ಕೋಟ್ಜಿ ಎಂಬ ಸಂತ ಲೇಖಕ


ವರ್ಣಬೇಧ- ಜನಾಂಗೀಯ ದ್ವೇಷದ ತಲ್ಲಣಗಳ ನಡುವೆ ಬದುಕಿ, ಆ ಅನುಭವಗಳನ್ನೇ ಸಾಹಿತ್ಯದಲ್ಲಿ ಅಭಿವ್ಯಕ್ತಿಯಾಗಿಸಿದ ದಕ್ಷಿಣ ಆಫ್ರಿಕಾ ಮೂಲದ ಆಸ್ಟ್ರೇಲಿಯಾ ನಿವಾಸಿ, ಕಾದಂಬರಿಕಾರ `ಜಾನ್ ಮ್ಯಾಕ್ಸವೆಲ್ ಕೋಟ್ಜಿ' ಅವರು 2002ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದರು.

ಇತಿಹಾಸದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಎಂಬ ಮೂಲಭೂತ ಪ್ರಶ್ನೆಯೇ ಅವ ಸಾಹಿತ್ಯ ಕೃತಿಗಳ ಕೇಂದ್ರ ಕಾಳಜಿ. ಆಫ್ರಿಕನ್ ಜೀವನಶೈಲಿಯ ದಟ್ಟವಾದ ವಿವರಗಳ ಹಿನ್ನೆಲೆಯಲ್ಲಿ 18ನೇ ಶತಮಾನದ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡ `ಸ್ತ್ರೀ ಪಾತ್ರಗಳ ಸ್ವಗತ'ವನ್ನು ಬೆಸೆದಿರುವ ಅನನ್ಯ ಕೌಶಲ್ಯ ಅವರ ಸಾಹಿತ್ಯದಲ್ಲಿ ಎದ್ದು ಕಾಣಿಸುತ್ತದೆ. ಎಲ್ಲವನ್ನೂ ಅನುಮಾನದಿಂದ ನೋಡುತ್ತ ತಪ್ಪಾಗದಂತೆ ಎಚ್ಚರ ವಹಿಸಿ ರಚಿಸಲಾಗಿರುವ ಅವರ ಕಾದಂಬರಿಗಳು ಜೋಸೆಫ್ ಕಾನ್ರಾಡ್‌ ನ ರಾಜಕೀಯ ತ್ರಿಲ್ಲರ್‌ಗಳ ಪರಂಪರೆಗೆ ಸೇರುತ್ತವೆ. ಆದರ್ಶವಾದಿಯ ಮುಗ್ಧತೆಯು ಹಿಂಸೆಯ ಭಯಾನಕತೆಗೆ ತೆರೆದುಕೊಳ್ಳುವ ಚಿತ್ರಣ ನೀಡುವ ಕೋಟ್ಜಿಯವರ ಕಾದಂಬರಿಗಳು ರಾಜಕೀಯ ನೈತಿಕತೆಯ ಸಾಕ್ಷಿಪ್ರಜ್ಞೆಯಂತಿವೆ. ಅವರು ತನ್ನ ಕಾದಂಬರಿಗಳಲ್ಲಿ ಪಾಶ್ಚಾತ್ಯ ನಾಗರಿಕತೆಯ ಕ್ರೂರ ವೈಚಾರಿಕತೆ ಮತ್ತು ತೋರಿಕೆಯ ನೈತಿಕಪ್ರಜ್ಞೆಯನ್ನು ಕಟುವಾಗಿ ಟೀಕಿಸುತ್ತಾರೆ.

