ಶುಂಠಿ ಬೆಳೆದು ಲಾಭ ಕಂಡ ಯುವಕ




ಕೃಷಿ ಕೂಡ ಲಾಭದಾಯಕ `ಉದ್ಯೋಗ' ಎಂದು ಸಾಬೀತು ಮಾಡಿರುವ ಬೀದರ್ ತಾಲ್ಲೂಕಿನ ಹೊನ್ನಿಕೇರಿಯ ಪದವೀಧರ ಯುವಕ ರವೀಂದ್ರ ಪಾಟೀಲ್ ಯುವಕರಿಗೆ ಮಾದರಿಯಾಗಿದ್ದಾರೆ.ಕಲಿತವರು ನಗರದ ಕಡೆಗೆ ಮುಖ ಮಾಡುವುದು ಸಾಮಾನ್ಯ ಸಂಗತಿ. ಆದರೆ, ಕೃಷಿಯತ್ತ ಮುಖ ಮಾಡುವುದು ಅಪರೂಪ. ಕೃಷಿಯಲ್ಲಿ ಖುಷಿ ಕಾಣ ಬಯಸಿದವರೂ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಅದರಿಂದ ದೂರ ಸರಿದವರೇ ಹೆಚ್ಚು. ಅಂತಹುದ್ದರಲ್ಲಿ ಕೃಷಿ ಮಾಡಿ ಕೈ ತುಂಬ ಹಣ ಎಣಿಸಬಹುದು ಎಂಬುದನ್ನು ರವೀಂದ್ರ ಪಾಟೀಲ್ ತೋರಿಸಿದ್ದಾರೆ.
ರವೀಂದ್ರ ಅವರದು ಯೋಜನಾಬದ್ಧ ಕೃಷಿ ಚಟುವಟಿಕೆ. ಅವರಿಗಿರುವ ಜಮೀನು ಮತ್ತು ನೀರಿನ ಸೌಲಭ್ಯ ಸೇರಿದಂತೆ ಎಲ್ಲವನ್ನೂ ಲೆಕ್ಕಹಾಕಿ ಉಪಯೋಗಿಸುತ್ತಾರೆ. ಶುಂಠಿ ಅವರಿಗೆ ಅದಾಯ ತರುವ ಪ್ರಮುಖ ಬೆಳೆ. ಪ್ರತಿ ಎಕರೆಗೆ ಸರಾಸರಿ 125 ಕ್ವಿಂಟಲ್ ಶುಂಠಿ ಬೆಳೆಯುವ ಅವರು ಗರಿಷ್ಠ 210 ಕ್ವಿಂಟಲ್ ವರೆಗೂ ಬೆಳೆದದ್ದು ಉಂಟು. ಸದ್ಯ ಪ್ರತಿ ಕ್ವಿಂಟಲ್ಗೆ ಐದು ಸಾವಿರ ರೂಪಾಯಿ ಬೆಲೆ ಇದೆ. ಆ ಲೆಕ್ಕದಲ್ಲಿ ಪ್ರತಿವರ್ಷ ಶುಂಠಿ ಬೆಳೆಯೊಂದರಿಂದಲೇ 18 ಲಕ್ಷ ರೂಪಾಯಿ ಆದಾಯ ಗಳಿಸುತ್ತಾರೆ.ರವೀಂದ್ರ ಅವರು ಹೊನ್ನಿಕೇರಿಯಲ್ಲಿ ತಮಗಿರುವ ಜಮೀನಿನ ಪೈಕಿ 12 ಎಕರೆ ಪ್ರದೇಶವನ್ನು ಮಾತ್ರ ಕೃಷಿ ಯೋಗ್ಯ ಜಮೀನಾಗಿ ಪರಿವತರ್ಿಸಿಕೊಂಡ್ದಿದಾರೆ. ತಲಾ ಮೂರು ಎಕರೆಗಳ ನಾಲ್ಕು ಪ್ಲಾಟ್ಗಳನ್ನಾಗಿ ಮಾಡಿಕೊಂಡ್ದಿದಾರೆ. ಒಂದು ಪ್ಲಾಟ್ನಲ್ಲಿ ಶುಂಠಿ ಬೆಳೆದರೆ ಮುಂಬರುವ ಮೂರು ವರ್ಷಗಳಲ್ಲಿ ಆ ಪ್ಲಾಟ್ನಲ್ಲಿ ಶುಂಠಿ ಹಚ್ಚುವುದಿಲ್ಲ. ನಂತರದ ಮೂರು ವರ್ಷಗಳ ಕಾಲ ಆ ಜಮೀನಿಗೆ ಹಸಿರೆಲೆ ಗೊಬ್ಬರ ನೀಡುತ್ತಾರೆ. ಬೇರಿನ ಮೇಲೆ ಗಂಟು ಇರುವ ನಾರು ಮತ್ತು ಕಾಡಹುರುಳಿಯಂತಹ ಬೆಳೆಯನ್ನು ಬೆಳೆದು ಅದರಿಂದ ಫಸಲು ತೆಗೆಯದೇ ಹೊಲದಲ್ಲಿಯೇ ಹೂಳಿ ಗೊಬ್ಬರವಾಗಿಸುತ್ತಾರೆ. `ಇದರಿಂದ ಜಮೀನಿನ ಸಾರ ಹೆಚ್ಚುತ್ತದೆ' ಎನ್ನುವುದು ರವೀಂದ್ರ ಅವರ ಅನುಭವದ ಮಾತು.