ಪೋಸ್ಟ್‌ಗಳು

ಡಿಸೆಂಬರ್, 2008 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

’ನಾನು’ ಅಂದರೆ ದೇವು

ನೋಡಿ ಸ್ವಾಮಿ ನಾನೊಬ್ಬ ಸಣ್ಣ ಮನುಷ್ಯ. ಕರ್ಣಾಟವೆಂಬ ದೇಶದ ಆಚೆಗೆ ಏನಿದೆ? ಎಂದು ಕಂಡವನಲ್ಲ. ಅಷ್ಟೇ ಏಕೆ ಕರ್ನಾಟಕದ ಒಳಗಡೆ ಕೂಡ ಹೆಚ್ಚು ಓಡಾಡಿದವನಲ್ಲ. ಏಳೆಂಟು ವರ್ಷದಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತ ಬಂದಿದ್ದೇನೆ. ಅದೂ ಹೊಟ್ಟೆಯ ಪಾಡಿಗಾಗಿ. 'ಕೋಶ ಓದು, ದೇಶ ನೋಡು' ಎಂಬ ಗಾದೆ ಕೇಳಿದ್ದೇನೆ. ಅದನ್ನು ಜಾರಿಗೆ ತರುವಷ್ಟು ದೊಡ್ಡ ಮನಸ್ಸು, ಮನುಷ್ಯ ನಾನಾಗಿಲ್ಲ. ಆಗಲು ಆಸೆ ಇತ್ತು, ಇದೆ. ಆದರೆ, ಎಲ್ಲ ಕನಸು- ಆಸೆಗಳು ಈಡೇರುವುದಿಲ್ಲ ಅಲ್ಲವೇ? ಎಷ್ಟೋ ಬಾರಿ ಅವು ನಮ್ಮ ಕಣ್ಣಮುಂದೆಯೇ ಕಮರಿಹೋಗುವುದನ್ನು ನೋಡುತ್ತ ಅಸಹಾಯಕರಾಗಿ ಇರಬೇಕಾಗುತ್ತದೆ. ನಾನು ಕನರ್ಾಟಕ ಎಂಬ ಬಾವಿ ಅಲ್ಲಲ್ಲ. 'ಬೀದರ್' ಎಂಬ ರಾಜಧಾನಿಯಿಂದ ದೂರ ಇರುವ, ನಾಲ್ಕೈದು ತಾಲ್ಲೂಕುಗಳಿರುವ ಸಣ್ಣ ಬಾವಿಯೊಳಗಿನ ಕಪ್ಪೆ. ಅದಕ್ಕೆ ತಾನಂದುಕೊಂಡದ್ದೇ ದೊಡ್ಡ ಜಗತ್ತು. ಇದೇ ನೆಪದಲ್ಲಿ ನನ್ನ ಬಗ್ಗೆ ಒಂದಿಷ್ಟು ಬರೆಯುತ್ತೇನೆ. ಹೈದರಾಬಾದ್ ಕರ್ನಾಟಕ ಎಂಬ ಬಿರುಬಿಸಿಲಿನ ಗುಲ್ಬರ್ಗ ಜಿಲ್ಲೆಯ ಶಹಾಪುರ ಎಂಬ ಪಟ್ಟಣ ನನ್ನ ಊರು. ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಈಗ ನಿವೃತ್ತರಾಗಿದ್ದಾರೆ. ಅವರು ಕೆಲಸ ಮಾಡುತ್ತಿದ್ದ 'ಅಣಬಿ' ಕುಗ್ರಾಮದಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಆರಂಭವಾಯಿತು. ಕರೆಂಟ್ ಇಲ್ಲದ, ಬಸ್ಗಳೇ ಬಾರದ ಯಾವ ದಿಕ್ಕಿನಿಂದ ಹೋದರೆ ನಡೆದುಕೊಂಡೇ ಹೋಗಬೇಕಾಗಿದ್ದ ಗ್ರಾಮ ಅದು. ಕತ್ತಲಾಗುತ್ತಿದ್ದಂತೆ ಸಿರಿವಂತರಂತೆ ಕಂದೀಲು...