ವರ್ಣಬೇಧ ವ್ಯವಸ್ಥೆ ಪ್ರಬಲವಾಗಿರುವ ಆಫ್ರಿಕಾದಲ್ಲಿ `ಬಿಳಿಯರ' ಗುಂಪಿನ ಲೇಖಕನಾದರೂ ಕೋಟ್ಜಿ ತನ್ನ ಕೃತಿಗಳಲ್ಲಿ ಸಾಮ್ರಾಜ್ಯಷಾಹಿ ಧೋರಣೆಯನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಹಿತ್ಯ ಮತ್ತು ಬದುಕಿನ ಅವಿನಾಭಾವ ಸಂಬಂಧವನ್ನು ಹೆಣೆದಿರುವ ಕಾದಂಬರಿಗಳಲ್ಲಿ ಕೋಟ್ಜಿಯ ಪ್ರಮುಖ ಪಾತ್ರಗಳು ಲೌಕಿಕದ ಮತ್ತು ಬಾಹ್ಯಗೌರವವನ್ನು ಬಿಟ್ಟುಕೊಡದೇ ಭಾವನಾತ್ಮಕ ನೆಲೆಯಲ್ಲಿಯೇ ಮಾತನಾಡುತ್ತವೆ. ಈ ವೈರುಧ್ಯವನ್ನು ದಾಖಲಿಸುವಲ್ಲಿ ಕೋಟ್ಜಿಯ ಕಸುಬುಗಾರಿಕೆ ವ್ಯಕ್ತವಾಗುತ್ತದೆ. ವಿಭಿನ್ನ ರೀತಿಯಲ್ಲಿ ಕಾದಂಬರಿ ರಚಿಸಿರುವ ಕೋಟ್ಜಿಯವರ ಸಾಹಿತ್ಯದ ಶ್ರೀಮಂತಿಕೆ- ವೈಶಾಲ್ಯ ಎಷ್ಟಿದೆಯೆಂದರೆ ಅವರ ಯಾವ ಎರಡು ಕೃತಿಗಳು ವಸ್ತು- ನಿರೂಪಣೆಯಲ್ಲಿ ಏಕರೂಪಿಯಾಗಿಲ್ಲ.

ಕುಶಲ ಸಂರಚನೆ, ಭಾವಪೂರಿತ ಸಂಭಾಷಣೆ, ವಿಶ್ಲೇಷಣಾತ್ಮಕ ನಿರೂಪಣೆ ಇರುವ ಕಾದಂಬರಿಗಳಲ್ಲಿ ಆಫ್ರಿಕಾದ ಬದುಕನ್ನು ಕೋಟ್ಜಿ ಸಮರ್ಥವಾಗಿ ದಾಖಲಿಸಿದ್ದಾರೆ. `ತತ್ತ್ವಜ್ಞಾನಿ ನೀತ್ಸೆಯಿಂದ ತಾತ್ವಿಕ ಪ್ರೇರಣೆ ಪಡೆದಿರುವ ಕೋಟ್ಜಿ ಅವರ ಸಾಹಿತ್ಯ ಕೃತಿಗಳ ಮೇಲೆ ಯುರೋಪಿನ ನವ್ಯೋತ್ತರ ಲೇಖಕರಾದ ಬೆಕೆಟ್, ಕಾಫ್ಕಾ, ದಾಸ್ತೋವಸ್ಕಿಯ ಪ್ರಭಾವ ದಟ್ಟವಾಗಿ ಕಾಣಿಸುತ್ತದೆ' ಎಂದು ವಿಮರ್ಶಕರು ವಿಶ್ಲೇಷಿಸುತ್ತಾರೆ.

`ಸಿಗರೇಟು, ಮದ್ಯ- ಮಾಂಸಗಳಿಂದ ದೂರವಿದ್ದು ಬಹುತೇಕ ಸಂತನಂತೆಯೇ ಜೀವಿಸುತ್ತಿರುವ ಕೋಟ್ಜಿ ಸುಸಂಪನ್ನ ವ್ಯಕ್ತಿ. ಪ್ರತಿದಿನ ‌ಕಿಲೋಮೀಟರ್‌ಗಟ್ಟಲೆ ಸೈಕಲ್‌ನಲ್ಲಿ ಸಂಚರಿಸುವ ಅವರು, ವಾರದ ಏಳೂ ದಿನ ಬೆಳಿಗ್ಗೆ ಒಂದು ಗಂಟೆಯನ್ನು ಬರವಣಿಗೆಗೆ ಮೀಸಲಾಗಿರಿಸುವ ಅಚ್ಚುಕಟ್ಟುತನ ರೂಢಿಸಿಕೊಂಡ್ದಿದಾರೆ' ಎಂದು ಅವರನ್ನು ಹತ್ತಿರದಿಂದ ಬಲ್ಲ ಲೇಖಕಿ ರಿಯಾನ್ ಮಾಲನ್ ವಿವರಿಸುತ್ತಾರೆ.


