ಕವಿಗಳ ಕಾಣಿಕಿ- ಬೀದರ್ ಕವಿಗೋಷ್ಠಿಗಾಗಿ ಬೇಂದ್ರೆ ಬರೆದ ಕವಿತೆ
ಕವಿಗಳ ಕಾಣಿಕಿ ೧ ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ ಜಗ ಜಾಹೀರ ವಜ್ರದ ಖಾಣೀಗೆ ಕಾಳಾ ಬಝಾರ ಹಜಾರ ಇದ್ರೂ ಬಾಳೋ ಉಸಿರಿಗೆ ಒಂದೇ ಹೆಸರು: ಅದು ಕವಿ ಕವೀ ಕಾಣಿಕೀ ಅದಕ್ಕ ಬೇಕಿಲ್ಲ ಬ್ಯಾರೆ ಆನಿಕಿ ೨ ಬೀದರಕ್ಕ ಆದಾವರೆಷ್ಟೋ? ಹೋದಾವರೆಷ್ಟೋ? ಆಗದವರೂ ಇದ್ದಾರು ಹೋಗದವರೂ ಇದ್ದಾರು ಬರೋ ಅವರಿಗೆ ಬಾಗಿಲಾ ತೆರದ ಅವ ಹೋಗೋ ಅವರ ಹಾದಿ ಮುಚ್ಚಿಲ್ಲ ೩ ಪ್ರಜಾ ಇಲ್ಲದ ರಾಜಾ ಯಾವ ಖಾ ಜಾ? ಯಾವ ಭಾಷಾದಾಗ ಊದಿರಿ ಬೇಂಡಬಾಜಾ ಕನ್ನಡೀ-ಮರಾಠೀ-ತೇಲಂಗೀ ಊರ್ದೂ, ಪಾರಸೀ, ಅರಬ್ಬೀ ಹಿಂದೀ, ಹಿಂದಿನದೂ, ಇಂದಿನದೂ, ಮುಂದಿನದೂ ಸಂಸ್ಕೃತಾ, ಪ್ರಾಕೃತಾ, ಅಪಭ್ರಂಶಾ, ಪೈಶಾಚಿ ೪ ಹೊಡೋ ಗಾಡೀ ದ್ರಾವಿಡೀ, ಶಾಬರೀ, ಪುಳಿಂದೀ, ಗೊಂಡೀ ಕರಣದಾಗ ನಾಟಿದ್ದು ನಾಟಲಿ ಉಳಿದದ್ದು ದಾಟಲೀ ಸೋಳಾ ದೇಶಾ, ಸೋಳಾ ಭಾಷಾ, ಸೋಳಾ ಅಂಗೀ ಭಾವ ಇದ್ಹಾಂಗ ಜೀವ, ಜೀವಲಿಂಗೀ ೫ ಹಳೇ ಗೊಂಡಾರಣ್ಯದ ಗಂಗಾಲಹರಿ, ಗೋದಾವರೀ ಇನ್ನೂ ಹರೀತನ ಅದ ಉತ್ತರಕ್ಕ ಬೀದರದ ಹತ್ತರ ಹತ್ತರಕ್ಕ ೬ ’ಅಹಂ ರಾಷ್ಟೀ ಸಂಗಮನೀ’ ದೇಹದಾಗ ಸ್ನೇಹ ಇರದಿದ್ದರ ಮನದ ಮೊನೀಯೊಳಗ ದೀಪ ಎಲ್ಲೀದು? ಜನದ ಜಾತಿ ನೂರಾದರೂ ಜ್ಯೋತಿ ನೂರಾ ಒಂದು ಒಂದು ಬಿಂದುವಿಗೇ ನೂರು ಸಂದು ಸಾವಿರದವರ ಲಕ್ಷ್ಯ ಜೀವ ಕೋಟಿ ಕಡಿಗೆ ಅಬ್ಜದಾಗ ರಸದ ಅಡಿಗೆ ೭ ಹಿಂದುಸ್ಥಾನ, ಪಾಕಿಸ್ಥಾನ ಒಂದಾಗಬೇಕು ’ಭಾರತ ಹಮಾರಾ’ ಮುಂದಾಗಬೇಕು ಮನಕ್ಕೊಂದು ಮತಂ ಮಾಡಿ ಜನ ಧರ್ಮ ಖತಂ ಮಾಡಬ್ಯಾಡ್ರಿ ೮ ಹೋದದ್ದ