ಸ್ನೇಹಿತರೇ ,
'ಹೇಳಬೇಕು' ಅನ್ನಿಸಿದ್ದನ್ನು ಹೇಳದೇ ಇರಲು ಸಾಧ್ಯವಿಲ್ಲ. ಹಾಗೆಯೇ ಹೇಳುವುದು ಕೂಡ ಕಷ್ಟದ ಕೆಲಸ. ಬರೆಯುವುದು ಅಂದರೆ ಬೆತ್ತಲಾದಂತೆ' ಎಂದು ಎಲ್ಲೋ ಓದಿದ ನೆನಪು. 'ನಿರ್ವಾಣ' ಆಗುವುದು ಎಲ್ಲರಿಗೂ ಸಾಧ್ಯವಿಲ್ಲ ಅಲ್ಲವೇ? ಹಾಗಂತ ಸುಮ್ಮನೇ ಇರಲೂ ಆಗುವುದಿಲ್ಲ. ಮಧ್ಯಮಮಾರ್ಗ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ- ಅಗತ್ಯ ಆಗುತ್ತದೆ.
ಆಗಾಗ ಬರೆದ ಲೇಖನಗಳನ್ನು ಎಲ್ಲೆಲ್ಲಿಯೋ ಕಳೆದು ಹಾಕಿದ್ದೇನೆ. ಅವುಗಳನ್ನು ಹುಡುಕಿ ಓದಿದಾಗ ನಾನೇ ಖುಷಿ ಪಟ್ಟಿದ್ದೇನೆ. ಈ ಬ್ಲಾಗ್‌ನ ಬಹುತೇಕ ಬರಹಗಳು ಅಲ್ಲಲ್ಲಿ ಪ್ರಕಟವಾದಂತಹವುಗಳು. ವಿಶೇಷವಾಗಿ ನನ್ನ ವೃತ್ತಿ ಜೀವನದ ಭಾಗವಾಗಿ ಬರೆದಂತಹವುಗಳು. ಅವುಗಳನ್ನು ಅಪ್‌ಡೇಟ್ ಮಾಡಲು ಹೋಗಿಲ್ಲ. ಹಾಗೆ ಮಾಡುತ್ತ ಹೋದರೆ ಅದನ್ನು ಬರೆದ ಕಾಲದ ಪಾವಿತ್ಯ್ರ ಹೊರಟು ಹೋಗುತ್ತದೆ ಎಂಬ ಕಾರಣಕ್ಕಾಗಿ ಹಾಗೆಯೇ ಉಳಿಸಿಕೊಂಡಿದ್ದೇನೆ. ಕೆಲವು ಸ್ಖಾಲಿತ್ಯ ದೋಷಗಳನ್ನು (ಕಾಗುಣಿತ ಅಥವಾ ಸ್ಪೆಲ್ಲಿಂಗ್ ಮಿಸ್ಟೇಕ್) ಸರಿಪಡಿಸಿದ್ದೇನೆ. ನನ್ನ ಹಳೆಯ ಬರವಣಿಗೆಗಳನ್ನು ಈ ಬ್ಲಾಗ್‌ನಲ್ಲಿ ದಾಖಲಿಸುವುದು ಉದ್ದೇಶ. ಎಲ್ಲ ಲೇಖನಗಳಿಗೆ ಡೇಟ್ ಹಾಕುತ್ತೇನೆ. ಸಿಕ್ಕದವುಗಳ ವರ್ಷ ದಾಖಲಿಸುವ ವಿಚಾರವಿದೆ. ಎಲ್ಲಿಯೂ ಪ್ರಕಟಿಸದೇ ಇರುವ ಬರಹಗಳನ್ನು ಹಾಕಲು ಪ್ರತ್ಯೇಕ ಬ್ಲಾಗ್ ಮಾಡುವ ಯೋಚನೆಯಿದೆ. ದಯವಿಟ್ಟು ಸಹಕರಿಸಿ.
-ದೇವು ಪತ್ತಾರ

ಕಾಮೆಂಟ್‌ಗಳು