ಶ್ರೀದೇವಿ ಪುರಾಣದ ಕರ್ತೃ ಚಿದಾನಂದ ಅವಧೂತರ ಉಪಾಸನಾ ದೈವ ’ಅಂಬಾ’ಮಾತೆಯ ವಿಗ್ರಹಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಗಡ್ಡದ ಅವರ ಮನೆಯಲ್ಲಿ ನಿತ್ಯಪೂಜೆ ನಡೆಯುತ್ತಿದೆ. ನವರಾತ್ರಿಯ ಈ ದಿನಗಳಲ್ಲಿ ಅಲ್ಲಿ ವಿಶೇಷ ಪೂಜೆ- ಅರ್ಚನೆಗಳು ಶ್ರದ್ಧೆ- ಭಕ್ತಿಯಿಂದ ನಡೆಯುತ್ತಿವೆ. ಸುರಪುರ ಪಟ್ಟಣದ ಮುಜಂದಾರ ಗಲ್ಲಿಯ ಪಾಂಡುರಂಗ ದೇವಸ್ಥಾನದ ಹಿಂಬದಿಯಲ್ಲಿ ಇರುವ ವೆಂಕಣ್ಣಭಟ್ ಗಡ್ಡದ ಅವರ ಮನೆಯಲ್ಲಿ ಚಿದಾನಂದ ಅವಧೂತರು ಪೂಜಿಸುತ್ತಿದ್ದ ಉಪಾಸನಾ ಮೂರ್ತಿ ಇದೆ. ನಿತ್ಯಪೂಜೆ ಸಲ್ಲುವ ಶ್ರೀಚಕ್ರ ಸಮೇತ ಇರುವ ದೇವಿಯ ಪ್ರತಿಮೆಯು ಸುಮಾರು ೧೨ ಇಂಚು ಎತ್ತರದ್ದಾಗಿದೆ. ಪಾಶ ಅಂಕುಶ, ಬಿಲ್ಲುಬಾಣಗಳನ್ನು ಕೈಯಲ್ಲಿ ಹಿಡಿದಿರುವ ಚತುರ್ಭುಜೆ ದೇವಿಯ ಪ್ರತಿಮೆಗೆ ಕೇವಲ ಧಾರ್ಮಿಕ ಕಾರಣಗಳಿಗಾಗಿ ಮುಖ್ಯ ಅಲ್ಲ. ಇದೊಂದು ಐತಿಹಾಸಿಕ, ಸಾಂಸ್ಕೃತಿಕ ಮಹತ್ವ ಇರುವಂತಹದ್ದು. ಆಸ್ಥೆ ಮತ್ತು ಶ್ರದ್ಧೆಯ ಕಾರಣಗಳಿಂದ ಮೂರ್ತಿಯನ್ನು ಸಮೀಪದಿಂದ ನೋಡಲು ಸಾಧ್ಯವಿಲ್ಲದಿದ್ದರೂ ಪೂಜಾಲಂಕೃತ ವಿಗ್ರಹವನ್ನು ನೋಡುವುದೇ ಒಂದು ಸೊಬಗು. ಚಿದಾನಂದ ಅವಧೂತರೇ ಸ್ವತಃ ಪೂಜಿಸುತ್ತಿದ್ದ ಈ ವಿಗ್ರಹ ಅವರ ಕಾಲಾನಂತರ ಗಡ್ಡದ ಮನೆ ಸೇರಿಕೊಂಡಿತು. ಸದ್ಯ ಸುರಪುರ ನಿವಾಸಿಗಳಾಗಿರುವ ಕನಕಗಿರಿ ಮೂಲದ ಗಡ್ಡದ ಮನೆತನದ ಹಿರಿಯರಿಗೆ ಈ ಪ್ರತಿಮೆಯನ್ನು ಸ್ವತಃ ಅವಧೂತರೇ ತಮ್ಮ ಕೊನೆಯ ದಿನಗಳಲ್ಲಿ ನಿತ್ಯಪೂಜೆ ನಡೆಸುವಂತೆ ಸೂಚಿಸಿ ಹಸ್ತಾಂತರ ಮಾಡಿದರು ಎಂಬ ಐತಿಹ್ಯ ಇದೆ. ವೆಂಕಣ್ಣಭಟ್ಟರು ಈ ಐ...
