ಪೋಸ್ಟ್‌ಗಳು

2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆದಿಲ್‌ಷಾಹಿ ಸಾಹಿತ್ಯ ಅನುವಾದ ಯೋಜನೆ

ಇಮೇಜ್
ಆದಿಲ್‌ಷಾಹಿ ಸಾಹಿತ್ಯ ಅನುವಾದ ಆದಿಲ್‌ಶಾಹಿ ಆಡಳಿತದ ಅವಯಲ್ಲಿ  ರಚಿತವಾದ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮಹತ್ವಾಕಾಂಕ್ಷಿ ಯೋಜನೆಯು ಕಾರ್ಯರೂಪಕ್ಕೆ ಬಂದಿದೆ. ಮೂರು ವರ್ಷದ ಅವಯ ಈ ಯೋಜನೆಯಲ್ಲಿ  ಒಟ್ಟು 20 ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲು ಉದ್ದೇಶಿಸಲಾಗಿದೆ.  ಈಗಾಗಲೇ ಏಳು ಸಂಪುಟಗಳು ಸಿದ್ಧಗೊಂಡಿವೆ. ಮುಂಬರುವ ಜನವರಿಯಲ್ಲಿ ಮೊದಲ ಕಂತಿನ ಪುಸ್ತಕಗಳು ಬಿಡುಗಡೆ ಆಗಲಿವೆ. ಸುಮಾರು 10,000 ಪುಟಗಳಷ್ಟು ಇರುವ ಸಾಹಿತ್ಯವು 20 ಸಂಪುಟಗಳಲ್ಲಿ  ಇರುತ್ತದೆ. ಅವುಗಳಲ್ಲಿ  ಆದಿಲ್‌ಶಾಹಿ ಆಡಳಿತದ ಅವಯ ಎರಡು ಸಂಪುಟಗಳು ಸನದು ಮತ್ತು ಫರ್ಮಾನುಗಳನ್ನು ಒಳಗೊಂಡಿರುತ್ತವೆ. ಈ ಯೋಜನೆಗೆ ಆಸರೆ ಆದದ್ದು ವಿಜಾಪುರದ ಬಿಎಲ್‌ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ನೋಡುವುದಕ್ಕೂ ದುರ್ಲಭವಾಗಿದ್ದ  ಅಪರೂಪದ ಹಸ್ತಪ್ರತಿಗಳನ್ನು ಹೈದರಾಬಾದ್‌ನ ಸಾಲಾರ್‌ಜಂಗ್ ಮ್ಯೂಸಿಯಂ ಹಾಗೂ ಹೈದರಾಬಾದ್, ದೆಹಲಿ ಪತ್ರಾಗಾರ ಇಲಾಖೆ, ಗೋಳಗುಮ್ಮಟ ಮ್ಯೂಸಿಯಂ- ಗ್ರಂಥಾಲಯ, ಪುಣೆ ಭಾರತೀಯ ಇತಿಹಾಸ ಸಂಶೋಧನ ಕೇಂದ್ರ, ಲಂಡನ್ ಬ್ರಿಟಿಷ್ ಮ್ಯೂಸಿಯಂ, ಲಂಡನ್ ಇಂಡಿಯಾ ಆಫೀಸ್ ಲೈಬ್ರರಿಗಳಿಂದ ಸಂಗ್ರಹಿಸಲಾಗಿದೆ. ಫೆರಿಸ್ತಾನ ಇತಿಹಾಸ : ಅಹ್ಮದ್‌ನಗರದ ನಿಜಾಮ್‌ಷಾಹಿ ಅರಸು ಕುಮಾರರಿಗೆ ಫಾರಸಿ ಕಲಿಸುವ ಉದ್ದೇಶದಿಂದ ಕ್ಯಾಸ್ಪಿಯನ್ ಸಮುದ್ರದ ಮೂಲಕ ಭಾರತಕ್ಕೆ ಆಗಮಿಸಿದ ಫೆರಿಸ್ತ