ಪೋಸ್ಟ್‌ಗಳು

ಕವಿಗಳ ಕಾಣಿಕಿ- ಬೀದರ್ ಕವಿಗೋಷ್ಠಿಗಾಗಿ ಬೇಂದ್ರೆ ಬರೆದ ಕವಿತೆ

ಇಮೇಜ್
ಕವಿಗಳ ಕಾಣಿಕಿ ೧ ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ ಜಗ ಜಾಹೀರ ವಜ್ರದ ಖಾಣೀಗೆ ಕಾಳಾ ಬಝಾರ ಹಜಾರ ಇದ್ರೂ ಬಾಳೋ ಉಸಿರಿಗೆ ಒಂದೇ ಹೆಸರು: ಅದು ಕವಿ ಕವೀ ಕಾಣಿಕೀ ಅದಕ್ಕ ಬೇಕಿಲ್ಲ ಬ್ಯಾರೆ ಆನಿಕಿ ೨ ಬೀದರಕ್ಕ ಆದಾವರೆಷ್ಟೋ? ಹೋದಾವರೆಷ್ಟೋ? ಆಗದವರೂ ಇದ್ದಾರು ಹೋಗದವರೂ ಇದ್ದಾರು ಬರೋ ಅವರಿಗೆ ಬಾಗಿಲಾ ತೆರದ ಅವ ಹೋಗೋ ಅವರ ಹಾದಿ ಮುಚ್ಚಿಲ್ಲ ೩ ಪ್ರಜಾ ಇಲ್ಲದ ರಾಜಾ ಯಾವ ಖಾ ಜಾ? ಯಾವ ಭಾಷಾದಾಗ ಊದಿರಿ ಬೇಂಡಬಾಜಾ ಕನ್ನಡೀ-ಮರಾಠೀ-ತೇಲಂಗೀ ಊರ್ದೂ, ಪಾರಸೀ, ಅರಬ್ಬೀ ಹಿಂದೀ, ಹಿಂದಿನದೂ, ಇಂದಿನದೂ, ಮುಂದಿನದೂ ಸಂಸ್ಕೃತಾ, ಪ್ರಾಕೃತಾ, ಅಪಭ್ರಂಶಾ, ಪೈಶಾಚಿ  ೪ ಹೊಡೋ ಗಾಡೀ ದ್ರಾವಿಡೀ, ಶಾಬರೀ, ಪುಳಿಂದೀ, ಗೊಂಡೀ ಕರಣದಾಗ ನಾಟಿದ್ದು ನಾಟಲಿ ಉಳಿದದ್ದು ದಾಟಲೀ ಸೋಳಾ ದೇಶಾ, ಸೋಳಾ ಭಾಷಾ, ಸೋಳಾ ಅಂಗೀ ಭಾವ ಇದ್ಹಾಂಗ ಜೀವ, ಜೀವಲಿಂಗೀ ೫ ಹಳೇ ಗೊಂಡಾರಣ್ಯದ ಗಂಗಾಲಹರಿ, ಗೋದಾವರೀ ಇನ್ನೂ ಹರೀತನ ಅದ ಉತ್ತರಕ್ಕ ಬೀದರದ ಹತ್ತರ ಹತ್ತರಕ್ಕ ೬ ’ಅಹಂ ರಾಷ್ಟೀ ಸಂಗಮನೀ’ ದೇಹದಾಗ ಸ್ನೇಹ ಇರದಿದ್ದರ ಮನದ ಮೊನೀಯೊಳಗ ದೀಪ ಎಲ್ಲೀದು? ಜನದ ಜಾತಿ ನೂರಾದರೂ ಜ್ಯೋತಿ ನೂರಾ ಒಂದು ಒಂದು ಬಿಂದುವಿಗೇ ನೂರು ಸಂದು ಸಾವಿರದವರ ಲಕ್ಷ್ಯ ಜೀವ ಕೋಟಿ ಕಡಿಗೆ ಅಬ್ಜದಾಗ ರಸದ ಅಡಿಗೆ ೭ ಹಿಂದುಸ್ಥಾನ, ಪಾಕಿಸ್ಥಾನ ಒಂದಾಗಬೇಕು ’ಭಾರತ ಹಮಾರಾ’ ಮುಂದಾಗಬೇಕು ಮನಕ್ಕೊಂದು ಮತಂ ಮಾಡಿ ಜನ ಧರ್ಮ ಖತಂ ಮಾಡಬ್ಯಾಡ್ರಿ ೮ ಹೋ...

