ಪೋಸ್ಟ್‌ಗಳು

ಆಗಸ್ಟ್, 2008 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬ್ರಿಟಿಷ್ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಫುಟ್ಬಾಲ್ ಪ್ರತಿಭೆ

ಇಮೇಜ್
ಅದು ಸ್ವಾತಂತ್ರ್ಯಪೂರ್ವ ಕಾಲ. ಹೈದರಾಬಾದ್ನಲ್ಲಿ ನಿಜಾಂ ಆಡಳಿತದಲ್ಲಿ ಮಹಾರಾಜ ಕಿಷನ್ ಪ್ರಸಾದ್ ಅವರು ದಿವಾನರಾಗಿದ್ದ ಅವಧಿ. ಬ್ರಿಟಿಷ್ ಅಧಿಕಾರಿಗಳ ತಂಡ ಮತ್ತು ಹೈದರಾಬಾದ್ ಸಿಟಿ ಕ್ಲಬ್ಗಳ ನಡುವೆ ಫುಟ್ಬಾಲ್ ಪಂದ್ಯ. ಬ್ರಿಟಿಷ್ ಅಧಿಕಾರಿಗಳು, ದಿವಾನರು ಸೇರಿದಂತೆ ರಾಜ್ಯದ ಗಣ್ಯಮಾನ್ಯರೆಲ್ಲ ಆಟ ನೋಡಲು ಕುಳಿತಿದ್ದರು. ಬ್ರಿಟಿಷ್ ಅಧಿಕಾರಿಗಳ ತಂಡ ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿತ್ತು. `ಇನ್ನೇನು ಆಟ ಮುಗಿಯಿತು' ಎಂದುಕೊಳ್ಳುತ್ತಿರುವಾಗಲೇ ಸಿಟಿ ಕ್ಲಬ್ ತಂಡದ ಯುವ ಆಟಗಾರನೊಬ್ಬ ಚೆಂಡನ್ನು ತಳ್ಳುತ್ತ ಬಂದು ಪೆಟ್ಟಿಗೆಯತ್ತ ಒದ್ದು ಬಿಟ್ಟ. ಕಣ್ಣು ಪಿಳುಕಿಸುವಷ್ಟರಲ್ಲಿಯೇ `ಗೋಲ್' ಆಗಿಬಿಟ್ಟಿತು. ಮೈದಾನದಲ್ಲಿ ಏನಾಗುತ್ತಿದೆ? ಎಂದು ಬ್ರಿಟಿಷ್ ಆಟಗಾರರು ಬೆರಗಾಗಿ ನೋಡುತ್ತಿರುವಾಗಲೇ ಮತ್ತೆ ತನ್ನ ಕಾಲ್ಚೆಳಕ ತೋರಿಸಿದ ಯುವಕ ಗೆಲುವಿನ ಗೋಲ್ ಬಾರಿಸಿದ. ಆ ಎರಡೂ ಒದೆತಗಳು ಆಕಸ್ಮಿಕ ಆಗಿರಲಿಲ್ಲ. ಪೂರ್ವ ನಿಯೋಜಿತ ತಂತ್ರ ಬಳಸಿಯೇ ಯುವಕ ತನ್ನ ತಂಡಕ್ಕೆ ಗೆಲುವು ದೊರಕಿಸಿಕೊಟ್ಟಿದ್ದ. ಇದು `ಲಗಾನ್' ಅಥವಾ `ಚೆಕ್ ದೇ' ಸಿನಿಮಾದಂತಹ ಕಥೆಯಲ್ಲ. ಅಕ್ಷರಶಃ ಮೈದಾನದಲ್ಲಿ ನಡೆದ ಘಟನೆ. ಬಾಕ್ಸ್‌ನಲ್ಲಿ ಕಾಲಿನಿಂದ ಬಾಲ್ ತಳ್ಳಿದ ಯುವಕ ಬೀದರ್‍ನ ನಜೀರ್ ಅಹ್ಮದ್ ಖಾನ್. ಯುವಕ ಆಟದಿಂದ ಬೆರಗಾದ ದಿವಾನರು ತಾವು ಕುಳಿತಿದ್ದ ಸ್ಥಾನದಿಂದ ಇಳಿದು ಬಂದರು. ಯುವಕನನ್ನು ಪ್ರೀತಿ, ಆಪ್ಯಾಯತೆಯಿಂದ ಅಪ್ಪಿ ಅಭಿನಂದಿಸಿದರು. `ದೇಸಿ'

