ಹಿಟ್ಲರ್ ಎಂಬ ಹುಂಬನ ಕಥೆ

1945 ಏಪ್ರಿಲ್ 30ರಂದು ಅಡಾಲ್ಫ್ ಹಿಟ್ಲರ್ ತನ್ನನ್ನು ತಾನೇ ಶೂಟ್ ಮಾಡಿಕೊಂಡ. ಅದು ಕೇವಲ ದುಷ್ಟ ವ್ಯಕ್ತಿಯೊಬ್ಬನ ಅಂತ್ಯವಾಗಿರಲಿಲ್ಲ. ಮನುಕುಲ ಕಂಡ ಕರಾಳ ಅವಧಿ ಮುಕ್ತಾಯಗೊಂಡಿತು. ಸರ್ವಾಧಿಕಾರಿ ಹಿಟ್ಲರ್‌ನ 22 ವರ್ಷಗಳ ಅಧಿಕಾರದ ಅವಧಿಯಲ್ಲಿ ನಡೆದ ದಶಲಕ್ಷ ಯೆಹೂದಿಗಳ ಮತ್ತು 14 ದಶಲಕ್ಷ ರಷ್ಯನ್‌ರ ಮತ್ತು ಅಪಾರ ಪ್ರಮಾಣದ ಪೋಲೆಂಡ್ ನಾಗರಿಕರ ಅಮಾನವೀಯ ಹತ್ಯಾಕಾಂಡದ ಸರಣಿ ಕೂಡ ಕೊನೆಗೊಂಡಿತು.
ಇತಿಹಾಸ ಕಂಡ ಕ್ರೂರ, ಅಷ್ಟೇ ವರ್ಣರಂಜಿತ ವ್ಯಕ್ತಿತ್ವಗಳಲ್ಲಿ ಹಿಟ್ಲರ್ ಕೂಡ ಒಬ್ಬ. ಸಾಮಾನ್ಯ ಮನುಷ್ಯನೊಬ್ಬ ಹುಂಬ ಹಠಮಾರಿತನ, ಬಿಡದ ಛಲ, ಸೇಡು, ಒಬ್ಬ ವ್ಯಕ್ತಿಯನ್ನು ಎಷ್ಟು ಎತ್ತರಕ್ಕೆ ಕರೆದೊಯ್ಯಬಹುದು ಎಂಬುದಕ್ಕೆ ಹಿಟ್ಲರ್ ಉತ್ತಮ ಉದಾಹರಣೆ. ಹಾಗೆಯೇ ಹಿಟ್ಲರ್ ನಡೆಸಿದ ನರಹತ್ಯೆ, ಮಾರಣಹೋಮ ಕೂಡ ಮಾನವನ ಹಿಂಸಾಪ್ರವೃತ್ತಿ ತಲುಪಬಹುದಾದ ಅತ್ಯಂತ ಹೀನಹಂತವನ್ನು ತೋರಿಸಿತು. ಅವನ ಅಸ್ವಸ್ಥ ಮನಸ್ಸು ತನಗೆ ದೊರೆತ ಆಡಳಿತವನ್ನು ಸದುಪಯೋಗ ಪಡಿಸಿಕೊಳ್ಳಲು ಬಿಡದೆ ಇಡೀ ರಾಜಸತ್ತೆಯನ್ನು ತನ್ನ ತಿಕ್ಕಲು ತೆವಲುಗಳನ್ನು ತಿರಿಸಿಕೊಳ್ಳಲು ಬಳಸಿಕೊಂಡಿತು.
ಅವನ ಹುಂಬ ನಂಬಿಕೆಗಳು, ವಿಚಿತ್ರ ವಿಚಾರಗಳು, ಉನ್ಮಾದದ ಹುಚ್ಚುತನದಿಂದಾಗಿ ಲಕ್ಷಾಂತರ ಜನ ಸಾವು- ನೋವಿಗೆ ಗುರಿಯಾಗಬೇಕಾಯಿತು. ಒಂದು ಸಮುದಾಯವನ್ನೇ ಸರ್ವನಾಶ ಮಾಡಲು ಹೊರಟ ಹಿಟ್ಲರ್ ಅದಕ್ಕಾಗಿ ತನ್ನ ಬಳಿ ಇದ್ದ ಎಲ್ಲ ರೀತಿಯ ರಾಜಕೀಯ -ಸಾಮಾಜಿಕ ಅಧಿಕಾರವನ್ನು ಯಥೇಚ್ಛ ಬಳಸಿಕೊಂಡ. ಯಾರನ್ನೂ ಸಂಪೂರ್ಣವಾಗಿ ನಂಬದ ಎಲ್ಲರನ್ನೂ ಅನುಮಾನದ ಕಣ್ಣುಗಳಿಂದ ನೋಡುತ್ತಿದ್ದ ಹಿಟ್ಲರ್ ತೆಗೆದುಕೊಳ್ಳುತ್ತಿದ್ದ ಕ್ರೂರ ನಿರ್ಣಯಗಳು ಸಾಮಾನ್ಯರು ಊಹಿಸುವುದೂ ಸಾಧ್ಯವಿಲ್ಲ.