ಕತೆ ಹೇಳುವುದೆಂದರೆ ಆತ್ಮಗಳ ಹುಡುಕಾಟ

ಇಮೇಜ್
  ಕತೆಗಾರ ಬಸವಣ್ಣೆಪ್ಪ ಕಂಬಾರ ಅವರೊಂದಿಗೆ ಮುಖಾಮುಖಿ- ಮಾತುಕತೆ

ಸಾಂಸ್ಕೃತಿಕ ಚರಿತ್ರೆ ಕಟ್ಟಿಕೊಡುವ ವ್ಯಕ್ತಿಚಿತ್ರಗಳು

ಇಮೇಜ್
  ಮಾತು ಮುಗಿದಿಲ್ಲ (ಲೇಖಕರ ಒಡನಾಟ) ಸಿದ್ಧಲಿಂಗ ಪಟ್ಟಣಶೆಟ್ಟಿ ಪುಟಗಳು ೨೪೦, ಬೆಲೆ ೨೪೦ ಅನನ್ಯ ಪ್ರಕಾಶನ, ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-೫೮೦೦೦೪ ಕವಿ ಮತ್ತು ಸೃಜನಶೀಲ ಅನುವಾದಕ ಎಂದು ಗುರುತಿಸಲಾಗುವ ಪಟ್ಟಣಶೆಟ್ಟಿ ಅವರು ’ಚಹಾದ ಜೋಡಿ ಚೂಡಾದ್ಹಾಂಗ’ ಅಂಕಣದ ಮೂಲಕ ಚಿರಪರಿಚಿತರು. ಹದಿನೆಂಟು ಕವನ ಸಂಕಲನ ಹಾಗೂ ಹದಿನೆಂಟು ಅನುವಾದಿತ ನಾಟಕಗಳನ್ನು ಪ್ರಕಟಿಸಿರುವ ಅವರ ೧೧ನೇ ಗದ್ಯ ಬರೆಹಗಳ ಸಂಕಲನವಿದು. ಉತ್ತರ ಕರ್ನಾಟಕದ ಆಡುಮಾತನ್ನು ಬಳಸಿ ಬರೆಯುವ ಅವರ ಗದ್ಯವು ಸಹಜ ಮಾತಿನ ಲಯವನ್ನು ವಿಸ್ತರಿಸಿ ಕವಿತೆಯಾಗಿ ಬಿಡಬಲ್ಲದು. ಸರಾಗವಾಗಿ ಓದಿಸಿಕೊಂಡು ಹೋಗುವ ಲವಲವಿಕೆಯ ಗದ್ಯ ಅವರದು. ದಟ್ಟ ನೆನಪಿನ ಓಣಿಯಲ್ಲಿ ಓಡಾಡುತ್ತ ಅಲ್ಲಿನ ವ್ಯಕ್ತಿ ವಿವರ, ಘಟನೆ- ಸಂಗತಿಗಳನ್ನು ಕರಾರುವಾಕ್ಕಾಗಿ ಪದಕ್ಕಿಳಿಸುವ ಕೌಶಲ ಪಟ್ಟಣಶೆಟ್ಟರಿಗೆ ಸಿದ್ಧಿಸಿದೆ. ಹಾಗೆ ದಾಖಲಿಸುವಾಗ ಅದರ ತಾಜಾತನ ಕಳೆದುಹೋಗದಂತೆ ಅವರು ಬರೆಯಬಲ್ಲರು. ಧಾರವಾಡ ಕೇಂದ್ರಿತ ಉತ್ತರ ಕರ್ನಾಟಕದ ಲೇಖಕ-ಕವಿಗಳ ಜೊತೆಗಿನ ಒಡನಾಟದ ಗಳಿಗೆಯನ್ನು ದಾಖಲಿಸುವ ’ಮಾತು ಮುಗಿದಿಲ್ಲ’ ಸಂಕಲನವು ಒಟ್ಟು ಹದಿನಾರು ಬರೆಹಗಳನ್ನು ಒಳಗೊಂಡಿದೆ. ಅದರಲ್ಲಿ ಎರಡು ಲೇಖನಗಳು ಬೇಂದ್ರೆಯವರನ್ನು ಕುರಿತವುಗಳಾಗಿದ್ದರೆ ಮತ್ತೆರಡು ಗಿರಡ್ಡಿ ಗೋವಿಂದರಾಜ ಅವರನ್ನು ಕುರಿತವು. ’ಸಂಕ್ರಮಣ’ ಸಾಹಿತ್ಯ ಪತ್ರಿಕೆ ಆರಂಭಿಸಿ ಸಾಹಿತ್ಯಕ-ಸಾಂಸ್ಕೃತಿಕ ಲೋಕದಲ್ಲಿ ಅದಕ್ಕೊಂದು ಛಾಪು ಮೂಡಿಸಲು ಕಾರಣರ...

ಪ್ರಭಾಕರ ಜೋಶಿ ಅವರೊಂದಿಗೆ ಮಾತುಕತೆ

ಇಮೇಜ್
  M Prabhakar Joshi Interview | Mukha Mukhi | Yakshagana |  ಬುಕ್ ಬ್ರಹ್ಮದ ಮುಖಾ-ಮುಖಿ ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಶಿ ಅವರ ವಿಶೇಷ ಸಂದರ್ಶನ. ಪೂರ್ಣ ಸಂದರ್ಶನಕ್ಕಾಗಿ

ಕಣವಿ ಅವರೊಂದಿಗೆ ಮಾತುಕತೆ

ಇಮೇಜ್
  Chennaveera Kanavi Mukha Mukhi |  'ಬುಕ್ ಬ್ರಹ್ಮ’ದ ‘ಮುಖಾ-ಮುಖಿ’ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ʼಚೆನ್ನವೀರ ಕಣವಿʼಯವರು ತಮ್ಮ ಸಾಹಿತ್ಯ ಪಯಣದ ಕುರಿತು ಮಾತನಾಡಿದ್ದಾರೆ. ವಿವರವಾದ ಮಾತುಕತೆಗಾಗಿ