ಹೆಸರಾಂತ ಸಂಗೀತಗಾರ ದೀನಾನಾಥ ಮಂಗೇಶ್ಕರ್ ಅವರ ಜನ್ಮಶತಮಾನೋತ್ಸವ (1990) ಸಮಾರಂಭ . ದೇಶದ ಗಣ್ಯ - ಮಾನ್ಯರೆಲ್ಲ ಭಾಗವಹಿಸಿದ್ದ ಬೃಹತ್ ವೇದಿಕೆಯಲ್ಲಿ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿದ್ದವು . ಅದೇ ಹೊತ್ತಿಗೆ ಶ್ವೇತವರ್ಣದ ಗಡ್ಡಧಾರಿಯೊಬ್ಬರು ಸಭಾಂಗಣ ಪ್ರವೇಶಿಸಿದರು . ಅವರನ್ನು ನೋಡಿದ ದೀನಾನಾಥ ಅವರ ಪುತ್ರಿ ಲತಾ ಮಂಗೇಶ್ಕರ್ ಅವರು ವೇದಿಕೆಯಿಂದ ಕೆಳಗಿಳಿದು ಬಂದು ಹಿರಿಯರ ಕಾಲುಮುಟ್ಟಿ ನಮಸ್ಕರಿಸಿದರು . ಅವರನ್ನು ಮುಂದಿನ ಸಾಲಿನಲ್ಲಿ ಕೂಡಿಸಿ ವೇದಿಕೆಗೆ ಮರಳಿದರು . ನೀಳವಾದ ಬಿಳಿಗಡ್ಡ ಹಣೆಯಲ್ಲಿ ಕಾಸಗಲದ ಕುಂಕುಮ ಹಚ್ಚಿಕೊಂಡಿದ್ದ ವ್ಯಕ್ತಿಯು ಯಾರೋ ಸ್ವಾಮೀಜಿ ಅಥವಾ ಆಚಾರ್ಯರು ಇರಬಹುದು ಎಂದು ಬಹುತೇಕರು ಭಾವಿಸಿದ್ದರು . ಕಾರ್ಯಕ್ರಮದ ಉದ್ಘಾಟನೆಯ ಸ್ವಲ್ಪ ಸಮಯದ ನಂತರ ಲತಾ ಮತ್ತೊಮ್ಮೆ ಸ್ವತಃ ಕೆಳಗಿಳಿದು ಬಂದು ವಿನಮ್ರತೆಯಿಂದ ವೇದಿಕೆಯ ಮೇಲೆ ಬರುವಂತೆ ಆಹ್ವಾನಿಸಿದರು . ವೇದಿಕೆ ಹತ್ತಿದ ನಂತರ ಮೈಕ್ ಹತ್ತಿರ ಬಂದ ಲತಾ ಅವರು ’ ತಂದೆಯು ಸದಾಕಾಲ ನನ್ನ ಜತೆ ಇರುವಂತೆ ಮಾಡಿದ ಕಲಾವಿದ ಎಸ್ . ಎಂ . ಪಂಡಿತ್ ( ಸಾಂಬಾನಂದ ಮೋನಪ್ಪ ಪಂಡಿತ್ ). ಅವರ ಕಲಾಕೃತಿಯಿಂದಾಗಿ ಪ್ರತಿದಿನವೂ ನನ್ನ ತಂದೆಯ ಜತೆ ಸಂವಾದ ನಡೆಸುವುದು ಸಾಧ್ಯವಾಗಿದೆ ’ ಎಂದು ಹೇಳುತ್ತಿದ್ದಂತೆ ಭಾರೀ ಕರತಾಡನದ ಪ್ರತಿಕ್ರಿಯೆ . ಸಂಗೀ...
