ನೀಲಾಕಾಶದಲ್ಲಿ ತೇಲಿ ಬಿಟ್ಟ ಟರ್ಕಿ ಕಿರೀಟ


ಅಷ್ಟಕೋನ ಆಕೃತಿಯ ಅಪರೂಪದ ಸ್ಮಾರಕ
ನೀಲಾಕಾಶದಲ್ಲಿ ತೇಲಿ ಬಿಟ್ಟ ಟರ್ಕಿ ಕಿರೀಟಆಕಾಶದ ನೀಲಿಯೇ ಕ್ಯಾನ್ವಾಸ್. ಸುತ್ತಲಿನ ಹಸಿರು ಹ್ದೊದ ನಿಂತ ಬೆಟ್ಟಗಳ ನಡುವೆ ಎತ್ತರದಲ್ಲಿ ತಂದಿಟ್ಟ ಟರ್ಕಿ ಅರಸನ ಕಿರೀಟ. ಹೌದು  ಕಣ್ಮನ ತಣಿಸುವ ಇಂತಹ ಸುಂದರ ಐತಿಹಾಸಿಕ ಸ್ಮಾರಕ ಇರುವುದು ಬೀದರ್ ನಗರದ ಹೊರಭಾಗದಲ್ಲಿ. ‘ಬೀದರ್’ ಎಂದರೆ ‘ಬರದ ನಾಡು’ ಎಂಬ ಕಲ್ಪನೆಯನ್ನು ಸುಳ್ಳಾಗಿಸುವುದಕ್ಕಾಗಿಯೇ ದಟ್ಟ ಹಸಿರಿನ ಬಣ್ಣ ಎರಚಿದಂತೆ ಕಾಣುವ ಗುಡ್ಡಗಳ ಸಾಲು. ಹಸಿರು ವನರಾಶಿಯ ನಡುವೆ ಬಹಳಷ್ಟು ದೂರದಿಂದಲೇ ತಟ್ಟನೆ ಗಮನ ಸೆಳೆಯುವ ಸ್ಮಾರಕ ‘ಚೌಖಂಡಿ’.
ಎತ್ತರದ ಸಮತಟ್ಟಾದ ಪ್ರದೇಶದ ಮೇಲೆ ಬೀದರ್ ನಗರ ಮತ್ತು ಕೋಟೆಯನ್ನು ನಿರ್ಮಿಸಲಾಗಿದೆ. ನಗರದಿಂದ ಯವ ದಿಕ್ಕಿನ ಕಡೆಗೆ ಹೋಗಬೇಕಾದರೂ ಇಳಿದೇ ಹೋಗಬೇಕು. ಕೋಟೆಯ ಗೋಡೆಯ ಮೇಲೆ ಹತ್ತಿ ನಿಂತರೆ ಹತ್ತಾರು ಕಿ.ಮೀ. ದೂರದ ವರೆಗೆ ಅಂದರೆ ದೃಷ್ಟಿಗೆ ಗೋಚರವಾಗುವಷ್ಟು ದೂರದ ವರೆಗಿನ ಎಲ್ಲವನ್ನೂ ನೋಡಬಹುದು. ಕೋಟೆಯ ಪ್ರವೇಶಕ್ಕೆ ಏಳು ಆಕರ್ಷಕವಾದ ದ್ವಾರಗಳಿವೆ.