ಅಂತಃಕರಣ ತಟ್ಟುವ ಆತ್ಮಗೀತ

ಇಮೇಜ್
  ಕವಿಜೋಡಿಯ ಆತ್ಮಗೀತ (ಕಥಾಕಾವ್ಯ) ನಟರಾಜ್‌ ಹುಳಿಯಾರ್‌ ಪುಟ: ೨೩೮, ಬೆಲೆ: ೧೨೦ ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ ಅಂಚೆ, ವ್ಹಯಾ ಎಮ್ಮಿಗನೂರ, ಬಳ್ಳಾರಿ-೫೮೩೧೧೩ ದೂರವಾಣಿ: ೮೮೮೦೦೮೭೨೩೫ ’ಕವಿ’ಯೇ ಕತೆಯಾಗುವುದು, ಕವಿತೆಯೇ ’ವಸ್ತು’ವಾಗುವುದು ಸಾಹಿತ್ಯದ ಹಲವು ಸೋಜಿಗಗಳಲ್ಲಿ ಒಂದು. ಇದು ಅಪರೂಪವಾದರೂ ಅಸಹಜವೇನಲ್ಲ. ಆಗಾಗ್ಗೆ ಸಾಹಿತ್ಯ ಲೋಕದಲ್ಲಿ ಬೇರೆ ಬೇರೆ ರೀತಿಯಲ್ಲಿ ದಾಖಲಾಗುತ್ತ ಬಂದ ವಿದ್ಯಮಾನ. ಕವಿತೆ ಬರೆಯುವ ಕವಿಯೊಳಗೆ ಕತೆಯೂ ಇರುತ್ತದೆ. ಕವಿಯ ಬದುಕು ಕತೆ-ಕಾವ್ಯಕ್ಕೆ ವಸ್ತುವಾಗುವುದೂ ಇದ್ದೇ ಇದೆ. ಕವಿಯ ಬದುಕು ಹಾಗೂ ಅವನು ಬರೆಯುವ ಕವಿತೆಗಳೆರಡೂ ಸಮಾಜದ ಘಟಕಗಳೇ ಆಗಿರುವುದರಿಂದ ಆ ಬಗ್ಗೆ ಕುತೂಹಲ-ಆಸಕ್ತಿಗಳು ಸಹಜ. ೨೦ನೆಯ ಶತಮಾನದ ಕಾವ್ಯಲೋಕದಲ್ಲಿ ತಮ್ಮ ’ಅನನ್ಯ’ ಕವಿತೆಗಳ ಮೂಲಕ ಗಮನ ಸೆಳೆದ ’ಕವಿಜೋಡಿ’ ಕುರಿತ ’ಕಥಾಕಾವ್ಯ’ವನ್ನು ಕಟ್ಟಲು ಕವಿಯಾಗಿದ್ದ ಕತೆಗಾರ ನಟರಾಜ್‌ ಹುಳಿಯಾರ್‌ ಪ್ರಯತ್ನಿಸಿದ್ದಾರೆ. ಮತ್ತು ಯಶಸ್ವಿಯೂ ಆಗಿದ್ದಾರೆ. ನಟರಾಜರೊಳಗಿನ ಕವಿ-ಕತೆಗಾರರಿಬ್ಬರೂ ಸೇರಿ ಕಟ್ಟಿದ ಕಥನ ’ಕವಿಜೋಡಿಯ ಆತ್ಮಗೀತ’. ಇದು ಏಕಕಾಲಕ್ಕೆ ಕತೆಯೂ ಹೌದು, ಹಾಗೆಯೇ ಕಾವ್ಯ ಕೂಡ.  ಇಂಗ್ಲೆಂಡಿನ ಕವಿ ಟೆಡ್‌ ಹ್ಯೂಸ್‌ (೧೯೩೦-೧೯೯೮) ಮತ್ತು ಅಮೆರಿಕಾದ ಕವಯತ್ರಿ ಸಿಲ್ವಿಯಾ ಪ್ಲಾತ್‌ (೧೯೩೨-೧೯೬೩) ಎಂಬ ಕವಿಜೋಡಿ ಜನಮನ್ನಣೆಯ ಜೊತೆಗೆ ’ದಂತಕತೆ’ಯಾದವರು. ಒಂದು ಸಂಜೆಯ ಪಾರ್ಟಿಯಲ್ಲಿ ಮುಖಾಮುಖಿಯಾದ ಈ ಇಬ್ಬರು ಕವ...

ನರಹಳ್ಳಿ ಅವರೊಂದಿಗೆ ಮಾತುಕತೆ

ಇಮೇಜ್
  Narahalli Balasubramanya Interview | Mukha Mukhi |  ಬುಕ್ ಬ್ರಹ್ಮದ ಮುಖಾ ಮುಖಿ ಕಾರ್ಯಕ್ರಮದಲ್ಲಿ ವಿಮರ್ಶಕರಾದ ನರಹಳ್ಳಿ ಬಾಲಸುಬ್ರಮಣ್ಯ ಅವರ ವಿಶೇಷ ಸಂದರ್ಶನ. ವಿವರವಾದ ಸಂದರ್ಶನಕ್ಕಾಗಿ

ನಾರಾಯಣಾಚಾರ್ಯ ಅವರೊಂದಿಗೆ ಮಾತುಕತೆ

ಇಮೇಜ್
KS Narayanacharya Mukha Mukhi ಕೆ.ಎಸ್‍. ನಾರಾಯಣಾಚಾರ್ಯ 'ಬುಕ್ ಬ್ರಹ್ಮ'ದ 'ಮುಖಾ-ಮುಖಿ'ಯಲ್ಲಿ ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರ ಕೆ.ಎಸ್‍. ನಾರಾಯಣಾಚಾರ್ಯ ಅವರೊಂದಿಗೆ ಸಂದರ್ಶನ ಪೂರ್ಣ ಸಂದರ್ಶನಕ್ಕಾಗಿ  

ವೈಚಾರಿಕತೆಯೆಂದರೆ ಶುಷ್ಕವಲ್ಲ, ಅದು ಸೃಜನಶೀಲತೆಗಿಂತ ಭಿನ್ನವಲ್ಲ

ಇಮೇಜ್
  ಜಯಂತ ಕಾಯ್ಕಿಣಿ ಅವರೊಂದಿಗೆ ಮುಖಾಮುಖಿ ಮಾತುಕತೆ

ಚಿದಾನಂದ ಸಾಲಿ ಜೊತೆ ಮಾತುಕತೆ

ಇಮೇಜ್
  Chidananda Saali Interview ಬುಕ್ ಬ್ರಹ್ಮದ ಮುಖಾ ಮುಖಿ ಕಾರ್ಯಕ್ರಮದಲ್ಲಿ ಕವಿ, ಕತೆಗಾರ, ಅನುವಾದಕ ಚಿದಾನಂದ ಸಾಲಿ ಅವರ ವಿಶೇಷ ಸಂದರ್ಶನ. ವೀಕ್ಷಿಸಲು

ಕೆ.ವಿ. ಸುಬ್ರಹ್ಮಣ್ಯಂ ಅವರೊಂದಿಗೆ ಮಾತುಕತೆ

ಇಮೇಜ್
  K V Subramanyam ಬುಕ್‌ ಬ್ರಹ್ಮದ ʼಮುಖಾ-ಮುಖಿʼ ಕಾರ್ಯಕ್ರಮದಲ್ಲಿ ಕಲಾ ಇತಿಹಾಸಕಾರ ಕೆ.ವಿ. ಸುಬ್ರಹ್ಮಣ್ಯಂ ಅವರು ಇತಿಹಾಸದ ಸುತ್ತಲಿನ ಮಾಹಿತಿ ಮತ್ತು ಸವಾಲುಗಳ ಕುರಿತು ಮಾತನಾಡಿದ್ದಾರೆ. ಸಂದರ್ಶನ ವೀಕ್ಷಿಸಲು

