆಯ ಕಲ್ಲುಗಳು, ಮೂರ್ತಿಗಳು ಮತ್ತು ದೇವಾಲಯಗಳ ಅವಶೇಷಗಳು ದೊರೆಯುತ್ತವೆ. ಶಿವಪುರ, ಉಮಾಪುರ, ಮೋರಖಂಡಿಗಳಲ್ಲಿ ಭವ್ಯ ಶಿಲಾ ದೇಗುಲಗಳಿವೆ. ಇವು ಇಲ್ಲಿನ ಗತವೈಭವ ಸಾರುತ್ತವೆ ಎನ್ನಬಹುದು.
ಕಾಮೆಂಟ್‌ಗಳು