1889ರಲ್ಲಿ ಆಸ್ಟ್ರೀಯಾದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹಿಟ್ಲರ್ 1913ರಲ್ಲಿ ವಿಯೆನ್ನಾದಿಂದ ಮ್ಯೂನಿಕ್‌ಗೆ ಓಡಿ ಬರುವ ಮುನ್ನ ಕಲಾವಿದನಾಗಿ ಹೆಸರು ಮಾಡಿದ್ದ. ಮೊದಲ ಮಹಾಯುದ್ಧದಲ್ಲಿ ಜರ್ಮನ್ ಪರವಾಗಿ ಸೈನಿಕನಾಗಿ ಯುದ್ಧರಂಗಕ್ಕೆ ತೆರಳಿದ್ದ ಹಿಟ್ಲರ್ ತೀವ್ರವಾಗಿ ಗಾಯಗೊಂಡು ಮರಳಬೇಕಾಯಿತು. ಆಗಿನ ಜರ್ಮನಿಯ ಸೋಲು ಅವನ ಕಳವಳಕ್ಕೆ ಕಾರಣವಾಯಿತು. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ದೇಶ ಬಳಲುತ್ತಿರುವುದನ್ನು ನೋಡಿದ ಹಿಟ್ಲರ್‌ಗೆ `ದೇಶಕ್ಕಾಗಿ ಏನನ್ನಾದರೂ ಮಾಡಬೇಕು' ಎಂಬ ಮಹತ್ವಾಕಾಂಕ್ಷೆ ಹುಟ್ಟಿಕೊಂಡಿತು. 1919ರಲ್ಲಿ ಜರ್ಮನ್ ಕಾರ್ಮಿಕರ ಪಕ್ಷ ಸೇರಿದ ಹಿಟ್ಲರ್ ಒಂದು ವರ್ಷದ ನಂತರ ಪಕ್ಷದ ನಾಯಕತ್ವ ವಹಿಸಿ `ನ್ಯಾಷನಲ್ ಸೋಷಲಿಸ್ಟ್ಸ್' ಎಂದು ಹೆಸರು ಬದಲಾಯಿಸಿದ. 1921ರಲ್ಲಿ ನಾಜಿ ಪಕ್ಷ ಆರಂಭಿಸಿದ ಹಿಟ್ಲರ್ 1923ರಲ್ಲಿ `ಮ್ಯೂನಿಕ್‌ನ ಬೀರ್ ಹಾಲ್'ನಲ್ಲಿ ತನ್ನ ಬೆಂಬಲಿಗರೊಂದಿಗೆ ನಡೆಸಿದ ಸಭೆಯಲ್ಲಿ `ಕ್ರಾಂತಿ' ಮಾಡುವ ನಿರ್ಣಯ ಕೈಗೊಂಡ. ಮ್ಯೂನಿಕ್‌ನಿಂದ ಮರಿನಾದತ್ತ ಸಾಗಿದ 3 ಸಾವಿರ ಕ್ರಾಂತಿಕಾರಿಗಳನ್ನು ಸರ್ಕಾರ ಬಂಧಿಸುವಲ್ಲಿ ಯಶಸ್ವಿಯಾಯಿತು. ಪರಿಣಾಮವಾಗಿ ಹಿಟ್ಲರ್ ಐದುವರ್ಷ ಸೆರೆಮನೆ ಸೇರಬೇಕಾಯಿತು. ಬಂಧನದಲ್ಲಿದ್ದ ಅವಧಿಯಲ್ಲಿಯೇ `ಮೈನ್ ಕ್ಯಾಂಪ್' ಆತ್ಮಕತೆ ರಚನೆಯಲ್ಲಿ ತೊಡಗಿಸಿಕೊಂಡ. ಅದೇ ಸಮಯದಲ್ಲಿ ನಡೆಸಿದ ಕಮ್ಯುನಿಷ್ಟರ ವಿರೋಧ, ಆರ್ಯ ರಕ್ತದ ಶುದ್ಧತೆ, ಜರ್ಮನ್ ರಾಷ್ಟ್ರೀಯತೆ ಕುರಿತು ಹಿಟ್ಲರ್‌ನ ವಿಚಾರಗಳು ಸ್ಪಷ್ಟ ಧೋರಣೆ ಪಡೆದುಕೊಂಡವು.