ಸಂತಸ ನನ್ನೆದೆಯ ಹಾಡುಹಕ್ಕಿ

ಇಮೇಜ್
  Nemichandra | Mukha Mukhi | ಮುಖಾ-ಮುಖಿ | ಲೇಖಕಿ ನೇಮಿಚಂದ್ರ ಖ್ಯಾತ ಲೇಖಕಿ ನೇಮಿಚಂದ್ರ ಅವರ 'ಸಂತಸ ನನ್ನೆದೆಯ ಹಾಡುಹಕ್ಕಿ' ಕೃತಿಗೆ ಕನ್ನಡ ಸಾಹಿತ್ಯಲೋಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕೃತಿಯ ಕುರಿತಾಗಿ 'ಬುಕ್ ಬ್ರಹ್ಮ' ಸಂಪಾದಕರಾದ ದೇವು ಪತ್ತಾರ್ ಅವರು ನಡೆಸಿದ ವಿಶೇಷ ಸಂದರ್ಶನ ಮುಖಾ-ಮುಖಿಯಲ್ಲಿ ಲೇಖಕಿ ನೇಮಿಚಂದ್ರ ಅವರು ತಮ್ಮ ಬದುಕು-ಬರಹಗಳ ಕುರಿತಾದ ವಿಭಿನ್ನ ಒಳನೋಟಗಳ ಬಗ್ಗೆ ಮಾತನಾಡಿದ್ದಾರೆ. 'ಸಂತಸ ನನ್ನೆದೆಯ ಹಾಡುಹಕ್ಕಿ' ನೇಮಿಚಂದ್ರ ಅವರ 'ಬದುಕು ಬದಲಿಸಬಹುದು' ಸರಣಿಯ ನಾಲ್ಕನೇ ಕೃತಿಯಾಗಿದೆ. ವಿವರವಾದ ಸಂದರ್ಶನಕ್ಕಾಗಿ

ಮುಖಾಮುಖಿ-1-siddalingayya

ಇಮೇಜ್
ಬುಕ್ ಬ್ರಹ್ಮ'ದ ಮುಖಾ-ಮುಖಿ ಸಂವಾದದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರ ವಿಶೇಷ ಸಂದರ್ಶನ. 'ಬುಕ್ ಬ್ರಹ್ಮ' ಸಂಪಾದಕರಾದ ದೇವು ಪತ್ತಾರ್ ಅವರು ಕವಿಗಳೊಂದಿಗೆ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಕಾವ್ಯ ಮತ್ತು ಕಾಲದ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಯುಟ್ಯೂಬ್‌ ಲಿಂಕ್‌

‘ಕತ್ತಿಯಂಚಿನ ದಾರಿ’ಯಲ್ಲಿ ‘ಮೀಮಾಂಸೆ’ಯಾದ ವಿಮರ್ಶೆ

ಇಮೇಜ್
ಡಾ. ರಹಮತ್ ತರೀಕೆರೆ ಅವರ ‘ಕತ್ತಿ ಅಂಚಿನ ದಾರಿ’ ಕನ್ನಡದ ಮಹತ್ವದ ಪುಸ್ತಕಗಳಲ್ಲಿ ಒಂದು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನ ಆಗಿರುವ ಈ ಪುಸ್ತಕ ‘ಮಹತ್ವದ ಕೃತಿ’ ಎಂಬುದು ಸಾಬೀತಾಗಿದೆ. ಆದರೆ, ಪುಸ್ತಕವೊಂದರ ಮಹತ್ವ ನಿರ್ಧಾರ ಆಗುವುದು ಅದಕ್ಕೆ ಸಿಗುವ ಮನ್ನಣೆ, ಗೌರವಗಳ ಮೂಲಕ ಅಲ್ಲ. ಹಾಗೆ ಆಗಬಾರದು ಕೂಡ. ಮಹತ್ವ ನಿರ್ಧರಿಸುವುದಕ್ಕೆ ಇರುವ ಹಲವು ಮನದಂಡಗಳ ಪೈಕಿ ಪ್ರಶಸ್ತಿಯೂ ಒಂದು ಎಂಬುದರಲ್ಲಿ ಎರಡು ಮತಿಲ್ಲ. ‘ಕತ್ತಿಯಂಚಿನ ದಾರಿ’ ಪುಸ್ತಕವು ಕೇವಲ ಪ್ರಶಸ್ತಿ ಪಡೆದ ಕಾರಣದಿಂದಾಗಿ ಮಹತ್ವ ಪಡೆದ ಕೃತಿ ಅಲ್ಲ ಎಂಬುದು ಅರಿವಿಗೆ ಬರುವುದಕ್ಕೆ ಹೆಚ್ಚು ಹೊತ್ತು ಹಿಡಿಯುವುದಿಲ್ಲ. ಕತ್ತಿಯಂಚಿನ ದಾರಿಯಲ್ಲಿ ಒಟ್ಟು ೨೦ ಲೇಖನಗಳಿವೆ. ೨೫೮ ಪುಟಗಳ ಈ ಪುಸ್ತಕವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ವೈಚಾರಿಕತೆಯ ಭಾರ ಇಲ್ಲದ ಇಲ್ಲಿನ ಚಿಂತನೆಗಳು ಸರಳ ಮತ್ತು ನೇರವಾಗಿ ಇರುವುದರಿಂದ ಪ್ರಿಯವಾಗುತ್ತವೆ. ಅಪ್ಪಟ ಸಾಹಿತ್ಯ ವಿಮರ್ಶೆಯ ಗ್ರಂಥವಾದರೂ ಅದರಾಚೆಗೆ ಬೆಳೆದು ನಿಲ್ಲುತ್ತದೆ. ಸಾಹಿತ್ಯದ ಮೀಮಂಸೆ ಕಟ್ಟಿಕೊಡುವುದರ ಜೊತೆಗೆ ಸಂಸ್ಕೃತಿ ಕುರಿತ ಹರಳುಗಟ್ಟಿದ ಚಿಂತನೆಗಳನ್ನು ಮಂಡಿಸುತ್ತದೆ. ಕೇವಲ ಸಾಹಿತ್ಯ ಮತ್ತು ಸಂಸ್ಕೃತಿಗೆ ಮತ್ರ ಸೀಮಿತವಾಗದೆ ಒಟ್ಟು ಬದುಕಿನ ಗ್ರಹಿಕೆಯನ್ನು ಶ್ರೀಮಂತಗೊಳಿಸುತ್ತವೆ. ೨೦ ಲೇಖನಗಳ ಪೈಕಿ ‘ಕುವೆಂಪು ಚಿಂತನೆ; ಆಕರ್ಷಣೆ ವಿಕರ್ಷಣೆ’ ಮತ್ತು ‘ಕುವೆಂಪು: ವೈರುಧ್ಯಗಳ ಹಾದಿಯ ಪಯಣಿಗನ...