ಬೀದರ್ ನಗರದಿಂದ ಪೂರ್ವಕ್ಕೆ ಅಭಿಮುಖವಾಗಿರುವ ‘ದುಲ್ಹನ್ ದರ್ವಾಜ’ದ ಮೂಲಕ ಕೆಳಕ್ಕೆ ಇಳಿಯಲು ಆರಂಭಿಸುತ್ತ್ದಿದಂತೆಯೇ ‘ಅಗ್ರಹಾರ’ ಎನ್ನುವ ಪುಟ್ಟಹಳ್ಳಿ ಸಿಗುತ್ತಿದೆ. ಅಗ್ರಹಾರದ ನಡುವೆ ಹಾದು ಹೋಗುವ ಬೆಟ್ಟದ ಇಳಿಜಾರಿನಗುಂಟ ಸಾಗುತ್ತ್ದಿದಂತೆಯೇ ದೂರದಲ್ಲಿ ಅಷ್ಟಕೋನ ಆಕೃತಿಯ ಕಟ್ಟಡ ಗೋಚರವಾಗುತ್ತದೆ. ನೋಡಲು ಆಕರ್ಷಕವಾಗಿರುವ ಅನನ್ಯ ಸ್ಮಾರಕಕ್ಕೆ ವಿಶಿಷ್ಟ ಐತಿಹಾಸಿಕ ಹಿನ್ನೆಲೆಯೂ ಇದೆ.
ನೆಲಮಟ್ಟದಿಂದ ಸ್ವಲ್ಪ ಎತ್ತರದಲ್ಲಿ ಇರುವ ಸಣ್ಣಗುಡ್ಡದ ಮೇಲೆ ನಿರ್ಮಿತವಾಗಿರುವ ಕಾರಣಕ್ಕಾಗಿ ಚೌಖಂಡಿಯು ಕೋಟೆಯ ಮೇಲಿನಿಂದ ನೋಡುವವರೆಗೆ ನೆಲದಿಂದ ಎತ್ತರಿಸಿಟ್ಟ ಹಾಗೆ ಕಾಣಿಸಿದರೆ, ನೆಲದ ಮೇಲೆ ನಡೆದಾಡುವವರಿಗೆ ಆಕಾಶದಲ್ಲಿ ತೇಲಿಬಿಟ್ಟ ಅನುಭವವನ್ನು ಈ ಕಟ್ಟಡ ನೀಡುತ್ತದೆ.
ಬಹಮನಿ ಅರಸರ ಪೈಕಿ ಒಂಭತ್ತನೆಯವನಾದ ಅಹಮದ್ ಶಹಾ ಅಲಿ ‘ವಲಿ’ಯು (ಸಂತ) ಹಿತಕರವಾದ ವಾತಾವರಣ ಮತ್ತು ಸುರPತೆಯ ದೃಷ್ಟಿಯಿಂದ ೧೪೨೯ರಲ್ಲಿ ಗುಲ್ಬರ್ಗದಿಂದ ಬೀದರ್‌ಗೆ ರಾಜಧಾನಿಯನ್ನು ವರ್ಗಾಯಿಸಿದ. ಬಹಮನಿ ಅರಸು ಮನೆತನದಲ್ಲಿ ಅಧಿಕಾರಕ್ಕಾಗಿ ನಡೆಯುತ್ತ್ದಿದ ರಕ್ತದ ಚೆಟ ಮತ್ತು ಅರಮನೆಯ ಪಿತೂರಿ ರಾಜಕೀಯದಿಂದ ಬಿಡುಗಡೆ ಪಡೆಯುವುದು ರಾಜಧಾನಿಯ ವರ್ಗಾವಣೆಗೆ ಪ್ರಮುಖ ಕಾರಣವಾಗಿತ್ತು. ಇದೆಲ್ಲದರ ಜೊತೆಗೆ ಅಣ್ಣ ಫಿರೋಜ್ ಶಹಾನಿಂದ ಅರಸೊತ್ತಿಗೆ ಕಿತ್ತುಕೊಳ್ಳುವ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತ್ದಿದ ಸೂಫಿ ಸಂತ ಬಂದೇ ನವಾಜ್ ಕೂಡ ಅಸು ನೀಗ್ದಿದರು. ಈ ಹಿನ್ನೆಲೆಯಲ್ಲಿ ಅಹಮದ್ ಶಹಾನಿಗೆ ಗುಲ್ಬರ್ಗದ ಜೊತೆಗ್ದಿದ ಭೌತಿಕ- ಮನಸಿಕ ಸಂಬಂಧಗಳನ್ನು ಕಡಿದುಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯವಾಗಿತ್ತು.