ನಂತರ ನಡೆದ ಚುನಾವಣೆಯಲ್ಲಿ ನಾಜಿ ಪಕ್ಷವು ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತಾದರೂ ಅಧಿಕಾರ ಕೈಗೆ ಸಿಗಲಿಲ್ಲ. ಹಲ ಪಿತೂರಿಗಳಿಂದಾಗಿ 1933ರಲ್ಲಿ ಆಯ್ಕೆಯಾದ. ಚಾನ್ಸಲರ್‌ನಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವೊದಲು ಮಾಡಿದ ಕೆಲಸವೆಂದರೆ `ವೇಯ್ನರ್ ಸಂವಿಧಾನ'ವನ್ನು ಕಿತ್ತೆಸೆದು ತನ್ನನ್ನೇ ಸರ್ವಾಧಿಕಾರಿ ಎಂದು ಘೋಷಿಸಿದ. ನಂತರ ಆರಂಭವಾದ ಭೀಕರ ದುರಾಡಳಿತ ಕೊನೆಗೊಳಿಸುವುದಕ್ಕಾಗಿ ವಿಶ್ವದ ಶಕ್ತರಾಷ್ಟ್ರಗಳೆಲ್ಲ ಒಂದಾಗಿ ಹೊರಾಡಬೇಕಾಯಿತು.
ಮೊದಲಿಗೆ ಯೆಹೂದಿಗಳ ಪೌರತ್ವವನ್ನು ರದ್ದುಪಡಿಸಲಾಯಿತು ಮತ್ತು ಸಾಮೂಹಿಕ ಹತ್ಯಾಕಾಂಡದ ಪೂರ್ವಭಾವಿಯಾಗಿ 1938 ನವೆಂಬರ್ 9 ಮತ್ತು 10 `ಕ್ರಿಸ್ಟಲ್ ರಾತ್ರಿ' (ಅಥವಾ ಒಡೆದ ಗಾಜುಗಳ ರಾತ್ರಿ) ಕಾರ್ಯಾಚರಣೆಯಲ್ಲಿ 91 ಯೆಹೂದಿಗಳು ಹತ್ಯೆಗೀಡಾದರೆ ನೂರಾರು ಜನ ತೀವ್ರವಾಗಿ ಗಾಯಗೊಂಡರು. 7,500 ವ್ಯಾಪಾರಿ ಮಳಿಗೆಗಳನ್ನು ನಾಶಮಾಡಲಾಯಿತು. ಅಷ್ಟೇ ಅಲ್ಲ, ಹರ್ಮನ್ ಗೆಯಾಂಗ್ ನೇತೃತ್ವದ ರಾಜಕೀಯ ಪೊಲೀಸರು (ಗೆಸ್ಟಪೊ) 30 ಸಾವವಿರ ಶ್ರೀಮಂತ ಯೆಹೂದಿಗಳನ್ನು ಬಂಧಿಸಿ ಚಿತ್ರಹಿಂಸೆ ನೀಡಿದರು. ಸರ್ಕಾರಕ್ಕೆ ತಮ್ಮ ಆಸ್ತಿಯನ್ನು ನೀಡಿ, ದೇಶಾಂತರ ವಲಸೆ ಹೋಗುವ ಆದೇಶದ ಮೇರೆಗೆ ಅವರನ್ನು ಬಿಡುಗಡೆ ಮಾಡಲಾಯಿತು. ಬದುಕಿದ್ದರೆ ಬೇಡಿ ತಿನ್ನಬಹುದು ಎಂದುಕೊಂಡ ದಿಗ್ಭ್ರಾಂತ ಯೆಹೂದಿ ಶ್ರೀಮಂತರು ದಿಕ್ಕಾಪಾಲಾಗಿ ಓಡಿಹೋದರು.