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು

ಬರವಣಿಗೆ ಮಾತ್ರವಲ್ಲದೆ ಓದು ಅದರಲ್ಲೂ ವಿಶೇಷವಾಗಿ ’ಸಾಹಿತ್ಯದ ಓದು’ ಕೂಡ ಅಭಿವ್ಯಕ್ತಿಯ ಮಾಧ್ಯಮ ಎಂದು ಖಚಿತವಾಗಿ ನಂಬಿದವ, ನಂಬುವವ ನಾನು. ಕಳೆದ ಎರಡು ದಶಕಗಳ ಅವಧಿಯಲ್ಲಿ ಓದುಗನಾಗಿ ಸಾಹಿತ್ಯಲೋಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕುತೂಹಲ - ಆಸಕ್ತಿಯಿಂದ ಗಮನಿಸುತ್ತ ಬಂದಿದ್ದೇನೆ. ಹಲವು ಸಲ ಹೊರಗಿನವನಾಗಿ ಕೆಲವೊಮ್ಮೆ ’ಒಳಗಿನವ’ನಾಗಿ ಯೋಚಿಸಿ, ವರ್ತಿಸಿದ್ದೇನೆ. ಹೀಗಾಗಿ ಸಾಹಿತ್ಯದ ಜೊತೆಗೆ ನಿರ್ಧಿಷ್ಟವಾದ ಮತ್ತು ಹದವಾದ ’ಮಾನಸಿಕ ದೂರ’ ಇಟ್ಟುಕೊಳ್ಳುವುದು ಸಾಧ್ಯವಾಗಿದೆ. ಬರಹಗಾರನಾಗಿ ನನಗೆ ಇರುವ ಅನುಭವ ಸೀಮಿತವಾದದ್ದು. ಮೊದಲೇ ಹೇಳಿದ ಹಾಗೆ ನನಗೆ ಓದುವುದೇ ಅಭಿವ್ಯಕ್ತಿ ಎಂದು ನಂಬಿದ್ದರಿಂದ ಓದುವ ಖುಷಿಯನ್ನೇ ಬೆಳೆಸಿಕೊಳ್ಳುತ್ತ ಹೋದೆ. ಬರೆಯುವುದಕ್ಕಿಂತ ಓದುಗನಾಗುವುದೇ ನನ್ನ ಆಸಕ್ತಿ ಮತ್ತು ಗುರಿಯಾಗಿತ್ತು. ಹಾಗೆ ನೋಡಿದರೆ ನನ್ನ ಮತ್ತು ನನ್ನಂತಹ ಹಲವರ ಸಾಹಿತ್ಯದ ಆಸಕ್ತಿ ಬೆಳೆಯಲು ಆರಂಭವಾದದ್ದು ಭಾನುವಾರದ ಸಾಪ್ತಾಹಿಕ ಮತ್ತು ವಾರಪತ್ರಿಕೆಗಳ ಮೂಲಕ, ಕಳೆದ ಒಂದು ದಶಕದ ಅವಧಿಯಲ್ಲಿ ಸಾಹಿತ್ಯ ಪತ್ರಿಕೆಗಳ ಜೊತೆಗಿನ ಒಡನಾಟ ಮತ್ತು ಪ್ರಮುಖ ದೈನಿಕದಲ್ಲಿ ಅದರಲ್ಲೂ ವಿಶೇಷವಾಗಿ ಸಾಪ್ತಾಹಿಕ ವಿಭಾಗದಲ್ಲಿ ಕೆಲಸ ಮಾಡಿದ ಅನುಭವದ ಹಿನ್ನೆಲೆಯಲ್ಲಿ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ. ’ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು’ ಎಂಬ ಶೀರ್ಷಿಕೆಯ ಅಡಿಯಲ್ಲಿ ಚರ್ಚೆ ನಡೆಸುವುದಕ್ಕಾಗಿ ಇಲ್ಲಿ ನಿಂತಿದ್ದೇನ...