ಕೋಟ್ಜಿ ಅವರು `ಡಸ್ಕ್ ಲ್ಯಾಂಡ್‌’' ಕಾದಂಬರಿ ಮೂಲಕ 1974ರಲ್ಲಿಯೇ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದರೂ 1984ರಲ್ಲಿ `ದ ವೇಟಿಂಗ್ ಫಾರ್ ಬಾರ್ಬರಿಯನ್ಸ್' ಕಾದಂಬರಿ ಪ್ರಕಟವಾಗುವವರೆಗೆ ಅನಾಮಿಕರಾಗಿಯೇ ಉಳಿದಿದ್ದಿದರು. ಆ ನಂತರ ಸಾಹಿತ್ಯ ವಲಯ ಅವರನ್ನು ಗಂಭೀರವಾಗಿ ಪರಿಗಣಿಸಲು ಆರಂಭಿಸಿತು. ಅಪಾರ ಓದುಗರ ಬೆಂಬಲ- ಪ್ರಶಸ್ತಿ ಪುರಸ್ಕಾರಗಳ ಸುರಿಮಳೆಯೇ ಕೋಟ್ಜಿಯವರನ್ನು ಬೆಂಬತ್ತಿ ಬಂದವು. ಆದರೆ ಕೋಟ್ಜಿ ಅವರು ಮಾತ್ರ ಸಮಾರಂಭ, ಸಂವಾದ-ಚರ್ಚೆಗಳಿಂದ ಬಹುತೇಕ ದೂರವೇ ಉಳಿಯಲು ಬಯಸುತ್ತಾರೆ. ಸ್ನೇಹಿತರ- ಅತ್ಮೀಯರ ಜೊತೆಗಿನ ಪಾರ್ಟಿಗಳಲ್ಲಿಯೂ ಅವರು ಮೌನಕ್ಕೇ ಮೊರೆ ಹೋಗುತ್ತಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಅವರೊಂದಿಗೆ ಒಡನಾಟವಿರುವ ಅಧ್ಯಾಪಕರು `ನಾನು ಕೇವಲ ಒಂದೇ ಬಾರಿ ಅವರು ನಕ್ಕದ್ದನ್ನು ನೋಡಿದ್ದೇನೆ' ಎಂದು ಸ್ಮರಿಸುತ್ತಾರೆ.

1940 ಫೆಬ್ರುವರಿ 9ರಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ನಲ್ಲಿ ಜನಿಸಿದ ಕೋಟ್ಜಿ ಅವರು ಎಂಟನೇ ವರ್ಷದ ವಯಸ್ಸಿನವರಾಗಿದ್ದಾಗಲೇ ವರ್ಣಬೇಧ ನೀತಿಯ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತ ಪಡಿಸಿದ್ದಕ್ಕಾಗಿ ಅವರ ತಂದೆ ನೌಕರಿ ಕಳೆದುಕೊಳ್ಳಬೇಕಾಯಿತು. ಆದ್ದರಿಂದ ಕೋಟ್ಜಿಯ ಕುಟುಂಬ ವೋಸರ್ೆಸ್ಟರ್ ಪ್ರಾಂತ್ಯಕ್ಕೆ ವಲಸೆ ಹೋಗಿ ಸಣ್ಣ ಪ್ರಮಾಣದಲ್ಲಿ ಕುರಿಮಂದೆ ನೋಡಿಕೊಳ್ಳುವ ಕೆಲಸ ಆರಂಭಿಸಿತು. ತಂದೆ-ತಾಯಿ ಜರ್ಮನ್ ಮೂಲದವರಾಗ್ದಿದರೂ ತಮ್ಮ ಮಗನನ್ನು ಇಂಗ್ಲಿಷ್ ಶಾಲೆಗೆ ಕಳುಹಿಸಲು ಆಸಕ್ತಿ ತೋರಿಸ್ದಿದರಿಂದ ಕೋಟ್ಜಿ ಇಂಗ್ಲಿಷ್ನ್ನು ಕಲಿಕೆಯ ಮತ್ತು ಅಭಿವ್ಯಕ್ತಿಯ ಭಾಷೆಯಾಗಿ ಸ್ವೀಕರಿಸಿದರು. ಕೇಪ್ಟೌನ್ನಲ್ಲಿ ಆರಂಭಿಕ ಶಿಕ್ಷಣ ಪಡೆದ ಕೋಟ್ಜಿ 1960ರಲ್ಲಿ ಬಿ.ಎ. ಮತ್ತು 1963 ಎಂ.ಎ. ಪದವಿ ಪಡೆದರು.

