ತಮ್ಮ ನೇರ , ನಿಷ್ಠುರ ಮಾತುಗಳಿಂದ ಸಾಂಸ್ಕೃತಿಕ ವಲಯದ ನೈತಿಕ ಎಚ್ಚರವನ್ನು ಜಾಗೃತವಾಗಿಡುತ್ತಿದ್ದ ಉಸ್ತಾದ್ ವಿಲಾಯತ್ ಖಾನ್ ಹಿಂದೂಸ್ತಾನಿ ಸಂಗೀತ ಪರಂಪರೆಯಲ್ಲಿ ಮೂಡಿಬಂದ ಅಪರೂಪದ ನಕ್ಷತ್ರಗಳಲ್ಲಿ ಒಬ್ಬರು . `ಬೀನ್ಕಾರ್' ಶೈಲಿಯಲ್ಲಿ ಪ್ರಚಲಿತವಾಗಿದ್ದ ಸಿತಾರ ವಾದನ ಪರಂಪರೆಗೆ ` ಗಾಯಕಿ ಅಂಗ್ ' ಸೇರಿಸಿದ ಹಿರಿಮೆ ಇವರದು . ಸಿತಾರ್ ವಾದನದಲ್ಲಿ ಗಾಯನ ಶೈಲಿ ಅಳವಡಿಸಿ ಅದಕ್ಕೆ ಅಗತ್ಯವಾಗಿದ್ದ ಸಿತಾರನ್ನು ರೂಪಿಸಿಕೊಂಡವರು . ನಾಲ್ಕು ತಲೆಮಾರುಗಳ ಸಂಗೀತ ಪರಂಪರೆ ಇರುವ ಕುಟುಂಬದಲ್ಲಿ ಜನಿಸಿದ ವಿಲಾಯತ್ ತಂದೆ ಉಸ್ತಾದ್ ಇನಾಯತಖಾನ್ ರಲ್ಲಿ ಸಿತಾರ್ ವಾದನ ಕಲಿಯಲು ಆರಂಭಿಸಿದರು . ವಿಲಾಯತ್ ಬಾಲಕರಾಗಿದ್ದಾಗ ಒಮ್ಮೆ ಅವರ ತಂದೆ ಸಿತಾರ್ ವಾದನ ಪ್ರಸ್ತುತ ಪಡಿಸುತ್ತಿರುವಾಗ ` ಕಣ್ಮುಂದೆ ಹಳದಿ ಬಣ್ಣವೇ ಹರಡಿ ' ದಂತಾಗಿದ್ದನ್ನು ತಂದೆಗೆ ಹೇಳಿದರು . ಅದಕ್ಕೆ ಇನಾಯತಖಾನರು ` ಬುದ್ದು , ನಾನೀಗ ನುಡಿಸಿದ್ದ ` ಬಸಂತ್ ' ರಾಗ ' ಎಂದು ಹೇಳಿದ್ದರು . ಸಂಗೀತದಲ್ಲಿ ಬಣ್ಣದ ಛಾಯೆ ಕಂಡ ವಿಲಾಯತರಿಗೆ ತಂದೆಯಿಂದ ಹೆಚ್ಚಿನ ಸಿತಾರ್ ಶಿಕ್ಷಣ ದೊರೆಯಲಿಲ್ಲ . ಕೇವಲ ಹತ್ತು ವರ್ಷದವರಾಗಿದ್ದಾಗಲೇ ಪಿತೃವಿಯೋಗಕ್ಕೆ ಒಳಗಾಗಬೇಕಾಯಿತು . ವಿಧಿಯಾಟದಿಂದ ನೊಂದ ವಿಲಾಯತರಿಗೆ ಅಜ್ಜ ಉಸ್ತಾದ್ ಬಂದೆ ಹುಸೇನ್ ಖಾನ್ ( ತಾಯಿಯ ತಂದೆ ) ಮತ್...