ಕೃಷಿಯ ಪ್ರಗತಿಯಲ್ಲಿ ಮುದ್ರಣ ಮಾಧ್ಯಮದ ಪಾತ್ರ

ಒಂದು ಸಕ್ಸೆಸ್ ಸ್ಟೋರಿಯ ಮುಖಾಂತರ ನನ್ನ ಮಾತುಗಳನ್ನು ಆರಂಭಿಸುತ್ತೇನೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನಲ್ಲಿ ಅಹಮದಾಬಾದ್ ಎಂಬ ಪುಟ್ಟ ಹಳ್ಳಿಯಿದೆ. ೧೯೭೦ರಲ್ಲಿ ಆ ಊರಿನ ಒಬ್ಬ ಡಿಪ್ಲೊಮಾ ಪದವೀಧರ ಯುವಕ ಪುಣೆಯಲ್ಲಿ ಜ್ಯೂನಿಯರ್ ಎಂಜಿನಿಯರ್ ಆಗಿದ್ದ. ಜಡ್ಡುಗಟ್ಟಿದ ಸರ್ಕಾರಿ ವ್ಯವಸ್ಥೆ ಮತ್ತು ವ್ಯಾಪಕ ಭ್ರಷ್ಟಾಚಾರ ಮತ್ತಿತರ ಕಾರಣಗಳಿಗಾಗಿ ಸರ್ಕಾರಿ ನೌಕರಿ ತೊರೆಯಲು ನಿರ್ಧರಿಸಿದ. ತನ್ನ ಮೇಲಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿದ. ಆಗಿನ ಕಾಲದಲ್ಲಿ ಕೈ ತುಂಬ ಅಲ್ಲದಿದಿದ್ದರೂ ನೆಮ್ಮದಿಯಿಂದ ಬದುಕು ಸಾಗಿಸಬಹುದಾದಷ್ಟು ವೇತನ ಬರುತ್ತಿತ್ತು. ಮೇಲಧಿಕಾರಿ ಯುವಕನಿಗೆ ಕೆಲಸ ತೊರೆಯದೇ ಸಲಹೆ ಮಾಡಿದರು. ತಲೆ ತುಂಬ ಆದರ್ಶ ತುಂಬಿಕೊಂಡಿದ್ದ ಯುವಕ ತನ್ನ ನಿರ್ಧಾರದಲ್ಲಿ ಗಟ್ಟಿಯಾಗಿದ್ದ. ಕೆಲಸ ಬಿಟ್ಟು ಏನ್ ಮಾಡ್ತೀರಿ? ಎಂಬ ಪ್ರಶ್ನೆಗೆ ಹೊಲಕ್ಕೆ ಹೋಗಿ ಕೃಷಿ ಮಾಡ್ತೀನಿ ಎಂದು ಉತ್ತರಿಸಿ ಊರಿಗೆ ಬಂದ. ಊರಿನ ಹಿರಿಯರು ಪ್ರಮುಖರು ’ತಮ್ಮಾ ಹೊಲದಾಗ ಎಷ್ಟು ಅಗ್ದರೂ ಮಣ್ಣು ಮತ್ತು ಕಸಾನೇ ಬರ್‍ತಾದ ಹೊರ್‍ತು ನೋಟು ಬರಂಗಿಲ್ಲ. ಸುಮ್ಮನೆ ವಾಪಾಸ್ ಕೆಲಸಕ್ಕೆ ಹೋಗು ಅಂತ ಕಿವಿಮಾತು ಹೇಳಿದರು. ಹಠಮಾರಿ ಯುವಕ ಕೇಳಲಿಲ್ಲ. ಒಂದಷ್ಟು ಸಾಲ ಮಾಡಿ ಕೃಷಿ ಆರಂಭಿಸಿದ. ಅವನ ಟೈಮ್ ಚೆನ್ನಾಗಿರಲಿಲ್ಲ. ದೇಶವನ್ನು ಕಾಡಿದ ೧೯೭೧ರ ಭೀಕರ ಬರಗಾಲ ಆರಂಭವಾಗಿತ್ತು. ಮಳೆ ಕೈಕೊಟ್ಟು ಮುಂಗಾರು-ಹಿಂಗಾರುಗಳೆರಡೂ ಬೆಳೆಯಲಿಲ್ಲ. ಎರಡನೇ ವರ್ಷ ಮತ್ತಷ್ಟು ಸಾಲ ಮಾಡಿ ...

ಶರಣಪ್ರಕಾಶ ಪಾಟೀಲ

ಇಮೇಜ್
ಕನರ್ಾಟಕದ ರಾಜಕೀಯ ಲೋಕದಲ್ಲಿ ಕೋಟಿಗಳ ಲೆಕ್ಕದಲ್ಲಿ ನಡೆಯುತ್ತಿರುವ `ವ್ಯವಹಾರ'- ಚಚರ್ೆಗಳು ರಾಜಕಾರಣಿಗಳು ಮತ್ತು ರಾಜಕೀಯ ಎಂದರೇ ಜನ ಅಸಹ್ಯ ಪಟ್ಟುಕೊಳ್ಳುವ ಸ್ಥಿತಿ ತಲುಪಿದೆ. ಅಂತಹುದರಲ್ಲಿ ಕಾಯಿನ್ ಬಾಕ್ಸ್ನಿಂದ ಫೋನ್ ಬಂದರೆ ರಿಸೀವ್ ಮಾಡುವ ಶಾಸಕರೂ ಇದ್ದಾರೆ ಎಂಬುದೇ ನಂಬಲಿಕ್ಕೆ ಕಷ್ಟವಾಗುವ ಸಂಗತಿ. ಜನಪ್ರತಿನಿಧಿಗಳು ಅದರಲ್ಲೂ ವಿಶೇಷವಾಗಿ ಶಾಸಕರಗಳು ಪೈಕಿ ಬಹುತೇಕ ಜನ ತಮ್ಮ ಸುತ್ತ ಕಾರಣ ಇಲ್ಲದ್ದಿದರೂ ಸದಾ ನೂರಾರು ಜನ ನೆರೆದಿರಬೇಕು ಎಂದು ಭಾವಿಸುತ್ತಾರೆ. ರಾಜಕಾರಣಿಗಳು ತಮ್ಮ ದೊಡ್ಡಸ್ತಿಕೆಯ ಪ್ರದರ್ಶನಕ್ಕೆ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲು ಹೆಣಗಾಡುತ್ತಾರೆ. ಎಲ್ಲ ಸಾಮಾನ್ಯ ಸಂಗತಿ, ಗ್ರಹಿಕೆಗಳಿಗೂ `ಅಪವಾದ' ಇದ್ದೇ ಇರುತ್ತವೆ ಎಂಬುದು ಕೂಡ ಸುಳ್ಳೇನಲ್ಲ. `ಕಾಯಿನ್ ಬಾಕ್ಸ್ನಿಂದ ಫೋನ್ ಮಾಡಿ ನಿಮ್ಮ ಸಮಸ್ಯೆ, ಆಗಬೇಕಾದ ಕೆಲಸ ಹೇಳಿ. ಸಾಧ್ಯವಾದರೆ ಮಾಡಿಸಿಕೊಡುತ್ತೇನೆ' ಎಂದು ಜನರಿಗೆ ಹೇಳುವ ಹಾಗೆಯೇ ಜನರಿಂದ ಬರುವ ಕಾಲ್ಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಶ್ರದ್ಧೆಯಿಂದ ಗುರುತು ಹಾಕಿಕೊಂಡು, ಅವುಗಳನ್ನು ಬಗೆ ಹರಿಸಲು ಪ್ರಯತ್ನಿಸುವ ಶಾಸಕರಿದ್ದಾರೆೆ. ಗುಲ್ಬರ್ಗ ಜಿಲ್ಲೆಯ ಸೇಡಂ ವಿಧಾನಸಭಾ ಮತಕ್ಷೇತ್ರವನ್ನು ಸತತ ಎರಡನೇ ಬಾರಿಗೆ ಪ್ರತಿನಿಧಿಸುತ್ತಿರುವ ಶಾಸಕ ಡಾ. ಶರಣಪ್ರಕಾಶ ಪಾಟೀಲ್ ಅವರು ಜನಪರವಾಗಿ, ಸರಳವಾಗಿ, ನೇರವಾಗಿ ಯೋಚಿಸುವವರು. ಹಾಗೆಯೇ ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡವರು. ಕ...