ರಾಜಧಾನಿಯನ್ನು ಬೀದರ್‌ಗೆ ವರ್ಗಾಯಿಸಿದ ನಂತರ ಅಹಮದ್ ಶಹಾನಿಗೆ ಶುಕ್ರದೆಸೆ ಆರಂಭವಾಯಿತು. ದಂಡಯತ್ರೆ ಮಡಿದಲ್ಲ ಗೆಲುವು. ಎಡೆ ಸಮೃದ್ಧಿ. ಗುಲ್ಬರ್ಗದಲ್ಲ್ದಿದ ಬಹುತೇಕ ಕೊರತೆಗಳು ಇಲ್ಲವಾಗ್ದಿದವು. ಜೊತೆಗೆ ಆರ್ಥಿಕ ಸಬಲತೆ ಕೂಡ ಬಂದಿತ್ತು. ಆಧ್ಯಾತ್ಮಿಕ ಮರ್ಗದರ್ಶನ ಮಡುವವರ ಕೊರತೆ ಬಾದಶಹನಿಗೆ ಕಾಡುತ್ತಿತ್ತು. ಆಗ ಬಂದೇ ನವಾಜ್‌ರ ಸ್ಥಾನ ತುಂಬುವ ಮತ್ತೊಂದು ಚೇತನ ಗೋಚರವಾಗಲಿಲ್ಲ. ಆಗಲೇ ಅಹಮದ್‌ನಿಗೆ ದೂರದ ಇರಾನ್‌ನ ಕಿಮನ್ ಪ್ರಾಂತ್ಯದಲ್ಲಿ ಇದ ಸಂತಕವಿ ಶಹಾ ನಿಯಮತು ಕಿಮನಿಯನ್ನು ರಾಜಧಾನಿಗೆ ಕರೆಸಿ ಗೌರವ ಸಲ್ಲಿಸುವ ಆಸೆ- ಕನಸು ಚಿಗುರೊಡೆಯಿತು. ಅದಕ್ಕೆ ಪ್ರಶಸ್ತವಾದ ವಾತಾವರಣವೂ ನಿಮಣವಾಗಿತ್ತು. ಇಡೀ ಮಧ್ಯಪ್ರಾಚ್ಯದ ದೇಶಗಳು ಶ್ರೀಮಂತ ಬೀದರ್‌ನ ಕಡೆಗೆ ಮುಖ ಮಡ್ದಿದ ದಿನಗಳವು.
ಬಹಮನಿ ಅರಸ ಕಳುಹಿಸಿದ ಮನವಿಯನ್ನು ‘ವಯಸ್ಸಿನ ಕಾರಣಕ್ಕಾಗಿ ಬರುವುದು ಸಾಧ್ಯವಿಲ್ಲ’ ಎಂದು ನಯವಾಗಿ ತಿರಸ್ಕರಿಸಿದ ಶಹಾ ನಿಯಮತು ಕಿಮನಿ ಅವರು ತಮ್ಮ ಮೊಮ್ಮಗ ಮೀರ್ ನುರು ಹುಸೇನಿಯನ್ನು ಕಳುಹಿಸುತ್ತಾರೆ. ಸಂತನ ಪ್ರತಿನಿಧಿಯನ್ನು ಬರುವಿಕೆಗಾಗಿಯೇ ನಗರದ ಹೊರವಲಯದಲ್ಲಿ ಮಂಜ್ರಾ ನದಿಯ ದಂಡೆಯ ಮೇಲೆ ‘ನ್ಯಾಮತಾಬಾದ್’ ಎನ್ನುವ ಪುಟ್ಟ ನಗರವನ್ನು ನಿರ್ಮಿಸಲಾಗುತ್ತದೆ. ಸ್ವಾಗತಿಸುವುದಕ್ಕಾಗಿ ಅರಸ ಅಹಮದ್ ಶಹಾ ಸ್ವತಃ ತನ್ನ ಮಕ್ಕಳನ್ನು ಕಳುಹಿಸಿರುತ್ತಾನೆ. ವಿಜೃಂಭಣೆಯಿಂದ ಸ್ವಾಗತಿಸಿದ ನಂತರ ಕೂಡಿಸುವುದಕ್ಕಾಗಿ ವಿಶೇಷ ಸಿಂಹಾಸನ ತಖ್ತ್ ತಯರಿಸಲಾಗಿರುತ್ತದೆ. ಅರಸ ಅಹಮದ್ ಶಹಾ ತನ್ನ ಮಗಳನ್ನು ಮೀರ್ ನುರು ಹುಸೇನಿಗೆ ಕೊಟ್ಟು ಮದುವೆ ಮಡುತ್ತಾನೆ.