ಬಸವೇಶ್ವರ ಮತ್ತು ಅವನ ಕಾಲ ಡಾ . ಪಿ . ಬಿ . ದೇಸಾಯಿ ಕನ್ನಡಕ್ಕೆ : ಪ್ರೊ . ಸದಾನಂದ ಕನವಳ್ಳಿ ಪರಿಷ್ಕರಣೆ : ಡಾ . ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಕಾಶಕರು : ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಗದಗ . ‘ ನೋಯುವ ಹಲ್ಲಿನ ಕಡೆಗೇ ನಾಲಿಗೆ ಹೊರಳುತ್ತದೆ ’ ಎಂದು ಹೆಸರಾಂತ ನಾಟಕಕಾರ ಗಿರೀಶ್ ಕಾರ್ನಾಡರು ತಮ್ಮ ‘ ತಲೆದಂಡ ’ ಕಕ್ಕಾಗಿ ಬರೆದ ಮಾತುಗಳಲ್ಲಿ ದಾಖಲಿಸಿದ್ದಾರೆ . 12 ನೇ ಶತಮಾನವು ಕರ್ನಾಟಕದ ಸಾಮಾಜಿಕ , ಧಾರ್ಮಿಕ , ಸಾಂಸ್ಕೃತಿಕ , ಸಾಹಿತ್ಯಿಕ ಭಿತ್ತಿಯ ಮೇಲೆ ಬೀರಿದ ಪ್ರಭಾವ ಮತ್ತು ಅದು ಉಂಟು ಮಾಡಿದ ಪರಿಣಾಮಗಳೆರಡೂ ಅನನ್ಯ . ‘ ಬಸವಯುಗ ’ ಎಂದು ಕರೆಯಬಹುದಾದ ಕಾಲಘಟ್ಟ ಅದು . ಈ ಬಗ್ಗೆ ಸಾವಿರಾರು ಪುಟಗಳಷ್ಟು ಬರವಣಿಗೆ - ಸಾಹಿತ್ಯ ಪ್ರಕಟವಾಗಿದೆ . ಪ್ರಕಟವಾಗುತ್ತಲೇ ಇದೆ . ಹನ್ನೆರಡನೇ ಶತಮಾನದ ಚಳವಳಿಯು ನಾಟಕ - ಕಾದಂಬರಿ ಸೇರಿದಂತೆ ಸೃಜನಶೀಲ ಬರವಣಿಗೆಗಳಲ್ಲಿ ದಾಖಲಾಗಿದೆ . ಲಂಕೇಶ್ ಅವರ ‘ ಸಂಕ್ರಾಂತಿ ’ (1971), ಎಚ್ . ಎಸ್ . ಶಿವಪ್ರಕಾಶ್ ಅವರ ‘ ಮಹಾಚೈತ್ರ ’ (1986), ಗಿರೀಶ್ ಕಾರ್ನಾಡರ ‘ ತಲೆದಂಡ ’ (1991) ಮತ್ತು ಚಂದ್ರಶೇಖರ ಕಂಬಾರರ ‘ ಶಿವರಾತ್ರಿ ’ (2011), ಇತ್ತೀಚಿಗೆ ಪ್ರದರ್ಶನ ಕಂಡ ನಟರಾಜ ಹುಳಿಯಾರ್ ಅವರ ‘ ಮುಂದಣ ಕಥನ ’ (2017) ಗಳು ಬಸವಯುಗದ ಕುರಿತ ರಂಗದ ಮೇಲೆ ನಡೆದ ಸೃಜನಶೀಲ ಪ್ರಯೋಗಗಳು . ಅಷ್ಟು ಮಾತ್ರವಲ್ಲದೆ ಸಾಹಿತ್ಯ ಮತ್ತು ರಂಗಭೂಮಿಯು ತೋರಿದ ಸಾಂಸ್ಕೃತಿ...
ಕಾಮೆಂಟ್ಗಳು