ತಮ್ಮ ಕಲಾಕೃತಿಗಳಲ್ಲಿ ಹೈದರಾಬಾದ್ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಕಲ್ಬುರ್ಗಿ ಸುತ್ತಲಿನ ಬದುಕಿನ ಅನುಭವ- ಜೀವಂತಿಕೆಯನ್ನು ಚಿತ್ರಿಸುವ ವಿ.ಜಿ. ಅಂದಾನಿಯವರು ಪ್ರಾದೇಶಿಕ ಅನನ್ಯ ಶೈಲಿಯ ಮೂಲಕ ಹೆಸರುವಾಸಿಯಾಗಿರುವವರು. ಕಲ್ಬುರ್ಗಿಯಂತಹ ಬರಡು ನೆಲದಲ್ಲಿ ` ಐಡಿಯಲ್ ಫೈನ್ ಆರ್ಟ್ ಸ್ಕೂಲ್ ' ಮೂಲಕ ಕಲಾಪರಂಪರೆಯನ್ನು ಹುಟ್ಟುಹಾಕಿರುವ ಅಂದಾನಿಯವರು ತಮ್ಮ ಕುಟುಂಬ , ನೆನಪು- ಹಳಹಳಿಕೆ- ಕನಸುಗಳನ್ನು ಮನಬಿಚ್ಚಿ ಮಾತನಾಡುತ್ತಾರೆ. ` ನಮ್ಮೂರು ಕಲ್ಬುರ್ಗಿಗೆ 25 ಕಿ.ಮೀ. ದೂರದಲ್ಲಿರುವ ಕಿರಣಗಿ. ನಾ ಸಣ್ಣಾವ್ದಿದಾಗ ನಮ್ಮದು ಜಾಯಿಂಟ್ ಫ್ಯಾಮಿಲಿ. ಒಬ್ಬ ಅಕ್ಕ ಸೇರಿದಂತೆ 11 ಸಹೋದರರಲ್ಲಿ ನಾನೇ ಕಡೆಯವ. ನಿಜಾಂ ಕಾಲದಲ್ಲಿ ಪಟವಾರಿ ಆಗಿದ್ದ ಅಜ್ಜ ಭಾರೀ ಮನಸ್ಯಾ ಇದ್ದ . ಅವನಿಂದಾನೇ ಮನ್ಯಾಗ ಎಲ್ಲರಿಗಿ ಎಜ್ಯುಕೇಷನ್ ಸಿಕ್ಕಿದ್ದು. ಆದ್ರ ನಮ್ಮ ಫಾದರ್ ಮಾತ್ರ ಪೂರ್ತಿ ಹೊಲಾನೇ ನಂಬಿ ಬದುಕಿದ್ದವರು. ನನಗೂ ಒಕ್ಕಲತನದ ಮ್ಯಾಲ ಭಾಳ ಒಲವ ಐತಿ. ಈಗೀಗ ಕಲ್ಬುರ್ಗಿ ಊರ ಹೊರಗ ಒಂದೀಟು ಹೊಲ ತಗೊಂಡು ತೋಟ-ಪಟ್ಟಿ ತರಹ ಮಾಡಬೇಕು ಅಂತ ಅಂದುಕೊಂಡೀನಿ ' ಎಂದು ತಮ್ಮ ಹಿನ್ನೆಲೆ ಮತ್ತು ` ಕನಸು ' ವಿವರಿಸುತ್ತಾರೆ. ` ನಮ್ಮೂರಿಗೆ ಸನೀಪದ ದೊಡ್ಡ ಊರಂದ್ರ ಎಸಿಸಿ ಫ್ಯಾಕ್ಟರಿಯಿಂದ ಫೇಮಸ್ ಆಗಿದ್ದ ಶಹಾಬಾದ. ಅಲ್ಲಿಗೆ ಸಿನಿಮಾ ನೋಡುದಕ್ಕೆ ಹೋಗ್ತಿದ್ವಿ. ನಾನು ` ಆವಾರಾ ', `420' ನೋಡಿದ್ದೆಲ್ಲಾ ಅಲ್ಲಿಯೇ. ಆಗೇ ನಾಕಾರು ಸರ...
ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಮಾಧ್ಯಮಗಳು ಮತ್ತು ರಾಜಕೀಯ ವಿಶ್ಲೇಷಕರು 2019ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದು ಬಿಂಬಿಸಿವೆ. ಮೇಲ್ನೋಟಕ್ಕೆ ಅದು ಸರಿ ಎಂದು ಕೂಡ ಅನ್ನಿಸುತ್ತಿತ್ತು. ಅನ್ನಿಸುತ್ತಿದೆ. ರಾಜಕಾರಣದಲ್ಲಿ ಕಂಡದ್ದು, ಕೇಳಿದ್ದು ಮಾತ್ರ ‘ಸತ್ಯ’ ಅಲ್ಲ. ಹಾಗಾದರೆ ಕರ್ನಾಟಕದ ಚುನಾವಣೆಯು ಸೆಮಿಫೈನಲ್ ಅಲ್ಲವೇ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆಟದ ನಿಯಮಗಳು ರಾಜಕೀಯಕ್ಕೆ ಅನ್ವಯಿಸುವುದಿಲ್ಲ. ಜನ ರಾಜಕೀಯ ಆಯ್ಕೆಯನ್ನು ಆಟದ ರೀತಿಯಲ್ಲಿ ಮನರಂಜನೆ ಎಂದು ಭಾವಿಸುವುದಿಲ್ಲ. ಯಾಕೆಂದರೆ ಅವರಿಗೆ ತಮ್ಮ ಆಯ್ಕೆ ಉಂಟು ಮಾಡುವ ಅಪಾಯದ ಅರಿವು –ಮುನ್ಸೂಚನೆ ಇದ್ದೇ ಇರುತ್ತದೆ. ಎರಡು ಚುನಾವಣೆಯ ನಡುವಿನ ಅವಧಿಯಲ್ಲಿ ‘ಮತದಾರ ಪ್ರಭು’ ಅಸಹಾಯಕ. ಅದು ಅವನಿಗೆ ಗೊತ್ತಿರದ ಸಂಗತಿಯೇನಲ್ಲ. ಸಣ್ಣಪುಟ್ಟ ಬದಲಾವಣೆ- ಘಟನೆ-ಬೆಳವಣಿಗೆಗಳೂ ಸಂಕೇತ-ಸೂಚನೆ ನೀಡುತ್ತವೆ ಎನ್ನುವುದು ಒಂದು ಹಂತದ ಮಟ್ಟಿಗಿನ ತರ್ಕಕ್ಕೆ ಸರಿ. ತರ್ಕವು ಸತ್ಯದ ಸಮೀಪ ಹೋಗಬಹುದಾದ ದಾರಿ ಮಾತ್ರ. ತರ್ಕದಿಂದಲೇ ಸತ್ಯವನ್ನು ಅರಿಯಲು-ಪಡೆಯಲು ಸಾಧ್ಯವಿಲ್ಲ. ಹಾಗಾದರೆ ಅದು ಹೇಗೆ ಸಿಗುತ್ತದೆ? ಅದನ್ನು ಪಡೆಯುವ ಕ್ರಮ ಏನು? ಅದು ವರ್ತಮಾನವನ್ನು ಹಿಡಿಯುವ ಹಂಬಲದ ಹಾಗೆ. ಸಿಕ್ಕಿತು ಎಂದು ಅನ್ನಿಸುವ ವೇಳೆಗಾಗಲೇ ಅದು ಬದಲಾಗಿ ಬಿಟ್ಟಿರುತ್ತದೆ. ಅದಿರಲಿ. ಒಮ್ಮೆ ಓಟು ಕೊಟ್ಟ ಮೇಲೆ ಮತದಾರ ಮೂಕ ಪ್ರೇಕ್ಷಕ ಆಗುತ್ತಾನೆ. ಐದು ವರ್ಷದ ವರೆಗೆ ಬರಿ ನೋಡುವುದಷ್ಟೇ ಅ...
ಕಾಮೆಂಟ್ಗಳು