1941ರಲ್ಲಿ ಯೆಹೂದಿಗಳ ಸಮಸ್ಯೆಗೆ ಅಂತಿಮ ಪರಿಹಾರ ಕಂಡುಕೊಳ್ಳಲು ವಾನ್ಸಿಯಲ್ಲಿ 15 ಜನ ನಾಜಿ ಅಧಿಕಾರಿಗಳು ಸಭೆ ಸೇರಿಸಿದರು. ಸೂಕ್ತ ಕಾರ್ಯತಂತ್ರ ರೂಪಿಸುವ ಅಧಿಕಾರವನ್ನು ಅಡಾಲ್ಫ್ ಐಚ್ಮನ್ ಮತ್ತು ರೇನ್ಹಾಡರ್ ಹೇಡ್ರಿಚ್ ಅವರಿಗೆ ವಹಿಸಲಾಯಿತು. ಜರ್ಮನಿಯ ಪೂರ್ವಭಾಗದಲ್ಲಿ ಶಿಬಿರಗಳನ್ನು ನಿರ್ಮಿಸಿ ಅಲ್ಲಿ ದುರ್ಬರ ಜೀವನ ಕ್ರಮ ಅಳವಡಿಸುವ ಬಗ್ಗೆ ಇಬ್ಬರು ಅಧಿಕಾರಿಗಳ ಅಭಿಪ್ರಾಯ ಆಧರಿಸಿ ಕೇವಲ ಒಂದು ತಿಂಗಳಲ್ಲಿ ಆಸ್ಟ್ವಿಜ್ ಮತ್ತು ಬ್ಲಿಂಕಾಗಳಲ್ಲಿ `ಯಾತನಾ ಶಿಬಿರ' ಆರಂಭಿಸಲಾಯಿತು.
ಹಿಟ್ಲರ್‌ನ ಬೆಂಗಾವಲು ಪಡೆ ಎಂದು 1925ರಲ್ಲಿ ಆರಂಭವಾದ ಎಸ್ಎಸ್ ನಂತರದ ದಿನಗಳಲ್ಲಿ ನಾಜಿ ಪಕ್ಷದ ಅರೆ ಸೈನಿಕ ಪಡೆಯಾಗಿ ರೂಪುಗೊಂಡಿತು. ಎಸ್ಎಸ್ನಲ್ಲಿ ಎರಡು ವಿಭಾಗಗಳ್ದಿದವು. ಸಾಮಾನ್ಯ ಎಸ್ಎಸ್ ಘಟಕವು ಗೆಸ್ಟಪೊ ಸೇರಿದಂತೆ ಪೊಲೀಸ್ ಕಾಯರ್ಾಚರಣೆ ನಡೆಸಿದರೆ, ಸೈನಿಕ ಎಸ್ಎಸ್ ಯಾತನಾ ಶಿಬಿರ ಮತ್ತು ಸಾವಿನ ಶಿಬಿರಗಳನ್ನು ನೋಡಿಕೊಳ್ಳುವ ಕೆಲಸ ನೀಡಲಾಗಿತ್ತು. 300ಜನರಿಂದ ಆರಂಭವಾದ ಎಸ್ಎಸ್‌ನ ಸಂಖ್ಯೆಯನ್ನು 2.5ಲಕ್ಷದ ವರೆಗೆ ಹೆಚ್ಚಿಸಲಾಯಿತು. ಪಡೆಗಳಿಗೆ ಯೆಹೂದಿಗಳ ಕುರಿತು ಜನಾಂಗೀಯ ತಿರಸ್ಕಾರ ಮತ್ತು ಹಿಟ್ಲರ್ ಬಗ್ಗೆ ಅಚಲ ಶ್ರದ್ಧೆಯನ್ನು ಕಾಯ್ದುಕೊಳ್ಳುವಂತೆ ವಿಶೇಷ ತರಬೇತಿ ನೀಡಲಾಗುತ್ತಿತ್ತು. ಇವರು ಕೈಗೊಳ್ಳುವ ಯಾವುದೇ ಕ್ರಮಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿರಲಿಲ್ಲ. ಪೋಲಿಂಡ್‌ನಲ್ಲಿ ನಡೆದ `ಯೆಹೂದಿ ನಿರ್ನಾಮ ಶಿಬಿರ' ಸೇರಿದಂತೆ ಸಾವಿರಾರು ಶಿಬಿರಗಳಿಗೆ ಕಾವಲು ಕಾಯುತ್ತಿದ್ದರು.