ನಂತರ ಇಂಗ್ಲೆಂಡಿಗೆ ತೆರಳಿ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ವೃತ್ತಿ ಜೀವನ ಆರಂಭಿಸಿದರು. ಯಂತ್ರದ ಜೊತೆಗಿನ ಒಡನಾಟದಿಂದ ರೋಸಿ ಕೆಲಸ ಬಿಟ್ಟ ಕೋಟ್ಜಿ ಆಸ್ಟಿನ್ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಅಧ್ಯಯನ ಆರಂಭಿಸಿದರು. 1969ರಲ್ಲಿ ಪಿಎಚ್.ಡಿ ಪದವಿ ಪಡೆದ ನಂತರ ದಕ್ಷಿಣ ಆಫ್ರಿಕಾಕ್ಕೆ ಮರಳಿದ ಅವರು ಕೇಪ್ಟೌನ್ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದ ಉಪನ್ಯಾಸಕರಾಗಿ ಸೇರಿಕೊಂಡರು. 1972ರಿಂದ 1983ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿಯೇ ಉಪನ್ಯಾಸಕರಾಗ್ದಿದ ಅವರು 1984- 91ರ ಅವಧಿಯಲ್ಲಿ ಅಮೆರಿಕಾದ ಬಫೆಲೋನಲ್ಲಿರುವ ನ್ಯೂಯಾರ್ಕನ ಸ್ಟೇಟ್ಸ್ ವಿಶ್ವವಿದ್ಯಾಲಯ ಮತ್ತು ಜಾನ್ ಕಾಪ್ಕಿನ್ಸ್ ವಿಶ್ವವಿದ್ಯಾಲಯ, ಹಾರ್ವಡರ್್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ನಂತರ ಕೇಪ್ಟೌನ್ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಿ ಮರಳಿದ ಅವರು 2002ರಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋದರು. ಈಗ ಅಡಿಲೇಡ್ ವಿಶ್ವವಿದ್ಯಾಲಯದಲ್ಲಿ `ಸಾಹಿತ್ಯ'ದ ಗೌರವ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತ್ದಿದಾರೆ.

ಸದಾ ಒಂಟಿತನ ಬಯಸುವ ಕೋಟ್ಜಿ 1963ರಲ್ಲಿ ಮದುವೆಯಾದರಾದರೂ ಅವರ ಏಕಾಕಿ ಪ್ರಜ್ಞೆ ಸಹಿಸದ ಪತ್ನಿ 1980ರಲ್ಲಿ ವಿಚ್ಛೇದನ ತೆಗೆದುಕೊಂಡರು. ಕೋಟ್ಜಿಯ ಸ್ವಭಾವದ ಅರಿವ್ದಿದ ಅವರ ಸ್ನೇಹಿತರಿಗೆ ವಿಚ್ಛೇದನ ಅನಿರೀಕ್ಷಿತವೆನ್ನಿಸಲಿಲ್ಲ. 23 ವರ್ಷದ ಮಗನನ್ನು ಅಪಘಾತದಲ್ಲಿ ಕಳೆದುಕೊಂಡ ನಂತರ ವಿಷಾದ ಮಡುವುಗಟ್ಟಿ ಸಾರ್ವಜನಿಕ ಜೀವನದಿಂದ ಹೊರಗುಳಿದರು. 1984ರಲ್ಲಿ `ದ ಲೈಫ್