ನಗುವಿನ ಅಲೆ ಮೇಲೆ ತೇಲಿಸುತ್ತಿದ್ದ ಗವಾಯಿ

ಇಮೇಜ್
'ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ.. . ' ಎಂದು ಷಣ್ಮುಖಪ್ಪ ಗವಾಯಿ ಹಿಂದೂಸ್ತಾನಿ ಶಾಸ್ತ್ರೀಯ ಆಲಾಪನೆಯಲ್ಲಿನ ಹಾಡು ಕೇಳುತ್ತಿದ್ದರೆ ಅಲೌಕಿಕ ಜಗತ್ತನ್ನು ಪ್ರವೇಶಿಸಿದ ಅನುಭವ. 12ನೇ ಶತಮಾನದ ಕ್ರಾಂತಿಪುರುಷ ಬಸವಣ್ಣನವರ ವ್ಯಕ್ತಿತ್ವವನ್ನು ಮತ್ತು ಅವನ ಪತ್ನಿ ನೀಲಾಂಬಿಕೆ ಆಧ್ಯಾತ್ಮಿಕ ಎತ್ತರಗಳೆರಡರ ಚಿತ್ರಣ ನೀಡುವ ಚೆನ್ನವೀರ ಕಣವಿಯವರ ಪದ್ಯಕ್ಕೆ ಸಂಗೀತದ ಮೂಲಕ ಅರ್ಥದ ಹಲವು ಛಾಯೆಗಳನ್ನು ಹೊರಡಿಸುತ್ತಿದ್ದರು ಷಣ್ಮುಖಪ್ಪ. 'ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾದಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು' ಎಂದು ನೀಲಮ್ಮನವರ ವ್ಯಕ್ತಿತ್ವವನ್ನು ಹರಳುಗೊಳಿಸಿದ ಸಾಲುಗಳು ಷಣ್ಮುಖಪ್ಪ ಅವರ ಹಾಡಿನಲ್ಲಿ ತನ್ನದೇ ಹೊಸ ಅರ್ಥಗಳನ್ನು ಹೊರಡಿಸುತ್ತಿತ್ತು. ಕವಿತೆ ಮತ್ತು ಅದರ ಪ್ರಸ್ತುತಿಗಳೆರಡೂ ಬೆಳೆಯುತ್ತ ಹೋಗುತ್ತಿದ್ದವು. ಅರ್ಧ ಗಂಟೆಗೂ ಹೆಚ್ಚುಕಾಲ ಸಾಗುತ್ತಿದ್ದ ಈ ಹಾಡು ಅಂತ್ಯಕ್ಕೆ ಸಮೀಪಿಸಿದಾಗ ನಿಜವಾದ ಅರ್ಥದಲ್ಲಿ ತುರಿಯಾವಸ್ಥೆಯ ಅನುಭವ ನೀಡುತ್ತಿತ್ತು. ಬಸವಣ್ಣನವರ ಬದುಕಿನ ಕೊನೆಯ ಗಳಿಗೆಯಲ್ಲಿ ಹಡಪದ ಅಪ್ಪಣ್ಣನವರಿಗೆ ನೀಲಮ್ಮ ಕೇಳುವ ಪ್ರಶ್ನೆಯಂತೂ ತಾತ್ವಿಕ- ಆಧ್ಯಾತ್ಮಿಕ ಪರಿಭಾಷೆಯಲ್ಲಿ ಶಿಖರಸ್ವರೂಪದ್ದು. 'ಅಲ್ಲಿ ಇಲ್ಲಿ ಉಭಯವಳಿದು ಅಂಗೈಯಲಿ ಸಂಗಮ ಅಲ್ಲಿದ್ದರು ಇಲ್ಲಿಲ್ಲವೇ ಜಗದ ಜೀವ ಜಂಗಮ' ಎಂಬ ಸಾಲುಗಳು ಅರೆಕ್ಷಣ ರೋಮಾಂಚನಗೊಳಿಸುತ್ತಿದ್ದವು. ಯಾವುದೋ ಅನನ್ಯ ಲೋಕಕ್ಕೆ ಕರೆದೊಯ್