ಯೆಹೂದಿಗಳು, ಜಿಪ್ಸಿಗಳು ಮತ್ತು ಕಮ್ಯುನಿಷ್ಟರು ಮತ್ತು ರಾಜಕೀಯ ವಿರೋಧಿಗಳನ್ನು ಇಲ್ಲವಾಗಿಸುವುದಕ್ಕಾಗಿ ಹಿಟ್ಲರ್ ಮತ್ತವನ ಮಿತ್ರ ಸಮೂಹ ಅತ್ಯಂತ ಯೋಜಿತ ವ್ಯವಸ್ಥೆಯನ್ನು ರೂಪಿಸಿತ್ತು. ಅವರನ್ನು `ಯಾತನಾ ಶಿಬಿರಗಳಲ್ಲಿ ಕೂಡಿ ಹಾಕಿ ಹಸಿವಿನಿಂದ ಕಂಗಾಲಾಗುವಂತೆ ಮಾಡಿ ನಂತರ ಹೊಡೆ- ಬಡಿಯುವ ಹಿಂಸೆಯನ್ನು ನೀಡಲಾಗುತ್ತಿತ್ತು. ನಿತ್ಯ ನರಕ ಅನುಭವಿಸಿಯೂ ಬದುಕಿ ಉಳಿದವರನ್ನು ಸಾಯಿಸುವುದಕ್ಕಾಗಿಯೇ `ಸಾವಿನ ಶಿಬಿರ' (ಡೆತ್ ಕ್ಯಾಂಪ್)ಗಳನ್ನು ರೂಪಿಸಲಾಗಿತ್ತು. ಇದಲ್ಲದೇ ಸಾವಿರಾರು ಜನರನ್ನು ಏಕಕಾಲಕ್ಕೆ ಸಾಯಿಸುವ ಉದ್ದೇಶದಿಂದ ಗ್ಯಾಸ್ ಛೇಂಬರ್‌ಗಳನ್ನು ನಿರ್ಮಿಸಲಾಗಿತ್ತು. ಪುರುಷರು- ಮಹಿಳೆಯರು- ಮಕ್ಕಳು- ಮುದುಕರು ಯಾರನ್ನೂ ಬಿಡದೇ ಹಿಂಸೆಗೆ ಗುರಿ ಪಡಿಸಲಾಗುತ್ತಿತ್ತು. ಹೆಂಡತಿ ಮಕ್ಕಳನ್ನು ಕಣ್ಮುಂದೆಯೇ ಗ್ಯಾಸ್ ಛೇಂಬರ್‌ಗೆ ಕಳುಹಿಸುವ ಹೃದಯ ವಿದ್ರಾವಕ ಘಟನೆಗಳಿಗೆ ಮೂಕಸಾಕ್ಷಿಯಾಗುವ ಸನ್ನಿವೇಶ ನೋಡಿ ಸಂತಸ ಪಡುವ ವಿಕೃತಿ ಹಿಟ್ಲರ್ ಮತ್ತವನ ಬೆಂಬಲಿಗರಿಗಿತ್ತು. ಎಲ್ಲ ರೀತಿಯ ಘೋರ ಹಿಂಸೆಯ ನಡುವೆ ಬದುಕಿ ಉಳಿದವರು `ಸಾವಿಗಾಗಿ' ಪ್ರಾರ್ಥಿಸುತ್ತಿದ್ದರು.
ಇಡೀ ಜಗತ್ತನ್ನೇ ಗೆಲ್ಲುವ ಮೂಲಕ ಆರ್ಯರ ಗೌರವ- ಪ್ರತಿಷ್ಠೆಗಳನ್ನು ಎತ್ತಿಹಿಡಿಯುವ ಮಹತ್ವಾಕಾಂಕ್ಷೆಯಿಂದ ಇಟಲಿಯ ಸರ್ವಾಧಿಕಾರಿ ಮುಸಲೋನಿಯ ಬೆಂಬಲದೊಂದಿಗೆ ಪೋಲೆಂಡ್ ಮೇಲೆ ದಾಳಿ ನಡೆಸಿದ. ಇದು ಎರಡನೇ ಮಹಾಯುದ್ಧಕ್ಕೆ ನಾಂದಿ ಹಾಡಿತು. ಆರಂಭದಲ್ಲಿ ದೊರೆತ ಯಶಸ್ಸಿನಿಂದ ಬೀಗಲಾರಂಭಿಸಿದ ಹಿಟ್ಲರ್ ಯಾರ ಮಾತನ್ನೂ ಕೇಳದ ಸ್ಥಿತಿ ತಲುಪಿದ. ತನ್ನ ಸೇನೆಯ ಉನ್ನತ ಅಧಿಕಾರಿಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸದ ಹಿಟ್ಲರ್‌ನ ನಿಲುವಿನಿಂದ ಬಹುತೇಕ ಅಧಿಕಾರಿಗಳು ತೀವ್ರ ಅಸಮಾಧಾನಗೊಂಡರು. ಅದಾಗಿಯೂ ಅವನನ್ನು ನಂಬುವ ಬೆಂಬಲಿಸುವರಿಗೇನು ಕೊರತೆ ಇರಲಿಲ್ಲ.
