ಬ್ರಿಟಿಷ್ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಫುಟ್ಬಾಲ್ ಪ್ರತಿಭೆ
ಅದು ಸ್ವಾತಂತ್ರ್ಯಪೂರ್ವ ಕಾಲ. ಹೈದರಾಬಾದ್ನಲ್ಲಿ ನಿಜಾಂ ಆಡಳಿತದಲ್ಲಿ ಮಹಾರಾಜ ಕಿಷನ್ ಪ್ರಸಾದ್ ಅವರು ದಿವಾನರಾಗಿದ್ದ ಅವಧಿ. ಬ್ರಿಟಿಷ್ ಅಧಿಕಾರಿಗಳ ತಂಡ ಮತ್ತು ಹೈದರಾಬಾದ್ ಸಿಟಿ ಕ್ಲಬ್ಗಳ ನಡುವೆ ಫುಟ್ಬಾಲ್ ಪಂದ್ಯ. ಬ್ರಿಟಿಷ್ ಅಧಿಕಾರಿಗಳು, ದಿವಾನರು ಸೇರಿದಂತೆ ರಾಜ್ಯದ ಗಣ್ಯಮಾನ್ಯರೆಲ್ಲ ಆಟ ನೋಡಲು ಕುಳಿತಿದ್ದರು. ಬ್ರಿಟಿಷ್ ಅಧಿಕಾರಿಗಳ ತಂಡ ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿತ್ತು. `ಇನ್ನೇನು ಆಟ ಮುಗಿಯಿತು' ಎಂದುಕೊಳ್ಳುತ್ತಿರುವಾಗಲೇ ಸಿಟಿ ಕ್ಲಬ್ ತಂಡದ ಯುವ ಆಟಗಾರನೊಬ್ಬ ಚೆಂಡನ್ನು ತಳ್ಳುತ್ತ ಬಂದು ಪೆಟ್ಟಿಗೆಯತ್ತ ಒದ್ದು ಬಿಟ್ಟ. ಕಣ್ಣು ಪಿಳುಕಿಸುವಷ್ಟರಲ್ಲಿಯೇ `ಗೋಲ್' ಆಗಿಬಿಟ್ಟಿತು. ಮೈದಾನದಲ್ಲಿ ಏನಾಗುತ್ತಿದೆ? ಎಂದು ಬ್ರಿಟಿಷ್ ಆಟಗಾರರು ಬೆರಗಾಗಿ ನೋಡುತ್ತಿರುವಾಗಲೇ ಮತ್ತೆ ತನ್ನ ಕಾಲ್ಚೆಳಕ ತೋರಿಸಿದ ಯುವಕ ಗೆಲುವಿನ ಗೋಲ್ ಬಾರಿಸಿದ. ಆ ಎರಡೂ ಒದೆತಗಳು ಆಕಸ್ಮಿಕ ಆಗಿರಲಿಲ್ಲ. ಪೂರ್ವ ನಿಯೋಜಿತ ತಂತ್ರ ಬಳಸಿಯೇ ಯುವಕ ತನ್ನ ತಂಡಕ್ಕೆ ಗೆಲುವು ದೊರಕಿಸಿಕೊಟ್ಟಿದ್ದ. ಇದು `ಲಗಾನ್' ಅಥವಾ `ಚೆಕ್ ದೇ' ಸಿನಿಮಾದಂತಹ ಕಥೆಯಲ್ಲ. ಅಕ್ಷರಶಃ ಮೈದಾನದಲ್ಲಿ ನಡೆದ ಘಟನೆ. ಬಾಕ್ಸ್‌ನಲ್ಲಿ ಕಾಲಿನಿಂದ ಬಾಲ್ ತಳ್ಳಿದ ಯುವಕ ಬೀದರ್‍ನ ನಜೀರ್ ಅಹ್ಮದ್ ಖಾನ್. ಯುವಕ ಆಟದಿಂದ ಬೆರಗಾದ ದಿವಾನರು ತಾವು ಕುಳಿತಿದ್ದ ಸ್ಥಾನದಿಂದ ಇಳಿದು ಬಂದರು. ಯುವಕನನ್ನು ಪ್ರೀತಿ, ಆಪ್ಯಾಯತೆಯಿಂದ ಅಪ್ಪಿ ಅಭಿನಂದಿಸಿದರು. `ದೇಸಿ'...