ಪೋಸ್ಟ್‌ಗಳು

ಜೂನ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

‘ಕತ್ತಿಯಂಚಿನ ದಾರಿ’ಯಲ್ಲಿ ‘ಮೀಮಾಂಸೆ’ಯಾದ ವಿಮರ್ಶೆ

ಇಮೇಜ್
ಡಾ. ರಹಮತ್ ತರೀಕೆರೆ ಅವರ ‘ಕತ್ತಿ ಅಂಚಿನ ದಾರಿ’ ಕನ್ನಡದ ಮಹತ್ವದ ಪುಸ್ತಕಗಳಲ್ಲಿ ಒಂದು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನ ಆಗಿರುವ ಈ ಪುಸ್ತಕ ‘ಮಹತ್ವದ ಕೃತಿ’ ಎಂಬುದು ಸಾಬೀತಾಗಿದೆ. ಆದರೆ, ಪುಸ್ತಕವೊಂದರ ಮಹತ್ವ ನಿರ್ಧಾರ ಆಗುವುದು ಅದಕ್ಕೆ ಸಿಗುವ ಮನ್ನಣೆ, ಗೌರವಗಳ ಮೂಲಕ ಅಲ್ಲ. ಹಾಗೆ ಆಗಬಾರದು ಕೂಡ. ಮಹತ್ವ ನಿರ್ಧರಿಸುವುದಕ್ಕೆ ಇರುವ ಹಲವು ಮನದಂಡಗಳ ಪೈಕಿ ಪ್ರಶಸ್ತಿಯೂ ಒಂದು ಎಂಬುದರಲ್ಲಿ ಎರಡು ಮತಿಲ್ಲ. ‘ಕತ್ತಿಯಂಚಿನ ದಾರಿ’ ಪುಸ್ತಕವು ಕೇವಲ ಪ್ರಶಸ್ತಿ ಪಡೆದ ಕಾರಣದಿಂದಾಗಿ ಮಹತ್ವ ಪಡೆದ ಕೃತಿ ಅಲ್ಲ ಎಂಬುದು ಅರಿವಿಗೆ ಬರುವುದಕ್ಕೆ ಹೆಚ್ಚು ಹೊತ್ತು ಹಿಡಿಯುವುದಿಲ್ಲ. ಕತ್ತಿಯಂಚಿನ ದಾರಿಯಲ್ಲಿ ಒಟ್ಟು ೨೦ ಲೇಖನಗಳಿವೆ. ೨೫೮ ಪುಟಗಳ ಈ ಪುಸ್ತಕವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ವೈಚಾರಿಕತೆಯ ಭಾರ ಇಲ್ಲದ ಇಲ್ಲಿನ ಚಿಂತನೆಗಳು ಸರಳ ಮತ್ತು ನೇರವಾಗಿ ಇರುವುದರಿಂದ ಪ್ರಿಯವಾಗುತ್ತವೆ. ಅಪ್ಪಟ ಸಾಹಿತ್ಯ ವಿಮರ್ಶೆಯ ಗ್ರಂಥವಾದರೂ ಅದರಾಚೆಗೆ ಬೆಳೆದು ನಿಲ್ಲುತ್ತದೆ. ಸಾಹಿತ್ಯದ ಮೀಮಂಸೆ ಕಟ್ಟಿಕೊಡುವುದರ ಜೊತೆಗೆ ಸಂಸ್ಕೃತಿ ಕುರಿತ ಹರಳುಗಟ್ಟಿದ ಚಿಂತನೆಗಳನ್ನು ಮಂಡಿಸುತ್ತದೆ. ಕೇವಲ ಸಾಹಿತ್ಯ ಮತ್ತು ಸಂಸ್ಕೃತಿಗೆ ಮತ್ರ ಸೀಮಿತವಾಗದೆ ಒಟ್ಟು ಬದುಕಿನ ಗ್ರಹಿಕೆಯನ್ನು ಶ್ರೀಮಂತಗೊಳಿಸುತ್ತವೆ. ೨೦ ಲೇಖನಗಳ ಪೈಕಿ ‘ಕುವೆಂಪು ಚಿಂತನೆ; ಆಕರ್ಷಣೆ ವಿಕರ್ಷಣೆ’ ಮತ್ತು ‘ಕುವೆಂಪು: ವೈರುಧ್ಯಗಳ ಹಾದಿಯ ಪಯಣಿಗನ...