ಅದ್ಭುತ ಮಾತುಗಾರ ಮತ್ತು ಅತ್ಯಂತ ಕುಶಾಗ್ರಮತಿ ಎಂದು ಗುರುತಿಸಲಾಗುತ್ತಿದ್ದ ಜೋಸೆಫ್ ಗಾಬೆಲ್ಸ್ ಹಿಟ್ಲರ್‌ನ ಅತ್ಯಂತ ಆಪ್ತರಲ್ಲಿ ಒಬ್ಬ. ಹಿಟ್ಲರ್ ವ್ಯಕ್ತಿತ್ವವನ್ನು ವೈಭವೀಕರಿಸುವ ಮತ್ತು ಅವನ ವಿಚಾರಗಳನ್ನು ಸಮರ್ಥಿಸುವ ಜರ್ನಲ್‌ನ ಸಂಪಾದಕನಾಗಿದ್ದ ಗಾಬೆಲ್ಸ್ ತನ್ನ ತಿಳುವಳಿಕೆ- ಅರಿವನ್ನು ಹಿಟ್ಲರ್‌ನ ತಿಕ್ಕಲುತನಗಳಿಗೆ `ವೈಚಾರಿಕ-ತಾತ್ವಿಕ ಸ್ವರೂಪ' ನೀಡಿದ. ಹಿಟ್ಲರ್‌ನ ಕೊನೆಯವರೆಗೂ ಅವನನ್ನು ಬೆಂಬಲಿಸಿದ ಕೆಲವೇ ಜನರಲ್ಲಿ ಒಬ್ಬ. ತನ್ನ ಕೊನೆಯ ದಿನಗಳಲ್ಲಿ ಹಿಟ್ಲರ್ ಅವನನ್ನು ಜರ್ಮನಿಯ `ಚಾನ್ಸಲರ್' ಎಂದು ಘೋಷಿಸಿದ್ದ. ಹಿಟ್ಲರ್‌ನ ಮರಣದ ಮರುದಿನ ಹತಾಶನಾದ ಗಾಬೆಲ್ಸ್ ತನ್ನ ಹೆಂಡತಿ ಮತ್ತು ಆರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಮೊರೆಹೋಗಬೇಕಾಯಿತು.
ಅತ್ಯುತ್ತಮ ಆಡಳಿತಗಾರ ಎಂದೇ ಹೆಸರುವಾಸಿಯಾಗಿದ್ದ ಜರ್ಮನ್ ಪೊಲೀಸ್ ಪಡೆಯ ಮುಖ್ಯಸ್ಥ ಹೆನ್ರಿಕ್ ಹಿಮ್ಲರ್ ಹಿಟ್ಲರ್ನ ಬಲಗೈ ಭಂಟ. ಪೂರ್ವ ಯುರೋಪಿನಲ್ಲಿ `ಸಾವಿನ ಶಿಬಿರ' ಆರಂಭಿಸಿದ ಹಿಮ್ಲರ್ ಹಿಟ್ಲರ್ನ ವಿಕೃತ ಮಾನಸಿಕ ಸ್ಥಿತಿಯ ವಿಸ್ತರಣೆಯಂತಿದ್ದ. ಸಾವು-ನೋವುಗಳನ್ನು ಕಂಡು ಸಂಭ್ರಮಿಸುತ್ತಿದ್ದ ಹಿಮ್ಲರ್ ಎರಡನೇ ಮಹಾಯುದ್ಧದ ಕೊನೆಯ ದಿನಗಳಲ್ಲಿ ಜರ್ಮನ್ ಸೇನೆಯು ಅಮೆರಿಕಾ, ಇಂಗ್ಲೆಂಡ್ ಮತ್ತು ರಷ್ಯದ ಮಿತ್ರಪಡೆಗಳಿಗೆ ಶರಣಾಗುವಂತಹ ಪಿತೂರಿ ನಡೆಸಿದ್ದ. ಅದನ್ನು ಪತ್ತೆ ಹಚ್ಚಿದ ಹಿಟ್ಲರ್ ತಕ್ಷಣ ಹಿಮ್ಲರ್ನನ್ನು ಬಂಧಿಸುವಂತೆ ಆದೇಶಿಸಿದ. ಹಿಟ್ಲರ್‌ನ ಪಡೆಗಳಿಂದ ತಪ್ಪಿಸಿಕೊಳ್ಳುವಲ್ಲಿ ಹಿಮ್ಲರ್ ಯಶಸ್ವಿಯಾದರೂ ಮಿತ್ರಪಡೆಗಳಿಗೆ ಸೆರೆ ಸಿಕ್ಕು ಆತ್ಮಹತ್ಯೆ ಮಾಡಿಕೊಂಡ.