ಶಹಾ ನಿಯಮತು ಕಿಮನಿಯ ನಿಧನದ ನಂತರ (ಕ್ರಿ.ಶ. ೧೪೩೧) ಅವರ ಮಗ ಹಜರತ್ ಖಲೀಲು ಸೇರಿದಂತೆ ಇಡೀ ಕುಟುಂಬ ಬೀದರ್‌ಗೆ ಬಂದು ನೆಲೆಸುತ್ತದೆ. ಅರಸು ಮನೆತನದ ಜೊತೆಗಿನ ವೈವಾಹಿಕ ಸಂಬಂಧ ಮತ್ತು ಧಾರ್ಮಿಕ ಕಾರಣಗಳಿಗಾಗಿ ದೊರೆತ ಸ್ಥಾನಮನಗಳು ಶಹಾ ನಿಯಮತು ಕಿಮನಿ ಕುಟುಂಬದ ಘನತೆ ಹೆಚ್ಚುವಂತೆ ಮಡುತ್ತವೆ. ಅದೆ ಬೇರೆಯದೇ ಇತಿಹಾಸ. ಹಜರತ್ ಖಲೀಲು ಅವರ ಸಮಧಿ ಸ್ಥಳವೇ ಈಗಿರುವ ‘ಚೌಖಂಡಿ’.
‘ಚೌಖಂಡಿ’ ನಾಲ್ಕು ಅಂತಸ್ತುಗಳ ಕಟ್ಟಡ ಎಂದರ್ಥ. ಅಷ್ಟಕೋನ ಆಕೃತಿಯಲ್ಲಿ ಇರುವ ಚೌಖಂಡಿ ವಾಸ್ತವವಾಗಿ ಕೇವಲ ಎರಡು ಅಂತಸ್ತುಗಳ ಕಟ್ಟಡ. ನೋಡುವುದಕ್ಕೆ ಕಿರೀಟದ ರೀತಿಯಲ್ಲಿ ಕಾಣಿಸುವ ಚೌಖಂಡಿಯು ದೂರದಿಂದಲೇ ನೋಡುಗನ ಗಮನ ಸೆಳೆಯುತ್ತದೆ. ಹತ್ತಿರ ಹೋದಂತೆ ಕಟ್ಟಡದ ಮೇಲೆ ಕಪ್ಪುಕಲ್ಲಿನಲ್ಲಿ ಕಲಾತ್ಮಕವಾಗಿ ಕೆತ್ತಲಾಗಿರುವ ಶಾಸನಗಳು ಕಣ್ಮನ ತಣಿಸುವಂತಿವೆ. ಬರವಣಿಗೆಯ ಲಾಲಿತ್ಯ ಮತ್ತು ಕೌಶಲ್ಯ ಎಂತಹವರನ್ನೂ ಮೋಡಿ ಮಡುತ್ತವೆ. ಅಷ್ಟಕೋನ ಆಕೃತಿಯಲ್ಲಿ ಟರ್ಕಿ ಕಿರೀಟದ ಮದರಿಯಲ್ಲಿ ಇರುವ ಚೌಖಂಡಿಯನ್ನು ನೋಡಿ ಸವಿಯುವುದೇ ಒಂದು ಸೊಬಗು.ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