ಬಸವೇಶ್ವರ ಮತ್ತು ಅವನ ಕಾಲ ಡಾ . ಪಿ . ಬಿ . ದೇಸಾಯಿ ಕನ್ನಡಕ್ಕೆ : ಪ್ರೊ . ಸದಾನಂದ ಕನವಳ್ಳಿ ಪರಿಷ್ಕರಣೆ : ಡಾ . ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಕಾಶಕರು : ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಗದಗ . ‘ ನೋಯುವ ಹಲ್ಲಿನ ಕಡೆಗೇ ನಾಲಿಗೆ ಹೊರಳುತ್ತದೆ ’ ಎಂದು ಹೆಸರಾಂತ ನಾಟಕಕಾರ ಗಿರೀಶ್ ಕಾರ್ನಾಡರು ತಮ್ಮ ‘ ತಲೆದಂಡ ’ ಕಕ್ಕಾಗಿ ಬರೆದ ಮಾತುಗಳಲ್ಲಿ ದಾಖಲಿಸಿದ್ದಾರೆ . 12 ನೇ ಶತಮಾನವು ಕರ್ನಾಟಕದ ಸಾಮಾಜಿಕ , ಧಾರ್ಮಿಕ , ಸಾಂಸ್ಕೃತಿಕ , ಸಾಹಿತ್ಯಿಕ ಭಿತ್ತಿಯ ಮೇಲೆ ಬೀರಿದ ಪ್ರಭಾವ ಮತ್ತು ಅದು ಉಂಟು ಮಾಡಿದ ಪರಿಣಾಮಗಳೆರಡೂ ಅನನ್ಯ . ‘ ಬಸವಯುಗ ’ ಎಂದು ಕರೆಯಬಹುದಾದ ಕಾಲಘಟ್ಟ ಅದು . ಈ ಬಗ್ಗೆ ಸಾವಿರಾರು ಪುಟಗಳಷ್ಟು ಬರವಣಿಗೆ - ಸಾಹಿತ್ಯ ಪ್ರಕಟವಾಗಿದೆ . ಪ್ರಕಟವಾಗುತ್ತಲೇ ಇದೆ . ಹನ್ನೆರಡನೇ ಶತಮಾನದ ಚಳವಳಿಯು ನಾಟಕ - ಕಾದಂಬರಿ ಸೇರಿದಂತೆ ಸೃಜನಶೀಲ ಬರವಣಿಗೆಗಳಲ್ಲಿ ದಾಖಲಾಗಿದೆ . ಲಂಕೇಶ್ ಅವರ ‘ ಸಂಕ್ರಾಂತಿ ’ (1971), ಎಚ್ . ಎಸ್ . ಶಿವಪ್ರಕಾಶ್ ಅವರ ‘ ಮಹಾಚೈತ್ರ ’ (1986), ಗಿರೀಶ್ ಕಾರ್ನಾಡರ ‘ ತಲೆದಂಡ ’ (1991) ಮತ್ತು ಚಂದ್ರಶೇಖರ ಕಂಬಾರರ ‘ ಶಿವರಾತ್ರಿ ’ (2011), ಇತ್ತೀಚಿಗೆ ಪ್ರದರ್ಶನ ಕಂಡ ನಟರಾಜ ಹುಳಿಯಾರ್ ಅವರ ‘ ಮುಂದಣ ಕಥನ ’ (2017) ಗಳು ಬಸವಯುಗದ ಕುರಿತ ರಂಗದ ಮೇಲೆ ನಡೆದ ಸೃಜನಶೀಲ ಪ್ರಯೋಗಗಳು . ಅಷ್ಟು ಮಾತ್ರವಲ್ಲದೆ ಸಾಹಿತ್ಯ ಮತ್ತು ರಂಗಭೂಮಿಯು ತೋರಿದ ಸಾಂಸ್ಕೃತಿ...
ಕಾಮೆಂಟ್ಗಳು