ಸ್ನೇಹಿತರೇ , 'ಹೇಳಬೇಕು' ಅನ್ನಿಸಿದ್ದನ್ನು ಹೇಳದೇ ಇರಲು ಸಾಧ್ಯವಿಲ್ಲ. ಹಾಗೆಯೇ ಹೇಳುವುದು ಕೂಡ ಕಷ್ಟದ ಕೆಲಸ. ಬರೆಯುವುದು ಅಂದರೆ ಬೆತ್ತಲಾದಂತೆ' ಎಂದು ಎಲ್ಲೋ ಓದಿದ ನೆನಪು. 'ನಿರ್ವಾಣ' ಆಗುವುದು ಎಲ್ಲರಿಗೂ ಸಾಧ್ಯವಿಲ್ಲ ಅಲ್ಲವೇ? ಹಾಗಂತ ಸುಮ್ಮನೇ ಇರಲೂ ಆಗುವುದಿಲ್ಲ. ಮಧ್ಯಮಮಾರ್ಗ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ- ಅಗತ್ಯ ಆಗುತ್ತದೆ. ಆಗಾಗ ಬರೆದ ಲೇಖನಗಳನ್ನು ಎಲ್ಲೆಲ್ಲಿಯೋ ಕಳೆದು ಹಾಕಿದ್ದೇನೆ. ಅವುಗಳನ್ನು ಹುಡುಕಿ ಓದಿದಾಗ ನಾನೇ ಖುಷಿ ಪಟ್ಟಿದ್ದೇನೆ. ಈ ಬ್ಲಾಗ್‌ನ ಬಹುತೇಕ ಬರಹಗಳು ಅಲ್ಲಲ್ಲಿ ಪ್ರಕಟವಾದಂತಹವುಗಳು. ವಿಶೇಷವಾಗಿ ನನ್ನ ವೃತ್ತಿ ಜೀವನದ ಭಾಗವಾಗಿ ಬರೆದಂತಹವುಗಳು. ಅವುಗಳನ್ನು ಅಪ್‌ಡೇಟ್‌ ಮಾಡಲು ಹೋಗಿಲ್ಲ. ಹಾಗೆ ಮಾಡುತ್ತ ಹೋದರೆ ಅದನ್ನು ಬರೆದ ಕಾಲದ ಪಾವಿತ್ಯ್ರ ಹೊರಟು ಹೋಗುತ್ತದೆ ಎಂಬ ಕಾರಣಕ್ಕಾಗಿ ಹಾಗೆಯೇ ಉಳಿಸಿಕೊಂಡಿದ್ದೇನೆ. ಕೆಲವು ಸ್ಖಾಲಿತ್ಯ ದೋಷಗಳನ್ನು (ಕಾಗುಣಿತ ಅಥವಾ ಸ್ಪೆಲ್ಲಿಂಗ್‌ ಮಿಸ್ಟೇಕ್‌) ಸರಿಪಡಿಸಿದ್ದೇನೆ. ನನ್ನ ಹಳೆಯ ಬರವಣಿಗೆಗಳನ್ನು ಈ ಬ್ಲಾಗ್‌ನಲ್ಲಿ ದಾಖಲಿಸುವುದು ಉದ್ದೇಶ. ಎಲ್ಲ ಲೇಖನಗಳಿಗೆ ಡೇಟ್‌ ಹಾಕುತ್ತೇನೆ. ಸಿಕ್ಕದವುಗಳ ವರ್ಷ ದಾಖಲಿಸುವ ವಿಚಾರವಿದೆ. ಎಲ್ಲಿಯೂ ಪ್ರಕಟಿಸದೇ ಇರುವ ಬರಹಗಳನ್ನು ಹಾಕಲು ಪ್ರತ್ಯೇಕ ಬ್ಲಾಗ್‌ ಮಾಡುವ ಯೋಚನೆಯಿದೆ. ದಯವಿಟ್ಟು ಸಹಕರಿಸಿ. -ದೇವು ಪತ್ತಾರ