ಮಾಧ್ಯಮಗಳು ಮತ್ತು ಸಾಮಾಜಿಕ ಕಾಳಜಿ

* ಬದಲಾದ ಈ ದಿನಗಳಲ್ಲ್ಲಿ ವೇಗ, ಓಟ ಎಷ್ಟು ಹೆಚ್ಚಾಗಿದೆ ಎಂದರೆ ಮಾಡಿದ ವರದಿಯ ಬಗ್ಗೆ ಮತ್ತೊಮ್ಮೆ ವಿಚಾರಿಸಿ ಪರಿಶೀಲನೆ ನಡೆಸುವಷ್ಟೂ ವ್ಯವಧಾನ ಇಲ್ಲದಂತಾಗಿದೆ. ಕೈಯಲ್ಲಿ ಇರುವುದನ್ನು ಮುಗಿಸುತ್ತಿದ್ದಂತೆಯೇ ಮತ್ತೊಂದನ್ನು ತೆಗೆದುಕೊಂಡು ಮಾಡಿ ಮುಗಿಸುವ ಅವಸರ ಮತ್ತು ಒತ್ತಡಗಳ ಮಧ್ಯೆ ಯೋಚನೆ ಮಾಡುವುದಕ್ಕೆ ಪುರುಸೊತ್ತಿಲ್ಲ. ಬಹಳಷ್ಟು ಜನ ಮೆಚ್ಚಿಕೊಂಡರೆ ಮಾಡಿದ ಕೆಲಸ ’ಯಶಸ್ವಿ’ ಎಂದೂ ಬಹಳಷ್ಟು ಜನ ಬೈದರೆ ’ವೈಫಲ್ಯ’ ಎಂದೂ ಪರಿಗಣಿಸಬಹುದಾದ ದಯನೀಯ ಸ್ಥಿತಿಯಿದೆ. ಅಂದರೆ ಇಡೀ ಬದುಕು ಸೋಲು- ಗೆಲವು, ಯಶಸ್ಸು -ಅಪಯಶಸ್ಸುಗಳ ದ್ವಿಭಾಗೀಯ ವರ್ಗೀಕರಣಕ್ಕೆ ಸೀಮಿತವಾಗಿದೆ. ಇವುಗಳ ಮಧ್ಯೆ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಯೋಚಿಸುವುದಕ್ಕೆ ಅವಕಾಶವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. * ವಿಷಯ, ವಿವಾದ, ಚರ್ಚೆ, ಸಂಗತಿಗಳ ’ಕೇಂದ್ರ’ಗಳಿಂದ ದೂರ ಸಾಗುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ವ್ಯಾಪಕವಾಗಿದೆ. ವಿಭಿನ್ನವಾಗಿ ಮತ್ತು ಅದನ್ನು ಎಲ್ಲರಿಗಿಂತ ಮೊದಲು ಹಾಗೂ ಬೇಗ ಕೊಡಬೇಕು ಎನ್ನುವ ಕಾರಣಕ್ಕಾಗಿ ಸಮಸ್ಯೆಯ ಕೇಂದ್ರದ ಸುತ್ತ ಗಿರಕಿ ಹೊಡೆದು ಅದರ ಬಗ್ಗೆ ಮಾಹಿತಿ, ಅರಿವು ಮೂಡಿಸುವ ಬದಲು ಪರಿಧಿಯ ಯಾವುದೋ ಬಿಂದುವನ್ನು ಕೇಂದ್ರ ಅಂತ ಭಾವಿಸಿ ಅದರ ಸುತ್ತ ಚರ್ಚೆ ಬೆಳೆಸಲಾಗುತ್ತದೆ. ಇದರಿಂದಾಗಿ ಯಾವುದೋ ಅಮುಖ್ಯ ಸಂಗತಿಗೆ ಪ್ರಾಮುಖ್ಯತೆ ಬಂದರೆ ಮುಖ್ಯ ಸಂಗತಿ ಹಿನ್ನೆಲೆಗೆ ಸರಿದು ಬಿಡುತ್ತದೆ. ಇದು ಎರಡೂ ಕಡೆಯಿಂದ ನೋಡಿದರ...

ನೂತನ ಜಿಲ್ಲೆಯ ನೂರೆಂಟು ಸಮಸ್ಯೆಗಳು:

ಇಮೇಜ್
ನೂತನ ಜಿಲ್ಲೆಯ ನೂರೆಂಟು ಸಮಸ್ಯೆಗಳು: ಗೋಳು ಕೇಳೋರ್‍ಯಾರು? ರಾಜ್ಯದ ನೂತನ ಜಿಲ್ಲೆ ಯಾದಗಿರಿ ಹಿಂದಿನ ಬಿಜೆಪಿ ಸರಕಾರದ ಕೊಡುಗೆ. ಐದು ವರುಷದ ಅವಯಲ್ಲಿ ಬಿಜೆಪಿ ಸರಕಾರ ಘೋಷಿಸಿದ ಏಕೈಕ ಜಿಲ್ಲೆ ಇದು. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಗುಲ್ಬರ್ಗ ಜಿಲ್ಲೆಯ ವಿಭಜನೆಯನ್ನು ಯಾದಗಿರಿ ನೂತನ ಜಿಲ್ಲಾ ಕೇಂದ್ರವಾಗಿ ಪ್ರಕಟಿಸುವ ಮೂಲಕ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗು ಮಾಡಿದ್ದರು. ಭೌಗೋಳಿಕವಾಗಿ ಎರಡನೇ ದೊಡ್ಡ ಜಿಲ್ಲೆಯಾಗಿದ್ದ ಗುಲ್ಬರ್ಗ ವಿಭಜಿಸುವುದು ಅನಿವಾರ್ಯವೂ ಅಗತ್ಯವೂ ಆಗಿತ್ತು. ಅದನ್ನು ಜಿಲ್ಲಾ ಪುನರ್‌ವಿಂಗಡಣೆಯ ಕುರಿತು ಅಧ್ಯಯನ ನಡೆಸಿದ ಸಮಿತಿಗಳು ಖಚಿತ ಪಡಿಸಿದ್ದವು. ಜಿಲ್ಲಾ ಕೇಂದ್ರ ಯಾವುದು ಆಗಬೇಕು? ಎಂಬ ಬಗ್ಗೆ ಭಿನ್ನ ಅಭಿಪ್ರಾಯ ಕೇಳಿ ಬಂದದ್ದರಿಂದ ನೂತನ ಜಿಲ್ಲೆಯ ಘೋಷಣೆ ಮರೀಚಿಕೆ ಆಗಿತ್ತು. ಗದಗ - ಹಾವೇರಿ, ದಾವಣಗೆರೆ, ಬಾಗಲಕೋಟ ಜಿಲ್ಲೆಗಳ ರಚನೆ ಮಾಡಿದ ಜೆಎಚ್ ಪಟೇಲ್ ನೇತೃತ್ವದ ಸರಕಾರ ತೀವ್ರ ಒತ್ತಡ ಎದುರಾದ ಹಿನ್ನೆಲೆಯಲ್ಲಿ ಗುಲ್ಬರ್ಗ ವಿಭಜನೆಯನ್ನು ಕೈ ಬಿಟ್ಟಿತ್ತು. ಜಿಲ್ಲಾ ಕೇಂದ್ರ ಯಾದಗಿರಿ ಆಗಬೇಕೋ? ಅಥವಾ ಕೇಂದ್ರದಲ್ಲಿ ಇರುವ ಶಹಾಪುರ ಅಥವಾ ಐತಿಹಾಸಿಕ ಕಾರಣಗಳಿಂದ ಮಹತ್ವದಾಗಿದ್ದ ಸುರಪುರವೋ? ಎಂಬ ಅಂಶ ಜಿಜಸೆಗೆ ಕಾರಣವಾಗಿತ್ತು. ಉದ್ದೇಶಿತ ನೂತನ ತಾಲೂಕು ಕೇಂದ್ರಗಳಿಂದ ಸಮಾನ ದೂರದಲ್ಲಿ ಇರುವ ನಗರ ಜಿಲ್ಲಾ ಕೇಂದ್ರ ಆಗಬೇಕು ಎಂಬ ವಾದವೂ ಇತ್ತು. ಆದರೆ, ಸ್ಥಳೀಯ- ಪ್ರಮುಖ ರಾಜಕೀಯ ನಾ...