ಅಂಡ್ ಟೈಮ್ಸ್ ಆಫ್ ಮೈಕೆಲ್ ಕೆ.' ಪುಸ್ತಕಕ್ಕೆ ಸಂದ ಬೂಕರ್ ಪ್ರಶಸ್ತಿ ಸ್ವೀಕರಿಸಲು ಕೂಡ ಹೋಗಲಿಲ್ಲ. ಇದರಿಂದ ಅವರಿಗೆ ದೊರೆಯುವ ಸಾಹಿತ್ಯಕ ಮನ್ನಣೆಗಳಲ್ಲಿ ಕೊರತೆಯೇನೂ ಆಗಿಲ್ಲ. ವಿಶ್ವದಾದ್ಯಂತ ಅಪಾರ ಓದುಗ ಸಮೂಹ ಬೆಳೆಸಿಕೊಂಡಿರುವ ಕೋಟ್ಜಿ ಅವರು ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಎರಡು ಬಾರಿ ಪಡೆದಿರುವ ಮೊದಲ ಮತ್ತು ಏಕಮಾತ್ರ ಲೇಖಕ ಎಂಬ ಹೆಗ್ಗಳಿಕೆಗೂ ಪಾತ್ರರಾಗ್ದಿದಾರೆ.

ಕೋಟ್ಜಿ ಕೃತಿಗಳು

ಕಾದಂಬರಿಗಳು-

ಡಸ್ಕ್ಲ್ಯಾಂಡ್ಸ್ (ಎರಡು ನೀಳ್ಗತೆಗಳು)- 1974.

ಇನ್ ದ ಹಾಟರ್್ ಆಫ್ ದ ಕಂಟ್ರಿ - 1977

ವೇಟಿಂಗ್ ಫಾರ್ ಬಾಬರ್ೆರಿಯನ್ಸ್ - 1980

ಲೈಫ್ ಅಂಡ್ ಟೈಮ್ಸ್ ಆಫ್ ಮೈಕೆಲ್ ಕೆ - 1983

ಫೋ - 1986

ಏಜ್ ಆಫ್ ಐರನ್- 1990

ದ ಮಾಸ್ಟರ್ ಆಫ್ ಪೀಟರ್ಸ್ ಬಗರ್್- 1994

ಡಿಸ್ಗ್ರೇಸ್- 1999

ಸೃಜನೇತರ ಕೃತಿಗಳು-

ವೈಟ್ ರೈಟಿಂಗ್: ಆನ್ ದ ಕಲ್ಚರ್ ಆಫ್ ಲೆಟರ್ಸ್ ಇನ್ ಸೌತ್ ಆಫ್ರಿಕಾ- 1988

ಡಬಲಿಂಗ್ ದ ಪಾಯಿಂಟ್: ಎಸ್ಸೆಸ್ ಅಂಡ್ ಇಂಟರ್ವ್ಯೂಸ್- 1992

ಗಿವಿಂಗ್ ಅಫೆನ್ಸ್: ಸೀನ್ಸ್ ಫ್ರಾಮ್ ಪ್ರಾವಿನ್ಸಿಯಲ್ ಲೈಫ್- 1997

ವಾಟ್ ಇಸ್ ರಿಯಲಿಸಂ?- 1997

ದ ಹ್ಯುಮ್ಯಾನಿಟೀಸ್ ಇನ್ ಆಫ್ರಿಕಾ- 2001

ಸ್ಟ್ರೇಂಜರ್ ಶೋರ್ಸ್: ಎಸ್ಸೆಸ್- 2001

ಎಲಿಜಬೆತ್ ಕಾಸ್ಟೆಲ್ಲೊ: ಏಯ್ಟ್ ಲೆಸನ್ಸ್- 2003

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಎಸ್.ಎಂ. ಪಂಡಿತ್