ಸದಾಕಾಲ ಪ್ರತಿ ವಿಷಯ, ಘಟನೆ, ವ್ಯಕ್ತಿಯನ್ನು ಅನುಮಾನದಿಂದ ನೋಡುತ್ತಿದ್ದ ಹಿಟ್ಲರ್ ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಬೇಧ ಮತ್ತು ದಂಡೋಪಾಯಗಳನ್ನು ಮಾತ್ರ ಬಳಸುತ್ತಿತ್ತ್ದಿದ. ತನ್ನ ಅತ್ಯಂತ ನಿಷ್ಠ ಬೆಂಬಲಿಗರ ವಿರುದ್ಧವೂ ಬೇಹುಗಾರಿಕೆಯ ಕಣ್ಣು ಇಟ್ಟಿರುತ್ತ್ದಿದ ಹಿಟ್ಲರ್ ತೆಗೆದುಕೊಳ್ಳುತ್ತ್ದಿದ ನಿರ್ಣ ಸ್ವಸ್ಥ ಸಾಮಾನ್ಯ ಮನಸ್ಸಿನವರಿಗೆ ಊಹಿಸಲು ಅಸಾಧ್ಯ.
ಹಿಟ್ಲರ್ನ ಲೈಂಗಿಕ ಬದುಕಿನ ಬಗ್ಗೆ ಅವನ ಆಪ್ತ ಸ್ನೇಹಿತರೇ ಅನೇಕ ಅನುಮಾನಗಳನ್ನು ವ್ಯಕ್ತಪಡಿಸ್ದಿದಾರೆ. ತಾನು ಪ್ರೀತಿಸುತ್ತಿರುವ ಮಹಿಳೆಯು ಅಜ್ಞಾನಿಯಾಗಿರಬೇಕು ಎಂದು ಬಯಸುತ್ತ್ದಿದ, ಅವಳು ಸ್ವಲ್ಪ ಜಾಣತನ ತೋರಿದರೂ ದೂರ ಮಾಡುವುದೂ ಸೇರಿದಂತೆ ಕಠಿಣ ಕ್ರಮಕ್ಕೆ ಹಿಂದೇಟು ಹಾಕುತ್ತಿರಲಿಲ್ಲ. ಮದುವೆ- ಕೌಟುಂಬಿಕ ವಿಷಯಗಳು ವ್ಯಕ್ತಿಯ ಭವಿಷ್ಯವನ್ನು ಬದಲಾಯಿಸಿ ಬಿಡುತ್ತವೆ ಎಂದು ನಂಬ್ದಿದ ಹಿಟ್ಲರ್ ಅದಕ್ಕಾಗಿ ಸ್ನೇಹಿತೆಯರನ್ನು ಇಟ್ಟುಕೊಳ್ಳುವುದನ್ನು ಇಷ್ಟ ಪಡುತ್ತ್ದಿದ ಮತ್ತು ಸಾರ್ವಜನಿಕವಾಗಿ ಅದನ್ನು ಬಹಿರಂಗ ಪಡಿಸಲು ನಿರಾಕರಿಸುತ್ತ್ದಿದ. `ಆರ್ಯ ತಳಿ' ಬೆಳೆಸುವುದಕ್ಕಾಗಿ ಕಡ್ಡಾಯವಾಗಿ ಲೈಂಗಿಕ ಚಟುವಟಿಕೆ ನಡೆಸಲೇಬೇಕು ಎಂಬ ಕಡ್ಡಾಯವನ್ನು ಹಿಟ್ಲರ್ ಜರ್ಮನ್ರ ಮೇಲೆ ಹೇರ್ದಿದ. ತನ್ನ ವಂಶ ಬೆಳೆಸುವ ಉ್ದದೇಶ- ಅಪಾರ ಬಯಕೆ ಹಿಟ್ಲರ್ನಿಗಿತ್ತಾದರೂ ಅಪಾರ ಮಹತ್ವಾಕಾಂಕ್ಷೆ ಅವನ ಆಸೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.