ಮಾಚರ್್ನಲ್ಲಿ ಶುಂಠಿ ಬಿತ್ತನೆಗೆ ಹದಗೊಳಿಸುವ ಕೆಲಸ ಆರಂಭಿಸುತ್ತಾರೆ. ಜೂನ್ನಲ್ಲಿ ಮಳೆ ಬೀಳುತ್ತ್ದಿದಂತೆಯೇ ಚಿಗಿಯಲು ಆರಂಭವಾಗುತ್ತದೆ. ಜುಲೈ ವರೆಗೂ ಶುಂಠಿ ಕೃಷಿಯ ಉಸ್ತುವಾರಿ ನೋಡಿಕೊಳ್ಳುವುದೇ ಆಗುತ್ತದೆ. ಅಕ್ಟೋಬರ್- ನವೆಂಬರ್ನಲ್ಲಿ ಖಾಲಿ ಇರುವ ಮೂರು ಪ್ಲಾಟ್ಗಳ ಪೈಕಿ ಒಂದರಲ್ಲಿ ಕಲ್ಲಂಗಡಿ ಹಚ್ಚುತ್ತಾರೆ. ಮೂರು ತಿಂಗಳಲ್ಲಿ ಕಾಯಿ ಬಿಟ್ಟು ಹಣ್ಣಾಗುವ ಕಲ್ಲಂಗಡಿ ಕೂಡ ಕೈತುಂಬ ಹಣ ತರುವ ಬೆಳೆಯೇ ಆಗಿದೆ. ಇದರ ಮಧ್ಯೆ 35 ದಿನಗಳ ಬೆಳೆಯಾಗಿ ಕೊತ್ತಂಬರಿ ಸೊಪ್ಪು ಕೂಡ ಬೆಳೆಯುತ್ತಾರೆ.
ಬೆಳೆಯುವ ಬೆಳೆ, ಅದು ಮಾರುಕಟ್ಟೆಗೆ ಬಂದಾಗ ಸಿಗಬಹುದಾದ ಬೆಲೆ ಸೇರಿದಂತೆ ಪ್ರತಿಯೊಂದು ಸಂಗತಿಯನ್ನೂ ಲೆಕ್ಕ ಹಾಕಿಯೇ ಮಾಡುತ್ತಾರೆ. ಕೂಲಿ ಕೆಲಸಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗದ ಮತ್ತು ಹೆಚ್ಚು ಆದಾಯ ತರುವ ಬೆಳೆ ಎನ್ನುವುದಕ್ಕಾಗಿಯೇ `ಶುಂಠಿ'ಯನ್ನು ಆಯ್ಕೆ ಮಾಡಿಕೊಂಡ ರವೀಂದ್ರ ಅವರು `ಶುಂಠಿಯಷ್ಟು ಕಡಿಮೆ ಶ್ರಮ ಮತ್ತು ಹೆಚ್ಚು ಆದಾಯ ತರುವ ಬೆಳೆ ಮತ್ತೊಂದಿಲ್ಲ' ಎಂದು ಅಭಿಪ್ರಾಯಪಡುತ್ತಾರೆ.
ಬಿಎಸ್ಸಿ (ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ) ಪದವೀಧರರರಾಗಿರುವ 29 ವರ್ಷ ವಯಸ್ಸಿನ ರವೀಂದ್ರ ಅವರು ತಮ್ಮ ಬಿಡುವಿನ ವೇಳೆಯನ್ನು ಪುಸ್ತಕ ಓದುವುದರಲ್ಲಿ ಕಳೆಯುತ್ತಾರೆ. ಜೀವ ವಿಜ್ಞಾನ ಮತ್ತು ಬಯೋ-ಟೆಕ್ನಾಲಜಿಗೆ ಸಂಬಂಧಿಸಿದ ಪುಸ್ತಕಗಳ ಓದು ಅವರ ಕೃಷಿ ಚಟುವಟಿಕೆ ಹೆಚ್ಚು ಸಿರಿವಂತಗೊಳಿಸಿದೆ.
ಸದಾಕಾಲ ಹೊಲದ ಸಾರ ಹೆಚ್ಚಿಸುವ ಕುರಿತು ಚಿಂತನೆ ನಡೆಸುವ ಅವರು ಸಮೀಪದ ಕೆರೆಗಳಲ್ಲಿನ ಹೂಳು ತುಂಬಿದ ಮಣ್ಣನ್ನು ತಂದು ತಮ್ಮ ಹೊಲದಲ್ಲಿ ಹಾಕಿಸುತ್ತಾರೆ. ಮಣ್ಣಿನ ಆರೈಕೆ ಮತ್ತು ಗೊಬ್ಬರ ಪೂರೈಕೆ ಸೇರಿದಂತೆ ಪ್ರತಿ ಹಂತದಲ್ಲಿಯೂ ತೋರಿಸುವ ಔದಾರ್ಯವು ಒಳ್ಳೆಯ ಫಲಿತಾಂಶವನ್ನೇ ತಂದುಕೊಟ್ಟಿದೆ.

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
ನಿಮ್ಮ ಸಾಧನೆಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ಇತರರಿಗೆ ಮಾದರಿಯಾಗಿದೆ, ಹೀಗೆಯೇ ಮುಂದುವರಿಯಲಿ.
ನಂದಿ,ಮಲೆಬೆನ್ನೂರು,ದಾವಣಗೆರೆ.
nandimbr@gmail.com
Manjunath Narayan ಹೇಳಿದ್ದಾರೆ…
I am interested in this, Can I hv more details. And congrats. My id manjunath36@yahoo.com

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಬಸವೇಶ್ವರ ಮತ್ತು ಅವನ ಕಾಲ