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಇಮೇಜ್
ಶ್ರೀದೇವಿ ಪುರಾಣದ ಕರ್ತೃ ಚಿದಾನಂದ ಅವಧೂತರ ಉಪಾಸನಾ ದೈವ ’ಅಂಬಾ’ಮಾತೆಯ ವಿಗ್ರಹಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಗಡ್ಡದ ಅವರ ಮನೆಯಲ್ಲಿ ನಿತ್ಯಪೂಜೆ ನಡೆಯುತ್ತಿದೆ. ನವರಾತ್ರಿಯ ಈ ದಿನಗಳಲ್ಲಿ ಅಲ್ಲಿ ವಿಶೇಷ ಪೂಜೆ- ಅರ್ಚನೆಗಳು ಶ್ರದ್ಧೆ- ಭಕ್ತಿಯಿಂದ ನಡೆಯುತ್ತಿವೆ. ಸುರಪುರ ಪಟ್ಟಣದ ಮುಜಂದಾರ ಗಲ್ಲಿಯ ಪಾಂಡುರಂಗ ದೇವಸ್ಥಾನದ ಹಿಂಬದಿಯಲ್ಲಿ ಇರುವ ವೆಂಕಣ್ಣಭಟ್ ಗಡ್ಡದ ಅವರ ಮನೆಯಲ್ಲಿ ಚಿದಾನಂದ ಅವಧೂತರು ಪೂಜಿಸುತ್ತಿದ್ದ ಉಪಾಸನಾ ಮೂರ್ತಿ ಇದೆ. ನಿತ್ಯಪೂಜೆ ಸಲ್ಲುವ ಶ್ರೀಚಕ್ರ ಸಮೇತ ಇರುವ ದೇವಿಯ ಪ್ರತಿಮೆಯು ಸುಮಾರು ೧೨ ಇಂಚು ಎತ್ತರದ್ದಾಗಿದೆ. ಪಾಶ ಅಂಕುಶ, ಬಿಲ್ಲುಬಾಣಗಳನ್ನು ಕೈಯಲ್ಲಿ ಹಿಡಿದಿರುವ ಚತುರ್ಭುಜೆ ದೇವಿಯ ಪ್ರತಿಮೆಗೆ ಕೇವಲ ಧಾರ್ಮಿಕ ಕಾರಣಗಳಿಗಾಗಿ ಮುಖ್ಯ ಅಲ್ಲ. ಇದೊಂದು ಐತಿಹಾಸಿಕ, ಸಾಂಸ್ಕೃತಿಕ ಮಹತ್ವ ಇರುವಂತಹದ್ದು. ಆಸ್ಥೆ ಮತ್ತು ಶ್ರದ್ಧೆಯ ಕಾರಣಗಳಿಂದ ಮೂರ್ತಿಯನ್ನು ಸಮೀಪದಿಂದ ನೋಡಲು ಸಾಧ್ಯವಿಲ್ಲದಿದ್ದರೂ ಪೂಜಾಲಂಕೃತ ವಿಗ್ರಹವನ್ನು ನೋಡುವುದೇ ಒಂದು ಸೊಬಗು. ಚಿದಾನಂದ ಅವಧೂತರೇ ಸ್ವತಃ ಪೂಜಿಸುತ್ತಿದ್ದ ಈ ವಿಗ್ರಹ ಅವರ ಕಾಲಾನಂತರ ಗಡ್ಡದ ಮನೆ ಸೇರಿಕೊಂಡಿತು. ಸದ್ಯ ಸುರಪುರ ನಿವಾಸಿಗಳಾಗಿರುವ ಕನಕಗಿರಿ ಮೂಲದ ಗಡ್ಡದ ಮನೆತನದ ಹಿರಿಯರಿಗೆ ಈ ಪ್ರತಿಮೆಯನ್ನು ಸ್ವತಃ ಅವಧೂತರೇ ತಮ್ಮ ಕೊನೆಯ ದಿನಗಳಲ್ಲಿ ನಿತ್ಯಪೂಜೆ ನಡೆಸುವಂತೆ ಸೂಚಿಸಿ ಹಸ್ತಾಂತರ ಮಾಡಿದರು ಎಂಬ ಐತಿಹ್ಯ ಇದೆ. ವೆಂಕಣ್ಣಭಟ್ಟರು ಈ ಐ...