ತಾನು ಸ್ತ್ರೀಪ್ರಿಯ ಎಂದು ಹಿಟ್ಲರ್ ಹೇಳಿಕೊಳ್ಳುತ್ತ್ದಿದನಾದರೂ ಅವನ ಬದುಕಿನಲ್ಲಿ ಬಂದ ಮಹಿಳೆಯರ ಸಂಖ್ಯೆ ಬಹಳ ಕಡಿಮೆ. ಅವರಲ್ಲಿ ಛಾಯಾಗ್ರಾಹಕನ ಅಂಗಡಿಯಲ್ಲಿ ಸಾಮಾನ್ಯ ಸೇಲ್ಸ್ ಗಲರ್್ ಆಗ್ದಿದ `ಇವಾ ಬ್ರೌನ್' ಪ್ರಮುಖಳು. 1930ರಲ್ಲಿ ಆರಂಭವಾದ ಹಿಟ್ಲರ್ ಮತ್ತು ಇವಾರ ಪರಿಚಯ, ಸ್ನೇಹ, ಪ್ರೀತಿ, ಪ್ರೇಮ ಅವರನ್ನು ಬಹಳ ದೂರದವರೆಗೆ ಕರೆತಂದಿತು. ಹಿಟ್ಲರ್ನ ಬಗ್ಗೆ ಅಪಾರ ಒಲವು ಬೆಳೆಸಿ ಕೊಂಡ್ದಿದ ಇವಾಳಿಗೆ ಮ್ಯೂನಿಚ್ನಲ್ಲಿ ಮನೆ ನೀಡ್ದಿದನಾದರೂ ಸಾರ್ವಜನಿಕವಾಗಿ ಅವಳ ಜೊತೆಗಿನ ಒಡನಾಟ ಬಹಿರಂಗ ಪಡಿಸಲು ನಿರಾಕರಿಸ್ದಿದ. ಸಾಮಾನ್ಯ ಯುವತಿಯಾಗ್ದಿದ ಇವಾಳಿಗೆ ಹಿಟ್ಲರ್ನ ಅಭೇದ್ಯ ರಕ್ಷಣಾ ಕೋಟೆಯ ಒಳಗೆ ಹೋಗುವುದು ಸುಲಭ ಸಾಧ್ಯವಾಗಿರಲಿಲ್ಲ. ಹೀಗಾಗಿ ಅವಳು ಜೀವನವಿಡಿ ಕಾಯುವುದರಲ್ಲಿಯೇ ಕಳೆದಳು. ಅವಳ ಜೊತೆ ಯಾವತ್ತೂ ರಾಜಕೀಯದ ಬಗ್ಗೆ ಮಾತನಾಡದ ಹಿಟ್ಲರ್ ಸೋಲಿನಿಂದ ಕಂಗೆಟ್ಟ ಹತಾಷೆಯ ದಿನಗಳಲ್ಲಿ ಇವಾಳನ್ನು ತನ್ನ ಬಂಕರ್ಗೆ ಕರೆಸಿಕೊಳ್ಳುತ್ತ್ದಿದ. ಅವಳ ದೀರ್ಘಕಾಲದ ನಿಷ್ಠೆ ಮತ್ತು ಪ್ರೇಮಕ್ಕೆ ಒಲಿದ ಹಿಟ್ಲರ್ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾದಿನ (.29) `ಚಾನ್ಸಲರ್ ಬಂಕರ್'ನಲ್ಲಿ ವಿವಾಹವಾಗ್ದಿದ. ಮರುದಿನವೇ ಹೆಂಡತಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ವಿಕ್ಷಿಪ್ತ ಮನಸ್ಸಿನ ಹಿಟ್ಲರ್ ತಮ್ಮಿಬ್ಬರ ಶವಗಳು ಮಿತ್ರಕೂಟದ ಸೈನ್ಯಕ್ಕೆ ದೊರಕದಿರುವಂತೆ ಸುಟ್ಟು ಹಾಕುವಂತೆ ಆದೇಶಿಸ್ದಿದ.
ಪುಕ್ಕಲು ಸ್ವಭಾವದ ಹಿಟ್ಲರ್ ಅದನ್ನು ಮರೆಮಾಚುವುದಕ್ಕಾಗಿಯೇ ಹಿಂಸೆಗೆ ಮುಂದಾಗುತ್ತ್ದಿದ. ಅವನ ಹಿಂಸಾಪ್ರವೃತ್ತಿ ಹೆಚ್ಚುತ್ತಾ ಹೋಗಲು ಅವನ ಕಟ್ಟಾ ಬೆಂಬಲಿಗರ ಕುಮ್ಮಕ್ಕು ಕೂಡ ಕಾರಣ. 20ನೇ ಶತಮಾನ ಕಂಡ ಅತ್ಯಂತ ಹೀನ ವ್ಯಕ್ತಿತ್ವದ ಹಿಟ್ಲರ್ ತನ್ನ ಸಮಾನಾಸಕ್ತ ದುಷ್ಟ ಸ್ನೇಹಿತರ ಬೆಂಬಲದೊಂದಿಗೆ ನಡೆಸಿದ ಹಿಂಸಾಕೃತ್ಯ ಮಾನವ ಜಗತ್ತು ಕಂಡು ಕೇಳರಿಯದ್ದಾಗಿತ್ತು.

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
humba en pa ava.... en matada katti........

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